Site icon Vistara News

ಇಂಟರ್ನೆಟ್‌ ಇಲ್ಲದಿದ್ದರೂ Gmail ಕಳುಹಿಸಬಹುದು! ಇಲ್ಲಿದೆ ನೋಡಿ ಉಪಾಯ?

Google will Delete gmail account those inactive more than two years

ನವ ದೆಹಲಿ: ನಾವೀಗ ಅಂತರ್ಜಾಲ ಯುಗದಲ್ಲಿದ್ದೇವೆ. ಇಂಟರ್ನೆಟ್‌ ಇಲ್ಲದೆ ಯಾವ ಕೆಲಸವೂ ನಡೆಯುವುದಿಲ್ಲ. ಕೆಲಸ ಮಾಡುವ ಸ್ಥಳದ ಅಥವಾ ಇನ್ಯಾವುದೇ ವಹಿವಾಟುಗಳಿಗೆ ಇಂಟರ್ನೆಟ್‌ ಅತ್ಯಗತ್ಯ. ಒಂದು ಸಂದೇಶ ರವಾನಿಸಲೂ ಇಂಟರ್ನೆಟ್‌ ಅನ್ನು ನೆಚ್ಚಿಕೊಂಡಿದ್ದೇವೆ. ಕೆಲವು ನಿಮಿಷಗಳ ಮಟ್ಟಿಗೆ ಇಂಟರ್ನೆಟ್‌ ಸ್ಥಗಿತಗೊಂಡರೂ ಕಂಗಾಲಾಗುವ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಈ ರೀತಿಯ ಸಮಸ್ಯೆಗೆ gmail ಪರಿಹಾರವೊಂದನ್ನು ಹುಡುಕಿದ್ದು, ಇಂಟರ್ನೆಟ್‌ ಇಲ್ಲದಿದ್ದರೂ ಮೇಲ್‌ ಕಳುಹಿಸುವ ಮತ್ತು ಡೌನ್‌ಲೋಡ್‌ ಮಾಡುವ ಎರಡೂ ಆಯ್ಕೆಯನ್ನು ನೀಡಿದೆ.

ಗೂಗಲ್‌ ಸಪೋರ್ಟ್‌ ನೀಡುವ ಮಾಹಿತಿಯ ಪ್ರಕಾರ ಆಫ್‌ಲೈನ್‌ನಲ್ಲಿ ಇದ್ದರೂ ಮೇಲ್‌ ಸ್ವೀಕರಿಸಬಹುದು ಹಾಗೂ ಕಳುಹಿಸಬಹುದು. ಅದಕ್ಕಾಗಿ mail.google.com ವೆಬ್‌ಸೈಟ್‌ಗೆ ಭೇಟಿ ನೀಡಬೇಕಾಗುತ್ತದೆ.

ಆಫ್‌ಲೈನ್‌ನಲ್ಲಿ ಜಿ ಮೇಲ್‌ ಬಳಸುವುದು ಹೇಗೆ?

  1. ಕಂಪ್ಯೂಟರ್‌ನಲ್ಲಿ ಕ್ರೋಮ್‌ ಡೌನ್‌ಲೋಡ್‌ ಮಾಡಬೇಕು.
  2. gmail ಖಾತೆಗೆ ಸೈನ್‌ ಇನ್‌ ಆಗಬೇಕು.
  3. gmail ಓಪನ್‌ ಮಾಡಿ ನಂತರ ಅಲ್ಲಿ ಸೆಟ್ಟಿಂಗ್ಸ್‌ಗೆ ಹೋಗಬೇಕು.
  4. ನಂತರ gmail ಆಫ್‌ಲೈನ್‌ ಸೆಟ್ಟಿಂಗ್‌ನಲ್ಲಿ ʼಎನೇಬಲ್‌ ಆಫ್‌ಲೈನ್‌ ಮೇಲ್‌ʼ ಆಪ್ಷನ್‌ ಆಯ್ಕೆ ಮಾಡಬೇಕು.
  5. ಮೇಲ್‌ಗಳನ್ನು ಎಷ್ಟು ದಿನಗಳಿಗೆ ಸಿಂಕ್‌ ಮಾಡಬೇಕು ಎಂದು ಆಯ್ಕೆ ಮಾಡಬೇಕು.
  6. ಮೇಲ್‌ನಲ್ಲಿ ಬಂದ ದಾಖಲೆಗಳನ್ನು ಆಫ್‌ಲೈನ್‌ನಲ್ಲಿ ಡೌನ್‌ಲೋಡ್‌ ಮಾಡಬೇಕಿದ್ದರೆ, ಡೌನ್‌ ಲೋಡ್‌ ಅಟಾಚ್ಮೆಂಟ್ಸ್‌ ಆಯ್ಕೆ ಕ್ಲಿಕ್‌ ಮಾಡಬೇಕು.
  7. ʼಸೇವ್‌ ಚೇಂಜಸ್‌ʼ ಆಯ್ಕೆ ಕ್ಲಿಕ್‌ ಮಾಡಬೇಕು.

ಇಷ್ಟು ಮಾಡಿದರೆ ನೀವು gamilಗಳನ್ನು ಆಫ್‌ಲೈನ್‌ನಲ್ಲಿ ಕೂಡ ಬಳಸಬಹುದು.

ಇದನ್ನೂ ಓದಿ: WhatsApp ಅಪ್ಡೇಟ್‌: 2GB ವರೆಗಿನ ಫೈಲ್‌ ಕಳಿಸಬಹುದು!

Exit mobile version