Site icon Vistara News

ಆಂಡ್ರಾಯ್ಡ್ ಬಳಕೆದಾರರಿಗೆ ಅಪಾಯದ ಎಚ್ಚರಿಕೆ ನೀಡಿದ ಕೇಂದ್ರ ಸರ್ಕಾರ!

High Risk Warning For Android Users In India

ನವದೆಹಲಿ: ಭಾರತದ (India) ಆಂಡ್ರಾಯ್ಡ್ ಸಾಧನ ಬಳಕೆದಾರರಿಗೆ (Android Users) ಕೇಂದ್ರ ಸರ್ಕಾರವು (Central Government) ಅಪಾಯದ ಎಚ್ಚರಿಕೆಯನ್ನು ನೀಡಿದೆ(High Risk Warning). ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-IN)ನಲ್ಲಿರುವ ತಜ್ಞರು 11, 12, 12L, 13 ಮತ್ತು 14 ಆವೃತ್ತಿಗಳನ್ನು ಒಳಗೊಂಡಂತೆ ಆಂಡ್ರಾಯ್ಡ್ (Android) ಆಪರೇಟಿಂಗ್ ಸಿಸ್ಟಂಗಳಲ್ಲಿ (operating System) ಬಹು ದೋಷಗಳನ್ನು ಕಂಡುಹಿಡಿದಿದ್ದಾರೆ. ಈ ದೋಷಗಳು ಆಂಡ್ರಾಯ್ಡ್ ಸಾಧನಗಳ ಮೇಲೆ ದುಷ್ಪರಿಣಾಮ ಬೀರಬಲ್ಲವು ಎಂದು ಬಳಕೆದಾರರಿಗೆ ಎಚ್ಚರಿಕೆ ನೀಡಲಾಗಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಸೈಬರ್ ಭದ್ರತಾ ಸಂಸ್ಥೆಯ ಪ್ರಕಾರ, ಸೂಕ್ಷ್ಮ ಮಾಹಿತಿಯನ್ನು ಪಡೆಯಲು, ಉನ್ನತ ಸವಲತ್ತುಗಳನ್ನು ಪಡೆಯಲು ಮತ್ತು ಉದ್ದೇಶಿತ ವ್ಯವಸ್ಥೆಯಲ್ಲಿ ಸೇವೆಯ ನಿರಾಕರಣೆಯನ್ನು ಉಂಟುಮಾಡಲು ಸೈಬರ್ ಅಟ್ಯಾಕರ್ಸ್ ಹಲವಾರು ಹೊಸ ಹೆಚ್ಚಿನ ಅಪಾಯದ ದೋಷಗಳನ್ನು ಬಳಸಿಕೊಳ್ಳಬಹುದು ಎಂದು ಎಚ್ಚರಿಸಿದೆ.

ಫ್ರೇಮ್‌ವರ್ಕ್, ಸಿಸ್ಟಮ್, ಗೂಗಲ್ ಪ್ಲೇ ಸಿಸ್ಟಮ್ ಅಪ್‌ಡೇಟ್‌ಗಳು, ಕರ್ನಲ್ ಎಲ್‌ಟಿಎಸ್, ಆರ್ಮ್ ಕಾಂಪೊನೆಂಟ್‌ಗಳು, ಮೀಡಿಯಾ ಟೆಕ್ ಘಟಕಗಳು, ಕ್ವಾಲ್ಕಾಮ್ ಘಟಕಗಳು ಮತ್ತು ಕ್ವಾಲ್ಕಾಮ್ ಕ್ಲೋಸ್ಡ್-ಸೋರ್ಸ್ ಘಟಕಗಳಲ್ಲಿನ ದೋಷಗಳಿಂದಾಗಿ ಈ ದೋಷಗಳು ಆಂಡ್ರಾಯ್ಡ್‌ನಲ್ಲಿ ಅಸ್ತಿತ್ವದಲ್ಲಿವೆ ಎಂದು ಸೈಬರ್ ಭದ್ರತಾ ಸಂಸ್ಥೆಯಾಗಿರುವ ಸಿಇಆರ್‌ಟಿ-ಇನ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಆಂಡ್ರಾಯ್ಡ್ ವ್ಯವಸ್ಥೆಯಲ್ಲಿ ಪತ್ತೆಯಾಗಿರುವ ಈ ದೋಷಗಳು ಬಳೆಕದಾರರ ಸೂಕ್ಷ್ಮ ಮಾಹಿತಿಯನ್ನು ಕದಿಯಲು ಸೈಬರ್ ದಾಳಿಕೋರರಿಗೆ ಅನುವು ಮಾಡಿಕೊಡಬಹುದು. ಅಲ್ಲದೇ ಉದ್ದೇಶಿತ ವ್ಯವಸ್ಥೆಯಲ್ಲಿ ಸೇವೆಯ ನಿರಾಕರಣೆಗೆ ಕಾರಣವಾಗಬಹುದು ಎಂದು ಸೈಬರ್ ಏಜೆನ್ಸಿ ಒತ್ತಿಹೇಳಿದೆ.

ಆಂಡ್ರಾಯ್ಡ್ ಸಿಸ್ಟಮ್‌ನಲ್ಲಿ ದೋಷಗಳನ್ನು ಗೂಗಲ್ ಕೂಡ ಒಪ್ಪಿಕೊಂಡಿದೆ. ಗೂಗಲ್ ಪ್ರಕಾರ, ಕಳೆದ ವಾರವಷ್ಟೇ ಆಂಡ್ರಾಯ್ಡ್ ಸೆಕ್ಯುರಿಟಿ ಬಲೆಟಿನ್ ಬಡುಗಡೆ ಮಾಡಲಾಗಿದೆ. ಭದ್ರತಾ ದೋಷಗಳು ಆಂಡ್ರಾಯ್ಡ್ ಸಾಧನಗಳ ಮೇಲೆ ಪರಿಣಾಮ ಬೀರುತ್ತಿವೆ. ಹಾಗಾಗಿ, ಎಲ್ಲ ಆಂಡ್ರಾಯ್ಡ್ ಸಾಧನಗಳಿಗೆ ಸೆಕ್ಯುರಿಟಿ ಅಪ್‌ಡೇಟ್ ಕೂಡ ರಿಲೀಸ್ ಮಾಡುತ್ತಿರುವುದಾಗಿ ಗೂಗಲ್ ಹೇಳಿದೆ.

ಪರೀಕ್ಷಿಸುವುದು ಹೇಗೆ?

ಮೊದಲಿಗೆ ನಮ್ಮ ಫನ್ ಸೆಟ್ಟಿಂಗ್ಸ್ ಆ್ಯಪ್ ತೆರೆಯಿರಿ. ಕೆಳಗಡೆ ಭಾಗದಲ್ಲಿ ಕಾಣು ಅಬೌಟ್ ಫೋನ್ ಮತ್ತು ಆಂಡ್ರಾಯ್ಟ್ ವರ್ಷನ್ ಟ್ಯಾಪ್ ಮಾಡಿ. ಬಳಿಕ ನಿಮಗೆ ಫೈಂಡ್ ಇವರ್ ಆಂಡ್ರಾಯ್ಡ್ ವರ್ಷನ್, ಆಂಡ್ರಾಯ್ಡ್ ಸೆಕ್ಯುರಿಟಿ ಅಪ್‌ಡೇಟ್ ಮ್ತತು ಬಿಲ್ಡ್ ನಂಬರ್ ಆಯ್ಕೆಗಳು ಕಾಣಿಸುತ್ತವೆ. ಬಳಿಕ ನಿಮಗೆ ಲಭ್ಯ ಇರುವ ನೂತನ ಆಂಡ್ರಾಯ್ಡ್ ಅಪ್‌ಡೇಟ್‌ಗಳನ್ನು ಪಡೆಯಿರಿ. ಬಹಳಷ್ಟ ಸಂದರ್ಭದಲ್ಲಿ ಆಂಡ್ರಾಯ್ಡ್ ಸಾಧನಗಳು ಆಟೋಮೆಟಿಕ್ ಆಗಿ ಸೆಕ್ಯುರಿಟಿ ಅಪ್‌ಡೇಟ್‌ಗಳನ್ನು ಪಡೆದುಕೊಳ್ಳುತ್ತವೆ.

ಸೆಕ್ಯುರಿಟಿ ಅಪ್‌ಡೇಟ್ ಚೆಕ್ ಮಾಡುವುದು ಹೇಗೆ?

ನಿಮ್ಮ ಸಾಧನದ ಸೆಟ್ಟಿಂಗ್ಸ್ ಆ್ಯಪ್ ಓಪನ್ ಮಾಡಿ. ಕಾಣ ಸಿಗುವ Security & privacy ಮೊದಲಿಗೆ ಟ್ಯಾಪ್ ಮಾಡಿ ಬಳಿಕ System & Updates ಮೇಲೆ ಟ್ಯಾಪ್ ಮಾಡಿ. ಸೆಕ್ಯುರಿಟಿ ಅಪ್‌ಡೇಟ್‌ಗಾಗಿ ಸೆಕ್ಯುರಿಟಿ ಅಪ್‌ಡೇಟ್ ಟ್ಯಾಪ್ ಮಾಡಿ. ಗೂಗಲ್ ಪ್ಲೇ ಸಿಸ್ಟಮ್ ಅಪ್‌ಡೇಟ್‌ಗಾಗಿ ಗೂಗಲ್ ಪ್ಲೇ ಸಿಸ್ಟಮ್ ಅಪ್ಡೇಟ್ ಟ್ಯಾಪ್ ಮಾಡಿ.

ಈ ಸುದ್ದಿಯನ್ನೂ ಓದಿ: Survey Report: ಭಾರತೀಯರಿಗೆ ನಿತ್ಯ 12 ಸ್ಕ್ಯಾಮ್ ಎಸ್ಸೆಮ್ಮೆಸ್! ಸಮೀಕ್ಷೆಯಲ್ಲಿ ಏನಿದೆ ಮಾಹಿತಿ?

Exit mobile version