Site icon Vistara News

WhatsApp Business: ವಾಟ್ಸಾಪ್‌ ಬಿಸಿನೆಸ್‌ಗೆ ಹೊಸ ಫೀಚರ್ಸ್, ಸಖತ್ ಲಾಭಗಳಂಟು!

zukerberg

ಮುಂಬೈ, ಮಹಾರಾಷ್ಟ್ರ: ಮುಂಬೈನಲ್ಲಿ (Mumbai) ನಡೆದ ಎರಡನೇ ವಾರ್ಷಿಕ ಸಂವಾದ ಸಮ್ಮೇಳನದಲ್ಲಿ ಮೆಟಾದ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್‌ಬರ್ಗ್ (Meta CEO Mark Zukerberg) ಅವರು, ವಾಟ್ಸಾಪ್ ಬಿಸಿನೆಸ್‌ಗೆ (WhatsApp Business) ಕೆಲವು ಹೊಸ ಫೀಚರ್‌ಗಳನ್ನು ಘೋಷಣೆ ಮಾಡಿದ್ದಾರೆ(WhatsApp News Feature). ಬಿಸಿನೆಸ್ ಮತ್ತು ಬಳಕೆದಾರರ ಅನುಭವವನ್ನು ಹೆಚ್ಚಿಸುವ ಸರಣಿ ಫೀಚರ್‌ಗಳನ್ನು ಪ್ರಕಟಿಸಿದರು. ಈ ಪೈಕಿ ವಾಟ್ಸಾಪ್‌ ಫ್ಲೋಸ್ ಹೊಸ ಫೀಚರ್ ಪ್ರಮುಖವಾಗಿದ್ದು, ಚಾಟ್ ಥ್ರೆಡ್‌ನಲ್ಲಿ ಗ್ರಾಹಕರೊಂದಿಗೆ ಬಿಸಿನೆಸ್ ಕೈಗೊಳ್ಳುವ ರೀತಿಯನ್ನು ಬದಲಿಸಲಿದೆ ಎಂದು ಹೇಳಿದ್ದಾರೆ(WhatsApp Flows).

ಮೆಟಾ ಸಿಇಒ ಪ್ರಕಾರ, ‘ವಾಟ್ಸಾಪ್ ಫ್ಲೋಸ್’ ಫೀಚರ್, ಚಾಟ್ ಸಂಭಾಷಣೆಗಳಲ್ಲಿ ಸೂಕ್ತವಾದ ಮತ್ತು ತಡೆರಹಿತ ಸಂವಹನಗಳನ್ನು ರಚಿಸಲು ಅಧಿಕಾರ ನೀಡುತ್ತದೆ. ಉದಾಹರಣೆಗೆ, ಹೊಸ ಖಾತೆಗಳನ್ನು ತೆರೆಯಲು ಅಪಾಯಿಂಟ್‌ಮೆಂಟ್‌ಗಳನ್ನು ನಿಗದಿಪಡಿಸಲು ಬ್ಯಾಂಕ್‌ಗಳು ಗ್ರಾಹಕರನ್ನು ಸಕ್ರಿಯಗೊಳಿಸಬಹುದು, ಆಹಾರ ವಿತರಣಾ ಸೇವೆಗಳು ಪಾಲುದಾರ ರೆಸ್ಟೋರೆಂಟ್‌ಗಳಿಂದ ಆರ್ಡರ್‌ಗಳನ್ನು ಸುಗಮಗೊಳಿಸಬಹುದು ಮತ್ತು ಏರ್‌ಲೈನ್‌ಗಳು ಫ್ಲೈಟ್ ಚೆಕ್-ಇನ್ ಮತ್ತು ಸೀಟ್ ಆಯ್ಕೆಯನ್ನು ಸುಗಮಗೊಳಿಸಬಹುದು.. ಈ ರೀತಿಯ ಯಾವುದೇ ಚಟುವಟಿಕೆಯನ್ನು ಬಳಕೆದಾರರು ಚಾಟ್ ಥ್ರೆಡ್ ತೊರೆಯದೆಯೇ ಮಾಡಬಹುದಾಗಿದೆ.

ಇದಲ್ಲದೆ, ಇನ್-ಚಾಟ್ ವಹಿವಾಟುಗಳನ್ನು ಇನ್ನಷ್ಟು ಸರಳಗೊಳಿಸಲು, ಮೆಟಾ ತನ್ನ ಪಾವತಿ ಸಾಮರ್ಥ್ಯಗಳನ್ನು ವಿಸ್ತರಿಸುತ್ತಿದೆ. ಬ್ರೆಜಿಲ್ ಮತ್ತು ಸಿಂಗಾಪುರದಲ್ಲಿ ತನ್ನ ಪಾವತಿ ಸೇವೆಯನ್ನು ಯಶಸ್ವಿಯಾಗಿ ಆರಂಭಿಸಿದ ಬಳಿಕ ಆ ಸೇವೆಯನ್ನು ಭಾರತಕ್ಕೆ ವಿಸ್ತರಿಸುವುದಾಗಿ ಘೋಷಿಸಿದೆ.

ಈ ಸುದ್ದಿಯನ್ನೂ ಓದಿ: ಫೇಸ್​ಬುಕ್​ ಮಾತೃಸಂಸ್ಥೆ ಮೆಟಾದಲ್ಲಿ 11 ಸಾವಿರ ಉದ್ಯೋಗಿಗಳ ವಜಾಗೊಳಿಸಲು ನಿರ್ಧಾರ; Sorry ಎಂದ ಮಾರ್ಕ್​​​ ಜುಕರ್​ಬರ್ಗ್​

ಭಾರತದಲ್ಲಿ ಬಳಕೆದಾರರು ಮೆಟಾದ ಪಾವತಿ ಪ್ಲಾಟ್‌ಫಾರ್ಮ್‌ಗೆ ಪ್ರವೇಶ ಪಡೆಯುವುದು ಮಾತ್ರವಲ್ಲದೇ, ಯುಪಿಐ ಅಪ್ಲಿಕೇಶನ್‌ಗಳನ್ನು ಒಳಗೊಂಡಂತೆ ಇತರ ಜನಪ್ರಿಯ ಪಾವತಿ ವಿಧಾನಗಳನ್ನು ಬಳಸುವ ಅವಕಾಶವನ್ನೂ ಪಡೆಯಲಿದ್ದಾರೆ. ಈ ಸಮಗ್ರ ವಿಧಾನವು ಬಳಕೆದಾರರು ಮತ್ತು ಭಾರತೀಯ ವ್ಯವಹಾರಗಳ ನಡುವೆ ತಡೆರಹಿತ ಹಣಕಾಸಿನ ವಹಿವಾಟುಗಳನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ ಎಂದು ಮಾರ್ಕ್ ಜುಕರ್‌ಬರ್ಗ್ ಹೇಳಿದ್ದಾರೆ.

ಮೆಟಾ ಕಂಪನಿಯು, ವಾಟ್ಸಾಪಪ್, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗಳಲ್ಲಿ ಮೆಟಾ ವೆರಿಫೈಡ್ ಫೀಚರ್ ಲಾಂಚ್ ಮಾಡುತ್ತಿದೆ. ಈ ಮೂಲಕ ಗ್ರಾಹಕರಿಗೆ ತಾವು ವ್ಯವಹಾರ ಮಾಡುತ್ತಿರುವ ಕಂಪನಿಯು ನೈಜವಾಗಿದ್ದು, ನಂಬಿಕೆಗೆ ಅರ್ಹವಾಗಿದೆ ಎಂಬುದನ್ನು ಖಾತ್ರಿಪಡಿಸುತ್ತದೆ. ಬಿಸಿನೆಸ್‌ಗೆ ಚಂದಾದಾರರಾಗುವರರು ಪರಿಶೀಲಿಸಿದ ಬ್ಯಾಡ್ಜ್ ಅನ್ನು ಸ್ವೀಕರಿಸುತ್ತಾರೆ. ಅವರ ಖಾತೆಗಳಿಗೆ ಬೆಂಬಲ, ನಕಲಿ ವ್ಯವಹಾರದಿಂದ ರಕ್ಷಣೆ ಮತ್ತು ಹೆಚ್ಚುವರಿ ವೈಶಿಷ್ಟ್ಯಗಳನ್ನು ಪಡೆಯುತ್ತಾರೆ.

ತಂತ್ರಜ್ಞಾನದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version