Site icon Vistara News

ಎಂಜಿ ಕಾಮೆಟ್ ಇವಿ ಕಾರಿಗೆ ಜಿಯೋದಿಂದ ‘ಹಿಂಗ್ಲಿಷ್’ ವಾಯ್ಸ್ ಅಸಿಸ್ಟಂಟ್ ಸರ್ವೀಸ್!

MG Comet EV

ನವದೆಹಲಿ: ಬಳಕೆದಾರರಿಗಾಗಿ ಅತ್ಯುತ್ತಮ ಗುಣಮಟ್ಟದ ಸಂಪರ್ಕಿತ ಕಾರು ತಂತ್ರಜ್ಞಾನ ಒದಗಿಸುವುದಕ್ಕೆ ಬದ್ಧ ಆಗಿರುವ ಎಂಜಿ ಮೋಟಾರ್ ಇಂಡಿಯಾ (MG Motor India) ಸೋಮವಾರ ಘೋಷಣೆ ಮಾಡಿದಂತೆ, ಭಾರತದ ಪ್ರಮುಖ ಡಿಜಿಟಲ್ ಸೇವಾ ಪೂರೈಕೆದಾರ ಜಿಯೋ ಪ್ಲಾಟ್‌ಫಾರ್ಮ್ ಜತೆ ಸಹಭಾಗಿತ್ವ ವಹಿಸಿದೆ. ಇದರೊಂದಿಗೆ ಮಾಡಿಕೊಂಡಿರುವ ವ್ಯವಸ್ಥೆಯಂತೆ, ಎಂಜಿ ಮೋಟಾರ್ ಇಂಡಿಯಾವು ಹೊಸದಾಗಿ ಅನಾವರಣ ಮಾಡಿದ ಕಾಮೆಟ್ ಇವಿ- ಸ್ಮಾರ್ಟ್ ಎಲೆಕ್ಟ್ರಿಕ್ ವಾಹನದಲ್ಲಿ (Comet EV) ತಡೆರಹಿತವಾದ ‘ಹಿಂಗ್ಲಿಷ್’ (ಹಿಂದಿ+ಇಂಗ್ಲಿಷ್ Hinglish) ಧ್ವನಿ ಸಹಾಯಕ ವ್ಯವಸ್ಥೆಯನ್ನು (voice assistant system) ಜಿಯೋ ಡಿಜಿಟಲ್ ಅಸೆಟ್ಸ್ ಮಾಡಿಕೊಡುತ್ತಿದೆ.

ಈ ಸಹಭಾಗಿತ್ವದೊಂದಿಗೆ ಹೊಸ- ತಲೆಮಾರಿನ ಸ್ಮಾರ್ಟ್ ಮೊಬಿಲಿಟಿ ಸಲ್ಯೂಷನ್ಸ್ ಆವಿಷ್ಕಾರಗಳನ್ನು ಮಾಡುವುದಕ್ಕೆ ಸಹಾಯ ಆಗುತ್ತದೆ. ಭವಿಷ್ಯದ ನಗರ ಸಂಚಾರ ಎಕೋಸಿಸ್ಟಮ್ ರೂಪಿಸಬೇಕು ಎಂಬ ಬದ್ಧತೆಗೆ ಹಾಗೂ ಅದ್ಭುತವಾದ ಅನುಭವವನ್ನು ಪಡೆಯುವುದಕ್ಕೆ ಅನುಕೂಲ ಆಗಲಿದೆ.

ಮುಂದಿನ ತಲೆಮಾರಿನ ಆಟೋಮೆಟಿವ್ ಸಲ್ಯೂಷನ್

ಜಿಯೋ ಎಂಬುದು ಭಾರತದ ಅತಿದೊಡ್ಡ ಸಂಯೋಜಿತ ಡಿಜಿಟಲ್ ಸೇವೆಯನ್ನು ಒದಗಿಸುವಂಥ ಸಂಸ್ಥೆಯಾಗಿದೆ. ಬಹಳ ವಿಶಾಲ ವ್ಯಾಪ್ತಿಯ ಅನುಭವ ಪಡೆಯುವುಕ್ಕೆ ಇದು ಮುಂದಿನ ತಲೆಮಾರಿನ ಆಟೋಮೆಟಿವ್ ಸಲ್ಯೂಷನ್ ಅನ್ನು ವಿನ್ಯಾಸಗೊಳಿಸುತ್ತದೆ. ಎಂಜಿ ಕಾಮೆಟ್ ಇವಿ ಗ್ರಾಹಕರು ಜಿಯೋದ ಆವಿಷ್ಕಾರ ಅಸೆಟ್ ಗಳಿಂದ ಅನುಕೂಲ ಪಡೆಯುತ್ತಾರೆ. ಅವು ಯಾವುವು ಅಂತ ನೋಡುವುದಾದರೆ, ಮೊಟ್ಟ ಮೊದಲ ಹಿಂಗ್ಲಿಷ್ ಧ್ವನಿ ಸಹಾಯಕ ವ್ಯವಸ್ಥೆ, ಅದರ ಜತೆ ಜೋಡಣೆಗೊಂಡ ಸಂಗೀತದ ಅಪ್ಲಿಕೇಷನ್ ಗಳು, ಪಾವತಿ ಅಪ್ಲಿಕೇಷನ್ ಗಳು, ಕನೆಕ್ಟಿವಿಟಿ ಪ್ಲಾಟ್ ಫಾರ್ಮ್ ಗಳು ಮತ್ತು ಹಾರ್ಡ್ ವೇರ್ ಆಗಿದೆ.

ಇದರಲ್ಲಿ ಅಳವಡಿಸುವಂಥ ಹಲೋಜಿಯೋ ಎಂಬ ಧ್ವನಿ ಸಹಾಯಕವು ಹೇಗೆ ತರಬೇತುಗೊಂಡಿದೆ ಅಂದರೆ, ಭಾರತೀಯ ಪ್ರಾದೇಶಿಕ ಭಾಷೆಗಳನ್ನು ಮಾತನಾಡುವವರ ಉಚ್ಚಾರ, ಧ್ವನಿಯ ಏರಿಳಿತ, ಇತ್ಯಾದಿಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತದೆ. ಕಾರಿನ ಸ್ಟೀರಿಂಗ್ ನಲ್ಲಿ ಅದಕ್ಕಾಗಿಯೇ ಕೀ ಅಳವಡಿಸುವ ಮೂಲಕ, ಸ್ಪರ್ಶದ ಮೂಲಕ, ಎಚ್ಚರದ ಮಾತಿನ ಮೂಲಕವಾಗಿ ಇದನ್ನು ಸಕ್ರಿಯಗೊಳಿಸಬಹುದು. ಹಲೋಜಿಯೋ ಕಾರಿನೊಳಗೆ ಬಳಸುವಂಥ ಅತ್ಯುತ್ತಮ ಧ್ವನಿ ಸಹಾಯಕ ಆಗಿದೆ. ವಾಹನದೊಳಗಿನ ಸೂಚನೆ ಹಾಗೂ ನಿಯಂತ್ರಣದ ಆಚೆಗೆ ಡೈಲಾಗ್ ನೊಂದಿಗೆ ಕೆಲಸ ಮಾಡುತ್ತದೆ.

ಹಲೋ ಜಿಯೋ

ಹಲೋಜಿಯೋದ ಡೈಲಾಗ್ ಎಂಬುದು ಕ್ರಿಕೆಟ್, ಹವಾಮಾನ, ಸುದ್ದಿ, ಜಾತಕ, ಸುದ್ದಿ ಇನ್ನೂ ಹತ್ತು ಹಲವು ವಿಷಯಗಳ ಬಗ್ಗೆ ಮಾಹಿತಿ ಒದಗಿಸುತ್ತದೆ. ಸರಳವಾದ ಧ್ವನಿ ಸೂಚನೆಯ ಮೂಲಕವಾಗಿ ಬಳಕೆದಾರರು ಕಾರಿನೊಳಗೆ ಏಸಿಗೆ ಚಾಲನೀ ನೀಡಬಹುದು, ಬಂದ್ ಮಾಡಬಹದು, ಹಾಡುಗಳನ್ನು ನೇರವಾಗಿ ಹಾಕಬಹುದು, ಅಷ್ಟೇ ಅಲ್ಲ ಕ್ರಿಕೆಟ್ ಸ್ಕೋರ್ ಗಳನ್ನು ಸಹ ಕೇಳಬಹುದು.

ಈ ಪಾಲುದಾರಿಕೆಯ ಕುರಿತು ಮಾತನಾಡಿದ ಎಂಜಿ ಮೋಟಾರ್ ಇಂಡಿಯಾದ ಉಪ ವ್ಯವಸ್ಥಾಪಕ ನಿರ್ದೇಶಕ ಗೌರವ್ ಗುಪ್ತಾ, “ತಂತ್ರಜ್ಞಾನ ಮತ್ತು ನಾವೀನ್ಯತೆಯು ಆಟೋಮೊಬೈಲ್ ಉದ್ಯಮದಲ್ಲಿ ಸಂಪರ್ಕಿತ ಕಾರ್ ಕ್ಷೇತ್ರವನ್ನು ಮುನ್ನಡೆಸುತ್ತಿದೆ. ಪ್ರಸ್ತುತ ಪ್ರವೃತ್ತಿಯು ಸಾಫ್ಟ್‌ವೇರ್-ಚಾಲಿತ ಸಾಧನಗಳ ಮೇಲೆ ಹೆಚ್ಚು ಗಮನಹರಿಸುತ್ತದೆ ಮತ್ತು ಸ್ಮಾರ್ಟ್ ಮೊಬಿಲಿಟಿ ಜಾಗದಲ್ಲಿ ಜಿಯೋದಂಥ ತಂತ್ರಜ್ಞಾನ ನಾವೀನ್ಯತೆಯ ನಮ್ಮ ಈ ಪಾಲುದಾರಿಕೆಯು ಎಂಜಿ ಮೋಟಾರ್ ಅನ್ನು ವಾಹನ ಉದ್ಯಮದಲ್ಲಿ ತಾಂತ್ರಿಕ ನಾಯಕನಾಗಿ ಒಂದು ಹೆಜ್ಜೆಯಾಗಿದೆ. ಎಂಜಿಐ-ಜಿಯೋ ಪಾಲುದಾರಿಕೆಯು ನಮ್ಮ ಹೊಸದಾಗಿ ಪ್ರಾರಂಭಿಸಲಾದ ಎಂಜಿ ಕಾಮೆಟ್ ಇನಿ ಹೊಸ ತಲೆಮಾರಿನ ಗ್ರಾಹಕರಿಗೆ ಚಾಲನಾ ಅನುಭವವನ್ನು ಉತ್ಕೃಷ್ಟಗೊಳಿಸುತ್ತದೆ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ. ಮತ್ತು ಉತ್ತಮ ತಂತ್ರಜ್ಞಾನದ ಬೆಂಬಲದೊಂದಿಗೆ ಕಾರಿನಲ್ಲಿನ ಅನುಭವಗಳನ್ನು ನೀಡುತ್ತದೆ,” ಎಂದಿದ್ದಾರೆ.

ಎಂಜಿ ಕಾಮೆಟ್ ಇವಿಯು ಜಿಯೋದ ಅತ್ಯಾಧುನಿಕ ಇಸಿಮ್ (eSIM)ನೊಂದಿಗೆ ಸಂಯೋಜಿತವಾಗಿದೆ. ಇದು ಉತ್ಪಾದನಾ ಪ್ರಕ್ರಿಯೆಯಲ್ಲಿ ಸಂಯೋಜಿಸಿರುವುದರಿಂದ ವಾಹನ ಸುರಕ್ಷತೆಯನ್ನು ಸುಧಾರಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇದು ವಾಹನವನ್ನು ಗುರುತಿಸುತ್ತದೆ ಮತ್ತು ವಾಹನವು ಕಾರ್ಯನಿರ್ವಹಿಸುತ್ತಿರುವಾಗ ಸಂವಹನಗಳನ್ನು ಎನ್‌ಕ್ರಿಪ್ಟ್ ಮಾಡುತ್ತದೆ.

ಇ-ಸಿಮ್, ಐಒಟಿ

ಜಿಯೋ ಪ್ಲಾಟ್‌ಫಾರ್ಮ್ಸ್ ಅಧ್ಯಕ್ಷ ಆಶಿಶ್ ಲೋಧಾ ಮಾತನಾಡಿ, “ಭಾರತೀಯ ಬಳಕೆದಾರರಿಗಾಗಿ ಜಿಯೋ ಅತ್ಯಾಧುನಿಕ ತಂತ್ರಜ್ಞಾನ ಉತ್ಪನ್ನಗಳು ಮತ್ತು ಸಲ್ಯೂಷನ್ ಎಕೋ ಸಿಸ್ಟಮ್ ನಿರ್ಮಿಸುತ್ತಿದೆ. ಎಂಜಿ ಮೋಟಾರ್ ಇಂಡಿಯಾದೊಂದಿಗಿನ ನಮ್ಮ ಮುಂದುವರಿದ ಪಾಲುದಾರಿಕೆ ಮತ್ತು ಬೆಳವಣಿಗೆಗಳು ಆ ಪ್ರಯಾಣದಲ್ಲಿ ಪ್ರಮುಖ ಮೈಲುಗಲ್ಲು. ಹಲೋಜಿಯೋ ಧ್ವನಿ ಸಹಾಯಕ, ಸ್ಟ್ರೀಮಿಂಗ್, ಪಾವತಿ ಅಪ್ಲಿಕೇಶನ್‌ಗಳು, ಇ- ಸಿಮ್ (eSIM), ಜಿಯೋ ಐಒಟಿ ಎಂಜಿ ಬಳಕೆದಾರರಿಗೆ “ನಿಮ್ಮ ಕಾರಿನೊಂದಿಗೆ ಮಾತನಾಡಿ” ಎಂಬ ಹೊಸ ಆಯಾಮದೊಂದಿಗೆ ರಿಯಲ್ ಟೈಮ್ ಸಂಪರ್ಕ, ಮಾಹಿತಿ ಮತ್ತು ಸಂಪರ್ಕಿತ ಕಾರ್ ಅನುಭವಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಇದು ವಾಹನ ಉದ್ಯಮದಲ್ಲಿ ತಾಂತ್ರಿಕ ವಿಕಸನಕ್ಕೆ ಬದ್ಧವಾಗಿದೆ ಮತ್ತು ನಾವೀನ್ಯತೆ ಅದರ ಪ್ರಮುಖ ಆಧಾರವಾಗಿದೆ,” ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ: MG Motors : ಎಂಜಿ ಕಾಮೆಟ್​ ಬುಕಿಂಗ್ ಆರಂಭ; ಹಂತಹಂತವಾಗಿ ವಿತರಣೆ ಎಂದ ಕಂಪನಿ

ವಾಹನ ಉದ್ಯಮದಲ್ಲಿ ನಾವೀನ್ಯತೆ ರೇಖೆಗಿಂತ ಮುಂದಿರುವ ಎಂಜಿ ಮೋಟಾರ್ ತನ್ನ ಭಾರತೀಯ ಕಾರ್ಯಾಚರಣೆಗಳನ್ನು ಆರಂಭಿಸಿದಾಗಿನಿಂದ ಆಟೋ-ಟೆಕ್ ನಾವೀನ್ಯತೆಯ ಮೇಲೆ ಕೇಂದ್ರೀಕರಿಸಿದೆ. ಕಾರು ತಯಾರಕರು ಭಾರತೀಯ ಆಟೋಮೊಬೈಲ್ ಉದ್ಯಮದಲ್ಲಿ ಅನೇಕ ಪ್ರಥಮಗಳನ್ನು ಪರಿಚಯಿಸಿದೆ ಮತ್ತು ಇಂಟರ್ನೆಟ್ / ಸಂಪರ್ಕಿತ ವೈಶಿಷ್ಟ್ಯಗಳು, ಸ್ವಾಯತ್ತ ಮತ್ತು ಎಲೆಕ್ಟ್ರಿಕ್ ಕಾರುಗಳಿಗೆ ಗ್ರಾಹಕರ ಬೇಡಿಕೆಯನ್ನು ಹೆಚ್ಚಿಸಿದೆ.

ಎಂಜಿ ಮೋಟಾರ್ ಇಂಡಿಯಾ ಭಾರತದಲ್ಲಿ ತನ್ನ ಪ್ರಯಾಣವನ್ನು ದೇಶದ ಮೊದಲ ಇಂಟರ್ನೆಟ್-ಸಂಪರ್ಕಿತ ಕಾರು – ಎಂಜಿ ಹೆಕ್ಟರ್ ಬಿಡುಗಡೆಯೊಂದಿಗೆ ಪ್ರಾರಂಭಿಸಿತು. ಆ ನಂತರ ದೇಶದ ಮೊದಲ ಶುದ್ಧ-ವಿದ್ಯುತ್ ಇಂಟರ್ರ್ ನೆಟ್ ಎಸ್ ಯುವಿ – ಎಂಜಿ ಝೆಡ್ ಎಸ್ ಇವಿ. ಇದು ಆಟೋನಮಸ್ ಎಮರ್ಜೆನ್ಸಿ ಬ್ರೇಕಿಂಗ್ (AEB), ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ (ACC) ಮತ್ತು ಇತರ ಸುಧಾರಿತ ವೈಶಿಷ್ಟ್ಯಗಳನ್ನು ಒಳಗೊಂಡಂತೆ ಹಂತ 1 ಸ್ವಾಯತ್ತ ವೈಶಿಷ್ಟ್ಯಗಳೊಂದಿಗೆ ಗ್ಲೋಸ್ಟರ್ ಅನ್ನು ಸಹ ಬಿಡುಗಡೆ ಮಾಡಿದೆ. ಎಂಜಿಯ ಇತ್ತೀಚಿನ ಕಾರು ಕಾಮೆಟ್ ಇವಿ ಆಗಿದ್ದು, ಭಾರತದ ಮೊದಲ ಹಿಂಗ್ಲಿಷ್ ಧ್ವನಿ ಸಹಾಯಕವನ್ನು ಸ್ಟ್ರೀಮಿಂಗ್ ಅಪ್ಲಿಕೇಷನ್‌ಗಳೊಂದಿಗೆ ಸಂಯೋಜಿಸಲಾಗಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version