ಮುಂಬೈ, ಮಹಾರಾಷ್ಟ್ರ: ಜಿಯೋಥಿಂಗ್ಸ್‌ನ ಪ್ರಮುಖ ಐಒಟಿ ಸಲ್ಯೂಷನ್ ಆದ ಜಿಯೋಥಿಂಗ್ಸ್ ಸ್ಮಾರ್ಟ್ ಯುಟಿಲಿಟಿ ಪ್ಲಾಟ್‌ಫಾರ್ಮ್ (JioThings Smart Utility) ಇದೀಗ ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿ. ಜತೆ ಪ್ರಮುಖ ಒಪ್ಪಂದವನ್ನು ಮಾಡಿಕೊಂಡಿದೆ. ಈ ಒಪ್ಪಂದದ ಉದ್ದೇಶ ಏನೆಂದರೆ, ಫ್ರೆಂಚ್ ಎಲೆಕ್ಟ್ರಿಕ್ ಯುಟಿಲಿಟಿ ಸಂಸ್ಥೆಯಾದ ಇಡಿಎಫ್ ಜತೆ ಸೇರಿಕೊಂಡು, ಬಿಹಾರದಲ್ಲಿ ಹತ್ತು ಲಕ್ಷ ಸ್ಮಾರ್ಟ್ ಪ್ರಿಪೇಯ್ಡ್ ಮೀಟರ್‌ಗಳನ್ನು ಅಳವಡಿಸಲಿದೆ. ಅಂದಹಾಗೆ ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿ. ಎಂಬುದು ವಿದ್ಯುತ್ ಸಚಿವಾಲಯದ ಅಡಿಯಲ್ಲಿ ಬರುವಂಥ ಪ್ರಮುಖ ಸಾರ್ವಜನಿಕ ವಲಯದ ಉದ್ಯಮಗಳ ಜಂಟಿ ಉದ್ಯಮವಾಗಿದೆ.
ಜಿಯೋಥಿಂಗ್ಸ್ ಸ್ಮಾರ್ಟ್ ಯುಟಿಲಿಟಿ ಪ್ಲಾಟ್ ಫಾರ್ಮ್ ಎಂಬುದು ಜಿಯೋ ಪ್ಲಾಟ್ ಫಾರ್ಮ್ ರೂಪಿಸಿದ, ಕ್ರಾಂತಿಕಾರಕ ಎನ್ ಬಿ- ಐಒಟಿ ಸಕ್ರಿಯಗೊಳಿಸಿದ – ಭವಿಷ್ಯತ್ತಿಗೆ ಸಿದ್ಧವಾದ ಸಲ್ಯೂಷನ್ ಆಗಿದೆ. ಇದಕ್ಕೆ 4ಜಿ / ಎಲ್ ಟಿಇ ತಂತ್ರಜ್ಞಾನದ ಬೆಂಬಲವಿದೆ. ಇದು ವಿದ್ಯುತ್ ಉಪಯುಕ್ತತೆಗಳ ವಲಯದ ಡಿಜಿಟಲ್ ರೂಪಾಂತರವನ್ನು ಹೆಚ್ಚಿಸುತ್ತದೆ ಮತ್ತು ವಿದ್ಯುತ್ ಸಚಿವಾಲಯ ಹಾಗೂ 250 ಮಿಲಿಯನ್ ಸ್ಮಾರ್ಟ್ ಮೀಟರ್‌ಗಳನ್ನು ಸ್ಥಾಪಿಸಬೇಕು ಎಂದಿರುವ ಭಾರತ ಸರ್ಕಾರದ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ.
ಸಲ್ಯೂಷನ್ ಮತ್ತು ಅದರ ಮಿಷನ್ ಕುರಿತು ಮಾತನಾಡಿದ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನ ಸಿಇಒ ಕಿರಣ್ ಥಾಮಸ್, “ಜಿಯೋಥಿಂಗ್ಸ್ ಸ್ಮಾರ್ಟ್ ಎಲೆಕ್ಟ್ರಿಸಿಟಿ ಮೀಟರಿಂಗ್ ಸಲ್ಯೂಷನ್ ಐಒಟಿ ಪ್ಲಾಟ್‌ಫಾರ್ಮ್, ಹಾರ್ಡ್‌ವೇರ್, ರಾಷ್ಟ್ರವ್ಯಾಪಿ ಸಂಪರ್ಕ, ಸ್ಥಾಪನೆ ಹಾಗೂ ಸಂಯೋಜನೆ, ಮತ್ತು ಮಾರಾಟದ ನಂತರದ ಸೇವೆಗಳ ಮೂಲಕ ಹೆಚ್ಚು ವ್ಯಾಪಕವಾದ, ಸ್ಮಾರ್ಟ್ ಮತ್ತು ಸುರಕ್ಷಿತ ಸಲ್ಯೂಷನ್ ಗಳ ಸಮಗ್ರ ಸೇವೆಯನ್ನು ನೀಡುತ್ತದೆ. ಸ್ಮಾರ್ಟ್ ಯುಟಿಲಿಟಿ ಪ್ಲಾಟ್‌ಫಾರ್ಮ್ ಇತ್ತೀಚಿನ ಸ್ಮಾರ್ಟ್ ತಂತ್ರಜ್ಞಾನಗಳ ರೂಪಾಂತರ ಪ್ರಯೋಜನಗಳನ್ನು ವಿದ್ಯುತ್ ವಲಯಕ್ಕೆ ತರುತ್ತದೆ ಎಂದು ನಾವು ನಂಬುತ್ತೇವೆ. ಅತ್ಯಾಧುನಿಕ, ಪ್ಲಗ್ ಮತ್ತು ಪ್ಲೇ, ಸ್ಮಾರ್ಟ್ ಸಲ್ಯೂಷನ್ ಗಳೊಂದಿಗೆ ಉದ್ಯಮಗಳನ್ನು ಸಬಲೀಕರಣಗೊಳಿಸಲಾಗುತ್ತದೆ. ಆ ಮೂಲಕ ಉದ್ಯಮಗಳಿಂದ ಸ್ಮಾರ್ಟ್ ಐಒಟಿ ಸಲ್ಯೂಷನ್‌ಗಳ ಅಳವಡಿಕೆಯನ್ನು ವೇಗಗೊಳಿಸಲು ಮತ್ತು ಅವುಗಳ ಡಿಜಿಟಲ್ ರೂಪಾಂತರವನ್ನು ಸಕ್ರಿಯಗೊಳಿಸುವ ಗುರಿಯನ್ನು ನಾವು ಹೊಂದಿದ್ದೇವೆ,” ಎಂದು ಹೇಳಿದ್ದಾರೆ.
ಇಇಎಸ್ಎಲ್ ವಕ್ತಾರರು ಮಾತನಾಡಿ, “ಸ್ಮಾರ್ಟ್ ಮೀಟರಿಂಗ್ ಎಂಬುದು ಭಾರತದ ಇಂಧನ ಭದ್ರತೆಯ ವಿಶ್ವಾಸಾರ್ಹತೆ ಮತ್ತು ಗ್ರಾಹಕ-ಚಾಲಿತ ಮಾರುಕಟ್ಟೆಯ ಮುಂದಿನ ಅಧ್ಯಾಯವನ್ನು ಬರೆಯುವ ಮುನ್ನುಡಿ ಆಗಿದೆ. ಇಇಎಸ್‌ಎಲ್‌ನಲ್ಲಿ ನಾವು ಭಾರತವು ತನ್ನ ಶಕ್ತಿಯ ದಕ್ಷತೆಯ ಗುರಿಗಳನ್ನು ತಲುಪಲು ನವೀನ ಸಲ್ಯೂಷನ್‌ಗಳನ್ನು ಜಾರಿಗೆ ತರಲು ಬದ್ಧರಾಗಿದ್ದೇವೆ,” ಎಂದಿದ್ದಾರೆ.
ಇದನ್ನೂ ಓದಿ: ಈಗ ದೇಶದ 304 ನಗರಗಳಲ್ಲಿ ರಿಲಯನ್ಸ್ ಜಿಯೋ ಟ್ರೂ 5ಜಿ ಸೇವೆ ಲಭ್ಯ, ಕೋಲಾರದಲ್ಲೂ ಲಾಂಚ್
ಜಿಯೋಥಿಂಗ್ಸ್‌ನ ಐಒಟಿ ಸಕ್ರಿಯಗೊಳಿಸಿದ ಸ್ಮಾರ್ಟ್ ಯುಟಿಲಿಟಿ ಪ್ಲಾಟ್‌ಫಾರ್ಮ್ ಪ್ರೀ ಪೇಯ್ಡ್ ಮತ್ತು ಪೋಸ್ಟ್-ಪೇಯ್ಡ್ ಮೀಟರಿಂಗ್ ಅನ್ನು ಸಕ್ರಿಯಗೊಳಿಸಲು ಭಾರತದಲ್ಲಿ ಸ್ವಯಂಚಾಲಿತ ಮೀಟರ್ ರೀಡಿಂಗ್ / ಸುಧಾರಿತ ಮೀಟರಿಂಗ್ ಮೂಲಸೌಕರ್ಯವನ್ನು ಸಕ್ರಿಯಗೊಳಿಸಲು ಒಂದು ಪ್ರಮುಖ ಸಲ್ಯೂಷನ್ ಆಗಿದೆ. ಹೆಚ್ಚು ಸುರಕ್ಷಿತವಾದ ಐಒಟಿ ಚಾಲಿತ ಪ್ಲಾಟ್ ಫಾರ್ಮ್ ಮೀಟರ್ ನಿರ್ವಹಣೆಯನ್ನು ಸರಳಗೊಳಿಸುತ್ತದೆ, ಉಪಯುಕ್ತತೆಗಳಿಗೆ ಸಂಪೂರ್ಣ ಗೋಚರತೆ (ವಿಸಿಬಲಿಟಿ)ಯನ್ನು ನೀಡುತ್ತದೆ. ಮತ್ತು ಅದರ ಐಒಟಿ-ಸಂಪರ್ಕಿತ ಸ್ಮಾರ್ಟ್ ಮೀಟರ್‌ಗಳ ನಿಯಂತ್ರಣವನ್ನು ನೀಡುತ್ತದೆ. ಸುರಕ್ಷಿತ ಮತ್ತು ವ್ಯಾಪಕರವಾದ ಸಲ್ಯೂಷನ್ ವಿಶ್ವಾಸಾರ್ಹ ಡೇಟಾ ಸಂಗ್ರಹ ಮತ್ತು ತತ್‌ಕ್ಷಣದ ಟೂ-ವೇ ಸಂವಹನವನ್ನು ಖಾತ್ರಿಗೊಳಿಸುತ್ತದೆ. ಸಂಗ್ರಹಣೆಗಳು ಮತ್ತು ದಕ್ಷತೆ ಸುಧಾರಿಸಲು ಸಹಾಯ ಮಾಡುವುದರೊಂದಿಗೆ ಮತ್ತು ಸೇವಾ ವಿಳಂಬಗಳನ್ನು ತೆಗೆದುಹಾಕುವ ಮೂಲಕ ವೆಚ್ಚ ನಿಯಂತ್ರಣ ಮತ್ತು ತಡೆರಹಿತ ಅನುಭವಕ್ಕೆ ಕಾರಣವಾಗುತ್ತದೆ.