Site icon Vistara News

Jio BP Diesel: ಜಿಯೋ ಬಿಪಿಯಿಂದ ಹೊಸ ಡೀಸೆಲ್ ಲಾಂಚ್, ಪ್ರತಿ ಟ್ರಕ್‌ಗೆ ವರ್ಷಕ್ಕೆ 1.1 ಲಕ್ಷ ರೂ. ಉಳಿತಾಯ!

Jio BP launched new diesel and it can save money upto RS 1.1 lakh

Jio BP launched new diesel and it can save money upto RS 1.1 lakh

ಮುಂಬೈ, ಮಹಾರಾಷ್ಟ್ರ: ಆಕ್ಟಿವ್ ತಂತ್ರಜ್ಞಾನದೊಂದಿಗೆ ಡೀಸೆಲ್ (Diesel) ಅನ್ನು ಜಿಯೋ- ಬಿಪಿ (ಬ್ರಿಟಿಷ್ ಪೆಟ್ರೋಲಿಯಂ) ಮಂಗಳವಾರ ಬಿಡುಗಡೆ ಮಾಡಿದೆ(Jio BP Diesel). ಭಾರತೀಯ ಗ್ರಾಹಕರಿಗೆ ಡೀಸೆಲ್ ಗುಣಮಟ್ಟ ಹೆಚ್ಚಿಸುವ ಉದ್ದೇಶದೊಂದಿಗೆ ಈ ಕ್ರಮಕ್ಕೆ ಮುಂದಾಗಿದೆ. ಈ ಹೊಸ ಡೀಸೆಲ್ ಕಂಪನಿಯ ನೆಟ್‌ವರ್ಕ್‌ನಾದ್ಯಂತವಾಗಿ ದೊರೆಯುತ್ತದೆ. ಇದರಿಂದಾಗಿ ಪ್ರತಿ ವರ್ಷ ವಾರ್ಷಿಕ 1.1 ಲಕ್ಷ ರೂಪಾಯಿವರೆಗೆ ಉಳಿತಾಯ ಆಗಿ, ಸುಧಾರಿತ ಇಂಧನ ಆರ್ಥಿಕತೆಗೆ 4.3% ಕೊಡುಗೆ ನೀಡುತ್ತದೆ. ಈ ಹೆಚ್ಚು ಕಾರ್ಯಕ್ಷಮತೆ ಇರುವಂಥ ಡೀಸೆಲ್ ಎಲ್ಲ ಜಿಯೋ- ಬಿಪಿ ಔಟ್‌ಲೆಟ್‌ಗಳಲ್ಲಿ ದೊರೆಯುತ್ತದೆ. ಇದೇ ಮೊದಲ ಸಲ ಭಾರತೀಯ ಮಾರುಕಟ್ಟೆಯಲ್ಲಿ ಯಾವುದೇ ಹೆಚ್ಚುವರಿಯಾಗಿ ವೆಚ್ಚ ವಿಧಿಸದೆ ನಿಯಮಿತ ಬೆಲೆಯಲ್ಲಿ ನೀಡಲಾಗುತ್ತಿದೆ.

ಜಿಯೋ- ಬಿಪಿ ಔಟ್ ಲೆಟ್‌ಗಳಲ್ಲಿ ದೊರೆಯುವಂಥ ಆಕ್ಟಿವ್ ತಂತ್ರಜ್ಞಾನ ಹೊಂದಿರುವ ಡೀಸೆಲ್ ಬಳಕೆ ಮಾಡುವುದರಿಂದ ಆಗಾಗ ವಾಹನದ ನಿರ್ವಹಣೆಗಾಗಿ ಮಾಡುವಂಥ ಖರ್ಚು ಕಡಿಮೆ ಆಗುತ್ತದೆ. ಇತರ ಡೀಸೆಲ್‌ನಿಂದ ಉಂಟಾಗುವಂಥ ಕೊಳೆ ಕೂರುವಂಥ ಸಮಸ್ಯೆ ಹಾಗೂ ಇದರಿಂದ ಎಂಜಿನ್ ಬಿಡಿ ಭಾಗಗಳಿಗೆ ಆಗುವ ಹಾನಿಯನ್ನು ತಪ್ಪಿಸಬಹುದು. ಈ ಡೀಸೆಲ್ ಅನ್ನು ಎಲ್ಲ ವಾಣಿಜ್ಯ ವಾಹನಗಳಿಗೆ ಬಳಕೆ ಮಾಡುವುದಕ್ಕಾಗಿಯೇ ರೂಪಿಸಲಾಗಿದೆ.

ಈಗಾಗಲೇ ವಾಹನವನ್ನು ಬಳಸುತ್ತಿರುವ ಚಾಲಕರು, ಅಪಾರ ಸಂಖ್ಯೆಯಲ್ಲಿ ವಾಹನವನ್ನು ಹೊಂದಿರುವ ಮಾಲೀಕರಿಗೆ ಈ ಡೀಸೆಲ್‌ನಿಂದ ಅನುಕೂಲಕಾರಿಯಾಗಿದೆ. ಎಂಜಿನ್ ಸಾಮರ್ಥ್ಯವನ್ನು ಮರು ಸ್ಥಾಪಿಸುವುದಕ್ಕೆ ಮತ್ತು ನಿರ್ವಹಣೆ ಮಾಡುವುದಕ್ಕೆ ಸಹಾಯ ಮಾಡಿ, ಯಾವಾಗೆಂದರೆ ಆಗ ನಿರ್ವಹಣೆಗೆ ಖರ್ಚು ಮಾಡುವಂಥ ಸನ್ನಿವೇಶ ಕಡಿಮೆ ಆಗುತ್ತದೆ.

ಜಿಯೋ-ಬಿಪಿ ಸಿಇಒ ಹರೀಶ್ ಸಿ ಮೆಹ್ತಾ ಮಾತನಾಡಿ, “ಪ್ರತಿ ಗ್ರಾಹಕ ಮುಖ್ಯವಾಗಿದ್ದರೂ ಟ್ರಕ್ಕರ್‌ಗಳು ಯಾವಾಗಲೂ ಜಿಯೋ-ಬಿಪಿಗೆ ವಿಶೇಷ ಸ್ಥಾನ ಹೊಂದಿದ್ದಾರೆ. ಟ್ರಕ್ಕರ್‌ಗಳ ಅರ್ಧದಷ್ಟು ನಿರ್ವಹಣಾ ವೆಚ್ಚವನ್ನು ಲೆಕ್ಕಹಾಕುವುದು, ಅವರ ಒಟ್ಟಾರೆ ವ್ಯಾಪಾರದ ಕಾರ್ಯಕ್ಷಮತೆಯ ಮೇಲೆ ಇಂಧನದ ನಿರ್ಣಾಯಕ ಪರಿಣಾಮವನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ಇಂಧನ ಕಾರ್ಯಕ್ಷಮತೆ ಮತ್ತು ಎಂಜಿನ್ ನಿರ್ವಹಣೆಯ ಬಗ್ಗೆ ಅವರ ಆತಂಕ ಕಡಿಮೆ ಮಾಡಲು, ಜಿಯೋ-ಬಿಪಿ ಮೊದಲಿನಿಂದಲೂ ಕಸ್ಟಮೈಸ್ ಮಾಡಿದ ಸಂಯೋಜಕವನ್ನು ಅಭಿವೃದ್ಧಿಪಡಿಸಲು ಅತ್ಯುತ್ತಮ ತಂತ್ರಜ್ಞರೊಂದಿಗೆ ಹಲವು ವರ್ಷಗಳಿಂದ ಕೆಲಸ ಮಾಡಿದೆ. ಈ ಡೀಸೆಲ್ ಅನ್ನು ವಿಶೇಷವಾಗಿ ಭಾರತೀಯ ವಾಹನಗಳು, ಭಾರತೀಯ ರಸ್ತೆಗಳಲ್ಲಿ ಮತ್ತು ಭಾರತೀಯ ಚಾಲನಾ ಪರಿಸ್ಥಿತಿಗಳಲ್ಲಿ ವಿನ್ಯಾಸಗೊಳಿಸಲಾಗಿದೆ,” ಎಂದಿದ್ದಾರೆ.

ಇದನ್ನೂ ಓದಿ: Plans to ban diesel Cars : 2027ಕ್ಕೆ ಡೀಸೆಲ್‌ ಕಾರುಗಳಿಗೆ ನಿಷೇಧ ಸಾಧ್ಯತೆ, ಮಾರಾಟ 17%ಕ್ಕೆ ಕುಸಿತ

Jio BP Diesel: ಆಕ್ಟಿವ್ ತಂತ್ರಜ್ಞಾನ ಡೀಸೆಲ್‌ನಿಂದಾಗುವ ಪ್ರಯೋಜನಗಳು

Exit mobile version