ಬೆಂಗಳೂರು: ಜೀವ ವಿಮಾನ ನಿಗಮ(Life Insurance Corporation Of India-LIC) ವಿಮೆಗೆ ಸಂಬಂಧಿಸಿದ ಸೇವೆಗಳನ್ನು ನೀವು ಪಡೆಯಬೇಕಿದ್ದರೆ, ಹತ್ತಿರದ ವಿಮಾ ಶಾಖೆ ಕಚೇರಿಗೆ ಹೋಗಬೇಕಿತ್ತು. ಇಲ್ಲವೇ ಇಂಟರ್ನೆಟ್‌ನಲ್ಲಿ ಸೇವೆಗಳನ್ನು ಪಡೆಯಬೇಕಿತ್ತು. ಈಗ ಎಲ್ಐಸಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ವಾಟ್ಸಾಪ್‌ನಲ್ಲಿ ಹಲವು ಸೇವೆಗಳನ್ನು ಒದಗಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಹಣಕಾಸು ಸಂಸ್ಥೆಗಳು, ಬ್ಯಾಂಕುಗಳು ಮತ್ತು ವಿಮಾ ಕಂಪನಿಗಳು ತಮ್ಮ ಗ್ರಾಹಕರಿಗೆ ವಾಟ್ಸಾಪ್ ಮೂಲಕ ಹಲವು ಸೇವೆಗಳನ್ನು ಒದಗಿಸುತ್ತಿವೆ. ಈ ಸಾಲಿಗೆ ಈಗ ಎಲ್ಐಸಿ ಕೂಡ ಸೇರ್ಪಡೆಯಾದೆ(LIC WhatsApp Services).
ವಾಟ್ಸಾಪ್ ಮೂಲಕ ಎಲ್ಐಸಿಯ ಸಾಕಷ್ಟು ಸೇವೆಗಳನ್ನು ಗ್ರಾಹಕರು ಪಡೆದುಕೊಳ್ಳಬಹುದು. ಪಾಲಿಸಿದಾರರು, ಪ್ರೀಮಿಯಂ ಡಿಟೇಲ್ಸ್, ಯುಎಲ್ಐಪಿ ಪ್ಲ್ಯಾನ್ ಸ್ಟೇಟ್‌ಮೆಂಟ್ಸ್ ಸೇರಿದಂತೆ ಮತ್ತಿತರ ಸೇವೆಗಳನ್ನು ತಮ್ಮ ಮೊಬೈಲ್‌ನಲ್ಲಿ ಪಡೆದುಕೊಳ್ಳಬಹುದು. ಬಹಳಷ್ಟು ಬಳಕೆದಾರರಿಗೆ ಈ ವಾಟ್ಸಾಪ್ ಮೂಲಕ ಎಲ್ಐಸಿ ಸೇವೆಯನ್ನು ಹೇಗೆ ಪಡೆದುಕೊಳ್ಳಬೇಕೆಂಬ ಮಾಹಿತಿ ಇರುವುದಿಲ್ಲ. ಇದಕ್ಕಾಗಿ ಒಂದಿಷ್ಟು ಸ್ಟೇಪ್ಸ್ ಫಾಲೋ ಮಾಡಬೇಕಾಗುತ್ತದೆ. ಬನ್ನಿ, ವಾಟ್ಸಾಪ್‌ನಲ್ಲಿ ಎಲ್ಐಸಿ ಸೇವೆಗಳನ್ನು ಹೇಗೆ ಪಡೆದುಕೊಳ್ಳಬಹುದು, ಎಲ್ಐಸಿ ಪೋರ್ಟಲ್‌ನಲ್ಲಿ ಹೇಗೆ ರಿಜಿಸ್ಟರ್ ಮಾಡಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ.
ಪೋರ್ಟಲ್‌ನಲ್ಲಿ ರಿಜಿಸ್ಟರ್ ಆಗುವುದು ಹೇಗೆ?
- ಮೊದಲಿಗೆ ಎಲ್ಐಸಿ ಅಧಿಕೃತ ವೆಬ್ಸೈಟ್ ಆಗಿರುವ licindia.in ಭೇಟಿ ಕೊಡಿ. ಬಳಿಕ ಹೋಮ್ಪೇಜ್ನಲ್ಲಿ ಕಾಣಿಸುವ Customer Portal ಮೇಲೆ ಕ್ಲಿಕ್ ಮಾಡಿ.
- ಒಂದೊಮ್ಮೆ ಹೊಸದಾಗಿ ರಿಜಿಸ್ಟರ್ ಮಾಡಿಕೊಳ್ಳುವುವರಾಗಿದ್ದರೆ, ಆಗ New User ಮೇಲೆ ಕ್ಲಿಕ್ ಮಾಡಿ.
- ಬಳಿಕ ಸರ್ವೀಸ್ ಪಡೆಯಲು ಮತ್ತು ನಿಮ್ಮ ಕ್ರೆಡಿನ್ಷಿಯಲ್ ಬಳಸಿಕೊಂಡು ಲಾಗಿನ್ ಆಗುವುದಕ್ಕಾಗಿ e-Services ಮೇಲೆ ಕ್ಲಿಕ್ ಮಾಡಿ. ಆಗ ತೆರೆದುಕೊಳ್ಳುವ ಫಾರ್ಮ್ ಅನ್ನು ಭರ್ತಿ ಮಾಡಿ.
- ಪೂರ್ತಿಯಾಗಿ ಭರ್ತಿಯಾದ ಫಾರ್ಮ್ ಅನ್ನು ಪ್ರಿಂಟ್ ತೆಗೆಯಿರಿ ಮತ್ತು ಸ್ಕ್ಯಾನ್ಡ್ ಇಮೇಜ್ ಅಪ್ಲೋಡ್ ಮಾಡಿ. ಇವುಗಳ ಜತೆಗೆ, ಪಾನ್ ಕಾರ್ಡ್, ಆಧಾರ್ ಕಾರ್ಡ್ ಅಥವಾ ಪಾಸ್ಪೋರ್ಟ್ ಸ್ಕ್ಯಾನ್ಡ್ ಇಮೇಜ್ ಕೂಡ ಅಪ್ಲೋಡ್ ಮಾಡಿ.
- ತಾವು ಅಪ್ಲೋಡ್ ಮಾಡಿದ ದಾಖಲೆಗಳ ದೃಢೀಕರಣಗೊಂಡ ಬಳಿಕ, ಇಮೇಲ್ ಮತ್ತು ಎಸ್ಸೆಮ್ಮೆಸ್ ಕಳುಹಿಸಲಾಗುತ್ತದೆ. ಇಷ್ಟಾದ ಮೇಲೆ ನೀವು ಎಲ್ಐಸಿ ಇ-ಸರ್ವೀಸ್ ಪಡೆಯಲು ಅರ್ಹರಾಗಿರುತ್ತೀರಿ.
- ಬಳಿಕ Submit ಮೇಲೆ ಕ್ಲಿಕ್ ಮಾಡಿ.
- ಬಳಿಕ, ನಿಮ್ಮ ಇಚ್ಛೆಗೆ ಅನುಗುಣವಾಗಿ User id ಮತ್ತು ಪಾಸ್ವರ್ಡ್ ಸೆಲೆಕ್ಟ್ ಮಾಡಬೇಕು. ಮತ್ತು ಅದಾದ ಬಳಿಕ ಸಬ್ಮಿಟ್ ಬಟನ್ ಒತ್ತಬೇಕು..
- ಈಗ ಹೊಸದಾಗಿ ನಿಮ್ಮದೇ ಯುಸರ್ ಐಡಿ ಮತ್ತು ಪಾಸ್ವರ್ಡ್ ಕ್ರಿಯೇಟ್ ಆಗಿರುತ್ತದೆ. ಅದನ್ನು ಬಳಸಿಕೊಂಡು ಲಾಗಿನ್ ಆಗಿ. Basic Services ಮತ್ತು Add Policy ಆಪ್ಷನ್ಸ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಪಾಲಿಸಿ ಡಿಟೇಲ್ಸ್ ದಾಖಲಿಸಿ.
ವಾಟ್ಸಾಪ್ ಸೇವೆ ಬಳಸುವುದು ಹೇಗೆ?
- ಈ ಮೇಲೆ ತಿಳಿಸಿದಂತೆ, ಪಾಲಿಸಿ ಹೋಲ್ಡರ್ಸ್, ಮೊದಲಿ ಎಲ್ಐಸಿ ಪೋರ್ಟಲ್‌ನಲ್ಲಿ ತಮ್ಮ ಪಾಲಿಸಿಯನ್ನು ನೋಂದಣಿ ಮಾಡಬೇಕು.
- ನೋಂದಣಿಯಾದ ಬಳಿಕ, 8976862090 ನಂಬರ್ಗೆ Hi ಎಂದು ಟೈಪ್ ಮಾಡಿ ಸೆಂಡ್ ಮಾಡಬೇಕು.
- ಆಗ ಕಾಣಿಸುವ ಸ್ಕ್ರೀನ್, ಪಾಲಿಸಿ ಹೋಲ್ಡರ್ಸ್ಗೆ ಪಟ್ಟಿ ಮಾಡಲಾದ ಸೇವೆಗಳನ್ನು ಪಡೆಯಲು ನೆರವು ನೀಡುತ್ತದೆ.
- ನಿಮಗೆ ಅಗತ್ಯವಾಗಿರುವ ಸೇವೆ ಪಡೆಯಲು ಆಪ್ಷನ್ ನಂಬರ್ ಆಯ್ಕೆ ಮಾಡಿಕೊಳ್ಳಿ. ನೀವು ಆಯ್ಕ ಮಾಡಿದ ನಂಬರ್ ಅನುಗುಣವಾಗಿ ಎಲ್ಐಸಿ ವಾಟ್ಸಾಪ್‌ನಲ್ಲಿ ಮಾಹಿತಿಯನ್ನು ನೀಡುತ್ತದೆ.
ಇದನ್ನೂ ಓದಿ: WhatsApp New Feature | ಆ್ಯಕ್ಸಿಡೆಂಟಲ್ ಡಿಲೀಟ್ ಹೊಸ ಫೀಚರ್ ಪರಿಚಯಿಸಿದ ವಾಟ್ಸ್ಆ್ಯಪ್!
ವಾಟ್ಸಾಪ್‌ನಲ್ಲಿ ಏನೆಲ್ಲ ಸೇವೆಗಳು?
ಪ್ರೀಮಿಯಂ ಡೇಟ್, ಬೋನಸ್ ಇನ್ಫರ್ಮೇಷನ್, ಪಾಲಿಸಿ ಸ್ಟೇಟಸ್, ಸಾಲದ ಅರ್ಹತೆ, ಸಾಲದ ಮರು ಪಾವತಿ ಅರ್ಹತೆ, ಪ್ರೀಮಿಯಂ ಪೇಯ್ಡ್ ಸರ್ಟಿಫಿಕೇಟ್, ಯುಎಲ್ಐಪಿ ಸ್ಟೇಟ್‌ಮೆಂಟ್ಸ್, ಎಲ್ಐಸಿ ಸರ್ವೀಸ್ ಲಿಂಕ್ಸ್ ಇತ್ಯಾದಿ ಸೇವೆಗಳನ್ನು ಪಡೆದುಕೊಳ್ಳಬಹುದು. ವಾಟ್ಸಾಪ್ ಮೂಲಕ ಎಲ್ಐಸಿ ಸೇವೆಗಳನ್ನು ಪಡೆದುಕೊಳ್ಳುವುದರಿಂದ ಪಾಲಿಸಿ ಹೋಲ್ಡರ್‌ಗಳ ಸಾಕಷ್ಟು ಸಮಯ ಉಳಿತಾಯವಾಗುತ್ತದೆ. ಮತ್ತು ಲಭ್ಯವಿರುವ ಗರಿಷ್ಠ ತಂತ್ರಜ್ಞಾನವನ್ನು ಬಳಸಿಕೊಂಡಂತಾಗುತ್ತದೆ.