ನವದೆಹಲಿ: ಪೋಕೋ ಸಿ50(Poco C50 Smartphone) ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಮಂಗಳವಾರ ಲಾಂಚ್ ಆಗಿದೆ. ಈ ಸ್ಮಾರ್ಟ್‌ಫೋನ್ ಬೆಲೆ ಗಮನಿಸಿದರೆ, ಇದೊಂದು ಬಜೆಟ್ ಹಾಗೂ ಎಂಟ್ರಿ ಲೇವಲ್ ಫೋನ್ ಎಂಬುದು ಪಕ್ಕಾ ಆಗುತ್ತದೆ. ವಾಟರ್‌ಡ್ರಾಪ್-ಸ್ಟೈಲ್ ನಾಚ್ ಡಿಸ್‌ಪ್ಲೇ ಮತ್ತು ಮೀಡಿಯಾಟೆಕ್ ಹೆಲಿಯೋ ಎ22 ಪ್ರೊಸೆಸರ್ ಈ ಫೋನ್‌ನಲ್ಲಿದೆ. ಈ ಫೋನ್ ಎರಡು ಬಣ್ಣಗಳ ಆಯ್ಕೆಯಲ್ಲಿ ಮಾರಾಟಕ್ಕೆ ಸಿಗಲಿದೆ.
ಭಾರತೀಯ ಮಾರುಕಟ್ಟೆಯಲ್ಲಿ 2 ಜಿಬಿ RAM ಮತ್ತು 32 ಜಿಬಿ ಸ್ಟೋರೇಜ್ ವೇರಿಯಂಟ್ ಫೋನ್ ಬೆಲೆ 6,499 ರೂ. ಇದ್ದರೆ, 3ಜಿಬಿ RAM ಮತ್ತು 32 ಜಿಬಿ ಸ್ಟೋರೇಜ್ ಫೋನ್ ಬೆಲೆ 7,299 ರೂ. ಇರಲಿದೆ. ಮಂಗಳವಾರ ಬಿಡುಗಡೆಯಾಗಿರುವ ಈ ಫೋನ್ ಮಾರಾಟವು ಜನವರಿ 10ರಿಂದ ಆರಂಭವಾಗಲಿದೆ. ಆನ್‌ಲೈನ್‌ನಲ್ಲಿ ಫ್ಲಿಪ್‌ಕಾರ್ಟ್ ಮೂಲಕ ಈ ಫೋನ್ ಖರೀದಿಸಬಹುದು.
ಆಂಡ್ರಾಯ್ಡ್ 12 ಆಧರಿತವಾಗಿರುವ ಈ ಪೋಕೋ ಸಿ50 ಫೋನ್, 65.2 ಇಂಚ್ ಎಚ್‌ಡಿಪ್ಲಸ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. octa-core MediaTek Helio A22 SoC ಇದ್ದು, 3ಜಿಬಿ LPDDR4X RAMನೊಂದಿಗೆ ಸಂಯೋಜಿತಗೊಂಡಿದೆ. ಎಐ ಬೆಂಬಲಿತ ಹಿಂಬದಿಯಲ್ಲಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿಗಾಗಿ ಕಂಪನಿಯು ಫೋನ್ ಮುಂಭಾಗದಲ್ಲಿ 5 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಿದೆ. ಫೋನ್ ಜತೆಗೆ ದೊರೆಯುವ ಸ್ಟೋರೇಜ್ ಸಾಮರ್ಥ್ಯವನ್ನು ಮೈಕ್ರೋಎಸ್‌ಡಿ ಕಾರ್ಡ್ ಮೂಲಕ 512 ಜಿಬಿವರೆಗೂ ಹೆಚ್ಚಿಸಿಕೊಳ್ಳಬಹುದು.
ಎಂಟ್ರಿಲೇವಲ್ ಫೋನ್ ಆದರೂ ಕಂಪನಿಯು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒದಗಿಸಿದೆ. ಅಲ್ಲದೇ ಈ ಬ್ಯಾಟರಿ 10 ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ. ಫೀಚರ್ ಫೋನ್‌ಗಳಿಂದ ಸ್ಮಾರ್ಟ್‌ಫೋನ್‌ಗೆ ಅಪ್‌ಗ್ರೇಡ್ ಆಗಲು ಹೊರಟಿರುವವರಿಗೆ ಈ ಫೋನ್ ಅತ್ಯುತ್ತಮ ಆಯ್ಕೆಯಾಗಬಹುದು.
ಇದನ್ನೂ ಓದಿ | USB Type-C Charger | 2025ರಿಂದ ಸ್ಮಾರ್ಟ್‌ಫೋನ್‌ಗಳಿಗೆ ಯುಎಸ್‌ಬಿ ಟೈಪ್-ಸಿ ಚಾರ್ಜರ್ ಕಡ್ಡಾಯ