Site icon Vistara News

BharOS: ಏನಿದು ದೇಶಿ ಆಪರೇಟಿಂಗ್ ಸಿಸ್ಟಮ್ ಭರೋಸ್? ಪರೀಕ್ಷೆಯಲ್ಲಿ ಪಾಸಾಯ್ತಾ?

indigenously developed BharOS tested and check it functions

ನವದೆಹಲಿ: ದೇಶಿ ಆಪರೇಟಿಂಗ್ ಸಿಸ್ಟಮ್ (Operating System) ನನಸಾಗುವ ಕಾಲ ಸನ್ನಿಹಿತವಾಗಿದೆ. ಮದ್ರಾಸ್ ಐಐಟಿ ಅಭಿವೃದ್ಧಿಪಡಿಸಿದ ದೇಶಿ ಆಪರೇಟಿಂಗ್ ಸಿಸ್ಟಮ್, ಭರೋಸ್(BharOS) ಅನ್ನು ಮಂಗಳವಾರ ಪರೀಕ್ಷಿಸಲಾಗಿದೆ. ಕೇಂದ್ರ ಸಂವಹನ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಶಿಕ್ಷಣ ಸಚಿವ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಪರೀಕ್ಷಿಸಿದರು.

ಈ ಆಪರೇಟಿಂಗ್ ಸಿಸ್ಟಮ್ ಅಭಿವೃದ್ಧಿಯ ಪಾಲ್ಗೊಂಡಿರುವ ಎಲ್ಲರಿಗೂ ಅಭಿನಂದನೆಗಳು. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು 8 ವರ್ಷಗಳ ಹಿಂದೆ ಡಿಜಿಟಲ್ ಇಂಡಿಯಾ ಬಗ್ಗೆ ಮಾತನಾಡಿದಾಗ, ನಮ್ಮ ಕೆಲವು ಸ್ನೇಹಿತರು ಅಣಕವಾಡಿದ್ದರು. ಆದರೆ, ತಂತ್ರಜ್ಞರು, ಸಂಶೋಧಕರು, ಕೈಗಾರಿಕೋದ್ಯಮಿಗಳು, ನೀತಿ ನಿರೂಪಕರು ಮತ್ತು ದೇಶದ ಶೈಕ್ಷಣಿಕ ಸಂಸ್ಥೆಗಳು ಅವರ (ಮೋದಿ) ದೂರದೃಷ್ಟಿಯನ್ನು ಸ್ವೀಕರಿಸಿ ಯಶಸ್ವಿಯಾಗುತ್ತಿದ್ದಾರೆ ಎಂದು ಅವರು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಕೇಂದ್ರ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಕೂಡ ಮಾತನಾಡಿ, ಈ ಪ್ರಯಾಣದಲ್ಲಿ ಸಾಕಷ್ಟು ಅಡೆತಡೆಗಳಿದ್ದವು. ನಮ್ಮ ಸುತ್ತ ಮುತ್ತ ಸಾಕಷ್ಟು ಜನರು ಸಮಸ್ಯೆಗಳನ್ನು ಸೃಷ್ಟಿಸಲು ಕಾಯುತ್ತಿರುತ್ತಾರೆ. ಅಲ್ಲದೇ, ಅವರಿಗೆ ಇಂಥ ಯಾವುದೇ ವ್ಯವಸ್ಥೆಯು ಸಕ್ಸೆಸ್ ಆಗುವುದು ಬೇಕಿಲ್ಲ ಎಂದು ಅವರು ಹೇಳಿದರು.

ಏನಿದು ಭರೋಸ್(BharOS)?

ಭರೋಸ್ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಆಗಿದ್ದು, ಬಳಕೆದಾರರ ಖಾಸಗಿತನ ಮತ್ತು ಸುರಕ್ಷತೆಯನ್ನು ಭರವಸೆಯನ್ನು ನೀಡುತ್ತದೆ. ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಒಂದು ಸಾಫ್ಟ್‌ವೇರ್ ಆಗಿದ್ದು, ಗೂಗಲ್‌ನ ಆಂಡ್ರಾಯ್ಡ್ ಮತ್ತು ಆಪಲ್‌ನ ಐಒಎಸ್ ರೀತಿಯಲ್ಲಿ ಸ್ಮಾರ್ಟ್‌ಫೋನ್‌ಗಳ ಇಂಟರ್ಫೇಸ್ ಆಗಿದೆ.

ಇದನ್ನೂ ಓದಿ: ಆ್ಯಪಲ್ ಹಾಗೂ ಆಂಡ್ರಾಯ್ಡ್‌ ಫೋನ್‌ಗಳ ಮೇಲೆ ಇಟಲಿ ಮೂಲದ spyware ದಾಳಿ

ಭಾರತ ಸರ್ಕಾರದ ಪ್ರಯತ್ನ

ಈ ಪ್ರಾಜೆಕ್ಟ್‌ ಅನ್ನು ಭಾರತ ಸರ್ಕಾರವೇ ಕೈಗೆತ್ತಿಕೊಂಡಿದೆ. ಸ್ವದೇಶಿ ಆಪರೇಟಿಂಗ್ ಸಿಸ್ಟಮ್ ಅಗತ್ಯದ ಹಿನ್ನೆಲೆಯಲ್ಲಿ ಈ ದೇಶಿ ಆಪರೇಟಿಂಗ್ ಸಿಸ್ಟಮ್ ಅಭಿವೃದ್ಧಿಪಡಿಸಲಾಗಿದೆ. ಇದೊಂದು ಮುಕ್ತ ಮತ್ತು ಓಪನ್ ಸೋರ್ಸ್ ಆಪರೇಟಿಂಗ್ ಸಿಸ್ಟಮ್ ಆಗಿದ್ದು ಸರ್ಕಾರ ಹಾಗೂ ಸಾರ್ವಜನಿಕ ಸಂಸ್ಥೆಗಳು ಬಳಸಬಹುದಾಗಿದೆ. ವಿದೇಶಿ ಒಎಸ್‌ಗಳ ಮೇಲಿನ ಅವಲಂಬನೆಯನ್ನು ತಗ್ಗಿಸುವುದು ದೇಶಿ ಒಎಸ್‍ ಅಭಿವೃದ್ಧಿಯ ಮುಖ್ಯ ಉದ್ದೇಶವಾಗಿದೆ.

Exit mobile version