ಬೆಂಗಳೂರು: ಕರ್ನಾಟಕದಲ್ಲಿ ಈಗ ಗ್ಯಾರಂಟಿಗಳ ಭರಾಟೆ. ಈ ಗ್ಯಾರಂಟಿ ಸೇವೆಗಳನ್ನು ಪಡೆಯಲು ಇತರ ಅಧಿಕೃತ ದಾಖಲೆಗಳ ಜತೆಗೆ ಆಧಾರ್ ಕೂಡ ಕಡ್ಡಾಯವಾಗಿಬೇಕು. ಹಾಗಾಗಿ, ಆಧಾರ್ ಮಾಡಿಸಿಕೊಳ್ಳಲು ಜನರು ಮುಗಿ ಬೀಳುತ್ತಿರುವ ವರದಿಗಳಾಗುತ್ತಿವೆ. ಗ್ಯಾರಂಟಿ ಮಾತ್ರವಲ್ಲದೇ ಕೇಂದ್ರವಾಗಲೀ, ರಾಜ್ಯ ಸರ್ಕಾರದ ಸೇವೆಗಳನ್ನು ಪಡೆಯಲು, ನಿಮ್ಮ ಅಧಿಕೃತ ವಿಳಾಸವನ್ನು ದೃಢೀಕರಿಸಲು ಈ ಆಧಾರ್ (Aadhaar Services) ಬೇಕೇ ಬೇಕು. ಆದರೆ, ಆಧಾರ್ ಮಾಹಿತಿ ಕಳುವಾದರೆ ಎಂಬ ಆತಂಕ ಇದ್ದೇ ಇರುತ್ತದೆ. ಬಳಕೆದಾರರಿಗೆ ಅಂಥದೊಂದು ಅನುಮಾನ ಮೂಡಿದರೆ, ನಿಮ್ಮ ಆಧಾರ್ ಸೇವೆಯನ್ನು ಲಾಕ್ (Lock) ಮಾಡಬಹುದು, ಅಗತ್ಯ ಎನಿಸಿದಾಗಿ ಮತ್ತೆ ಅನ್‌ಲಾಕ್ (Unlock) ಮಾಡಬಹುದು. ಅಂಥದೊಂದು ಅವಕಾಶವನ್ನು ಯುಐಡಿಎಐ ನೀಡಿದೆ.
ಬಳಕೆದಾರರ ಆಧಾರ್ ಸಂಖ್ಯೆಯ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ನಿವಾಸಿಗಳಿಗೆ ನಿಯಂತ್ರಣವನ್ನು ಒದಗಿಸಲು ಆಧಾರ್ ಸಂಖ್ಯೆಗಳನ್ನು ಲಾಕ್ ಮಾಡಲು ಮತ್ತು ಅನ್ಲಾಕ್ ಮಾಡಲು ಯುಐಡಿಎಐ ವ್ಯವಸ್ಥೆಯನ್ನು ಒದಗಿಸಿದೆ. ಬಳಕೆದಾರರು ಯುಐಡಿಎಐ ಜಾಲತಾಣ (www.myaadhaar.uidai.gov.in) ಅಥವಾ ಎಂಆಧಾರ್ (mAadhaar) ಆ್ಯಪ್ ಮೂಲಕ ಆಧಾರ್ ಲಾಕ್ ಮಾಡಬಹುದಾಗಿದೆ.
ಆಧಾರ್ ಹೇಗೆ ಲಾಕ್ ಮಾಡುವುದು?
ಎಸ್ಸೆಮ್ಮೆಸ್ ಮೂಲಕ: GVID ಟೈಪ್ ಮಾಡಿ ನಿಮ್ಮ ನಾಲ್ಕು ಅಥಾ ಎಂಟು ಅಂಕಿಗಳ ಯುಐಡಿ ನಂಬರ್ ಟೈಪ್ ಮಾಡಿ ಮತ್ತು ಅದನ್ನು 1947ಕೆ ಸೆಂಡ್ ಮಾಡಿದೆ. ಉದಾಹರಣೆ: GVID 7893 SMS to 1947
ವೆಬ್‌ಸೈಟ್ ಮೂಲಕ: ಯುಐಡಿಎಐ ವೆಬ್‌ಸೈಟ್ (https://resident.uidai.gov.in/aadhaar-lockunlock)ಗೆ ಭೇಟಿ ನೀಡಿ. ಹೋಮ್‌ಪುಟದಲ್ಲಿರುವ ಮೈ ಆಧಾರ್ ಸೆಕ್ಷನ್‌ನಲ್ಲಿರುವ ಲಾಕ್ ಆಧಾರ್ (Lock Aadhaar) ಮೇಲೆ ಕ್ಲಿಕ್ ಮಾಡಿ. ಬಳಿಕ ಯುಐಡಿ ಲಾಕ್ ಆಪ್ಷನ್ ಸೆಲೆಕ್ಟ್ ಮಾಡಿ. ಯುಐಡಿ ನಂಬರ್, ಹೆಸರು ಇತ್ಯಾದಿ ಮಾಹಿತಿಯನ್ನು ನಮೂದಿಸಿ. ಸೆಂಡ್ ಸೆಕ್ಯೂರಿಟಿ ಮೇಲೆ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ನಂಬರ್‌ಗೆ ಬರುವ ಸೆಕ್ಯೂರಿಟಿ ಕೋಡ್ ಎಂಟರ್ ಮಾಡಿ. ಆಗ ನಿಮ್ಮ ಆಧಾರ್ ಯಶಸ್ವಿಯಾಗಿ ಲಾಕ್ ಆಗುತ್ತದೆ.
ಆಧಾರ್ ಅನ್‌ಲಾಕ್ ಮಾಡುವುದು ಹೇಗೆ?
ಎಸ್ಸೆಮ್ಮೆಸ್ ಮೂಲಕ: RVID ಅಂತಾ ಟೈಪ್ ಮಾಡಿ ಸ್ಪೇಸ್ ಬಿಟ್ಟು ನಾಲ್ಕು ಅಥವಾ 8 ಅಂಕಿಗಳ ಯುಐಡಿ ನಂಬರ್ ಟೈಪ್ ಮಾಡಿ, 1947 ನಂಬರ್‌ಗೆ ಸೆಂಡ್ ಮಾಡಿ.
ಇದನ್ನೂ ಓದಿ: Aadhaar card : ಆಧಾರ್ ಜತೆ ನಿಮ್ಮ ಇ-ಮೇಲ್, ಮೊಬೈಲ್ ಲಿಂಕ್ ಆಗಿದೆಯೇ ? ಹೀಗೆ ಖಾತರಿಪಡಿಸಿಕೊಳ್ಳಿ
ವೆಬ್‌ಸೈಟ್ ಮೂಲಕ ಹೀಗೆ ಮಾಡಿ: ಇಲ್ಲಿ ಕೂಡ ಸೇನ್ ಲಾಕ್ ಮಾಡುವ ಪ್ರಕ್ರಿಯೇ ಫಾಲೋ ಮಾಡಬೇಕು. ಮೊದಲಿಗೆ ಯುಐಡಿಎಐಗೆ ಹೋಗಿ. ಬಳಿಕ ಅನ್‌ಲಾಕ್ ಆಯ್ಕೆಯ ಸೆಲೆಕ್ಟ ಮಾಡಿ. ಹೊಸ ವಿಐಡಿ ಮತ್ತುಸೆಕ್ಯೂರಿಟಿ ಕೋಡ್ ಎಂಟರ್ ಮಾಡಿ. ಸೆಂಡ್ ಒಟಿಪಿ ಬಟನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ನಮೂದಿಸಿ. ಆಗ ನಿಮ್ಮ ಆಧಾರ್ ನಂಬರ್ ಯಶಸ್ವಿಯಾಗಿ ಅನ್‌ಲಾಕ್ ಆಗುತ್ತದೆ.
ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.