ಸ್ಯಾನ್ ಫ್ರಾನ್ಸಿಸ್ಕೋ, ಅಮೆರಿಕ: ಫೋಟೋ ಷೇರಿಂಗ್ ವೇದಿಕೆಯಾಗಿರುವ ಇನ್‌ಸ್ಟಾಗ್ರಾಮ್ (Instagram) ಬಳಕೆದಾರರಿಗೆ ಇದು ಶಾಕಿಂಗ್ ಸುದ್ದಿ. ಯಾಕೆಂದರೆ, ಈ ತಾಣವನ್ನು ಶಿಶು ಪೀಡನೆ ಜಾಲವು, ಮಕ್ಕಳ ಮೇಲಿನ ಲೈಂಗಿಕ ಶೋಷಣೆ(pedophile networks), ದೌರ್ಜನ್ಯಕ್ಕಾಗಿ ಬಳಸಿಕೊಳ್ಳುತ್ತಿದೆ. ಅಂದರೆ, ಇನ್‌ಸ್ಟಾಗ್ರಾಮ್ ಮೂಲಕವೇ ಮಕ್ಕಳ ಲೈಂಗಿಕ ಕಂಟೆಂಟ್ ಪ್ರಮೋಟ್ ಮತ್ತು ಮಾರಾಟ ಮಾಡುವುದನ್ನು ಮಾಡಲಾಗುತ್ತಿದೆ ಎಂದು ಅಮೆರಿಕದ ಸ್ಟ್ಯಾನ್‌ಪೋರ್ಡ್ ವಿಶ್ವವಿದ್ಯಾಲಯ ಮತ್ತು ವಾಲ್ ಸ್ಟ್ರೀಟ್ ಜರ್ನಲ್ ತಯಾರಿಸಿದ ವರದಿಯಲ್ಲಿ ತಿಳಿಸಲಾಗಿದೆ(Child Sex Abuse Networks).
ಅಪ್ರಾಪ್ತ ವಯಸ್ಕರು ನಿರ್ವಹಿಸುತ್ತಿರುವ ಖಾತೆಗಳ ದೊಡ್ಡ ನೆಟ್‌ವರ್ಕ್‌ಗಳು ಸ್ವಯಂ-ರಚಿಸಿದ ಮಕ್ಕಳ ಲೈಂಗಿಕ ಶೋಷಣೆಯ ವಸ್ತುಗಳನ್ನು ಮಾರಾಟಕ್ಕಾಗಿ ಬಹಿರಂಗವಾಗಿ ಜಾಹೀರಾತು ಮಾಡುತ್ತಿವೆ ಎಂದು ಅಮೆರಿಕದ ವಿಶ್ವವಿದ್ಯಾಲಯದ ಸೈಬರ್ ನೀತಿ ಕೇಂದ್ರದ ಸಂಶೋಧಕರು ಹೇಳಿದ್ದಾರೆ.
ಇನ್‌ಸ್ಟಾಗ್ರಾಮ್ ಪ್ರಸ್ತುತ ಈ ಶಿಶುಪೀಡನೆ ಜಾಲಗಳಿಗೆ ಪ್ರಮುಖ ವೇದಿಕೆಯಾಗಿದೆ. ಶಿಫಾರಸು ಅಲ್ಗಾರಿದಮ್‌ಗಳು ಮತ್ತು ಖರೀದಿದಾರರು ಮತ್ತು ಮಾರಾಟಗಾರರನ್ನು ಸಂಪರ್ಕಿಸಲು ಸಹಾಯ ಮಾಡುವ ನೇರ ಸಂದೇಶ ಕಳುಹಿಸುವಿಕೆಯಂತಹ ವೈಶಿಷ್ಟ್ಯಗಳನ್ನು ಇದು ಒಳಗೊಂಡಿದೆ ಎಂದು ತಿಳಿಸಿದೆ.
ನಿರ್ದಿಷ್ಟವಾಗಿ ಮಕ್ಕಳನ್ನು ಉಲ್ಲೇಖಿಸುವ ಲೈಂಗಿಕವಾಗಿ ಸ್ಪಷ್ಟವಾದ ಕೀವರ್ಡ್‌ಗಳ ಸರಳ ಹುಡುಕಾಟವು ಅಪ್ರಾಪ್ತ ವಯಸ್ಕರ ಲೈಂಗಿಕ ದೌರ್ಜನ್ಯವನ್ನು ತೋರಿಸುವ ವಿಷಯವನ್ನು ಜಾಹೀರಾತು ಮಾಡಲು ಈ ಪದಗಳನ್ನು ಬಳಸುವ ಖಾತೆಗಳಿಗೆ ಕಾರಣವಾಗುತ್ತದೆ. ಈ ಪ್ರೊಫೈಲ್‌ಗಳು ಮಕ್ಕಳ ಪ್ರೊಫೈಲ್‌ಗಳೆಂದು ಹೇಳಿಕೊಳ್ಳುತ್ತವೆ. ಜತೆಗೆ ಲೈಂಗಿಕ ರಹಸ್ಯ ಹೆಸರುಗಳನ್ನು ಒಳಗೊಂಡಿರುತ್ತವೆ ಎಂದು ವಾಲ್ ಸ್ಟ್ರೀಟ್ ಜರ್ನಲ್‌ನಲ್ಲಿ ಪ್ರಕಟವಾದ ವರದಿಯಲ್ಲಿ ತಿಳಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Harrassment : ಹಾಸನದ ವಸತಿ ಶಾಲೆಯಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ; ಪ್ರಿನ್ಸಿಪಾಲ್ ಸೇರಿ ಐವರ ಸೆರೆ
ಅಲ್ಲದೇ ಈ ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ಲೈಂಗಿಕ ಪ್ರಚೋದನಕಾರಿ ವಿಡಿಯೋಗಳು ಇರುವುದನ್ನು ಸ್ಟ್ಯಾನ್‌ಫೋರ್ಡ್ ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಅಲ್ಲದೇ, ಒಂದು ನಿರ್ದಿಷ್ಟ ದರದಲ್ಲಿ ಮಕ್ಕಳನ್ನು ಮುಖತಃ ಭೇಟಿಯಾಗಲು ಅವಕಾಶವನ್ನೂ ಕಲ್ಪಿಸಲಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಕುರಿತು ಇನ್‍ಸ್ಟಾಗ್ರಾಮ್ ಒಡೆತನವನ್ನು ಹೊಂದಿರುವ ಮೆಟಾ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.