Site icon Vistara News

Maruti Suzuki Grand Vitara ಅನಾವರಣ, ಸೆಪ್ಟೆಂಬರ್​ನಲ್ಲಿ ಮಾರುಕಟ್ಟೆಗೆ

Maruti Suzuki Grand Vitara

ನವ ದೆಹಲಿ: Maruti Suzuki Grand Vitara ಎಸ್​ಯುವಿ ಕಾರು ಬುಧವಾರ ಅನಾವರಣಗೊಂಡಿತು. ಬಹುನಿರೀಕ್ಷಿತ ಈ ಮಿಡ್​ ಸೈಜ್​ ಎಸ್​ಯುವಿ ಕಾರು ಮುಂದಿನ ಸೆಪ್ಟೆಂಬರ್​ನಲ್ಲಿ ಗ್ರಾಹಕರ ಕೈ ಸೇರಲಿದೆ. ಹ್ಯುಂಡೈ ಕ್ರೆಟಾ, ಎಮ್​ಜಿ ಆಸ್ಟರ್​ ಮತ್ತು ಕಿಯಾ ಸೆಲ್ಟೋಸ್​ನಂತಹ ಕಾರುಗಳಿಗೆ ಪೈಪೋಟಿ ನೀಡುವ ಉದ್ದೇಶದಿಂದ ಈ ಕಾರನ್ನು ಮಾರುತಿ ಸುಜುಕಿ ಕಂಪನಿ ಬಿಡುಗಡೆ ಮಾಡಿದೆ.

ಮಾರುತಿ ಸುಜುಕಿಯ ನೆಕ್ಸಾ ಶೋ ರೂಮ್​ಗಳಲ್ಲಿ Maruti Suzuki Grand Vitara ಕಾರು ಗ್ರಾಹಕರಿಗೆ ಲಭ್ಯವಿರುತ್ತದೆ. 11 ಸಾವಿರ ರೂಪಾಯಿಗಳನ್ನು ನೀಡಿ ಕಾರು ಬುಕ್ ಮಾಡಬಹುದಾಗಿದೆ. ಕಾರಿನ ಬೆಲೆಯನ್ನು ಆಗಸ್ಟ್​​ನಲ್ಲಿ ಘೋಷಿಸಲಾಗುವುದು ಎಂದು ಕಂಪನಿ ತಿಳಿಸಿದೆ.

ಏನಿದೆ ಹೊಸದು?

ಹೈಬ್ರಿಡ್​ ಎಂಜಿನ್​ ಆಯ್ಕೆ ಹಾಗೂ ಆಲ್​ ವೀಲ್​ ಡ್ರೈವ್​ (AWD) ಈ ಕಾರಿನ ಪ್ರಮುಖ ಆಕರ್ಷಣೆ ಎನಿಸಿದೆ. ಜತೆಗೆ MIDSIZE SUV ಸೆಗ್ಮೆಂಟ್​ನಲ್ಲಿ ಮಾರುತಿ ಇದುವರೆಗೆ ಕಾರುಗಳ ಆಯ್ಕೆಗಳನ್ನು ಇಟ್ಟಿರಲಿಲ್ಲ. ಆ ಕೊರತೆಯನ್ನು ನೀಗಿಸಲಾಗಿದೆ ಹಾಗೂ ಅನಿವಾರ್ಯವಾಗಿ ಬೇರೆ ಕಂಪನಿಗಳ ಕಡೆಗೆ ಹೋಗುತ್ತಿದ್ದ ಮಾರುತಿ ಅಭಿಮಾನಿಗಳಿಗೆ ಸಂತಸದ ಸುದ್ದಿಯನ್ನು ನೀಡಿದೆ.

Maruti Suzuki Grand Vitara ಎಸ್​ಯುವಿ ಇತ್ತೀಚೆಗೆ ಬಿಡುಗಡೆಯಾಗಿರುವ toyota urban cruiser hyryderನ ವಿನ್ಯಾಸದಿಂದಲೇ ಪ್ರೇರಿತಗೊಂಡಿದೆ. ವಾಸ್ತವದಲ್ಲಿ ಈ ಎರಡೂ ಕಾರುಗಳು ಮಾರುತಿಯ ಗ್ಲೋಬಲ್​ C platform ಆಧರಿಸಿ ತಯಾರಾಗುತ್ತಿದೆ. ಬ್ರೆಜಾ ಹಾಗೂ ಎಸ್‌ ಕ್ರಾಸ್ ಕಾರು ಇದೇ ಪ್ಲಾಟ್‌ಫಾರ್ಮ್‌ ಮೇಲೆಯೇ ನಿರ್ಮಾಣವಾಗಿದೆ. ಅದೇ ರೀತಿ ಹೊಸ ವಿಟಾರದಲ್ಲಿ ಈ ಎರಡು ಕಾರುಗಳಲ್ಲಿ ಇರುವ ಎಂಜಿನ್‌, ಗೇರ್‌ ಬಾಕ್ಸ್‌ ಸೇರಿದಂತೆ ಹಲವು ಭಾಗಗಳನ್ನು ಬಳಸಿಕೊಳ್ಳಲಾಗಿದೆ. ಈ ಮೂಲಕ ಸಂಶೋಧನೆ ಹಾಗೂ ಅಭಿವೃದ್ಧಿ ವೆಚ್ಚವನ್ನು ಸಂಪೂರ್ಣವಾಗಿ ಉಳಿತಾಯ ಮಾಡಿದೆ ಮಾರುತಿ ಸುಜುಕಿ ಕಂಪನಿ

ಎಕ್ಸ್‌ಟೀರಿಯರ್‌ ಹೇಗಿದೆ?

ಮುಂಬದಿಯಲ್ಲಿ ಸ್ಪ್ಲಿಟ್‌ ಹೆಡ್‌ ಲ್ಯಾಂಪ್‌ ವಿನ್ಯಾಸವನ್ನು ಬಳಸಿಕೊಳ್ಳಲಾಗಿದೆ. ಪ್ರಾಜೆಕ್ಟರ್‌ ಹೆಡ್‌ಲ್ಯಾಂಪ್‌ ಹಾಗೂ ಎಲ್‌ಇಡಿ ಡೇಟೈಮ್‌ ರನ್ನಿಂಗ್‌ ಲೈಟ್‌ ಅಳವಡಿಸಲಾಗಿದೆ. Maruti Suzuki Grand Vitara ಆರು ಮೊನೊಟೋನ್‌ ಹಾಗೂ ಮೂರು ಡ್ಯುಯಲ್‌ ಟೋನ್‌ ಸೇರಿದಂತೆ ಒಟ್ಟಾರೆ 9 ಬಣ್ಣಗಳ ಆಯ್ಕೆಯನ್ನು ಹೊಂದಿದೆ.
ಕಾರು 4345 ಮಿಲಿ ಮೀಟರ್‌ ಉದ್ದವಿದ್ದು, 1645 ಮಿಲಿ ಮೀಟರ್‌ ಅಗಲವಾಗಿದೆ. 1795 ಮಿಲಿ ಮೀಟರ್‌ ಉದ್ದವಿದ್ದು, 2600 ಮಿಲಿ ಮೀಟರ್‌ ವೀಲ್ ಬೇಸ್‌ ಹೊಂದಿದೆ.

ಇಂಟೀರಿಯರ್‌ ಹೇಗಿದೆ?

ಕಪ್ಪು ಮತ್ತು ಕಂದು ಬಣ್ಣದ ಡ್ಯುಯಲ್‌ ಟೋನ್‌ ಇಂಟೀರಿಯರ್ ಕಾರಿನಲ್ಲಿದೆ. ಪನೋರಮಿಕ್‌ ಸನ್‌ರೂಫ್‌, ವೈರ್‌ಲೆಸ್‌ ಚಾರ್ಜರ್‌, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 360 ಡಿಗ್ರಿ ಪಾರ್ಕಿಂಗ್‌ ಕ್ಯಾಮೆರಾ ಮತ್ತು ಕನೆಕ್ಟೆಡ್‌ ಕಾರ್‌ ತಂತ್ರಜ್ಞಾನವನ್ನು ಹೊಂದಿದೆ. ಕಿ ಲೆಸ್‌ ಎಂಟ್ರಿ, ರಿಯರ್‌ ಎಸಿ ವೆಂಟ್‌, ಪುಶ್‌ ಬಟನ್‌ ಸ್ಟಾರ್ಟ್‌ ಹೊಂದಿದೆ. 9 ಇಂಚಿನ ಟಚ್ ಸ್ಕ್ರೀನ್‌ ಇನ್ಫೋಟೈನ್‌ ಸಿಸ್ಟಮ್‌ ಹೊಂದಿದ್ದು, ಆಂಡ್ರಾಯ್ಡ್‌ ಆಟೋ ಮತ್ತು ಆಪರ್‌ ಕಾರ್‌ ಪ್ಲೇಯನ್ನು ಸಪೋರ್ಟ್‌ ಮಾಡುತ್ತದೆ.

ಎಂಜಿನ್‌ ಸಾಮರ್ಥ್ಯ

Maruti Suzuki Grand Vitara ಎಸ್‌ಯುವಿಯಲ್ಲಿ ಎರಡು ಎಂಜಿನ್‌ ಆಯ್ಕೆಗಳನ್ನು ನೀಡಲಾಗಿದೆ. ಮೊದಲನೆಯದ್ದು 1.5 ಲೀಟರ್‌ನ mild hybrid ಎಂಜಿನ್‌. ಎರಡನೆಯದ್ದು 1.5 ಲೀಟರ್‌ನ strong hybrid ಎಂಜಿನ್‌. ಎರಡನೇ ಎಂಜಿನ್‌ ಅನ್ನು ಟೊಯೊಟಾ ಕಂಪನಿಯು ಅಭಿವೃದ್ಧಿಪಡಿಸಿದೆ.
mild hybrid ಎಂಜಿನ್‌ 100 ps ಪವರ್ ಹಾಗೂ 135 nm ಟಾರ್ಕ್ಯೂ ಬಿಡುಗಡೆ ಮಾಡುತ್ತದೆ. ಈ ಕಾರಿನಲ್ಲಿ 5 ಸ್ಪೀಡ್‌ನ ಮ್ಯಾನಯಲ್‌ ಹಾಗೂ 6 ಸ್ಪೀಡ್‌ನ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್ ಇದೆ. ಈ ಕಾರು ಲೀಟರ್‌ ಪೆಟ್ರೋಲ್‌ಗೆ 21.11 ಮೈಲೇಜ್‌ ಕೊಡುತ್ತದೆ ಎಂದು ಕಂಪನಿ ಹೇಳದೆ. Strong hybrid ಎಂಜಿನ್‌ 115 ps ಪವರ್ ಬಿಡುಗಡೆ ಮಾಡುತ್ತದೆ. ಇದರಲ್ಲಿ e-cvt ಗೇರ್‌ಬಾಕ್ಸ್‌ ಇರುತ್ತದೆ. ಈ ಎಸ್‌ಯುವಿ ಕಾರು ಲೀಟರ್‌ ಪೆಟ್ರೋಲ್‌ಗೆ 27.97 ಕಿ.ಮೀ ಮೈಲೇಜ್‌ ಕೊಡುತ್ತದೆ ಎಂದು ಕಂಪನಿ ಹೇಳಿದೆ.

ಆಲ್‌ವೀಲ್‌ ಡ್ರೈವಿಂಗ್‌

ಮೈಲ್ಡ್‌ ಹೈಬ್ರಿಡ್‌ ಕಾರು ಆಲ್‌ಗ್ರಿಪ್‌, ಆಲ್‌ ವೀಲ್‌ ಡ್ರೈವ್‌ (AWD) ಆಯ್ಕೆಯನ್ನು ಕೊಡಲಾಗಿದೆ. ಆಟೋ, ಸ್ನೋ, ರಾಕ್‌ ಮತ್ತು ಸ್ಯಾಂಡ್‌ ಎಂಬ ನಾಲ್ಕು ಡ್ರೈವ್‌ ಮೋಡ್‌ಗಳನ್ನು ನೀಡಲಾಗಿದೆ. ಈ ಸೆಗ್ಮೆಂಟ್‌ನಲ್ಲಿ ಆಲ್‌ವೀಲ್‌ ಡ್ರೈವ್‌ ಆಯ್ಕೆ ನೀಡಿರುವ ಎರಡನೇ ಕಾರು ಗ್ರಾಂಡ್ ವಿಟಾರ. ಟೊಯೊಟಾ ಅರ್ಬನ್‌ ಕ್ರೂಸರ್‌ನಲ್ಲಿ ಈ ಆಯ್ಕೆ ನೀಡಲಾಗಿತ್ತು.

ಇದನ್ನೂ ಓದಿ | ಮಾರುಕಟ್ಟೆಗೆ ಇಳಿದ Urban Cruiser Hyryder ಕಾರು

Exit mobile version