ಬೆಂಗಳೂರು: ಎಸ್ಸೆಮ್ಮೆಸ್, ವಾಟ್ಸಾಪ್ ಮತ್ತು ಇಮೇಲ್‌ಗಳಿಂದಾಗಿ ಒಟ್ಟಾರೆ ನಮ್ಮ ಸಂವಹನ ವ್ಯವಸ್ಥೆಯ ಸ್ವರೂಪವೇ ಬದಲಾಗಿದೆ. ಕ್ಷಣಾರ್ಧದಲ್ಲಿ ನೀವು, ನಿಮಗೆ ಬೇಕಿದ್ದವರಿಗೆ ನಿಮಗೆ ಬೇಕಿರುವ ಮಾಹಿತಿಯನ್ನು ರವಾನಿಸಬಹುದು. ಅಂಥೊಂದು ವೇಗದ ಯುಗದಲ್ಲಿ ನಾವಿದ್ದೇವೆ. ಹೊಸ ಸಂವಹನ ವ್ಯವಸ್ಥೆಯಿಂದ ಎಷ್ಟು ಲಾಭವಿದೆಯೋ ಅಷ್ಟೇ ಕಿರಿಕಿರಿಯೂ ಇದೆ. ವಿಶೇಷವಾಗಿ ಇಮೇಲ್ ಬಳಸುವವರಿಗೆ ಇದರ ಅನುಭವಾಗಿರುತ್ತದೆ. ಮೇಲ್‌ಗೆ ಅನಾವಶ್ಯವಾಗಿ ಬರುವ ಸ್ಪ್ಯಾಮ್ ಮೇಲ್ (Spam Mail) ಗಳು ಸಾಕಷ್ಟು ಕಿರಿಕಿರಿಯನ್ನುಂಟು ಮಾಡುತ್ತವೆ.
ಬಹಳಷ್ಟು ಜನರು ಜಿಮೇಲ್ ಅನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸುತ್ತಾರೆ. ಅವರಿಗೂ ಸ್ಪ್ಯಾಮ್ ಇಮೇಲ್ ಕಿರಿಕಿರಿ ತಪ್ಪಿದ್ದಲ್ಲ. ಆದರೆ, ಈ ಸ್ಪ್ಯಾಮ್ ಮೇಲ್‌ಗಳ ಕಿರಿಕಿರಿಯಿಂದ ತಪ್ಪಿಸಿಕೊಳ್ಳುವುದು ಬಹುತೇಕರಿಗೆ ಗೊತ್ತಿರುವುದಿಲ್ಲ. ಜಿ ಮೇಲ್‌ನಲ್ಲೇ ಇದಕ್ಕೆ ಪರಿಹಾರವಿದೆ. ಈ ಸ್ಪ್ಯಾಮ್ ಮೇಲ್‌ಗಳಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಓದಿ.
ಸ್ಪ್ಯಾಮ್ ಮೇಲ್ ಅನ್‌ಸಬ್ಸ್‌ಕ್ರೈಬ್, ರಿಪೋರ್ಟ್‌ಗೆ ಹೀಗೆ ಮಾಡಿ…
ಮೊದಲಿಗೆ ನಿಮ್ಮ ಜಿಮೇಲ್ ಅಕೌಂಟ್ ಓಪನ್ ಮಾಡಿಕೊಳ್ಳಿ. ಅನ್‌ಸಬ್ಸ್‌ಕ್ರೈಬ್ ಮಾಡಿಕೊಳ್ಳಬೇಕಾದ ಎಲ್ಲ ಸ್ಪ್ಯಾಮ್ ಇಮೇಲ್ ಸೆಲೆಕ್ಟ್ ಮಾಡಿ. ಆ ಮೇಲೆ, ಮೇಲ್ಭಾಗದಲ್ಲಿ ಕಾಣಸಿಗುವ i ಐಕಾನ್ ಮೇಲೆ ಟ್ಯಾಪ್ ಮಾಡಿದಾಗ ಆಗ ನಿಮಗೆ ರಿಪೋರ್ಟ್ ಸ್ಪ್ಯಾಮ್ ಅಥವಾ ರಿಪೋರ್ಟ್ ಸ್ಪ್ಯಾಮ್ ಆ್ಯಂಡ್ ಅನ್‌ಸಬ್ಸ್‌ಕ್ರೈಬ್ ಮಾಹಿತಿ ಕಾಣಲು ಸಿಗುತ್ತದೆ. ಬಳಿಕ ಪಟ್ಟಿ ಮಾಡಲಾಗಿರುವ ಐಡಿ ಲಿಸ್ಟ್ ಪರಿಶೀಲಿಸಿ, ಒಂದು ವೇಳೆ ಯಾವುದೇ ಮಹತ್ವದ ಐಡಿ ಕಾಣಿಸದಿದ್ದರೆ ರಿಪೋರ್ಟ್ ಸ್ಪ್ಯಾಮ್ ಮತ್ತು ಅನ್‌ಸಬ್ಸ್‌ಕ್ರೈಬ್ ಆಪ್ಷನ್ ಆಯ್ಕೆ ಮಾಡಿಕೊಳ್ಳಿ.
ಸ್ಪ್ಯಾಮ್ ಮೇಲ್‌ಗಳನ್ನು ಹೀಗೆ ಪತ್ತೆ ಹಚ್ಚಿ…
ಮೊದಲಿಗೆ ಜಿಮೇಲ್ ಓಪನ್ ಮಾಡಿ. ಸ್ಕ್ರೀನ್‌ನಲ್ಲಿ ಮೇಲ್ಭಾಗದಲ್ಲಿ ಕಾಣಿಸುವ ಸರ್ಚ್ ಬಾಕ್ಸ್ ಮೇಲೆ ಟ್ಯಾಪ್ ಮಾಡಿ, unsubscribe ಟೈಪ್ ಮಾಡಿ. ಆಗ ಎಲ್ಲ ಪ್ರಮೋಷನಲ್ ಇಮೇಲ್ ಲಿಸ್ಟ್ ಮಾಡಬಹುದು. ಇಷ್ಟಾದ ಮೇಲೆ, ಲಿಸ್ಟ್ ಮಾಡಲಾದ ಎಲ್ಲ ಸ್ಪ್ಯಾಮ್ ಇಮೇಲ್ಸ್ ಸೆಲೆಕ್ಟ್ ಮಾಡಿ. ನಿಮಗೆ ಮಹತ್ವದ ಇಲ್ಲವೇ ನ್ಯೂಸ್‌ಸ್ಲೇಟರ್ ಇರುವ ಐಡಿಗಳಿವೆ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಬಳಿಕ, ಮೇಲ್ಗಡೆ ಕಾಣಿಸುವ ಮೂರು ಡಾಟ್ ಮೇಲೆ ಕ್ಲಿಕ್ ಮಾಡಿ ಮತ್ತು ಫಿಲ್ಟರ್ ಮೇಸೆಜ್ ಲೈಕ್ ಧೀಸ್ (Filter messages like these) ಎಂಬುದನ್ನು ಆಯ್ಕೆ ಮಾಡಿಕೊಳ್ಳಿ. ಈಗ ಕ್ರಿಯೇಟ್ ಫಿಲ್ಟರ್ (create filter) ಆಪ್ಷನ್ ಮೇಲೆ ಕ್ಲಿಕ್ ಮಾಡಿ ಮತ್ತು ಈ ಇಮೇಲ್‌ಗಳನ್ನು ಯಾವ ಸ್ಥಿತಿಯಲ್ಲಿಡಬೇಕು ಎಂಬ ಬಗ್ಗೆ ಈಗ ನೀವು ಆಯ್ಕೆ ಮಾಡುವ ಸಮಯ. ಅಂದರೆ, ಒಂದು ವೇಳೆ, ಇಮೇಲ್ಸ್ ಸ್ವಯಂ ಆಗಿ ಅಳಿಸಿ ಹಾಕಬೇಕಿದ್ದರೆ ಕ್ರಿಯೇಟ್ ಆನ್ ಫಿಲ್ಟರ್ ಮೇಲೆ ಕ್ಲಿಕ್ ಮಾಡಿ ಮತ್ತು ಡಿಲಿಟ್ ಇಟ್ ಆಪ್ಷನ್ ಆಯ್ಕ ಮಾಡಿಕೊಳ್ಳಿ. ಆಗ ಪಾಪ್ ಅಪ್ ತೆರೆದುಕೊಳ್ಳುತ್ತದೆ ಫಿಲ್ಟರ್ ರಚಿಸಿರುವುದನ್ನು ನಿಮಗೆ ತೋರಿಸುತ್ತದೆ. ಡಿಲಿಟ್ ಮಾಡುವುದು ಮಾತ್ರವಲ್ಲದೇ ಅವುಗಳ್ನು ಓದಲಾಗಿದೆ ಎಂದೂ ಮಾರ್ಕ್ ಮಾಡಬುಹುದು.
ಇದನ್ನೂ ಓದಿ | ಕನ್ನಡದ ಹುಡುಗರಿಗೆ ಬೇಕು ಕನ್ನಡದ ಡೇಟಿಂಗ್ ಆ್ಯಪ್!