ನವ ದೆಹಲಿ: ಐಕ್ಯೂ (iQoo) ಕಂಪನಿಯು ಭಾರತೀಯ ಮಾರುಕಟ್ಟೆಗೆ ಐಕ್ಯೂ ಜೆಡ್6 ಲೈಟ್ 5ಜಿ (iQoo Z6 Lite 5G) ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಹೆಸರೇ ಹೇಳುವಂತೆ ಇದು 5ಜಿ ತಂತ್ರಜ್ಞಾನಕ್ಕೆ ಬೆಂಬಲಿಸುವ ಸ್ಮಾರ್ಟ್‌ಫೋನ್. ಭಾರತದಲ್ಲಿ ಶೀಘ್ರವೇ 5ಜಿ ತಂತ್ರಜ್ಞಾನ ಸೇವೆ ಆರಂಭವಾಗಲಿದೆ. ಹಾಗಾಗಿ, ಬಹುತೇಕ ಸ್ಮಾರ್ಟ್‌ಫೋನ್ ಉತ್ಪಾದಕ ಕಂಪನಿಗಳು 5ಜಿ ತಂತ್ರಜ್ಞಾನಾಧರಿತ ಫೋನ್‌ಗಳನ್ನು ಲಾಂಚ್ ಮಾಡುತ್ತಿವೆ. ತುಂಬ ಅಗ್ಗದ ಬೆಲೆಗೆ ಐಕ್ಯೂ ಕಂಪನಿಯು 5ಜಿ ಫೋನ್ ನೀಡುತ್ತಿದೆ.
ಐಕ್ಯೂ ಜೆಡ್6 ಲೈಟ್ 5ಜಿ ಮತ್ತೊಂದು ಕಾರಣಕ್ಕೆ ಬಳಕೆದಾರರನ್ನು ಸೆಳೆಯುತ್ತಿದೆ. ಆಂಡ್ರಾಯ್ಡ್ 12 ಆಪರೇಟಿಂಗ್ ಸಿಸ್ಟಮ್ ಆಧರಿತ ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 4 ಜೆನ್ 1 ಪ್ರೊಸೆಸರ್ (Qualcomm Snapdragon 4 Gen 1) ಒಳಗೊಂಡ ಜಗತ್ತಿನ ಮೊದಲ ಫೋನ್ ಎಂಬ ಖ್ಯಾತಿ ಗಳಿಸಿದೆ.
ಐಕ್ಯೂ ಬಿಡುಗಡೆ ಮಾಡಿರುವ ಹೊಸ ಸ್ಮಾರ್ಟ್‌ಫೋನ್, 6.58 ಇಂಚ್ ಡಿಸ್‌ಪ್ಲೇ ಹೊಂದಿದೆ. ಆಂಡ್ರಾಯ್ಡ್ 12 ಆಧಾರಿತ ಕಂಪನಿಯ ಫನ್‌ಟಚ್ ಒಎಸ್ 12 ಆಪರೇಟಿಂಗ್ ಸಿಸ್ಟಮ್ ಮೂಲಕ ರನ್ ಆಗುತ್ತದೆ. ಜತೆಗೆ, ಎರಡು ವರ್ಷಗಳ ಕಾಲ ಅಪ್‌ಡೇಟ್ ಸಿಗಲಿದೆ. ಮೂರು ವರ್ಷಗಳ ಕಾಲ ಸೆಕ್ಯುರಿಟಿ ಪ್ಯಾಚ್‌ಗಳು ದೊರೆಯಲಿವೆ.
ಫೋನ್ ಹಿಂಬದಿಯಲ್ಲಿ ಎರಡು ಕ್ಯಾಮೆರಾಗಳಿವೆ. 50 ಮೆಗಾ ಪಿಕ್ಸೆಲ್ ಮತ್ತು 2 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸರ್ ಕ್ಯಾಮೆರಾಗಳನ್ನು ನೋಡಬಹುದು. ಫ್ರಂಟ್‌ನಲ್ಲಿ ಸೆಲ್ಫಿ ಹಾಗೂ ವಿಡಿಯೋ ಕಾಲ್‌ಗಾಗಿ ಕಂಪನಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಿದೆ. ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುವ 5000mAh ಬ್ಯಾಟರಿ ಇದೆ.
4 ಜಿಬಿ RAM ಮತ್ತು 64 ಜಿಬಿ ಸ್ಟೋರೇಜ್ ಹಾಗೂ 6 ಜಿಬಿ RAM ಮತ್ತು 128 ಸ್ಟೋರೇಜ್ ಎರಡು ವೆರಿಯೆಂಟ್‌ಗಳಲ್ಲಿ ಈ ಸ್ಮಾರ್ಟ್‌ಫೋನ್ ದೊರೆಯಲಿದೆ. ಅಂದ ಹಾಗೆ, ಈ ಫೋನ್‌ಗಳು ಬೆಲೆ 13,999 ರೂ.ನಿಂದ ಆರಂಭವಾಗಲಿದೆ. 4 ಜಿಬಿ ಪ್ಲಸ್ 128 ಜಿಬಿ ವೆರಿಯೆಂಟ್ ಫೋನ್ ಬೆಲೆ 15,499 ರೂ. ಇರಲಿದೆ.
ಬಳಕೆದಾರರು ಈ ಹೊಸ ಸ್ಮಾರ್ಟ್‌ಫೋನ್ ಅನ್ನುಇ ಕಾಮರ್ಸ್ ತಾಣ ಅಮೆಜಾನ್‌ನಿಂದ ಸೆಪ್ಟೆಂಬರ್ 14ರಿಂದ ಖರೀದಿಸಬಹುದಾಗಿದೆ. ಎಸ್‌ಬಿಐ ಕಾರ್ಡ್ ಇದ್ದರೆ ಆರಂಭಿಕ ಆಫರ್ ಆಗಿ 2,500 ರೂ.ವರೆಗೆ ರಿಯಾಯ್ತಿ ಕೂಡ ಸಿಗಲಿದೆ.
ಇದನ್ನೂ ಓದಿ | Chinese Smartphones | ಭಾರತದಲ್ಲಿ ಚೀನಾ ಸ್ಮಾರ್ಟ್‌ಫೋನ್‌ಗಳ ಬ್ಯಾನ್? ಕೇಂದ್ರ ಹೇಳುವುದೇನು?