ಬೆಂಗಳೂರು, ಕರ್ನಾಟಕ: 12 ಅಂಕಿಗಳುಳ್ಳ ವಿಶಿಷ್ಟ ನಂಬರ್ ಆಧಾರ್ ಬಹಳ ಪ್ರಮುಖವಾದ ಒಂದು ದಾಖಲೆಯಾಗಿದೆ. ನಮ್ಮ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿರುವ ಈ ನಂಬರ್ ಅನ್ನು ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು, ಯಾವುದೇ ರೀತಿಯ ದೃಢೀಕರಣಕ್ಕೆ ಬಳಸುತ್ತೇವೆ. ಆದರೆ, ಕೆಲವೊಮ್ಮೆ ನಾನಾ ಕಾರಣದಿಂದ ಮಾಹಿತಿಯ ತಪ್ಪಾಗಿದ್ದರೆ, ಅದನ್ನು ಅಪ್‌ಡೇಟ್ ಮಾಡಬೇಕಾಗುತ್ತದೆ. ಆಧಾರ್ ಕೇಂದ್ರಗಳಿಗೆ ಹೋಗಿ ಅಪ್‌ಡೇಟ್ ಮಾಡುವುದಾದರೆ 50 ರೂ. ನೀಡಬೇಕಾಗುತ್ತದೆ. ಆದರೆ, ಆನ್‌ಲೈನ್‌ನಲ್ಲಿ (Online) ಆಧಾರ್ ಅಪ್‌ಡೇಟ್ (Aadhaar Update) ಮಾಡಲು ಯಾವುದೇ ದುಡ್ಡಿಲ್ಲ (Free). ಆಧರೆ, ಈ ಸೌಲಭ್ಯವು ಜೂನ್ 14ರವರೆಗೆ ಮಾತ್ರವೇ ಇದೆ ಎಂಬುದನ್ನು ನೆನಪಿಡಿ. ಅಂದರೆ, ಇನ್ನು ಕೇವಲ ಒಂದೇ ದಿನ ಬಾಕಿ ಇರುವುದು. ಕೂಡಲೇ ನಿಮ್ಮ ಆಧಾರ್ ಅಪ್‌ಡೇಟ್ ಮಾಡಿಕೊಳ್ಳಬಹುದು.
ಬಳಕೆದಾರರ ವಿವರಗಳನ್ನು ಮರುಮೌಲ್ಯಮಾಪನ ಮಾಡಲು ಗುರುತಿನ ಪುರಾವೆ (PoI) ಮತ್ತು ವಿಳಾಸದ ಪುರಾವೆ (PoA) ದಾಖಲೆಗಳನ್ನು ಆನ್ಲೈನ್‌ನಲ್ಲಿ ಉಚಿತವಾಗಿ ಅಪ್‌ಲೋಡ್ ಮಾಡಬಹುದು. ಆಧಾರ್ ಕಾರ್ಡ್ ಪಡೆದು ದಶಕಗಳಾಗಿದ್ದರೆ, ಅಪ್‌ಡೇಟ್ ಮಾಡಿದರೆ ಒಳ್ಳೆಯವುದು. ಆದರೆ, ನೆನಪಿನಲ್ಲಿಡಿ ಅಪ್‌ಡೇಟ್ ಮಾಡುವುದೇನೂ ಕಡ್ಡಾಯವಲ್ಲ. ನಿಮ್ಮ ಮಾಹಿತಿ ಸರಿಯಾಗಿರಬೇಕು ಎಂದಾದರೆ ಅಥವಾ ಅಗತ್ಯ ಇದೆ ಎನ್ನುವುದಾದರೆ ಅಪ್‌ಡೇಟ್ ಮಾಡಿಕೊಳ್ಳಬಹುದು.
Keep Demographic Details Updated to Strengthen Your #Aadhaar.
— Aadhaar (@UIDAI) March 16, 2023
If your Aadhaar had been issued 10 years ago & had never been updated – you may now upload Proof of Identity & Proof of Address documents online at https://t.co/CbzsDIBUbs ‘FREE OF COST’ from 15 March – June 14, 2023. pic.twitter.com/CFsKqPc2dm
ಆನ್‌ಲೈನ್‌ನಲ್ಲಿಆಧಾರ್ ಅಪ್‌ಡೇಟ್ ಮಾಡುವುದು ತುಂಬ ಕಷ್ಟವೇನೂ ಅಲ್ಲ. ಕೇವಲ ಕೆಲವೇ ನಿಮಿಷಗಳಲ್ಲಿ ಆನ್‌ಲೈನ್‌ನಲ್ಲಿ ಆಧಾರ್ ಅಪ್‌ಡೇಟ್ ಮಾಡಬಹುದು. ಇದಕ್ಕಾಗಿ ಸಂಬಂಧಿಸಿದ ದಾಖಲೆಗಳನ್ನು ಮೊದಲೇ ಸ್ಕ್ಯಾನ್ ಮಾಡಿಟ್ಟುಕೊಂಡಿರಬೇಕು. ಅಂದರೆ, ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆಯನ್ನು ಪುರಸ್ಕರಿಸುವ ದಾಖಲೆ ಪತ್ರಗಳನ್ನು ಸ್ಕ್ಯಾನ್ ಮಾಡಿ, ಸೇವ್ ಮಾಡಿಟ್ಟುಕೊಂಡಿರಬೇಕು. ಆಗ, ಆನ್‌ಲೈನ್‌ನಲ್ಲಿ ಅಪ್‌ಡೇಟ್ ಮಾಡುವುದು ಸುಲಭವಾಗುತ್ತದೆ.
Aadhaar Update: ಆನ್‌ಲೈನ್‌ನಲ್ಲಿ ಆಧಾರ್ ಅಪ್‌ಡೇಟ್ ಮಾಡಲು ಈ ಸ್ಟೆಪ್ಸ್ ಫಾಲೋ ಮಾಡಿ….
ಮೊದಲಿಗೆ UIDAI ಜಾಲತಾಣದಲ್ಲಿ Aadhaar Self Service (ಆಧಾರ್ ಸೆಲ್ಪ್ ಸರ್ವಿಸ್) ಪೋರ್ಟಲ್‌ಗೆ ಭೇಟಿ ನೀಡಿ. ಆನ್‌ಲೈನ್ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ.
ಡಾಕ್ಯುಮೆಂಟ್ ಅಪ್‌ಡೇಟ್ (Document Update)ಮೇಲೆ ಕ್ಲಿಕ್ ಮಾಡಿ ಮತ್ತು ಈಗಿರುವ ದಾಖಲೆ, ಮಾಹಿತಿಯನ್ನು ಖಚಿತಪಡಿಸಿ.
ಈ ಸುದ್ದಿಯನ್ನೂ ಓದಿ: PAN Card: ಆಧಾರ್ ಬಳಸಿಕೊಂಡು ಪ್ಯಾನ್ ಅಡ್ರೆಸ್ ಚೇಂಜ್ ಮಾಡಬಹುದು! ಈ ಸ್ಟೆಪ್ಸ್ ಫಾಲೋ ಮಾಡಿ…
ಡ್ರಾಪ್-ಡೌನ್ ಪಟ್ಟಿಯನ್ನು ಬಳಸಿ, ಪರಿಶೀಲನೆಗಾಗಿ ಮೂಲ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಆಯ್ಕೆಮಾಡಿ ಮತ್ತು ಅಪ್‌ಲೋಡ್ ಮಾಡಿ.
ಈ ವೇಳೆ ನೀಡಲಾಗುವ ಸರ್ವೀಸ್ ರಿಕ್ವೆಸ್ಟ್ ನಂಬರ್ ನೋಟ್ ಮಾಡಿಟ್ಟುಕೊಳ್ಳಿ. ಇದರಿಂದ ಅಪ್‌ಡೇಟ್ ಪ್ರೊಸೆಸಿಂಗ್ ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ. ಇಷ್ಟಾದರೆ, ನಿಮ್ಮ ಆನ್‌ಲೈನ್ ಆಧಾರ್ ಅಪ್‌ಡೇಟ್ ಪ್ರಕ್ರಿಯೆ ಪೂರ್ಣವಾಗುತ್ತದೆ.
ತಂತ್ರಜ್ಞಾನದ ಇನ್ನಷ್ಟು ಮಾಹಿತಿಪೂರ್ಣ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.