ನವದೆಹಲಿ: ಸೈಬರ್ ವಂಚನೆಯನ್ನು (Cyber Fraud) ತಡೆಯುವುದಕ್ಕಾಗಿ ಕೇಂದ್ರ ಸರ್ಕಾರವು (Central Government) ಸಿಮ್ ಕಾರ್ಡ್‌ಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ರೂಪಿಸಿದ್ದು(New SIM Card rules), ಡಿಸೆಂಬರ್ 1ರಿಂದ ಜಾರಿಗೆ ಬರಲಿವೆ. ಸಿಮ್ ಮಾರಾಟ (SIM Selling) ಮತ್ತು ಖರೀದಿಗೆ (SIM Buying) ಸಂಬಂಧಿಸಿದಂತೆ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗುವುದು ಎಂದು ಕಳೆದ ಆಗಸ್ಟ್ ತಿಂಗಳಲ್ಲಿಯೇ ಕೇಂದ್ರ ಟೆಲಿಕಮ್ಯುನಿಕೇಷನ್ ಇಲಾಖೆಯು ಘೋಷಣೆ ಮಾಡಿತ್ತು. ವಂಚನೆಯ ಮೂಲಕ ಸಿಮ್ ಕಾರ್ಡ್ ಖರೀದಿ ಮತ್ತು ಬಳಕೆಯು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಈ ನಿಧಾರ್ವನ್ನು ಕೈಗೊಂಡಿದೆ. ಕೇಂದ್ರ ಸಂವಹನ ಸಚಿವ ಅಶ್ವಿನಿ ವೈಷ್ಣವ್ (Union Minister Ashwini Vaishnaw) ಅವರು, ವಂಚನೆಯ ಮೂಲಕ ಸಕ್ರಿಯವಾಗಿದ್ದ ಸುಮಾರು 52 ಲಕ್ಷ ಸಿಮ್ ಕಾರ್ಡ್‌ಗಳನ್ನು ಈಗಾಗಲೇ ನಿಷ್ಕ್ರಿಯಗೊಳಿಸಲಾಗಿದೆ ಎಂದು ನಿಯಮಗಳ ಘೋಷಣೆ ವೇಳೆ ಹೇಳಿದ್ದರು.
10 ಲಕ್ಷ ರೂ. ದಂಡ ಪಕ್ಕಾ
ಈ ಹೊಸ ನಿಯಮಗಳಡಿಯಲ್ಲಿ, ಸಿಮ್ ಮಾರಾಟ ಮಾಡುವ ಎಲ್ಲ ಡೀಲರ್‌ಗಳು ಕಡ್ಡಾಯವಾಗಿ ದೃಢೀಕರಣ ವ್ಯವಸ್ಥೆಗೆ ಒಳಪಡಬೇಕಾಗುತ್ತದೆ. ಒಂದು ವೇಳೆ, ಈ ನಿಮಯವನ್ನು ಪಾಲಿಸಲು ವಿಫಲರಾದರೆ ಸುಮಾರು 10 ಲಕ್ಷ ರೂ.ವರೆಗೂ ದಂಡವನ್ನು ತೆರಬೇಕಾಗುತ್ತದೆ.
ಸಿಮ್ ಕಾರ್ಡ್ ಡೀಲರ್‌ಗಳ ಪರಿಶೀಲನೆಯನ್ನು ಟೆಲಿಕಾಂ ಆಪರೇಟರ್‌ನಿಂದ ಕೈಗೊಳ್ಳಲಾಗುತ್ತದೆ. ಅಸ್ತಿತ್ವದಲ್ಲಿರುವ ಮಾರಾಟಗಾರರು ನೋಂದಣಿ ಮಾನದಂಡವನ್ನು ಅನುಸರಿಸಲು 12 ತಿಂಗಳ ಅವಧಿಯನ್ನು ಹೊಂದಿರುತ್ತಾರೆ. ಈ ರೀತಿಯ ದೃಢೀಕರಣ ಅಗತ್ಯದ ಬಗ್ಗೆ ವಿವರಿಸಿರುವ ಸರ್ಕಾರವು, ಈ ದೃಢೀಕರಣದ ಮೂಲಕ ವಂಚಕ ಸಿಮ್ ಮಾರಾಟಗಾರರನ್ನು ಗುರುತಿಸುವುದು, ಕಪ್ಪು ಪಟ್ಟಿಗೆ ಸೇರಿಸುವುದು ಮತ್ತು ಅವರನ್ನು ಸಿಸ್ಟಮ್‌ನಿಂದ ಕಿತ್ತು ಹಾಕುವುದು ಸಾಧ್ಯವಾಗಲಿದೆ.
ಬಲ್ಕ್ ಸಿಮ್ ಇಲ್ಲ
ಡಿಜಿಟಲ್ ಹಗರಣಗಳನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಬೃಹತ್ ಸಂಪರ್ಕಗಳ ವಿತರಣೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಆದಾಗ್ಯೂ, ಒಂದು ಗುರುತಿನ ಆಧಾರದ ಮೇಲೆ ವ್ಯಕ್ತಿಗಳು ಇನ್ನೂ ಒಂಬತ್ತು ಸಿಮ್ ಕಾರ್ಡ್‌ಗಳನ್ನು ತೆಗೆದುಕೊಳ್ಳಬಹುದು.
ಹೊಸ ಸಿಮ್‌ಗಳನ್ನು ಖರೀದಿಸುವ ಸಂದರ್ಭದಲ್ಲಿ ಅಥವಾ ಅಸ್ತಿತ್ವದಲ್ಲಿರುವ ಸಂಖ್ಯೆಯಲ್ಲಿ ಹೊಸದಕ್ಕೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ, ಕೆವೈಸಿ ಅಡಿಯಲ್ಲಿ ಗ್ರಾಹಕರು ಅಗತ್ಯ ಜನಸಂಖ್ಯಾ ವಿವರಗಳನ್ನು ಒದಗಿಸಬೇಕಾಗುತ್ತದೆ. ಮುದ್ರಿತ ಆಧಾರ್ ಕಾರ್ಡ್‌ನ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ವಿವರಗಳನ್ನು ಪಡೆಯಲಾಗುತ್ತದೆ.
90 ದಿನಗಳು ಬೇಕು
ಈ ಹಿಂದಿನ ಬಳಕೆದಾರರ ಮೊಬೈಲ್ ನಂಬರ್ ನಿಷ್ಕ್ರಿಯಗೊಂಡ 90 ದಿನಗಳು ಅಂದರೆ 3 ತಿಂಗಳ ಬಳಿಕವಷ್ಟೇ, ಆ ನಂಬರ್ ಅನ್ನು ಹೊಸ ಗ್ರಾಹಕರಿಗೆ ನೀಡಲು ಅವಕಾಶವಿರುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಸಿಮ್ ಬದಲಿ ಸಂದರ್ಭದಲ್ಲಿ ಕೆವೈಸಿ ಪ್ರಕ್ರಿಯೆಯನ್ನು ಚಂದಾದಾರರು ಪೂರ್ಣಗೊಳಿಸಬೇಕು.
ಈ ವರ್ಷಾದರಂಭದಲ್ಲಿ ಸುಧಾರಣೆಯ ಭಾಗವಾಗಿ ಕೇಂದ್ರ ಸರ್ಕಾರವು ಸಂಚಾರಿ ಸಾಥಿ ವೆಬ್‌ಸೈಟ್ ಅನ್ನು ಆರಂಭಿಸಿತ್ತು. ಕಳ್ಳತನವಾದ ಅಥವಾ ಕಳೆದು ಹೋದ ಮೊಬೈಲ್ ಫೋನ್‌ಗಳ ಬಗ್ಗೆ ಈ ಪೋರ್ಟಲ್‌ನಲ್ಲಿ ಗ್ರಾಹಕರು ವರಿದ ಮಾಡಬಹುದು. ಅಕ್ರಮ ಮೊಬೈಲ್ ಸಂಪರ್ಕಗಳನ್ನು ಪತ್ತೆ ಹಚ್ಚುವ ಕೃತಕ ಬುದ್ಧಿಮತ್ತೆ ಆಧರಿತ ಸಾಫ್ಟ್‌ವೇರ್ ಅಸ್ತ್ರದ ಜತೆಗೆ ಈ ಪೋರ್ಟಲ್ ಕೂಡ ಆರಂಭಿಸಲಾಗಿತ್ತು.
ಈ ಸುದ್ದಿಯನ್ನೂ ಓದಿ: Digital KYC For SIM Cards: ಸಿಮ್ ಕಾರ್ಡ್ ಕೆವೈಸಿ ಆಗಲಿದೆ ಸಂಪೂರ್ಣ ಡಿಜಿಟಲ್, ಒಂದು ಐಡಿಗೆ ಸಿಗಲಿದೆ ಐದೇ ಸಿಮ್