ಬೆಂಗಳೂರು, ಕರ್ನಾಟಕ: ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಮತ್ತೊಂದು ಸ್ಮಾರ್ಟ್‌ಫೋನ್ ಲಾಂಚ್ ಆಗಿದೆ. ಚೀನಾ ಎಚ್‌ಎಂಡಿ ಗ್ಲೋಬಲ್ ಕಂಪನಿಯ ಒಡೆತನವನ್ನು ಹೊಂದಿರುವ ನೋಕಿಯಾ, ಎಂಟ್ರಿ ಲೇವಲ್ ಫೋನ್ ಬಿಡುಗಡೆ ಮಾಡಿದೆ. ಈ ಫೋನ್ ಹೆಸರು ನೋಕಿಯಾ ಸಿ12 ಪ್ಲಸ್(Nokia C12 Plus). 6.3 ಇಂಚ್ ಎಚ್‌ಡಿ ಡಿಸ್‌ಪ್ಲೇಯನ್ನು ಹೊಂದಿರುವ ಈ ಫೋನ್‌ನಲ್ಲಿ 4000mAh ಬ್ಯಾಟರಿಯನ್ನು ನೀಡಲಾಗಿದೆ. ಈ ಫೋನ್ ಅನ್ನು ಕಳೆದ ವಾರ ಭಾರತದಲ್ಲಿ ಅನಾವರಣ ಮಾಡಲಾಗಿತ್ತು. ಈ ಹಿಂದೆಯೇ ಕಂಪನಿಯು ಭಾರತದ ಮಾರುಕಟ್ಟೆಗೆ ಎಂಟ್ರಿಲೇವಲ್ ನೋಕಿಯಾ ಸಿ12 ಫೋನ್ ಜನವರಿಯಲ್ಲಿ ಬಿಡುಗಡೆ ಮಾಡಿತ್ತು. ಈಗ ಬಿಡುಗಡೆಯಾಗಿರುವ ನೋಕಿಯಾ ಸಿ 12 ಪ್ಲಸ್, ಎಂಟ್ರಿಲೇವಲ್ ಫೋನ್‌ಗಳಲ್ಲೇ ಹೆಚ್ಚು ಪ್ರೀಮಿಯಿಂ ಆಗಿದೆ ಎಂದು ಹೇಳಲಾಗುತ್ತಿದೆ.
ನೋಕಿಯಾ ಸಿ12 ಪ್ಲಸ್ ಬೆಲೆ ತೀರಾ ಜೇಬಿಗೆ ಹೊರೆಯಾಗಿಲ್ಲ. 2 ಜಿಬಿ ಪ್ಲಸ್ 32 ಜಿಬಿ ಸ್ಟೋರೇಜ್ ವೆರಿಯಂಟ್ ಫೋನ್ ಬೆಲೆ ಅಂದಾಜು 7,999 ರೂ. ಇದೆ. ಈ ಹಿಂದಿನ ಎರಡು ಆವೃತ್ತಿಗಳಿಗೆ ಹೋಲಿಸಿದರೆ ಈ ಫೋನ್ ತುಸು ಕಾಸ್ಟ್ಲೀ ಆಗಿದೆ. 2 GB + 64 GB ವೆರಿಯಂಟ್ ನೋಕಿಯಾ ಸಿ12 ಫೋನ್ ಬೆಲೆ ಅಂದಾಜು 5,999 ರೂ. ಇತ್ತು. ಅದೇ ರೀತಿ, ನೋಕಿಯಾ ಸಿ12 ಪ್ರೋನ್ ಬೆಲೆ, 6,999 ರೂ. ಇತ್ತು.
ಹೊಸ Nokia C12 Plus ಆಂಡ್ರಾಯ್ಡ್ 12 (ಗೋ ಆವೃತ್ತಿ) ನಲ್ಲಿ ಕಾರ್ಯನಿರ್ವಹಿಸುತ್ತದೆ. 6.3-ಇಂಚಿನ HD+ (720 X 1,520 ಪಿಕ್ಸೆಲ್‌ಗಳು) ಡಿಸ್‌ಪ್ಲೇಯನ್ನು ಹೊಂದಿದೆ. ಸೆಲ್ಫಿ ಶೂಟರ್ ಇರಿಸಲು ಡಿಸ್ಪ್ಲೇ ವಾಟರ್‌ಡ್ರಾಪ್ ಶೈಲಿಯ ಕಟೌಟ್ ನೀಡಲಾಗಿದೆ. ಈ ಫೋನ್ 1.6Hz ಗರಿಷ್ಠ ಗಡಿಯಾರ ಆವರ್ತನದೊಂದಿಗೆ ಆಕ್ಟಾ-ಕೋರ್ Unisoc SoC ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. 2GB RAMನೊಂದಿಗೆ ಸಂಯೋಜಿಸಲಾಗಿದೆ. 32 ಜಿಬಿ ಸ್ಟೋರೇಜ್ ನೀಡಲಾಗಿದೆ.
ನೋಕಿಯಾ ಸಿ12 ಪ್ಲಸ್ ಫೋನ್ ಕ್ಯಾಮೆರಾ ಬಗ್ಗೆ ಹೇಳುವುದಾದರೆ, ಹಿಂಬದಿಯಲ್ಲಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಆಟೋ ಫೋಕಸ್, ಎಲ್‌ಇಡಿ ಫ್ಲ್ಯಾಶ್ ಕೂಡ ಇದೆ. ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ ಫೋನ್ ಮುಂಭಾಗದಲ್ಲಿ 4 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಎಂಟ್ರಿ ಲೇವಲ್ ಫೋನ್ ಕೆಟಗರಿಗೆ ಹೋಲಿಸುವುದಾದರೆ, ಈ ಫೋನ್ ಕ್ಯಾಮೆರಾ ದೃಷ್ಟಿಯಿಂದಲೂ ಚೆನ್ನಾಗಿದೆ ಎಂದು ಹೇಳಬಹುದು.
ಇದನ್ನೂ ಓದಿ: nokia 8210 | ಒಂದು ಬಾರಿ ಚಾರ್ಜ್ ಮಾಡಿದರೆ 27 ದಿನ ನೋ ಟೆನ್ಷನ್!
ಎಂಟ್ರಿ ಲೇವಲ್ ಫೋನ್ ಆಗಿರುವ ನೋಕಿಯಾ ಸಿ 12 ಪ್ಲಸ್ ಕನೆಕ್ಟಿವಿಟಿ ಆಪ್ಷನ್‌ಗಳೂ ಚೆನ್ನಾಗಿವೆ. ವೈಫೈ, ಬ್ಲೂಟೂತ್ 5.2, ಮೈಕ್ರೋ-USB ಪೋರ್ಟ್ ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಸೇರಿವೆ. ಇದು 4,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಈ ಹಿಂದಿನ ಎರಡು ಆವೃತ್ತಿಗಳಿಗೆ ಹೋಲಿಸಿದರೆ, ಹೊಸ ಫೋನ್‌ನಲ್ಲಿ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ. ನೋಕಿಯಾ ಸಿ12 ಮತ್ತು ನೋಕಿಯಾ ಸಿ12 ಪ್ರೋ ಸ್ಮಾರ್ಟ್‌ಫೋನ್‌ನಲ್ಲಿ 3,000mAh ಬ್ಯಾಟರಿ ನೀಡಲಾಗಿತ್ತು.