Site icon Vistara News

Digital Payments: ಡಿಜಿಟಲ್ ಪಾವತಿ, ಇಂಡಿಯಾದ್ದೇ ಕೀರ್ತಿ! ಎಲ್ಲ ದೇಶಗಳನ್ನು ಹಿಂದಿಕ್ಕಿ ನಂ.1 ಆದ ಭಾರತ

Digitl Payments

ನವದೆಹಲಿ: ಭಾರತದಲ್ಲಿ ಡಿಜಿಟಲ್ ಕ್ರಾಂತಿಯಾಗುತ್ತಿದೆ(digital revolution in india). ಇದಕ್ಕೆ ಮತ್ತೊಂದು ಉದಾಹರಣೆ ದೊರೆತಿದೆ. 2022ರ ಅಂಕಿ ಅಂಶಗಳ ಪ್ರಕಾರ, ಡಿಜಿಟಲ್ ಪೇಮೆಂಟ್ಸ್‌ನಲ್ಲಿ (Digital Payments) ಭಾರತವು (India) ನಾಲ್ಕು ರಾಷ್ಟ್ರಗಳನ್ನು ಹಿಂದಿಕ್ಕಿ ನಂಬರ್ 1 ಸ್ಥಾನಕ್ಕೇರಿದೆ. 2022ರಲ್ಲಿ 8.95 ಕೋಟಿ ಡಿಜಿಟಲ್ ಪಾವತಿಗಳಾಗಿವೆ ಎಂದು ಮೈಗೌವ್‌ಇಂಡಿಯಾ (MyGovIndia) ಅಂಕಿ ಅಂಶಗಳಿಂದ ಗೊತ್ತಾಗಿದೆ. ಅಂದರೆ, ಜಾಗತಿಕವಾಗಿ (World) ನಡೆಯುವ ರಿಯಲ್‌ಟೈಮ್ ಡಿಜಿಟಲ್ ಪೇಮೆಂಟ್‌ಗಳಿಗೆ ಭಾರತದ ಕೊಡುಗೆಯೇ ಶೇ.46ರಷ್ಟಾಗುತ್ತದೆ!

ಡಿಜಿಟಿಲ್ ಪಾವತಿಯಲ್ಲಿ ಭಾರತದ ನಂತರದ ಸ್ಥಾನದಲ್ಲಿ 2.92 ಕೋಟಿ ಪಾವತಿಗಳೊಂದಿಗೆ ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ. ಬ್ರೆಜಿಲ್‌ ನಂತರದ ಸ್ಥಾನದಲ್ಲಿ ಸೌತ್ ಕೋರಿಯಾ 80 ಲಕ್ಷ ಪಾವತಿಗಳೊಂದಿಗೆ ಮೂರನೇ ಸ್ಥಾನದಲ್ಲಿದೆ ಎಂದು ಮೈಗೌವ್‌ಇಂಡಿಯಾ ಮಾಹಿತಿ ನೀಡಿದೆ.

ಮೈಗೌ‌ಇಂಡಿಯಾ (MyGovIndia) ಎಂಬುದು ಭಾರತೀಯ ಸರ್ಕಾರದ ವೇದಿಕೆಯಾಗಿದ್ದು ಅದು ನಾಗರಿಕರು ತಳಮಟ್ಟದಲ್ಲಿ ಡಿಜಿಟಲ್ ಆಗಿ ತೊಡಗಿಸಿಕೊಳ್ಳಲು ಮತ್ತು ಕೊಡುಗೆ ನೀಡಲು ಅನುವು ಮಾಡಿಕೊಡುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಡಿಜಿಟಲ್ ಪಾವತಿಗಳಲ್ಲಿ ಭಾರತದ ನಾಯಕತ್ವ ಮತ್ತು ದೇಶದ ಗ್ರಾಮೀಣ ಆರ್ಥಿಕತೆಯ ಮೇಲೆ ಪರಿವರ್ತಕ ಪರಿಣಾಮವನ್ನು ಒತ್ತಿ ಹೇಳಿದ್ದರು.

ಇದನ್ನೂ ಓದಿ: Har Payment Digital: ಹರ್ ಪೇಮೆಂಟ್ ಡಿಜಿಟಲ್‌ ಮಿಷನ್‌ಗೆ ಚಾಲನೆ ನೀಡಿದ ಆರ್‌ಬಿಐ, ವಾರ ಪೂರ್ತಿ ಜಾಗೃತಿ

ಭಾರತೀಯ ರಿಸರ್ವ್ ಬ್ಯಾಂಕಿನ ತಜ್ಞರ ಪ್ರಕಾರ, ಭಾರತದ ಡಿಜಿಟಲ್ ಪಾವತಿ ವಲಯವು ಮೌಲ್ಯ ಮತ್ತು ಪರಿಮಾಣ ಎರಡರಲ್ಲೂ ಗಮನಾರ್ಹ ಮೈಲಿಗಲ್ಲುಗಳನ್ನು ಸಾಧಿಸುತ್ತಿದೆ. ಇದು ದೇಶದ ಪಾವತಿ ಪರಿಸರ ವ್ಯವಸ್ಥೆಯ ಶಕ್ತಿ ಮತ್ತು ವ್ಯಾಪಕವಾದ ಸ್ವೀಕಾರವನ್ನು ಎತ್ತಿ ತೋರಿಸುತ್ತದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ ಡಿಜಿಟಲ್ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಅದರ ಪರಿಣಾಮವೇ ಈಗ ಈ ಸಾಧನೆ ಮಾಡಲು ಸಾಧ್ಯವಾಗಿದೆ.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version