Site icon Vistara News

ಜೈವಿಕ ಮೂಲದಿಂದ ಜಲಜನಕ, IISc Bangalore ಲ್ಯಾಬ್‌ನಲ್ಲಿ ಹೊಸ ತಂತ್ರಜ್ಞಾನ

IISc Bangalore

ಬೆಂಗಳೂರು: ಜೈವಿಕ ಮೂಲ (ಬಯೋಮಾಸ್‌)ದಿಂದ ಹಸಿರು ಹೈಡ್ರೋಜನ್ ಉತ್ಪಾದಿಸುವ ಹೊಸ ತಂತ್ರಜ್ಞಾನವನ್ನು ಭಾರತೀಯ ವಿಜ್ಞಾನ ಸಂಸ್ಥೆ (IISc) ಅಭಿವೃದ್ಧಿಪಡಿಸಿದೆ.

ನವೀಕರಿಸಬಹುದಾದ ಶಕ್ತಿಯ ಮೂಲವಾದ ಸಸ್ಯ ಆಧಾರಿತ ವಸ್ತುವಿನಿಂದ ಹಸಿರು ಹೈಡ್ರೋಜನ್ ಅನ್ನು ಕೇವಲ ಎರಡು ಹಂತಗಳಲ್ಲಿ ಉತ್ಪಾದಿಸುವ ಹೊಸ ತಂತ್ರಜ್ಞಾನವನ್ನು ಬೆಂಗಳೂರಿನ ಐಐಎಸ್‌ಸಿ ಪ್ರಯೋಗಾಲಯದ ತಂತ್ರಜ್ಞರು ಅಭಿವೃದ್ಧಿಪಡಿಸಿದ್ದಾರೆ.

ಈ ಪ್ರಕ್ರಿಯೆಯಲ್ಲಿ ಮೊದಲನೆಯದಾಗಿ ನೂತನ ರಿಯಾಕ್ಟರೊಂದರಲ್ಲಿ ಆಲ್ಮಜನಕ ಮತ್ತು ಉಗಿಯ ಮಿಶ್ರಣದೊಂದಿಗೆ ಜೈವಿಕ ವಸ್ತುವನ್ನು ಹೈಡ್ರೋಜನ್‌ ಸಮೃದ್ಧವಾಗಿರುವ ʻಸಂಶ್ಲೇಷಿತ ಅನಿಲ ಮಿಶ್ರಣʼ ಅಥವಾ Syngas ಆಗಿ ಪರಿವರ್ತಿಸಲಾಗುತ್ತದೆ. ಎರಡನೆಯ ಹಂತದಲ್ಲಿ, ದೇಶೀಯಯವಾಗಿ ಅಭಿವೃದ್ಧಿಪಡಿಸಲಾದ ಕಡಿಮೆ-ಒತ್ತಡದ ಅನಿಲ ಬೇರ್ಪಡಿಕೆ ಘಟಕವನ್ನು ಬಳಸಿಕೊಂಡು ಸೈನ್‌ಗ್ಯಾಸ್‌ನಿಂದ ಶುದ್ಧ ಹೈಡ್ರೋಜನ್ ಅನ್ನು ಉತ್ಪಾದಿಸಲಾಗುತ್ತದೆ.

ಸಾಮಾನ್ಯವಾಗಿ 1 ಕೆಜಿ ಬಯೋಮಾಸ್‌ನಲ್ಲಿ ಕೇವಲ 60 ಗ್ರಾಂ ಹೈಡ್ರೋಜನ್ ಇದ್ದರೂ, ಈ ಪ್ರಕ್ರಿಯೆಯಲ್ಲಿ 1 ಕೆಜಿ ಜೀವರಾಶಿಯಿಂದ 100 ಗ್ರಾಂ ಹೈಡ್ರೋಜನ್ ಅನ್ನು ಉತ್ಪಾದಿಸಬಹುದು ಎಂದು ಸಸ್ಟೈನಬಲ್ ಟೆಕ್ನಾಲಜೀಸ್ ಸೆಂಟರ್‌ನ ಪ್ರೊಫೆಸರ್ ಮತ್ತು ಇಂಟರ್ ಡಿಸಿಪ್ಲಿನರಿ ಸೆಂಟರ್ ಫಾರ್ ಎನರ್ಜಿ ರಿಸರ್ಚ್, IISc ಅಧ್ಯಕ್ಷ ಎಸ್ ದಾಸಪ್ಪ ಹೇಳಿದ್ದಾರೆ.

ಇದನ್ನೂ ಓದಿ: Snapping footwear: ಮಧುಮೇಹಿಗಳಿಗೆ IIScಯಿಂದ ಸ್ಪೆಷಲ್‌ ಪಾದರಕ್ಷೆ, ನೋವಾಗಲ್ಲ, ಕೀವಾಗಲ್ಲ!

ಇದು ಕಾರ್ಬನ್ ನೆಗೆಟಿವ್ ಇಂಧನ

ಈ ಪ್ರಕ್ರಿಯೆಯಲ್ಲಿ, ಹೈಡ್ರೋಜನ್ ಅನ್ನು ಒಳಗೊಂಡಿರುವ ಹಬೆಯು ವೈವಿಧ್ಯಮಯ ಪ್ರತಿಕ್ರಿಯೆಗಳಲ್ಲಿ ಭಾಗವಹಿಸುತ್ತದೆ. ಈ ಉತ್ಪಾದನೆಯಲ್ಲಿ ಇಂಗಾಲ ಬಿಡುಗಡೆಯಾಗುವುದಿಲ್ಲ. ಈಗ ಬಳಸಲಾಗುತ್ತಿರುವ ಜಲಜನಕವು ಪಳೆಯುಳಿಕೆ ಇಂಧನಗಳಿಂದ ಹಾಗೂ ಮೀಥೇನ್‌ನ ಉಗಿ ಸಂಶ್ಲೇಷಣೆಯಿಂದ ಬರುತ್ತದೆ. ಅದರಲ್ಲಿ ಕಾರ್ಬನ್‌ ಹೊರಸೂಸುತ್ತದೆ.

ಹೊಸ ತಂತ್ರಜ್ಞಾನವು ರಾಷ್ಟ್ರೀಯ ಹೈಡ್ರೋಜನ್ ಎನರ್ಜಿ ಮಾರ್ಗಸೂಚಿಯನ್ನು ಅನುಸರಿಸಿದೆ. ಈ ಮಾರ್ಗಸೂಚಿಯು ಸುಸ್ಥಿರ ಹೈಡ್ರೋಜನ್ ಅನ್ನು ಇಂಧನವಾಗಿ ಬಳಸುವುದನ್ನು ಉತ್ತೇಜಿಸುವ ಕೇಂದ್ರದ ಉಪಕ್ರಮ. ಉಕ್ಕನ್ನು ಡಿಕಾರ್ಬನೈಸ್ ಮಾಡಲು ಸಹ ಈ ಹಸಿರು ಹೈಡ್ರೋಜನ್ ಅನ್ನು ಬಳಸಬಹುದು ಎಂದು ದಾಸಪ್ಪ ಹೇಳಿದ್ದಾರೆ.

ಇದನ್ನೂ ಓದಿ: Modi in Karnataka | IISC ಕ್ಯಾಂಪಸ್‌ನಲ್ಲಿ ಮೋದಿ; ದಾನಿಗಳಿಗೆ ಧನ್ಯವಾದ ಸಲ್ಲಿಕೆ

Exit mobile version