ನವ ದೆಹಲಿ: ಬಿಲೇನಿಯರ್ ಎಲಾನ್ ಮಸ್ಕ್ ಒಡೆತನ ಮೈಕ್ರೋ ಬ್ಲಾಗಿಂಗ್ ಸಂಸ್ಥೆ ಟ್ವಿಟರ್ ಕೆಲವು ತಿಂಗಳ ಹಿಂದೆ ಪಾವತಿ ಮಾಡಿ ಪಡೆಯುವ ಸಬ್ಸ್ಕ್ರಿಪ್ಷನ್ ಮಾಡೆಲ್ ಅನ್ನು ಜಾರಿಗೆ ತಂದು ಯಶಸ್ವಿಯಾಗಿತ್ತು. ಇದೀಗ ಫೋಟೋ ಶೇರಿಂಗ್ ಆಪ್ ಇನ್ಸ್ಟಾಗ್ರಾಮ್ (Instagram) ಇದೇ ಮಾದರಿಯ ಪೇಯ್ಡ್ ಬ್ಯಾಜ್ ನೀಡುವ ಬಗ್ಗೆ ಚಿಂತನೆ ನಡೆಸಿದೆ ಎನ್ನಲಾಗಿದೆ. ಲೀಕ್ಸ್ಟರ್ ಸಂಸ್ಥೆಯು ಈ ಸುಳಿವು ನೀಡಿದ್ದು, ಪಾವತಿ ಮಾಡಿ ಪಡೆಯುವ ಸಬ್ಸ್ಕ್ರಿಪ್ಷನ್ ನೀಡುವುದಕ್ಕಾಗಿ ಕೆಲಸ ಮಾಡುತ್ತಿದೆ ಎಂದು ವರದಿ ಮಾಡಿದೆ.
ಟ್ವಿಟರ್ ಬ್ಯೂ ಟಿಕ್ ಪಡೆಯುವುದಕ್ಕೆ ಎಂಟು ಡಾಲರ್ ನಿಗದಿ ಮಾಡಿದೆ. ಈ ಮೂಲಕ ಅನಧಿಕೃತ ಅಕೌಂಟ್ಗಳಿಗೆ ನಿಯಂತ್ರಣ ತರುವ ಜತೆಗೆ ಬ್ಯಾಜ್ ನೀಡಿ ಸೆಲೆಬ್ರಿಟಿಗಳ ವರ್ಗೀಕರಣವನ್ನೂ ಮಾಡಿದೆ. ಇದೇ ಮಾದರಿಯಲ್ಲಿ ಸೆಲೆಬ್ರಿಟಿಗಳು ಹಾಗೂ ಪ್ರಮುಖ ಸಂಸ್ಥೆಗಳನ್ನು ವರ್ಗೀಕರಣ ಮಾಡಿ ಅದಕ್ಕೆ ಪಾವತಿ ಮಾಡಿ ಪಡೆಯುವ ಬ್ಯಾಜ್ ನೀಡುವುದು ಇನ್ಸ್ಡಾಗ್ರಾಮ್ ಗುರಿಯಾದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇನ್ಸ್ಟಾಗ್ರಾಮ್ ಕೋಡಿಂಗ್ ಮಾಡುತ್ತಿದೆ ಎನ್ನಲಾದ ಸ್ಕ್ರೀನ್ಶಾಟ್ಗಳು ಹರಿದಾಡಿವೆ ಎಂದು ಲೈವ್ ಮಿಂಟ್ ವರದಿ ಮಾಡಿದೆ.
ಇದನ್ನೂ ಓದಿ : Shubman Gill: ನ್ಯೂ ಬ್ಯಾಟಿಂಗ್ ಸೆನ್ಷೇಷನಲ್ ಗಿಲ್ ಇನ್ಸ್ಟಾಗ್ರಾಮ್ ಪೋಸ್ಟ್ ವೈರಲ್
ಪೋಟೋ ಶೇರಿಂಗ್ ಆಪ್ ಇನ್ಸ್ಟಾಗ್ರಾಮ್ ನಾನಾ ರೀತಿಯ ಬದಲಾವಣೆಗಳನ್ನು ಮಾಡಲು ಮುಂದಾಗಿದ್ದು, ಈ ತಿಂಗಳ ಆರಂಭದಲ್ಲಿ ಕ್ವೈಟ್ ಮೋಡ್ (Quiet Mode) ಎಂಬ ಆಯ್ಕೆಯನ್ನು ತನ್ನ ಗ್ರಾಹಕರಿಗೆ ನೀಡಿತ್ತು. ಈ ಮೋಡ್ ಆಯ್ಕೆ ಮಾಡಿಕೊಂಡರೆ ಯಾವುದೇ ನೋಟಿಫಿಕೇಷನ್ ಬರುವುದಿಲ್ಲ ಹಾಗೂ ಪ್ರೋಫೈಲ್ ಆಕ್ಟಿವಿಟಿ ಸ್ಟೇಟಸ್ ಕೂಡ ಬದಲಾಗುತ್ತದೆ. ಒಂದು ವೇಳೆ ಯಾರಾದರೂ ನೇರ ಮೆಸೇಜ್ ಕಳುಹಿಸಿದರೆ ಆಟೋಮ್ಯಾಟಿಕ್ ರಿಪ್ಲೇ ಕೂಡ ಹೋಗುತ್ತಿತ್ತು.