ನವದೆಹಲಿ: ತನ್ನ ಬಳಕೆದಾರರಿಗೆ ನೆರವು ಒದಗಿಸಲು ವಾಟ್ಸಾಪ್ ಹೊಸ ಅಪ್‌ಡೇಟ್‌ಗಳನ್ನು (WhatsApp New Feature) ನೀಡುತ್ತದೆ. ಹೊಸ ಫೀಚರ್‌ಗಳನ್ನು ಲಾಂಚ್ ಮಾಡುವ ಮೂಲಕ ವಾಟ್ಸಾಪ್ ಬಳಕೆಯ ಅನುಭವವನ್ನು ಹೆಚ್ಚಿಸುತ್ತದೆ. ಈಗ ವಾಟ್ಸಾಪ್ ಗ್ರೂಪ್‌ಗಳಲ್ಲಿ (WhatsApp Groups) ಸದಸ್ಯರು ತಮ್ಮ ನಂಬರ್‌ಗಳನ್ನು ಅಡಗಿಸಿಡುವ ಅವಕಾಶವನ್ನು ಕಲ್ಪಿಸುತ್ತಿದೆ. ಅಂದರೆ, ಯಾವುದೇ ವಾಟ್ಸಾಪ್ ಗ್ರೂಪ್‌ಗಳಿಗೆ ಸೇರಿಕೊಂಡಾಗ ಇತರ ಸದಸ್ಯರಿಗೆ ನಿಮ್ಮ ಫೋನ್ ನಂಬರ್ ಕಾಣದಂತೆ ಮಾಡಬಹುದು. ಈ ಫೀಚರ್‌ಗೆ ವಾಟ್ಸಾಪ್ ಫೋನ್ ನಂಬರ್ ಪ್ರೈವೇಸಿ (phone number privacy) ಎಂದು ಹೆಸರಿಟ್ಟಿದೆ. ಈ ಹೊಸ ಫೀಚರ್ ಎಲ್ಲ ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳಿಗೆ ದೊರೆಯಲಿದೆ.
ಈ ಫೀಚರ್ ಮೂಲಕ ಬಳಕೆದಾರರು ಸಂಭಾಷಣೆಗಳಲ್ಲಿ ಭಾಗವಹಿಸಬಹುದು ಮತ್ತು ಗ್ರೂಪ್‌ಗಳ ಇತರ ಸದಸ್ಯರಿಂದ ತಮ್ಮ ಹೆಸರುಗಳು ಮತ್ತು ಫೋನ್ ಸಂಖ್ಯೆಗಳನ್ನು ಮರೆಮಾಡುವ ಮೂಲಕ ಸಂದೇಶಗಳಿಗೆ ತಮ್ಮ ಪ್ರತಿಕ್ರಿಯೆಗಳನ್ನು ಮಾಡಬಹುದು. ಎಲ್ಲ ಬಳಕೆದಾರರಿಗೆ ಈ ಫೀಚರ್ ಯಾವಾಗ ಲಭ್ಯವಾಗಲಿದೆ ಎಂಬುದನ್ನು ವಾಟ್ಸಾಪ್ ಇನ್ನೂ ಬಹಿರಂಗೊಳಿಸಿಲ್ಲ. WABetainfo ವರದಿಯ ಪ್ರಕಾರ, ವಾಟ್ಸಾಪ್ ಎಲ್ಲಾ ಆಂಡ್ರಾಯ್ಡ್ ಮತ್ತು ಐಒಎಸ್ ಬೀಟಾ ಪರೀಕ್ಷಕರಿಗೆ ಈ ಫೀಚರ್ ಲಾಂಚ್ ಮಾಡಿದೆ. ಆಂಡ್ರಾಯ್ಡ್ ಆವೃತ್ತಿ 2.23.14.19ಗಾಗಿ ವಾಟ್ಸಾಪ್ ಬೀಟಾ ಮತ್ತು ಐಒಎಸ್‌ಗಾಗಿ 23.14.0.70 ಬೀಟಾ ಆವೃತ್ತಿಯೊಂದಿಗೆ ಅನುಕ್ರಮವಾಗಿ ಎಲ್ಲಾ ಆಂಡ್ರಾಯ್ಡ್ ಮತ್ತು ಐಒಎಸ್ ಟೆಸ್ಟರ್‌ಗಳಿಗೆ ಈ ಫೀಚರ್ ದೊರೆಯುತ್ತಿದೆ. ಆದರೆ, ಎಲ್ಲ ಸಾಮಾನ್ಯ ಬಳಕೆದಾರರಿಗೆ ಈ ಫೀಚರ್ ಯಾವಾಗ ದೊರೆಯಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.
WhatsApp New Feature: ವಾಟ್ಸಾಪ್ ಸ್ಪ್ಯಾಮ್ ಕಾಲ್ ಸೈಲೆಂಟ್ ಮಾಡಬಹುದು
ಜಗತ್ತಿನ ಅತ್ಯಂತ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ಹೊಸ ಫೀಚರ್ ಲಾಂಚ್ ಮಾಡಿದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ವಾಟ್ಸಾಪ್ ಆಗಾಗ ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ವಾಟ್ಸಾಪ್ ಈಗ ಸೈಲೆನ್ಸ್ ಅನ್‌ನೋನ್ ಕಾಲರ್ಸ್ (silence unknown callers) ಎಂಬ ಹೊಸ ಫೀಚರ್ ಜಾರಿಗೆ ತಂದಿದೆ (WhatsApp New Feature). ಈ ಹೊಸ ಫೀಚರ್ ಬಳಕೆದಾರರಿಗೆ, ಇನ್‌ಕಮಿಂಗ್ ಕಾಲ್‍ಗಳ ಹೆಚ್ಚು ನಿಯಂತ್ರಣ ಸಾಧಿಸಲು ನೆರವು ಒದಗಿಸುತ್ತದೆ. ಅಂದ ಹಾಗೆ, ಮೆಟಾ ಸಿಇಒ (Meta CEO) ಮಾರ್ಕ್ ಜುಕರ್‌ಬರ್ಗ್ (Mark Zuckerberg) ಅವರು ಈ ಹೊಸ ಫೀಚರ್ ಘೋಷಣೆ ಮಾಡಿದ್ದಾರೆ.
ಮೆಟಾ ಒಡೆತನದ ವಾಟ್ಸಾಪ್ ಜಾರಗೆ ತಂದಿರುವ ಈ ಸೈಲೆನ್ಸ್ ಅನ್‌ನೋನ್ ಕಾಲರ್ಸ್ ಫೀಚರ್ಸ್ ಬಳಕೆದಾರರಿಗೆ ಹೆಚ್ಚಿನ ಸುರಕ್ಷತೆಯನ್ನು ಒದಗಿಸುತ್ತದೆ. ಅಪರಿಚಿತ ಜನರಿಂದ ಬರುವ ಸ್ಪ್ಯಾಮ್, ಸ್ಕ್ಯಾಮ್‌ಗಳು ಕರೆಗಳನ್ನು ಸ್ವಯಂಚಾಲಿತವಾಗಿ ಸ್ಕ್ರೀನ್ ಔಟ್ ಮಾಡಲು ಸಾಧಅಯವಾ ಮಾಡಲು ಇದು ಸಹಾಯ ಮಾಡುತ್ತದೆ. ಇನ್ನೂ ಹೆಚ್ಚಿನ ಗೌಪ್ಯತೆ ಮತ್ತು ನಿಯಂತ್ರಣಕ್ಕಾಗಿ ನೀವು ಈಗ ವಾಟ್ಸಾಪ್‌ನಲ್ಲಿ ಅಪರಿಚಿತ ಸಂಪರ್ಕಗಳಿಂದ ಒಳಬರುವ ಕರೆಗಳನ್ನು ಸ್ವಯಂಚಾಲಿತವಾಗಿ ನಿಶ್ಯಬ್ದಗೊಳಿಸಬಹುದು ಎಂದು ಮಾರ್ಕ್ ಜುಕರ್‌ಬರ್ಗ್ ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: WhatsApp New Feature: ಡೆಸ್ಕ್‌ಟಾಪ್ ವಾಟ್ಸಾಪ್‌ನಲ್ಲಿ ‘ಟೆಕ್ಸ್ಟ್ ಗಾತ್ರವನ್ನು ಅಡ್ಜಸ್ಟ್’ ಮಾಡಬಹುದು! ಇದು ಹೊಸ ಫೀಚರ್
ವಾಟ್ಸಾಪ್‌ನ ಸೈಲೆನ್ಸ್ ಅನ್‌ನೋನ್ ಕಾಲರ್ಸ್ ಫೀಚರ್ ಬಳಕೆದಾರರಿಗೆ ಹೆಚ್ಚಿನ ಗೌಪ್ಯತೆ ಮತ್ತು ಅವರ ಒಳಬರುವ ಕರೆಗಳ ನಿಯಂತ್ರಣವನ್ನು ನೀಡುತ್ತದೆ. ಅಂಥ ಕರೆಗಳು ಅವರ ಫೋನ್‌ಗಳಲ್ಲಿ ರಿಂಗ್ ಆಗುವುದಿಲ್ಲ, ಆದರೆ ಯಾರಾದರೂ ಪ್ರಮುಖರ ಕರೆಯಾಗಿದ್ದರೆ ಅದು ಕಾಲ್ ಪಟ್ಟಿಯಲ್ಲಿ ಕಾಣುತ್ತದೆ ಎಂದು ವಾಟ್ಸಾಪ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಸೈಲೆನ್ಸ್ ಅನ್‌ನೋನ್ ಕಾಲರ್ಸ್ ಫೀಚರ್ ಮಾತ್ರವಲ್ಲದೇ ವಾಟ್ಸಾಪ್, ಪ್ರೈವೇಸಿ ಚೆಕ್‌ಅಪ್ ಎಂಬ ಮತ್ತೊಂದು ಫೀಚರ್ ಕೂಡ ಪರಿಚಯಿಸಿದೆ. ಈ ಫೀಚರ್ ಸರಿಯಾದ ಹಂತದ ರಕ್ಷಣೆಯನ್ನು ಆಯ್ಕೆ ಮಾಡಲು ನಿರ್ಣಾಯಕ ಗೌಪ್ಯತಾ ಸೆಟ್ಟಿಂಗ್‌ಗಳ ಮೂಲಕ ಬಳಕೆದಾರರಿಗೆ ಮಾರ್ಗದರ್ಶನ ನೀಡುತ್ತದೆ. ಪ್ರೈವೇಸಿ ಸೆಟ್ಟಿಂಗ್ಸ್‌ನಲ್ಲಿ ‘ಸ್ಟಾರ್ಟ್ ಚೆಕಪ್’ ಮೇಲೆ ಟ್ಯಾಪ್ ಮಾಡಿದಾಗ, ಬಳಕೆದಾರರು ಸಂದೇಶಗಳು, ಕರೆಗಳು ಮತ್ತು ವೈಯಕ್ತಿಕ ಮಾಹಿತಿಯ ಸುರಕ್ಷತೆಯನ್ನು ಬಲಪಡಿಸುವ ಬಹು ಗೌಪ್ಯತಾ ಲೇಯರ್‌ಗಳ ಮೂಲಕ ನ್ಯಾವಿಗೇಟ್ ಮಾಡಬಹುದು.
ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.