Site icon Vistara News

Philips Smart | ಭಾರತದಲ್ಲಿ ಫಿಲಿಪ್ಸ್ ಸ್ಮಾರ್ಟ್‌ ಎಲ್‌ಇಡಿ ಸ್ಕ್ವೈರ್, ಹೀರೋ ಲ್ಯಾಂಪ್ ಲಾಂಚ್

Philips Smart Lamps

ಬೆಂಗಳೂರು: ದೀಪವ್ಯವಸ್ಥೆಯಲ್ಲಿ ವಿಶ್ವ ಮುಂಚೂಣಿ ಸಂಸ್ಥೆಯಾದ ಸಿಗ್ನಿಫೈ(Signify), ಎರಡು ಹೊಸ ಪೋರ್ಟಬಲ್ ಸ್ಮಾರ್ಟ್ ಲ್ಯಾಂಪ್‍ಗಳಾದ – ಫಿಲಿಪ್ಸ್ ಸ್ಮಾರ್ಟ್ ಎಲ್‍ಇಡಿ ಸ್ಕ್ವೈರ್ (Philips Smart LED Squire) ಮತ್ತು ಫಿಲಿಪ್ಸ್ ಸ್ಮಾರ್ಟ್ ಎಲ್‍ಇಡಿ ಹೀರೋಗಳ (Philips Smart LED Hero) ಪರಿಚಯದೊಂದಿಗೆ ಭಾರತದಲ್ಲಿ ತನ್ನ ಫಿಲಿಪ್ಸ್ ಸ್ಮಾರ್ಟ್ ವೈ-ಫೈ ದೀಪವ್ಯವಸ್ಥೆ ಶ್ರೇಣಿಯನ್ನು ವಿಸ್ತರಿಸಿದೆ. ಸುಂದರವಾಗಿ ವಿನ್ಯಾಸಗೊಳಿಸಲಾಗಿರುವ ಈ ಲ್ಯಾಂಪುಗಳು, ಬಳಕೆದಾರರು ತಮ್ಮ ಲಿವಿಂಗ್ ಏರಿಯಾದ ಯಾವುದೇ ಮೂಲೆಗೂ ವರ್ಣಮಯ ಸ್ಮಾರ್ಟ್ ಬೆಳಕನ್ನು ತರಲು ನೆರವಾಗುತ್ತದೆ. ಗೋಡೆಯ ಮೇಲೆ ಮೃದುವಾದ ವರ್ಣಮಯ ಹೊಳಪನ್ನು ತಂದು ಓದುವುದಕ್ಕೆ, ವ್ಯಾಯಾಮ ಮಾಡುವುದಕ್ಕೆ ಅಥವಾ ಸುಮ್ಮನೆ ಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುವುದಕ್ಕೆ ಇದನ್ನು ನೀವು ನಿಮ್ಮ ಮಂಚದ ಪಕ್ಕದಲ್ಲಿ, ಕಾಫಿ ಟೇಬಲ್ ಮೇಲೆ, ಅಥವಾ ಬುಕ್‍ಶೆಲ್ಫ್ ಮೇಲೆ ಹಾಕಿಕೊಂಡು ಮುದಗೊಳಿಸುವ ಮೂಲೆಯನ್ನು ಸೃಷ್ಟಿಸಬಹುದು.

ಫಿಲಿಪ್ಸ್ ಸ್ಮಾರ್ಟ್ ಎಲ್‍ಇಡಿ ಸ್ಕ್ವೈರ್ ಮತ್ತು ಫಿಲಿಪ್ಸ್ ಸ್ಮಾರ್ಟ್ ಎಲ್‍ಇಡಿ ಹೀರೋ ಸೂಕ್ಷ್ಮವಾದ ದುಂಡನೆಯ ಆಕಾರದ ವಿನ್ಯಾಸ ಮತ್ತು ಸರಳವಾದ ಪ್ಲಗ್-ಅಂಡ್-ಪ್ಲೇ ಕಾರ್ಯಾಚರಣೆ ಹೊಂದಿರುವುದರಿಂದ, ಇವುಗಳನ್ನು ಬಹಳ ಸುಲಭವಾಗಿ ಮನೆಯಲ್ಲಿ ಎಲ್ಲಿ ಬೇಕಾದರೂ ಇದನ್ನು ಕೊಂಡೊಯ್ಯಬಹುದು. ಫಿಲಿಪ್ಸ್ ಸ್ಮಾರ್ಟ್ ಎಲ್‍ಇಡಿ ಸ್ಕ್ವೈರ್ ಟೇಬಲ್ ಲ್ಯಾಂಪ್ ದ್ವಿ-ವಲಯ(ಡ್ಯುಯಲ್-ಝೋನ್) ಬೆಳಕಿನ ಪ್ರಭಾವ ಹೊಂದಿದ್ದರೆ, ಫಿಲಿಪ್ಸ್ ಸ್ಮಾರ್ಟ್ ಎಲ್‍ಇಡಿ ಹೀರೋ ಟೇಬಲ್ ಲ್ಯಾಂಪ್, ಆ್ಯಪ್ ಮತ್ತು ಧ್ವನಿ ನಿಯಂತ್ರಣಗಳ ಜೊತೆಗೆ, ಟ್ಯಾಪ್ ಸೆನ್ಸಾರ್ ನಿಯಂತ್ರಣವನ್ನು ಕೂಡ ಹೊಂದಿದೆ.

ಈ ಸ್ಮಾರ್ಟ್ ಪೋರ್ಟಬಲ್ ಲ್ಯಾಂಪುಗಳನ್ನು, ಫಿಲಿಪ್ಸ್ WiZ ಆ್ಯಪ್ ಬಳಸಿ ಅಥವಾ ಧ್ವನಿ ನಿಯಂತ್ರಣದ ಮೂಲಕ ಎಲ್ಲಿಂದ ಬೇಕಾದರೂ ದೂರದಿಂದಲೇ ಕಾರ್ಯಸ್ಥಗೊಳಿಸಬಹುದು. ಪ್ರಸ್ತುತದ ವೈ-ಫೈ ನೆಟ್‍ವರ್ಕ್‍ಗಳ ಮೂಲಕ ಕಾರ್ಯನಿರ್ವಹಿಸುವ ಎಲ್ಲಾ ಸ್ಮಾರ್ಟ್ ಗೃಹ ವ್ಯವಸ್ಥೆಗಳೊಂದಿಗೂ ಇದು ಹೊಂದಿಕೊಳ್ಳುತ್ತದೆ. ನಿಮ್ಮ ದಿನನಿತ್ಯದ ಅಥವಾ ವಾರದ ದಿನಚರಿಯನ್ನು ಅನುಸರಿಸಲು ಕೂಡ ನೀವು ಈ ಸ್ಮಾರ್ಟ್ ದೀಪಗಳನ್ನು ಸ್ವಯಂಚಾಲಿತಗೊಳಿಸಬಹುದು. ಬೆಳಿಗ್ಗೆ ಅಥವಾ ನೀವು ಮನಗೆ ಬರುವ ಮುನ್ನ ನಿಮ್ಮ ದೀಪ ಬೆಳಗುವುದಕ್ಕೆ ಶೆಡ್ಯೂಲ್ ಮಾಡಬಹುದು ಮತ್ತು ಅಗತ್ಯವಿಲ್ಲದಿದ್ದಾಗ ವಿದ್ಯುತ್ ಉಳಿತಾಯ ಮಾಡಲು ಅವುಗಳನ್ನು ಆಫ್ ಮಾಡಿಡಬಹುದು.

ಈ ಪರಿಚಯದ ಬಗ್ಗೆ ಮಾತನಾಡುತ್ತಾ, ಸಿಗ್ನಿಫೈ ದಕ್ಷಿಣ ಏಶ್ಯಾ ವಿಭಾಗದ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುಮಿತ್ ಜೋಶಿ, “ಹೆಚ್ಚುತ್ತಿರುವ ಇಂಟರ್‌ನೆಟ್ ಪ್ರಸರಣದಿಂದಾಗಿ ಭಾರತದಲ್ಲಿ ಸ್ಮಾರ್ಟ್ ದೀಪವ್ಯವಸ್ಥೆಗೆ ಬೇಡಿಕೆ ಹೆಚ್ಚಾಗುತ್ತಿದ್ದು ಸ್ಮಾರ್ಟ್ ಆದ ಹಾಗೂ ಅನುಕೂಲಕರವಾಗಿರುವ ದೀಪವ್ಯವಸ್ಥೆಯನ್ನು ಇಚ್ಛಿಸುವ ಯುವಪ್ರೇಕ್ಷಕ ವರ್ಗವೂ ಬೆಳೆಯುತ್ತಿದೆ. ನಮ್ಮ ಹೊಸದಾಗಿ ಪರಿಚಯಗೊಂಡಿರುವ ಫಿಲಿಪ್ಸ್ ಸ್ಮಾರ್ಟ್ ಎಲ್‍ಇಡಿ ಸ್ಕ್ವೈರ್ ಮತ್ತು ಫಿಲಿಪ್ಸ್ ಸ್ಮಾರ್ಟ್ ಎಲ್‍ಇಡಿ ಹೀರೋ ಎಂಬ ಎರಡು ಟೇಬಲ್ ಲ್ಯಾಂಪ್‍ಗಳೊಂದಿಗೆ ಭಾರತದಲ್ಲಿ ನಮ್ಮ ಫಿಲಿಪ್ಸ್ ಸ್ಮಾರ್ಟ್ ವೈ-ಫೈ ದೀಪವ್ಯವಸ್ಥೆಯ ಶ್ರೇಣಿಯ ವಿಸ್ತರಣೆಯನ್ನು ಘೋಷಿಸುತ್ತಿರುವುದಕ್ಕೆ ನಮಗೆ ಬಹಳ ಸಂತೋಷವಾಗುತ್ತಿದೆ. ಈ ಪ್ಲಗ್-ಅಂಡ್-ಪ್ಲೇ ಪೋರ್ಟಬಲ್ ಲ್ಯಾಂಪ್‍ಗಳ ಸೌಕರ್ಯವನ್ನು ನಮ್ಮ ಬಳಕೆದಾರರು ಆನಂದಿಸುತ್ತಾರೆ ಎಂಬ ವಿಶ್ವಾಸ ನಮಗಿದೆ.”ಎಂದು ಹೇಳಿದರು.

ಇದನ್ನೂ ಓದಿ | Vivo X90 Series | ನ.22ಕ್ಕೆ ಬಹುನಿರೀಕ್ಷಿತ ವಿವೋ ಎಕ್ಸ್90 ಸರಣಿ ಫೋನ್ ಲಾಂಚ್ ಪಕ್ಕಾ

Exit mobile version