ನವದೆಹಲಿ: ಭಾರತದಲ್ಲಿ ಸಾಕಷ್ಟು ಗ್ರಾಹಕವಲಯವನ್ನು ಹೊಂದಿರುವ ಮೊಟೊರೊಲಾ (Motorola) ಇದೀಗ 5ಜಿ ಸೇವೆ ಬೆಂಬಲಿಸಲಿದೆ. ಇದಕ್ಕಾಗಿ ಅದು ರಿಲಯನ್ಸ್ ಜಿಯೋ ಟ್ರೂ 5ಜಿ (reliance jio true 5g) ಅನುಭವವನ್ನು ನೀಡುವುದಕ್ಕೆ ಗ್ರಾಹಕರಿಗೆ ಅನುವು ಮಾಡಿಕೊಡುತ್ತದೆ. ಮೊಟೊರೊಲಾ- ರಿಲಯನ್ಸ್ ಜಿಯೋ ಸಹಭಾಗಿತ್ವದಲ್ಲಿ ಭಾರತದಲ್ಲಿ ತನ್ನ 5ಜಿ ಸ್ಮಾರ್ಟ್‌ಫೋನ್‌ಗಳಲ್ಲಿ ಜಿಯೋದ ಸುಧಾರಿತ ಸ್ಟ್ಯಾಂಡ್-ಅಲೋನ್ (SA) 5ಜಿ ತಂತ್ರಜ್ಞಾನ ಬೆಂಬಲಿಸುತ್ತದೆ(Motorola and Jio). ಇದು ಭಾರತದ ಗ್ರಾಹಕರಿಗೆ ಅತ್ಯಂತ ಸಂಪೂರ್ಣ ಮತ್ತು ಸುಧಾರಿತ 5ಜಿ ಅನುಭವ ಖಾತ್ರಿಪಡಿಸುತ್ತದೆ.
ಮೊಟೊರೊಲಾ 5ಜಿ ಸಾಮರ್ಥ್ಯದ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ವಿಶ್ವದ ಮೊದಲ OEM ಆಗಿದೆ ಮತ್ತು 5ಜಿ ತಂತ್ರಜ್ಞಾನದ ವ್ಯಾಪಕ ಜ್ಞಾನ ಮತ್ತು ತಿಳಿವಳಿಕೆ ಬಳಸಿಕೊಂಡು ಭಾರತೀಯ ಗ್ರಾಹಕರಿಗೆ ಅತ್ಯಾಧುನಿಕ 5ಜಿ ವೈಶಿಷ್ಟ್ಯಗಳನ್ನು ವಿವಿಧ ಬೆಲೆಗಳಾದ್ಯಂತ ನೀಡಿದೆ. ಭಾರತದಲ್ಲಿ ಬ್ರ್ಯಾಂಡ್‌ನ 5ಜಿ ಸ್ಮಾರ್ಟ್‌ಫೋನ್ ಪೋರ್ಟ್‌ಫೋಲಿಯೊ ಸಮಗ್ರವಾಗಿದೆ ಮತ್ತು ಸಮೂಹ, ಮಧ್ಯಮ ಮತ್ತು ಪ್ರೀಮಿಯಂ ಸೇರಿದಂತೆ ಬಹು ಸ್ಮಾರ್ಟ್‌ಫೋನ್ ವಿಭಾಗಗಳಲ್ಲಿ ವ್ಯಾಪಿಸಿದೆ. ಬ್ರ್ಯಾಂಡ್ ತನ್ನ ಎಲ್ಲ 5ಜಿ ಸ್ಮಾರ್ಟ್‌ಫೋನ್‌ಗಳಲ್ಲಿ ಟ್ರೂ 5ಜಿ ಬೆಂಬಲ ಒದಗಿಸುವ ಭರವಸೆ ಹೊಂದಿದೆ. ಇದು 11-13 5ಜಿ ಬ್ಯಾಂಡ್‌ಗಳಿಗೆ ಬೆಂಬಲ ಒಳಗೊಂಡಿರುತ್ತದೆ. ಇದು ಉದ್ಯಮದಲ್ಲಿ ಅತಿ ಹೆಚ್ಚಿನ ಪ್ರಮಾಣದ್ದಾಗಿದೆ.
ಅಷ್ಟು ಮಾತ್ರವಲ್ಲದೇ, ಮೊಟೊರೊಲಾದಿಂದ ಕೈಗೆಟುಕುವ 5ಜಿ ಸ್ಮಾರ್ಟ್‌ಫೋನ್‌ಗಳಾದ ಮೊಟೊ ಜಿ62 5ಜಿ ಸೇರಿದಂತೆ ಸಂಪೂರ್ಣ 5ಜಿ ಪೋರ್ಟ್‌ಫೋಲಿಯೊವು 3 ಕ್ಯಾರಿಯರ್ ಒಟ್ಟುಗೂಡಿಸುವಿಕೆ, 4X4 MIMO ಮತ್ತು ಹೆಚ್ಚಿನ ತಂತ್ರಜ್ಞಾನಗಳ ಮೂಲಕ ಅತ್ಯಂತ ವಿಶ್ವಾಸಾರ್ಹ, ವೇಗದ, ಸುರಕ್ಷಿತ ಮತ್ತು ಸಮಗ್ರ 5ಜಿ ವ್ಯಾಪ್ತಿಯನ್ನು ನೀಡಲು ಸುಧಾರಿತ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಸಾಮರ್ಥ್ಯಗಳೊಂದಿಗೆ ಬರುತ್ತದೆ.
ಮೊಟೊರೋಲಾ ಸಾಧನಗಳನ್ನು ಬಳಸುವ ಎಲ್ಲ ಜಿಯೋ ಬಳಕೆದಾರರು ಜಿಯೋ ಟ್ರೂ 5ಜಿ ಹೊಂದಿರುವ ಅಥವಾ ವೇಗವಾಗಿ ಹೊರತರುತ್ತಿರುವ ಪ್ರದೇಶಗಳಲ್ಲಿ ಜಿಯೋ ವೆಲ್‌ಕಮ್ ಆಫರ್ ಅಡಿಯಲ್ಲಿ ನಿಜವಾದ- ಅನಿಯಮಿತ 5ಜಿ ಇಂಟರ್‌ನೆಟ್ ಅನ್ನು ಸಂಪರ್ಕಿಸಲು ಸಾಧ್ಯ ಆಗುತ್ತದೆ.
ಕನಿಷ್ಠ ಪ್ರಮಾಣದಲ್ಲಿನ ಅಡಚಣೆಗಳು ಮತ್ತು ಕರೆ ಕೊನೆಗೊಳ್ಳುವುದು, ತಡೆರಹಿತ ಸಂಪರ್ಕ ಒದಗಿಸುತ್ತದೆ. ನೀವು ಕಡಿಮೆ-ನೆಟ್‌ವರ್ಕ್ ಪ್ರದೇಶಗಳಲ್ಲಿ 5ಜಿ ಟವರ್‌ನಿಂದ ದೂರವಿರಲಿ, ಒಳಾಂಗಣ ಕೆಲಸದ ಸ್ಥಳ, ನೆಲಮಾಳಿಗೆ ಅಥವಾ ಸುರಂಗಮಾರ್ಗದಲ್ಲೇ ಇದ್ದರೂ ಅದ್ಭುತ ವೇಗದಲ್ಲಿ 5ಜಿ ಸಂಪರ್ಕವನ್ನು ಅನುಭವಿಸಬಹುದು. ಎಲ್ಲ ಮೊಟೊರೋಲಾ 5ಜಿ ಸ್ಮಾರ್ಟ್‌ಫೋನ್‌ಗಳು ಭದ್ರತಾ ಪರೀಕ್ಷೆಗೆ ಒಳಪಟ್ಟಿವೆ ಮತ್ತು ಥಿಂಕ್‌ಶೀಲ್ಡ್‌ನಿಂದ ರಕ್ಷಿಸಲ್ಪಟ್ಟಿವೆ. ಸಾಧನದಲ್ಲಿ ಯಾವಾಗಲೂ ಸುರಕ್ಷಿತ ಅನುಭವವನ್ನು ಹೊಂದಿದ್ದೀರಿ ಎಂದು ಖಚಿತಪಡಿಸುತ್ತದೆ. ಇತ್ತೀಚಿನ ಗ್ಯಾಜೆಟ್‌ಗಳು ಮೋಟೋ ಸ್ಟ್ರಾಂಗ್ ಬಾಕ್ಸ್ ಅನ್ನು ಹೊಂದಿದ್ದು, ಸುಧಾರಿತ ಭದ್ರತೆಗಾಗಿ ಸುರಕ್ಷಿತ ಬೋರ್ಡ್‌ನಲ್ಲಿ ಇರುವ ಹಾರ್ಡ್‌ವೇರ್ ಚಿಪ್ ಇದೆ. ಅಲ್ಲದೆ, ಸಾಧನಗಳನ್ನು ಎಸ್‌ಎಆರ್ ಪರೀಕ್ಷಿಸಲಾಗಿದೆ ಮತ್ತು ಪ್ರಮಾಣೀಕರಿಸಲಾಗಿದೆ.
ಮೊಟೊರೋಲಾ 5ಜಿ ಸಾಧನಗಳ ಸಂಪೂರ್ಣ ಪಟ್ಟಿಯನ್ನು ರಿಲಯನ್ಸ್ ಜಿಯೋ ಸಕ್ರಿಯಗೊಳಿಸಿದ- ಟ್ರೂ 5ಜಿ (SA) ಇರುವ ಫೋನ್‌ಗಳ ವಿವರ ಹೀಗಿದೆ- ಮೊಟೊರೋಲಾ ಎಡ್ಜ್ 30 ಅಲ್ಟ್ರಾ, ಮೊಟೊರೋಲಾ ಎಡ್ಜ್ 30 ಫ್ಯೂಷನ್, ಮೊಟೊ ಜಿ62 5ಜಿ, ಮೊಟೊರೋಲಾ ಎಡ್ಜ್ 30, ಮೊಟೊ ಜಿ82 5ಜಿ, ಮೊಟೊರೋಲಾ ಎಡ್ಜ್ 30ಪ್ರೊ, ಮೊಟೊ ಜಿ71 5ಜಿ, ಮೊಟೊ ಜಿ51 5ಜಿ, ಮೊಟೊರೋಲಾ ಎಡ್ಜ್20, ಮೊಟೊರೊಲಾ ಎಡ್ಜ್ 20 ಫ್ಯೂಷನ್.
ಇದನ್ನೂ ಓದಿ | OnePlus and Jio | ಭಾರತದಲ್ಲಿ ಇನ್ನು ಒನ್‌ಪ್ಲಸ್‌ನ ಸ್ಮಾರ್ಟ್‌ಫೋನ್‌ಗಳಿಗೆ ಜಿಯೋ ಟ್ರೂ 5ಜಿ ಸೇವೆಯ ಬೆಂಬಲ