Site icon Vistara News

Lexi Chatbot: ಭಾರತದ ಮೊದಲ ಚಾಟ್‌ಜಿಪಿಟಿ ಬೆಂಬಲಿತ ಚಾಟ್‌ಬಾಟ್ ಲೆಕ್ಸಿ! ಇದು ಹೇಗೆ ಕೆಲಸ ಮಾಡುತ್ತದೆ?

Lexi Chatot is India's first AI chatbot by ChatGPT and check details

ನವದೆಹಲಿ: ಈಗಾಗಲೇ ಮೈಕ್ರೋಸಾಫ್ಟ್ (Microsoft) ಬೆಂಬಲಿತ ಓಪನ್‌ಎಐ (OpenAI) ಕಂಪನಿಯ ಚಾಟ್‌ಬಾಟ್ (Chatbot) ಜಾಟ್‌ಜಿಪಿಟಿ (ChatGPT) ಜಗತ್ತಿನಾದ್ಯಂತ ಸಖತ್ ಸದ್ದು ಮಾಡುತ್ತಿದೆ. ಇದರ ಮಧ್ಯೆ, ಭಾರತವು ತನ್ನದೇ ಆದ ಕಾರಣಕ್ಕೆ ಸಂತಸ ಪಡಲಿದೆ. ಏನೆಂದರೆ- ಭಾರತವು ಈಗ ಲೆಕ್ಸಿ(Lexi Chatbot) ಎಂಬ ಚಾಟ್‌ಜಿಪಿಟಿ ಚಾಲಿತ ಎಐ ಚಾಟ್‌ಬಾಟ್‌ ಹೊಂದಿದೆ. ಈ ಚಾಟ್‌ಬಾಟ್‌ ಅನ್ನು ಹಣಕಾಸು ತಂತ್ರಜ್ಞಾನ ಕಂಪನಿಯಾದ ವೆಲೋಸಿಟಿಯು (Velocity) ಆರಂಭಿಸಿದೆ.

ಚಾಟ್‌ಬಾಟ್ ಇ-ಕಾಮರ್ಸ್ ಸಂಸ್ಥಾಪಕರಿಗೆ ಸರಳೀಕೃತ ರೀತಿಯಲ್ಲಿ ವ್ಯವಹಾರದ ಒಳನೋಟಗಳನ್ನು ಒದಗಿಸುವ ಮೂಲಕ ಸಹಾಯ ಮಾಡುತ್ತದೆ. ಚಾಟ್‌ಬಾಟ್ ಅನ್ನು ವೆಲೋಸಿಟಿಯ ಸ್ವಂತ ವಿಶ್ಲೇಷಣಾ ಸಾಧನವಾದ ವೆಲೋಸಿಟಿ ಇನ್‌ಸೈಟ್ಸ್‌ನೊಂದಿಗೆ ಸಂಯೋಜಿಸಲಾಗಿದೆ. ದೇಶದ ಮೊದಲ ಲೆಕ್ಸಿ ಚಾಟ್‌ಬಾಟ್ ಬಗ್ಗೆ ಕಂಪನಿಯು ತನ್ನ ಅಧಿಕೃತ ಬ್ಲಾಗ್‌ನಲ್ಲಿ ಘೋಷಿಸಿದೆ.

ಚಾಟ್‌ಜಿಪಿಟಿಯೊಂದಿಗೆ ಸಂಯೋಜಿತವಾಗಿರುವ ದೇಶದ ಮೊದಲ ಚಾಟ್‌ಬಾಟ್ ಕುರಿತು ಘೋಷಣೆ ಮಾಡಲು ನಾವು ಉತ್ಸುಕರಾಗಿದ್ದೇವೆ. ನಾವು ಕೃತಕ ಬುದ್ಧಿಮತ್ತೆಯಲ್ಲಿನ ಈ ಇತ್ತೀಚಿನ ಹೊಸ ಆವಿಷ್ಕಾರವಾಗಿರುವ ಚಾಟ್‌ಜಿಪಿಟಿಯನ್ನು ನಮ್ಮ ಅಸ್ತಿತ್ವದಲ್ಲಿರುವ ಅನಾಲಿಟಿಕ್ಸ್ ಟೂಲ್‌ ವೆಲೋಸಿಟಿ ಇನ್‌ಸೈಟ್ಸ್‌ನೊಂದಿಗೆ ಸಂಯೋಜಿಸಿದ್ದೇವೆ ಎಂದು ವೆಲೋಸಿಟಿಯ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಲಾಗಿದೆ.

ತಮ್ಮ ಕಂಪನಿಯ ಗ್ರಾಹಕರಿಗೆ ಚಾಟ್‌ಜಿಪಿಟಿಯ ಲಾಭವನ್ನು ಯಾವ ರೀತಿಯಲ್ಲಿ ನೀಡಬಹುದು ಎಂಬುದರ ಬಗ್ಗೆ ಪ್ರಾಡಕ್ಟ್ ಟೀಮ್ ಚಿಂತನೆ ನಡೆಸುತ್ತಿದೆ ಎಂದು ಕಂಪನಿಯ ಸಿಇಒ ಕೂಡ ಆಗಿರುವ ಸಹ ಸಂಸ್ಥಾಪಕ ಅಭಿರೂಪ್ ಮೇಡೇಕರ್ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Google AI chatbot Bard: ತಪ್ಪು ಮಾಹಿತಿ ನೀಡಿದ ಬಾರ್ಡ್, ಗೂಗಲ್‌ ಮಾತೃ ಸಂಸ್ಥೆ ಅಲ್ಫಾಬೆಟ್‌ಗೆ 100 ಶತಕೋಟಿ ಡಾಲರ್ ನಷ್ಟ!

ವೆಲೋಸಿಟಿ ಇನ್‌ಸೈಟ್ಸ್, ವ್ಯಾಪಾರಗಳಿಗೆ ತಮ್ಮ ಮಾರುಕಟ್ಟೆಯ ಖರ್ಚು, ಆದಾಯಗಳು ಇತ್ಯಾದಿಗಳ ಮೇಲೆ ನಿಗಾ ಇಡಲು ಸಹಾಯ ಮಾಡುತ್ತದೆ. ಇದು ಸಂಸ್ಥಾಪಕರಿಗೆ ಅಗತ್ಯವಾದ ವ್ಯವಹಾರ ಒಳನೋಟಗಳನ್ನು ಒದಗಿಸುತ್ತದೆ. ಇದನ್ನು ದೈನಂದಿನ ವ್ಯವಹಾರ ವರದಿಯ ರೂಪದಲ್ಲಿ WhatsApp ಮೂಲಕವು ಬಳಸಬಹುದು. ಈಗ ಅದೇ WhatsApp ಇಂಟರ್ಫೇಸ್‌ನಲ್ಲಿ ChatGPT ಅನ್ನು ಸಂಯೋಜಿಸಲಾಗಿದೆ. ಹಾಗಾಗಿ, ಗ್ರಾಹಕರು ಕೇಳುವ ಪ್ರಶ್ನೆಗಳಿಗೆ AI, Lexi ಮೂಲಕ ಉತ್ತರಿಸಲು ಸಾಧ್ಯವಾಗುತ್ತಿದೆ.

Exit mobile version