ನವ ದೆಹಲಿ : ಮಹೀಂದ್ರಾ ಕಂಪನಿಯ ಮೊಟ್ಟ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ Mahindra XUV 400 ಕಾರು ಇತ್ತೀಚೆಗೆ ಅನಾವರಣಗೊಂಡಿದೆ. ಈ ಕಾರು ಕಳೆದ ಎರಡು ತಿಂಗಳಲ್ಲಿ ಮಹೀಂದ್ರಾ ಕಂಪನಿಯು ಬಿಡುಗಡೆ ಮಾಡಿರುವ ಹಲವು ಕಾರುಗಳ ಸಾಲಿನಲ್ಲಿ ವಿಶೇಷ ಎನಿಸಿಕೊಂಡಿರುವುದು ಬ್ಯಾಟರಿ ಚಾಲಿತ ವಾಹನ ಎಂಬ ಕಾರಣಕ್ಕೆ. ಭಾರತದಲ್ಲೇ ತಯಾರಾಗುವ ಈ ಕಾರು ಟಾಟಾ ಕಂಪನಿಯ ನೆಕ್ಸಾನ್‌ಗೆ ಪ್ರತಿಸ್ಪರ್ಧಿ ಎನ್ನಲಾಗಿದೆ. ಹಾಗಾದರೆ ಈ ಕಾರಿನ ಐದು ವಿಶೇಷತೆಗಳೇನು ಎಂಬುದನ್ನು ನೋಡೋಣ.
XUV 400 ರೇಂಜ್ ಎಷ್ಟು?
XUV 400 ಕಾರಿನಲ್ಲಿ ೩೯.೪ ಕಿಲೋ ವ್ಯಾಟ್‌ನ ಬ್ಯಾಟರಿ ಬಳಸಲಾಗಿದೆ. ಬ್ಯಾಟರಿಗಳು IP67 ವಾಟರ್ ಹಾಗೂ ಡಸ್ಟ್ ಪ್ರೂಫ್ ಸಾಮರ್ಥ್ಯ ಹೊಂದಿದೆ. ಬ್ಯಾಟರಿಗಳನ್ನು ಭಾರತದಲ್ಲಿಯೇ ತಯಾರಿಸಲಾಗಿದೆ. ೫೦ KWh DC ಫಾಸ್ಟ್ ಚಾರ್ಜರ್ ನೀಡಲಾಗಿದ್ದು, ೫೦ ನಿಮಿಷಗಳಲ್ಲಿ ಶೇಕಡಾ ೮೦ರಷ್ಟು ಬ್ಯಾಟರಿ ಚಾರ್ಜ್ ಆಗುತ್ತದೆ. ಒಂದು ವೇಳೆ ೭.೨kW/32A ಚಾರ್ಜರ್ ಬಳಸಿದರೆ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಆಗಲು ೬.೩೦ ಗಂಟೆ ತೆಗೆದುಕೊಳ್ಳುತ್ತದೆ. ಗೃಹ ಬಳಕೆಯ ಸಾಕೆಟ್‌ನ ೩.೩ kw / 16A ಚಾರ್ಜರ್ ಬಳಸಿದರೆ ೧೩ ಗಂಟೆ ಬೇಕಾಗುತ್ತದೆ.
XUV 400 ಸಾಮರ್ಥ್ಯ?
ಭಾರತದಲ್ಲೇ ತಯಾರಾಗಿರುವ ಅತ್ಯಂತ ವೇಗದ ಕಾರು ಎನಿಸಿಕೊಳ್ಳಲಿದೆ XUV 400. ಈ ಕಾರು ೮.೩ ಸೆಕೆಂಡ್‌ಗಳಲ್ಲಿ ೧೦೦ ಕಿ.ಮೀ ವೇಗ ಪಡೆಯಬಲ್ಲದು. ಪಿಎಸ್‌ಎಮ್ ಎಲೆಕ್ಟ್ರಿಕ್ ಮೋಟಾರ್ ೧೪೭ ಎಚ್‌ಪಿ ಪವರ್ ಸೃಷ್ಟಿಸಿದರೆ, ೩೧೦ ಎನ್‌ಎಮ್ ಟಾರ್ಕ್ಯೂ ನೀಡುತ್ತದೆ. XUV 400 ಗರಿಷ್ಠ ವೇಗ ೧೫೦ ಕಿ.ಮಿ. ಫನ್, ಫಾಸ್ಟ್ ಆಂಡ್ ಫಿಯರ್‌ಲೆಸ್ ಎಂಬ ಮೂರು ಡ್ರೈವಿಂಗ್ ಮೋಡ್‌ಗಳನ್ನು ಹೊಂದಿದೆ.
ವಿನ್ಯಾಸ ?
ಕಾರು ಬಹುತೇಕ XUV ೩00 ರೀತಿಯಲ್ಲೇ ಇದ್ದು, ಲೋಗೊಗೆ ಕಾಪರ್ ಫಿನಿಶಿಂಗ್ ಕೊಡಲಾಗಿದೆ. ಎಲ್‌ಇಡಿ ಟೈಲ್ ಲ್ಯಾಂಪ್‌ಗಳು ಹಾಗೂ ಫ್ರಂಟ್ ಗ್ರಿಲ್ ಭಿನ್ನವಾಗಿದೆ. ೧೬ ಇಂಚಿನ ಡೈಮಂಡ್ ಕಟ್ ಅಲಾಯ್ ವಿಲ್ ಹೊಂದಿದೆ. ಇಂಟೀರಿಯರ್ ಅನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿದ್ದು, ಕಪ್ಪು ಬಣ್ಣದ ಥೀಮ್‌ಗೆ ಕಾಪರ್ ಫಿನಿಶಿಂಗ್ ನೀಡಲಾಗಿದೆ.
XUV 400 ಕಾರು ೨೬೦೦ ಮಿಲಿ ಮೀಟರ್ ವೀಲ್ ಬೇಸ್ ಹೊಂದಿದ್ದು, XUV ೩೦೦ನಷ್ಟೇ ಇದೆ. ಕಾರಿನ ಒಟ್ಟಾರೆ ಉದ್ದ ೪೨೦೦ ಮಿಲಿ ಮೀಟರ್, ಅಗಲ ೧೮೨೧ ಮಿಲಿ ಮೀಟರ್, ಎತ್ತರ ೧೬೩೪ ಮಿಲಿ ಮೀಟರ್ ಇದೆ. ಹೀಗಾಗಿ XUV ೩00 ಉದ್ದವಾಗಿದ್ದು, ಎಲೆಕ್ಟ್ರಿಕ್ ವಾಹನಗಳ ಪೈಕಿ ಹೆಚ್ಚು ಅಗಲವಾಗಿದೆ.
ಬೆಲೆ ಎಷ್ಟು?
ಮಹೀಂದ್ರಾ ಕಂಪನಿ XUV 400 ಕಾರಿನ ಬೆಲೆಯನ್ನು ಮುಂದಿನ ಜನವರಿಯಲ್ಲಿ ರಸ್ತೆಗೆ ಇಳಿಸುವ ಮೊದಲು ಪ್ರಕಟಿಸುವುದಾಗಿ ಹೇಳಿದೆ. ಆದರೆ, ಟಾಟಾ ನೆಕ್ಸಾನ್ ಇವಿ ಕಾರಿನ ಪ್ರತಿ ಸ್ಪರ್ಧಿ ಎಂದಾಗಿರುವ ಕಾರಣ ೧೬ರಿಂದ ೨೦ ಲಕ್ಷ ರೂಪಾಯಿ ದರ ನಿರೀಕ್ಷೆ ಮಾಡಬಹುದು.
ಇದನ್ನೂ ಓದಿ | Tata Motors | ಜೆಟ್ ಆವೃತ್ತಿಯ ಎಸ್‌ಯುವಿ ಕಾರುಗಳನ್ನು ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್