ಬೆಂಗಳೂರು: ಆರ್ಥಿಕ ವ್ಯವಹಾರ ನಡೆಸಲು ಪರ್ಮನೆಂಟ್ ಅಕೌಂಟ್ ನಂಬರ್ (Permanent Account Number) ಬೇಕೇ ಬೇಕು. ಇದನ್ನು ಕನ್ನಡದಲ್ಲಿ ಶಾಶ್ವತ ಖಾತಾ ನಂಬರ್ ಎಂದು ಹೇಳಬಹುದು. ಇಂಗ್ಲಿಷನ್‌ನಲ್ಲಿ ಸಂಕ್ಷಿಪ್ತವಾಗಿ ಪ್ಯಾನ್ (PAN Card) ಎಂದು ಕರೆಯುತ್ತಾರೆ. ನಮ್ಮೆಲ್ಲ ಎಲ್ಲ ವ್ಯವಹಾರ ಮಾಡುವಾಗ ಅಂದರೆ ನಿರ್ದಿಷ್ಟ ಮೊತ್ತದ ವ್ಯವಹಾರ ಮೀರುವುದಾಗಿದ್ದರೆ ಖಂಡಿತವಾಗಿ ಪ್ಯಾನ್ ಬೇಕಾಗುತ್ತದೆ. ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದಾಗಿ ಪ್ಯಾನ್ ಕಾರ್ಡ್‌ನಲ್ಲಿರುವ ವಿಳಾಸವನ್ನು ಬದಲಿಸಬೇಕಾಗುತ್ತದೆ. ಆಗ, ಆಧಾರ್ (Aadhaar) ಕಾರ್ಡ್ ಬಳಸಿಕೊಂಡು ಈ ಕೆಲಸವನ್ನು ಮಾಡಬಹುದು. ಆಧಾರ್ ಕಾರ್ಡ್ ಎನ್ನುವುದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ನೀಡಿರುವ ಅಧಿಕೃತ ಗುರುತಿನ ಪತ್ರವಾಗಿದೆ.
ಆಧಾರ್ ಕಾರ್ಡ್ ಎನ್ನುವುದು ಬ್ಯಾಂಕ್ ಖಾತೆ ತೆರೆಯಲು, ಮೊಬೈಲ್‌ನಲ್ಲಿ ಸಂಪರ್ಕವನ್ನು ಪಡೆಯಲು, ಪಾಸ್‌ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸಲು ಇತ್ಯಾದಿ ಹಲವಾರು ಉದ್ದೇಶಗಳಿಗಾಗಿ ಗುರುತಿನ ಮತ್ತು ವಿಳಾಸದ ಪುರಾವೆಯಾಗಿ ಬಳಕೆಯಾಗುತ್ತದೆ. ನಿಮ್ಮ ಪ್ಯಾನ್ ಕಾರ್ಡ್‌ನಲ್ಲಿ ನೀವು ವಾಸಸ್ಥಳದ ವಿಳಾಸವನ್ನು ಅಪ್‌ಡೇಟ್ ಮಾಡಬೇಕಾದರೆ ನಿಮ್ಮ ಆಧಾರ್ ಕಾರ್ಡ್ ಅನ್ನು ಬಳಸಿಕೊಳ್ಳಬಹುದು. ಆದರೆ, ಬಹಷ್ಟು ಬಳಕೆದಾರರಿಗೆ ಪ್ಯಾನ್ ವಿಳಾಸವನ್ನು ಆಧಾರ್ ಕಾರ್ಡ್ ಬಳಸಿ ಹೇಗೆ ಬದಲಾಯಿಸಿಕೊಳ್ಳಬಹುದು ಎಂಬುದು ಗೊತ್ತಿರುವುದಿಲ್ಲ. ಅಂಥವರಿಗೆ ಈ ಸಿಂಪಲ್ ಆಗಿ ಮಾಹಿತಿ ನೀಡಲಾಗಿದೆ. ಈ ಸ್ಟೆಪ್ಸ್ ಫಾಲೋ ಮಾಡಿದ್ರೆ ಈಝಿಯಾಗಿ ಅಡ್ರೆಸ್ ಚೇಂಜ್ ಮಾಡಬಹುದು.
ಈ ಸ್ಟೆಪ್ಸ್ ಫಾಲೋ ಮಾಡಿ…
ಮೊದಲಿಗೆ UTIITSL (ಯುಟಿಐ ಇನ್ಫ್ರಾಸ್ಟ್ರಕ್ಚರ್ ಟೆಕ್ನಾಲಜಿ ಆ್ಯಂಡ್ ಸರ್ವೀಸ್ ಲಿ.) ಜಾಲತಾಣಕ್ಕೆ ಭೇಟಿ ನೀಡಿ. ಬಳಿಕ ಚೇಂಜ್/ಕರೆಕ್ಷನ್ ಪಾನ್ ಕಾರ್ಡ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಬಳಿಕ ಚೇಂಜ್/ಕರೆಕ್ಷನ್ ವಿವರಗಳನ್ನು ಅಪ್ಲೈ ಮಾಡಿ ಬಳಿಕ ನೆಕ್ಸ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ.
ಇಲ್ಲಿ ನೀವು ನಿಮ್ಮ ಪಾನ್ ನಂಬರ್ ನಮೂದಿಸಿ. ಪ್ಯಾನ್ ವಿಳಾಸವನ್ನು ನವೀಕರಿಸಲು ಯುಐಡಿಎಐ ಡೇಟಾಬೇಸ್‌ನಿಂದ ಪಡೆದ ವಿವರಗಳನ್ನು ಬಳಸಲು ನಿಮ್ಮ ಪ್ಯಾನ್ ಸಂಖ್ಯೆಯನ್ನು ನಮೂದಿಸಿ ಮತ್ತು ಆಧಾರ್ ಬೇಸ್ ಇ-ಕೆವೈಸಿ ವಿಳಾಸ ನವೀಕರಣವನ್ನು ಪರಿಶೀಲಿಸಿ.
ಈ ಸುದ್ದಿಯನ್ನೂ ಓದಿ: Facebook: ಫೇಸ್‌ಬುಕ್‌ನಲ್ಲಿ ಇಂಟರ್ನೆಟ್ ಸ್ಪೀಡ್ ಚೆಕ್ ಮಾಡಿ ! ಈ ಸ್ಟೆಪ್ಸ್ ಫಾಲೋ ಮಾಡಿ ನೋಡಿ…
ಬಳಿಕ ಆಧಾರ್ ನಂಬರ್, ಇಮೇಲ್ ಐಡಿ, ಮೊಬೈಲ್ ನಂಬರ್ ಇತ್ಯಾದಿ ಸೇರಿದಂತೆ ಅಗತ್ಯವಿರುವ ಎಲ್ಲ ಮಾಹಿತಿಯನ್ನು ನಮೂದಿಸಿ ಬಳಿಕ ಸಬ್‌ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ. ಆಗ, ಆಧಾರ್ ಜತೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿಗೆ ಒಟಿಪಿ ಬರುತ್ತದೆ. ಆ ಒಟಿಪಿಯನ್ನು ನಮೂದಿಸಿ ಮತ್ತು ಸಬ್‌ಮಿಟ್ ಮಾಡಿ. ಇಷ್ಟಾದರೆ, ನಿಮ್ಮ ವಿಳಾಸ ಬದಲಾವಣೆ ಅಥವಾ ಕರೆಕ್ಷನ್ ಪೂರ್ತಿಯಾದಂತೆ. ಕೊನೆಗೆ ಒಂದು ವೇಳೆ, ಅಡ್ರೆಸ್ ಅಪ್ಡೇಟ್ ಸಕ್ಸೆಸ್ ಆಗಿದ್ದರೆ, ಇಮೇಲ್ ಐಡಿ ಹಾಗೂ ಮೊಬೈಲ್ ನಂಬರ್‌ಗೆ ಮೇಲ್ ಮತ್ತು ಎಸ್ಸೆಮ್ಮೆಸ್ ಬರುತ್ತದೆ ಎಂಬುದನ್ನು ಮರೆಯಬಾರದು.
ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.