Site icon Vistara News

SBI Debit Card: ಎಸ್‌ಬಿಐ ಕಾರ್ಡ್‌ ಕಳೆದುಕೊಂಡಿದ್ದೀರಾ? ಕಾರ್ಡ್ ಬ್ಲಾಕ್ ಮಾಡಲು ಹೀಗೆ ಮಾಡಿ…

How to block SBI Debit card? Fallow these steps

ನವದೆಹಲಿ: ಡೆಬಿಟ್ ಕಾರ್ಡ್(Debit Card). ಇದು ಆಧುನಿಕ ಜಗತ್ತಿನ ಅಚ್ಚರಿ. ನಿಮ್ಮ ಖಾತೆಯೊಂದಿಗೆ ಕನೆಕ್ಟ್ ಆಗಿರುವ ಈ ಕಾರ್ಡ್ ಮೂಲಕ ಹಣವನ್ನು ವಿತ್‌ಡ್ರಾ ಮಾಡಿಕೊಳ್ಳಬಹುದು. ಡೆಬಿಟ್ ಕಾರ್ಡ್‌ಗಳು ಪಾವತಿ ಕಾರ್ಡ್‌ಗಳಾಗಿ (Payments) ಕಾರ್ಯನಿರ್ವಹಿಸುತ್ತವೆ, ವ್ಯಕ್ತಿಗಳು ತಮ್ಮ ಬ್ಯಾಂಕ್ ಖಾತೆಗಳಿಂದ ನೇರವಾಗಿ ಖರೀದಿಗಳನ್ನು ಮಾಡಲು ಮತ್ತು ಹಣವನ್ನು ಹಿಂಪಡೆಯಲು ಅನುವು ಮಾಡಿಕೊಡುತ್ತದೆ. ಆ ಕಾರ್ಡ್‌ಗಳ ದುರ್ಬಳಕೆಯನ್ನು ತಪ್ಪಿಸಲು ಪಿಐಎನ್ ಆಧಾರಿತ ದೃಢೀಕರಣ (PIN-based authentication) ವ್ಯವಸ್ಥೆ ಇರುತ್ತದೆ. ಆದರೆ, ಕೆಲವೊಮ್ಮೆ ನಾವು ಈ ಕಾರ್ಡ್ ಕಳೆದುಕೊಳ್ಳಬಹುದು. ಎಲ್ಲೋ ಇಟ್ಟು ಮರೆಯಬಹುದು. ಅಂಥ ಸಂದರ್ಭದಲ್ಲಿ ಕಾರ್ಡ್‌ ದುರ್ಬಳಕೆಯನ್ನು ತಪ್ಪಿಸಲು ಹಲವು ಮಾರ್ಗಗಳಿವೆ. ಕಾರ್ಡ್ ನಿಷ್ಕ್ರಿಯಗೊಳಿಸಲು ತಕ್ಷಣವೇ ಬ್ಯಾಂಕ್‌ಗೆ ಸೂಚಿಸಬೇಕಾಗುತ್ತದೆ. ಬ್ಯಾಂಕಿನ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸುವ ಮೂಲಕ ಈ ಕೆಲಸವನ್ನು ಮಾಡಬಹುದು. ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾರ್ಡ್ (SBI Debit Card) ಅನ್ನು ಕಳೆದುಕೊಂಡಿದ್ದರೆ, ನೆಟ್ ಬ್ಯಾಂಕಿಂಗ್ ಅಥವಾ ಎಸ್ಸೆಮ್ಮೆಸ್ ಸೇವೆಯನ್ನು ನಿಷ್ಕ್ರಿಯಗೊಳಿಸುವಿಕೆಯನ್ನು (SBI Card Deactivation) ಪ್ರಾರಂಭಿಸಲು ಮತ್ತು ಕಾರ್ಡ್ ಅನ್ನು ನಿರ್ಬಂಧಿಸಲು ಬಳಸಿಕೊಳ್ಳಬಹುದು.

ಎಸ್‌ಬಿಐ ಕಾರ್ಡ್ ನಿಷ್ಕ್ರಿಯಗೊಳಿಸಲು ಇರುವ ಅತ್ಯಂತ ಸುಲಭದ ಮಾರ್ಗ ಎಂದರೆ, ಎಸ್‌ಬಿಐನ 1800 11 2211 ಅಥವಾ 1800 425 3800 ಟೋಲ್ ಫ್ರೀ ನಂಬರ್‌ಗೆ ಕರೆ ಮಾಡಿ ಕಾರ್ಡ್ ಬ್ಲಾಕ್ ಮಾಡಿಸಬಹುದು. ಇದಲ್ಲದೇ ಇನ್ನು ಕೆಲವು ಮಾರ್ಗಗಳ ಮೂಲಕ ಕಾರ್ಡ್ ಬ್ಲಾಕ್ ಮಾಡಿಸಬಹುದು. ತಿಳಿದುಕೊಳ್ಳೋಣ ಬನ್ನಿ.

ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ…..

ಎಸ್‌ಬಿಐ ಅಧಿಕೃತ onlinesbi.com ವೆಬ್‌ಸೈಟ್‌ಗೆ ಭೇಟಿ ನೀಡಿ. ಮುಖಪುಟದಲ್ಲಿರುವ ಇ-ಸರ್ವೀಸ್ ಸೆಕ್ಷನ್‌ಗೆ ಹೋಗಿ, ಎಟಿಎಂ ಕಾರ್ಡ್ ಸರ್ವಿಸ್ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಬಳಿಕ ಬ್ಲಾಕ್ ಎಟಿಎಂ ಕಾರ್ಡ್ ಆಪ್ಷನ್ ಆಯ್ಕೆ ಮಾಡಿಕೊಳ್ಳಿ. ನೀವು ನಿರ್ಬಂಧಿಸಲು ಬಯಸುವ ಎಟಿಎಂ ಕಮ್ ಡೆಬಿಟ್ ಕಾರ್ಡ್‌ಗೆ ಲಿಂಕ್ ಮಾಡಲಾದ ಖಾತೆಯನ್ನು ಆಯ್ಕೆಮಾಡಿ.

ಆಗ ನಿರ್ಬಂಧಿಸಲಾದ ಮತ್ತು ಸಕ್ರಿಯವಾಗಿರುವ ಎಲ್ಲಾ ಕಾರ್ಡ್‌ಗಳ ಪಟ್ಟಿಯನ್ನು ನೀವು ನೋಡಲು ಸಾಧ್ಯವಾಗುತ್ತದೆ. ಪಟ್ಟಿಯು ಡೆಬಿಟ್ ಕಾರ್ಡ್‌ನ ಮೊದಲ ಮತ್ತು ಕೊನೆಯ ನಾಲ್ಕು ಅಂಕಿಗಳನ್ನು ತೋರಿಸುತ್ತದೆ. ನೀವು ಬ್ಲಾಕ್ ಮಾಡಬೇಕೆನ್ನುವ ಕಾರ್ಡ್ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ಮತ್ತು ಅದಕ್ಕೆ ಕಾರಣವನ್ನು ನಮೂದಿಸಿ, ಸಬ್‌ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಅಧಿಕೃತ ಒಪ್ಪಿಗೆಯನ್ನು ನೀಡುವ ಮೊದಲು ಅಗತ್ಯವಿರುವ ಎಲ್ಲ ಮಾಹಿತಿಯನ್ನು ದೃಢಿಕರಿಸಿಕೊಳ್ಳಬೇಕಾಗುತ್ತದೆ.

ಬಳಿಕ ರಿಕ್ವೆಸ್ಟ್ ಮೋಡ್ ಆಯ್ಕೆ ಮಾಡಿಕೊಳ್ಳಬೇಕು ಮತ್ತು ಒಟಿಪಿ ನಂಬರ್‌ ಅಥವಾ ಪ್ರೊಫೈಲ್ ಪಾಸ್ವರ್ಡ್ ಬಳಸಿಕೊಳ್ಳಬೇಕು. ಈ ಎರಡರಲ್ಲಿ ಯಾವುದಾದರೂ ಒಂದನ್ನು ಬಳಸಿಕೊಂಡು, ಕನ್ಫರ್ಮ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಆಗ ಎಸ್‌ಬಿಐ ಕಾರ್ಡ್ ಬ್ಲಾಕ್ ಆದರೆ ಖಾತೆದಾರರಿಗೆ ಟಿಕೆಟ್ ನಂಬರ್ ಅನ್ನು ಎಸ್ಸೆಮ್ಮೆಸ್ ಮೂಲಕ ದೊರೆಯುತ್ತದೆ.

ಎಸ್ಸೆಮ್ಮೆಸ್ ಮೂಲಕ ಎಸ್‌ಬಿಐ ಡೆಬಿಟ್ ಕಾರ್ಡ್ ಬ್ಲಾಕ್ ಮಾಡುವುದು……..

ಎಸ್ಸೆಮ್ಮೆಸ್‌ ರೈಟಿಂಗ್ ಸ್ಪೇಸ್ ತೆರೆಯಿರಿ. BLOCK XXXX(XXXX ಜಾಗದಲ್ಲಿ ನಿಮ್ಮ ಡೆಬಿಟ್ ಕಾರ್ಡ್‌ನ ಕೊನೆಯ ನಾಲ್ಕು ಡಿಜಿಟ್) ನಮೂದಿಸಬೇಕಾಗುತ್ತದೆ ಮತ್ತು ಆ ಸಂದೇಶವನ್ನು 567676 ನಂಬರ್‌ಗೆ ಕಳುಹಿಸಿ.

ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ಬಳಸಿ ಮಾತ್ರ ಈ ಸೇವೆಯನ್ನು ಪಡೆಯಬಹುದು. ಬ್ಯಾಂಕ್ ಎಸ್ಸೆಮ್ಮೆಸ್ ಸ್ವೀಕರಿಸಿದ ನಂತರ, ನೀವು ದೃಢೀಕರಣವನ್ನು ಸ್ವೀಕರಿಸುತ್ತೀರಿ. ಎಸ್ಸೆಮ್ಮೆಸ್ ಅಧಿಸೂಚನೆಯು ನಿಮ್ಮ ಟಿಕೆಟ್ ಸಂಖ್ಯೆ, ನಿರ್ಬಂಧಿಸುವ ಸಮಯ ಮತ್ತು ನಿರ್ಬಂಧಿಸುವ ದಿನಾಂಕವನ್ನು ನಮೂದಿಸುತ್ತದೆ.

ಎಲ್ಲಕ್ಕಿಂತ ಹೆಚ್ಚು ಉಪಯುಕ್ತ ಸಲಹೆ ಎಂದರೆ, ನಿಮ್ಮ ಎಸ್‌ಬಿಐ ಡೆಬಿಟ್ ಕಾರ್ಡ್ ಅಥವಾ ಇನ್ನಾವುದೇ ಬ್ಯಾಂಕಿನ ಡೆಬಿಟ್ ಕಾರ್ಡ್ ಕಳೆದುಕೊಳ್ಳದಂತೆ ನೋಡಿಕೊಳ್ಳುವುದು. ಅಲ್ಲದೇ, ಪಿನ್‌ ನಂಬರ್ ಯಾರೊಂದಿಗೂ ಹಂಚಿಕೊಳ್ಳಬಾರದು. ಇದರಿಂದ ನಿಮ್ಮ ಖಾತೆ ಸುರಕ್ಷಿತವಾಗಿರುತ್ತದೆ.

ಈ ಸುದ್ದಿಯನ್ನೂ ಓದಿ: Cyber Crime: 700 ಕೋಟಿ ರೂ. ಸೈಬರ್ ವಂಚನೆ ಜಾಲ ಭೇದಿಸಿದ ಹೈದ್ರಾಬಾದ್ ಪೊಲೀಸ್, ಉಗ್ರರಿಗೆ ದುಡ್ಡು ರವಾನೆ!

Exit mobile version