ನವ ದೆಹಲಿ: ಭಾರತದಲ್ಲಿ ತಯಾರಾಗುವ ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯ Honda SP 125 ಬೈಕ್‌ಗಳು ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾಗೆ ರಫ್ತು ಆಗುತ್ತಿವೆ. 125ಸಿಸಿ ಸಾಮರ್ಥ್ಯದ ಮೋಟಾರ್ ಸೈಕಲ್‌ಗಳ ರಫ್ತು ಆರಂಭಿಸಿರುವ ಬಗ್ಗೆ ಕಂಪನಿಯು ಸಂತಸ ವ್ಯಕ್ತಪಡಿಸಿದ್ದು, ಅಲ್ಲಿನ ಮಾರುಕಟ್ಟೆಯಲ್ಲಿ “ಸಿಬಿ125 ಎಫ್” ಎಂದು ಮಾರಾಟ ಮಾಡಲಾಗುತ್ತದೆ ಎಂದು ಹೇಳಿದೆ.
ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರಸ್ತುತ ರಾಜಸ್ಥಾನದ ಅಲ್ವಾರ್ನಲ್ಲಿರುವ ತಪುಕರ ಪ್ಲಾಂಟ್‍ನಲ್ಲಿ ಎಸ್‍ಪಿ125 ಬೈಕ್ ಉತ್ಪಾದಿಸುತ್ತಿದೆ. ಅಂತೆಯೇ ಜುಲೈ 22ರಿಂದ ಸುಮಾರು 250 ಘಟಕಗಳನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‍ಗೆ ರವಾನಿಸಲಾಗಿದೆ.
ಹೋಂಡಾ ಮೋಟಾರ್ ಸೈಕಲ್ ಕಂಪನಿಯ ಅಧ್ಯಕ್ಷ, ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ಅತ್ಸುಶಿ ಒಗಾಟಾ ಈ ಕುರಿತು ಮಾತನಾಡಿ “ಈ ಬೆಳವಣಿಗೆಯು ದೀರ್ಘಾವಧಿಯ ಯೋಜನೆಗಳಿಗೆ ಪೂರಕವಾಗಿದೆ. ಅಂತೆಯೇ ನಮ್ಮ ವಾಹನಗಳು ವಿಶ್ವಾದ್ಯಂತ 38 ದೇಶಗಳಲ್ಲಿ ಗ್ರಾಹಕರನ್ನು ಸೆಳೆದುಕೊಂಡಿವೆ,” ಎಂದರು.
ಎಸ್‍ಪಿ125 ಭಾರತದಲ್ಲಿ ಹೆಚ್‍ಎಂಎಸ್‍ಐ ಬಿಡುಗಡೆ ಮಾಡಿದ ಮೊದಲ ಬಿಎಸ್‍೬ ಮೋಟಾರ್ ಸೈಕಲ್ ಎಂಬುದು ಗಮನಾರ್ಹ. ಇದು ಇಎಸ್‍ಪಿ ತಂತ್ರಜ್ಞಾನದೊಂದಿಗೆ 125ಸಿಸಿ ಹೆಚ್‍ಇಟಿ ಎಂಜಿನ್ ಹೊಂದಿದೆ. ಎಸ್‍ಪಿ125 ಡಿಜಿಟಲ್ ಮೀಟರ್, ಸರಾಸರಿ ಮೈಲೇಜ್ ತೋರಿಸುತ್ತದೆ. ಎಲ್‍ಇಡಿ ಡಿಸಿ ಹೆಡ್‍ಲ್ಯಾಂಪ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಸ್ವಿಚ್, ಇಂಟಿಗ್ರೇಟೆಡ್ ಹೆಡ್‍ಲ್ಯಾಂಪ್ ಬೀಮ್ / ಪಾಸಿಂಗ್ ಸ್ವಿಚ್, ಇಕೋ ಇಂಡಿಕೇಟರ್, ಗೇರ್ ಪೊಸಿಷನ್ ಇಂಡಿಕೇಟರ್ ಸೇರಿದಂತೆ ಅನೇಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಇದನ್ನೂ ಓದಿ | EV ಉತ್ಪಾದನೆಗೆ ಟಾಟಾ ಹೂಡಿಕೆ ಹೆಚ್ಚಳ