Site icon Vistara News

Deepfake: ಡೀಪ್‌ಫೇಕ್‌ ಕುರಿತು ಮೋದಿ ಕಳವಳ; ಕ್ರಮ, ಎಚ್ಚರಿಕೆ ನೀಡುವಂತೆ ಚಾಟ್‌ಜಿಪಿಟಿಗೆ ಸೂಚನೆ

PM Narendra Modi

PM Narendra Modi says Deepfake a big concern, asked ChatGPT to give deepfake warning in content

ನವದೆಹಲಿ: ಡೀಪ್‌ಫೇಕ್‌ ತಂತ್ರಜ್ಞಾನದ (Deepfake) ಮೂಲಕ ನಟಿಯರ ಅಶ್ಲೀಲ ವಿಡಿಯೊಗಳು ವೈರಲ್‌ ಆಗುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಡೀಪ್‌ಫೇಕ್‌ ತಂತ್ರಜ್ಞಾನದ (Deepfake Technology) ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. “ಡೀಪ್‌ಫೇಕ್‌ ತಂತ್ರಜ್ಞಾನವು ಕಳವಳಕಾರಿಯಾಗಿದೆ. ಹಾಗಾಗಿ, ಜಾಟ್‌ಜಿಪಿಟಿಯಂತಹ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಆಧಾರಿತ ಸಂಸ್ಥೆಗಳು ಡೀಪ್‌ಫೇಕ್‌ ಬಗ್ಗೆ ಎಚ್ಚರಿಕೆ ವಹಿಸಬೇಕು. ಇಂತಹ ವಿಡಿಯೊಗಳನ್ನು ಕೂಡಲೇ ಪತ್ತೆಹಚ್ಚಿ ಜನರಿಗೆ ಜಾಗೃತಿ ಮೂಡಿಸಬೇಕು” ಎಂದು ಹೇಳಿದ್ದಾರೆ.

“ಸಾಮಾಜಿಕ ಮಾಧ್ಯಮಗಳಲ್ಲಿ ಡೀಪ್‌ಫೇಕ್‌ ವಿಡಿಯೊಗಳು ಹರಿದಾಡುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ಆಧುನಿಕ ತಂತ್ರಜ್ಞಾನವೇ ಇಂತಹ ಸಮಸ್ಯೆಗಳಿಗೆ ಪರಿಹಾರವಾಗಬೇಕು. ಚಾಟ್‌ಜಿಪಿಟಿಯು ಇಂತಹ ವಿಡಿಯೊಗಳನ್ನು ಗುರುತಿಸಿ, ಜನರಿಗೆ ಇವುಗಳನ್ನು ನಂಬಿದಿರಿ ಎಂಬ ಸಂದೇಶ ರವಾನಿಸುವ ವ್ಯವಸ್ಥೆ ಜಾರಿಗೆ ಬರಬೇಕು. ಹಾಗೆಯೇ, ಡೀಪ್‌ಫೇಕ್‌ ತಂತ್ರಜ್ಞಾನದ ದುರ್ಬಳಕೆ ಕುರಿತು ಮಾಧ್ಯಮಗಳು ಕೂಡ ಜನರಿಗೆ ಜಾಗೃತಿ ಮೂಡಿಸಬೇಕು” ಎಂದು ನರೇಂದ್ರ ಮೋದಿ ಕರೆ ನೀಡಿದ್ದಾರೆ.

ರಶ್ಮಿಕಾ ಮಂದಣ್ಣ ಡೀಪ್‌ಫೇಕ್‌ ವಿಡಿಯೊ (ಇದು ನಕಲಿ ವಿಡಿಯೊ)

ನನ್ನ ‘ಡೀಪ್‌ಫೇಕ್‌’ ವಿಡಿಯೊ ನಾನೇ ನೋಡಿದ್ದೆ

ಡೀಪ್‌ಫೇಕ್‌ ವಿಡಿಯೊ ಅವಾಂತರದ ಅನುಭವವನ್ನು ನರೇಂದ್ರ ಮೋದಿ ಅವರೇ ಖುದ್ದು ಹಂಚಿಕೊಂಡಿದ್ದಾರೆ. “ಡೀಪ್‌ಫೇಕ್‌ ವಿಡಿಯೊ ಅಪಾಯಕಾರಿಯಾಗಿದೆ. ನಾನೇ ಗರ್ಬಾ ನೃತ್ಯವನ್ನು ಮಾಡಿದ ಡೀಪ್‌ಫೇಕ್‌ ವಿಡಿಯೊ ವೈರಲ್‌ ಆಗಿತ್ತು. ಆ ವಿಡಿಯೊವನ್ನು ನಾನೇ ನೋಡಿದೆ. ಇಂತಹ ಡೀಪ್‌ಫೇಕ್‌ ವಿಡಿಯೊಗಳು ದೇಶದ ವ್ಯವಸ್ಥೆಯನ್ನೇ ಹಾಳು ಮಾಡುತ್ತಿವೆ” ಎಂದು ಹೇಳಿದರು.

ಮೋದಿಯನ್ನೇ ಹೋಲುವ ವ್ಯಕ್ತಿಯಿಂದ ಗರ್ಬಾ ಡಾನ್ಸ್ (ಇದು ಡೀಪ್‌ಫೇಕ್‌ ಅಲ್ಲ)

ಕನ್ನಡದ ನಟಿ ರಶ್ಮಿಕಾ ಮಂದಣ್ಣ, ಬಾಲಿವುಡ್‌ ನಟಿಯರಾದ ಕತ್ರಿನಾ ಕೈಫ್‌ ಹಾಗೂ ಕಾಜೋಲ್‌ ಅವರ ಡೀಪ್‌ಫೇಕ್‌ ವಿಡಿಯೊಗಳು ವೈರಲ್‌ ಆಗಿರುವುದು ದೇಶಾದ್ಯಂತ ಸಂಚಲನ ಮೂಡಿಸಿದೆ. ಮೊದಲಿಗೆ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್‌ ವಿಡಿಯೊ ವೈರಲ್‌ ಆಗಿದ್ದು ಆತಂಕ ಸೃಷ್ಟಿಸಿತ್ತು. “ಗೆಟ್‌ ರೆಡಿ ವಿತ್‌ ಮಿ’ ಎನ್ನುವ ಟಿಕ್‌ಟಾಕ್‌ನ ಟ್ರೆಂಡ್‌ಗಾಗಿ ಇಂಗ್ಲಿಷ್‌ ಸೋಷಿಯಲ್‌ ಮೀಡಿಯಾ ಇನ್‌ಫ್ಲುಯೆನ್ನರ್‌ ರೋಸಿ ಬ್ರಿನ್‌ ಅವರ ವಿಡಿಯೊಗೆ ಕಾಜೋಲ್‌ ಅವರ ಮುಖವನ್ನು ಡೀಪ್‌ಫೇಕ್‌ ಮಾಡಲಾಗಿದೆ. ಇದು ತಮ್ಮದೇ ವಿಡಿಯೊ ಎಂದು ರೋಸಿ ಅವರು ಖಚಿತಪಡಿಸಿದ್ದರು. ಎಂದು ‘ದಿ ಕ್ಮಿಂಟ್‌’ ಹಾಗೂ “ಬೂಮ್‌ಲೈವ’ ಫ್ಯಾಕ್ಟ್‌ಚೆಕ್‌ ಪ್ರಕಟಿಸಿವೆ. ಕಾಜೋಲ್‌ ನಟಿ ಕ್ಯಾಮೆರಾದಲ್ಲಿ ತನ್ನ ಡ್ರೆಸ್ ಬದಲಾಯಿಸುತ್ತಿರುವಂತೆ ಕಾಣುವಂತೆ ಮಾಡಲಾಗಿದೆ.

ಇದನ್ನೂ ಓದಿ: Deepfake Technology: ರಶ್ಮಿಕಾ ಡೀಪ್‌ಫೇಕ್ ವಿಚಾರವಾಗಿ ಬೆಂಬಲಕ್ಕೆ ನಿಂತ ಗಾಯಕಿ ಚಿನ್ಮಯಿ ಶ್ರೀಪಾದ

ಇತ್ತೀಚೆಗೆ, ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವೀಡಿಯೊ ಬಗ್ಗೆ ನಟರಾದ ಅಮಿತಾಭ್‌ ಬಚ್ಚನ್, ಕೀರ್ತಿ ಸುರೇಶ್, ಮೃಣಾಲ್ ಠಾಕೂರ್, ಇಶಾನ್ ಖಟ್ಟರ್ ಮತ್ತು ನಾಗ ಚೈತನ್ಯ ಸೇರಿದಂತೆ ಅನೇಕ ಸೆಲೆಬ್ರಿಟಿಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆಂಗ್ಲೋ ಇಂಡಿಯನ್ ಯುವತಿ ಝರಾ ಪಟೇಲ್ (Zara Patel) ಅವರ ಹಾಟ್ ವಿಡಿಯೊಗೆ ರಶ್ಮಿಕಾ ಮಂದಣ್ಣ ಮುಖ ಅಂಟಿಸಿ ವೈರಲ್ ಮಾಡಲಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version