Site icon Vistara News

NASA : ಕ್ಷುದ್ರಗ್ರಹದ ಸ್ಯಾಂಪಲ್​ ಹೊತ್ತು ತಂದಿದೆ ನಾಸಾದ ಕ್ಯಾಪ್ಸೂಲ್​, ಬಹಿರಂಗವಾಗಲಿದೆ ಸೌರವ್ಯೂಹದ ರಹಸ್ಯ

Nasa

ನವ ದೆಹಲಿ: ಭೂಮಿಗೆ ಸಮೀಪವಿರುವ ಕ್ಷುದ್ರಗ್ರಹದಿಂದ ಸ್ಯಾಂಪಲ್​ಗಳನ್ನು ಹೊತ್ತು ತಂದ ಅಮೆರಿಕದ ಬಾಹ್ಯಾಕಾಶ ಸಂಸ್ಥೇ ನಾಸಾಸ (NASA) ಕ್ಯಾಪ್ಸೂಲ್ ಭಾನುವಾರ ಉತಾಹ್ ಮರುಭೂಮಿಯಲ್ಲಿ ಲ್ಯಾಂಡ್​ ಆಗಿದೆ. ಇದು ನಾಸಾದ ಮೊಟ್ಟ ಮೊದಲ ಕ್ಷುದ್ರಗ್ರಹ ಮಾದರಿ ತರುವ ಮಿಷನ್ ಆಗಿತ್ತು. ಅದು ಸಂಪೂರ್ಣವಾಗಿ ಯಶಸ್ವಿಯಾಗಿದೆ. ಇದರ ಮೂಲಕ ನಮ್ಮ ಗ್ರಹ ಮತ್ತು ಸೌರವ್ಯೂಹವು ಹೇಗೆ ರೂಪುಗೊಂಡಿತು ಮತ್ತು ಭೂಮಿಯ ಮೇಲೆ ಜೀವಿಗಳ ಉಗಮಕ್ಕೆ ಕಾರಣವಾದ ಸಾವಯವಗಳ ಮೂಲವನ್ನು ತಿಳಿಯವುದು ನಾಸಾದ ಉದ್ದೇಶವಾಗಿದೆ.

ನಾಸಾದ ಒಸಿರಿಸ್-ಆರ್​ಎಕ್ಸ್ (Origins, Spectral Interpretation, Resource Identification and Security–Regolith Explorer) ಬಾಹ್ಯಾಕಾಶ ನೌಕೆಯ ಬೆನ್ನು ಕ್ಷುದ್ರಗ್ರಹದ ಮೇಲ್ಮೈಯನ್ನು ಸ್ಪರ್ಶಿಸಿತ್ತು. ಅದೇ ರೀತಿ 2020ರಲ್ಲಿ ಕ್ಷುದ್ರಗ್ರಹದ ಮೇಲಿನ ಬಂಡೆ ಮತ್ತು ಧೂಳಿನ ಮಾದರಿಯನ್ನು ಸಂಗ್ರಹಿಸಿತ್ತು. ಬಳಿಕ ಅದು ಭೂಮಿಯತ್ತ ಪ್ರಯಾಣ ಆರಂಭಿಸಿತ್ತು. ಆ ನೌಕೆಯು ಇದೀಗ ಮಾದರಿಗಳನ್ನು ತುಂಬಿರುವ ಕಾಪ್ಯೂಲ್​ ಅನ್ನು ಭೂಮಿಯೆಡೆಗೆ ಎಸೆದಿದೆ. ಅದು ಅಮೆರಿಕದ ಮರುಭೂಯಿಯಲ್ಲಿ ಬಿದ್ದಿದ್ದು ಸಂಸ್ಥೆಯು ಅದನ್ನು ಸಂಗ್ರಹಿಸಿದೆ.

ಮುಂದೇನು?

ಯಾವುದಏ ಅಪಾಯಕಾರಿ ಪರಿಣಾಮಗಳನ್ನು ಉಂಟಾಗದಂತೆ ಕ್ಯಾಪ್ಸೂಲ್​ ಅನ್ನು ಸಂಪೂರ್ಣವಾಗಿ ಸ್ಯಾನಿಟೈಸೇಶನ್​ಗೆ ಒಳಪಡಿಸಲಾಗಿದೆ. ಬಳಿಕ ಸಂಗ್ರಹಿಸಿದ ಮಾದರಿಗಳು ಹೂಸ್ಟನ್​ನಲ್ಲಿರುವ ನಾಸಾದ ಜಾನ್ಸನ್ ಬಾಹ್ಯಾಕಾಶ ಕೇಂದ್ರದಲ್ಲಿ ಮೀಸಲಾದ ಕ್ಯೂರೇಶನ್ ಪ್ರಯೋಗಾಲಯದಲ್ಲಿ ಸುರಕ್ಷಿತವಾಗಿ ಇಡಲಾಗಿದೆ. ಈ ವಿಶೇಷ ಸೌಲಭ್ಯವನ್ನು ಪ್ರಾಚೀನ ಹಾಗೂ ವಿಶೇಷ ಮಾದರಿಗಳ ಸಂರಕ್ಷಣೆಗಾಗಿ ವಿನ್ಯಾಸಗೊಳಿಸಲಾಗಿದೆ. ಕಾಲಕ್ರಮೇಣ, ಅವುಗಳನ್ನು ವಿಶ್ವದಾದ್ಯಂತದ ವಿಜ್ಞಾನಿಗಳಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ. ಸಂಗ್ರಹದಲ್ಲಿನ ದೊಡ್ಡ ಭಾಗವನ್ನು ಭವಿಷ್ಯದ ಪೀಳಿಗೆಯ ಅನ್ವೇಷಣೆ ಮತ್ತು ಅಧ್ಯಯನಕ್ಕೆ ಮೀಸಲಾಗಿಡಲಾಗುತ್ತದೆ ಎಂದು ಯುಎಸ್ ಬಾಹ್ಯಾಕಾಶ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಅಸಾಧ್ಯ ಸಾಧ್ಯವಾಯಿತು’: ನಾಸಾ ಮುಖ್ಯಸ್ಥ

ನೌಕೆ ಅಸಾಧಾರಣವಾದ ಸಂಗತಿಗಳನ್ನು ಹೊಂತ್ತು ತಂದಿದೆ. ಭೂಮಿಯ ಮೇಲೆ ಇಳಿದ ಅತಿದೊಡ್ಡ ಕ್ಷುದ್ರಗ್ರಹದ ಮಾದರಿ ಇದು. ಇದು ಗ್ರಹಗಳ ರಚನೆಯನ್ನು ಅಧ್ಯಯನ ಮಾಡಲು ವಿಜ್ಞಾನಿಗಳಿಗೆ ಸಹಾಯ ಮಾಡುತ್ತದೆ. ಇದು ಭೂಮಿಯ ಮೇಲೆ ಪರಿಣಾಮ ಬೀರುವ ಕ್ಷುದ್ರಗ್ರಹಗಳ ಕುರಿತ ನಮ್ಮ ತಿಳಿವಳಿಕೆಯನ್ನು ಹೆಚ್ಚಿಸುತ್ತದೆ. ಇದು ನಮ್ಮ ಸೌರವ್ಯೂಹದ ಉಗಮ ಮತ್ತು ಅದರ ರಚನೆಯ ಬಗ್ಗೆ ನಮ್ಮ ಅರಿವನ್ನು ವೃದ್ಧಿಸುತ್ತದೆ. ಈ ಮೂಲಕ ಅಸಾಧ್ಯವಾದುದೆಲ್ಲವೂ ಸಾಧ್ಯವಾಯಿತು” ಎಂದು ನಾಸಾ ಆಡಳಿತಾಧಿಕಾರಿ ಬಿಲ್ ನೆಲ್ಸನ್ ಸ್ಯಾಂಪಲ್ ಲ್ಯಾಂಡಿಂಗ್ ಬಗ್ಗೆ ಅಭಿಪ್ರಾಯಪಟ್ಟಿದ್ದಾರೆ.

ಕ್ಷುದ್ರಗ್ರಹ ಮಾದರಿಗಳ ಮಹತ್ವವೇನು?

ಕ್ಷುದ್ರಗ್ರಹದ ಮಾದರಿಗಳು ಸೌರವ್ಯೂಹದ ರಚನೆಯ ಹಿಂದಿನ ರಹಸ್ಯವನ್ನು ಬಿಚ್ಚಿಡಲು ಸಹಾಯ ಮಾಡುತ್ತದೆ, ಏಕೆಂದರೆ ಅವು ನಮ್ಮ ಸೌರವ್ಯೂಹದ ರಚನೆಯ ಆರಂಭಿಕ ದಿನಗಳಿಂದ ಸುಮಾರು 4.5 ಬಿಲಿಯನ್ ವರ್ಷಗಳಷ್ಟು ಹಳೆಯದಾದ ಆಕಾಶ ಅವಶೇಷಗಳಾಗಿವೆ ಎಂದು ನಂಬಲಾಗಿದೆ. ಹೀಗಾಗಿ, ಕ್ಷುದ್ರಗ್ರಹದಿಂದ ನೇರವಾಗಿ ತರಲಾದ ಮಾದರಿ ಅಮೂಲ್ಯ ಮಾಹಿತಿಗಳನ್ನು ನೀಡಲಿದೆ.

ಇದನ್ನೂ ಓದಿ : NASA: ಚಂದ್ರನ ದಕ್ಷಿಣ ಧ್ರುವದ ಬೆರಗುಗೊಳಿಸುವ ಚಿತ್ರ ಕ್ಲಿಕ್ಕಿಸಿದ ನಾಸಾ, ಏನಿದೆ ಅದರಲ್ಲಿ?

ಕ್ಷುದ್ರಗ್ರಹಗಳು ಸಂಗ್ರಹ ಒಂದರ್ಥದಲ್ಲಿ, ಅಮೂಲ್ಯ ವಸ್ತುವಾಗಿ ಕಾರ್ಯನಿರ್ವಹಿಸುತ್ತವೆ. ನಮ್ಮ ಸೌರವ್ಯೂಹದ ಪ್ರಾಚೀನ ಇತಿಹಾಸವನ್ನು ತಿಳಿಸುತ್ತವೆ ಮತ್ತು ಜೀವ ಸಂಕುಲದ ಪೂರ್ವಗಾಮಿ ರಹಸ್ಯಗಳ ಬಗ್ಗೆ ಸುಳಿವುಗಳನ್ನು ಹೊಂದಿರುತ್ತವೆ ಎಂದು ನಾಸಾ ಹೇಳಿದೆ.

Exit mobile version