ನವದೆಹಲಿ: ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಶವೊಮಿ, ಪೋಕೋ (Poco) ಬ್ರ್ಯಾಂಡ್ ಹೆಸರಿನಲ್ಲಿ ಮತ್ತೊಂದು ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಯಲ್ಲಿ ಲಾಂಚ್ ಮಾಡಲಿದೆ. ಡಿಸೆಂಬರ್ 22ರಂದು ಪೋಕೋ ಎಂ6 5ಜಿ(Poco M6 5G) ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ (Indian Market) ಬಿಡುಗಡೆಯಾಗಲಿದೆ. ಕಂಪನಿಯು ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಾದ ಮಾಹಿತಿಯನ್ನು ಹಂಚಿಕೊಂಡಿದೆ
ಪೋಕೊ ಪೋಸ್ಟರ್ ಅನ್ನು ಹಂಚಿಕೊಂಡಿದ್ದು, ಸ್ಮಾರ್ಟ್‌ಫೋನ್ ವಿನ್ಯಾಸವನ್ನು ಬಹಿರಂಗಪಡಿಸಿದೆ. ಪೋಕೋ ಎಂ6 5ಜಿ ಫೋನ್, 50 ಮೆಗಾಪಿಕ್ಸೆಲ್ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಘಟಕದೊಂದಿಗೆ ಕಂಡುಬರುತ್ತದೆ. ಇದು ಮುಂಭಾಗದಲ್ಲಿ ವಾಟರ್‌ಡ್ರಾಪ್-ಶೈಲಿಯ ಡಿಸ್ಪ್ಲೇ ನಾಚ್ ಅನ್ನು ಸಹ ಹೊಂದಿದೆ. ಕಳೆದ ವರ್ಷ ಪ್ರಾರಂಭವಾದ ಪೋಟೋ ಎಂ5 ಉತ್ತರಾಧಿಕಾರಿಯಾಗಿ ಪೋಕೋ ಎಂ6 5ಜಿ ಸ್ಮಾರ್ಟ್‌ಫೋನ್ ಅನ್ನು ಪರಿಗಣಿಸಬಹುದು. ಆದರೆ, ಇದು ರೆಡ್‌ಮಿ 13ಸಿ 5ಜಿ ರಿಬ್ರ್ಯಾಂಡ್ ಆಗಿ ಬರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
For those who keep it real, We have #TheReal5GDisrupter landing on 22/12/23
— POCO India (@IndiaPOCO) December 19, 2023
Keep your eyes peeled👀#POCOIndia #POCO #POCOM65G pic.twitter.com/fh7jPj2Web
ಪೋಕೋ ತನ್ನ ಅಧಿಕೃತ ಎಕ್ಸ್ ವೇದಿಕೆಯ ಖಾತೆಯ ಮೂಲಕ ಪೋಕೋ ಎಂ6 5ಜಿ ಸ್ಮಾರ್ಟ್‌ಫೋನ್ ಬಿಡುಗಡೆ ದಿನಾಂಕವನ್ನು ಡಿಸೆಂಬರ್ 22 ಎಂದು ಘೋಷಿಸಿದೆ. ಫೋನ್ ಲಾಂಚ್ ಕಾರ್ಯಕ್ರಮವು ಮಧ್ಯಾಹ್ನ 12:00 ಗಂಟೆಗೆ ನಡೆಯಲಿದೆ. ಕಂಪನಿಯು ಹಂಚಿಕೊಂಡ ಟೀಸರ್ ಹ್ಯಾಂಡ್‌ಸೆಟ್ ಡಿಸ್ಪ್ಲೇಯಲ್ಲಿ ವಾಟರ್‌ಡ್ರಾಪ್ ಶೈಲಿಯ ನಾಚ್‌ನೊಂದಿಗೆ ಬರುತ್ತದೆ ಎಂದು ಸೂಚಿಸುತ್ತದೆ. ಇದು 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಒಳಗೊಂಡಿರುವ ಎಐ ಬೆಂಬಲಿತ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಘಟಕವನ್ನು ತೋರಿಸುತ್ತದೆ.
ಈ ಮಧ್ಯೆ, ಫ್ಲಿಪ್‌ರಕಾರ್ಟ್ ಕೂಡ ಈ ಫೋನ್ ಬಿಡುಗಡೆಗಾಗಿ ಪ್ರತ್ಯೇಕ ಪುಟವನ್ನು ರಚಿಸಿದೆ. ಈ ಆನ್‌ಲೈನ್ ಮಾರುಕಟ್ಟೆ ಜಾಲತಾಣವು, ಪೋಕೋ ಎಂ6 5ಜಿ ಸ್ಮಾರ್ಟ್‌ಫೋನ್ ಕಪ್ಪು ಮತ್ತು ಬೆಳ್ಳಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ ಎಂದು ಖಚಿತಪಡಿಸುತ್ತದೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಲಾಂಚ್ ಪೋಕೋ ಎಂ5 ಫೋನ್‌ಗೆ ಡಿಸೆಂಬರ್ 22ರಂದು ಬಿಡುಗಡೆಯಾಗಲಿರುವ ಎಂ6 ಉತ್ತರಾಧಿಕಾರಿಯಾಗಿರಲಿದೆ. ಅಂದರೆ, ನೆಕ್ಸ್ಟ್ ವರ್ಷನ್ ಸ್ಮಾರ್ಟ್‌ಫೋನ್ ಆಗಿರಲಿದೆ. ಆದರೆ, ರೆಡ್‌ಮಿ 13 ಸಿ 5ಜಿ ಸ್ಮಾರ್ಟ್‌ಫೋನ್‌ನ ರಿಬ್ರ್ಯಾಂಡ್ ಆಗಿ ಪೋಕೋ ಎಂ6 5ಜಿ ಸ್ಮಾರ್ಟ್‌ಫೋನ್ ಲಾಂಚ್ ಮಾಡಲಾಗುತ್ತಿದೆ ಎಂದೂ ಹೇಳಲಾಗುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ 4 ಜಿಬಿ RAM ಮತ್ತು 12 ಜಿಬಿ ಸ್ಟೋರೇಜ್ ಹೊಂದಿದ್ದ ರೆಡ್‌ಮಿ 13 ಸಿ 5ಜಿ ಸ್ಮಾರ್ಟ್‌ಫೋನ್ 9999 ರೂ. ಇತ್ತು.
ರೆಡ್‌ಮಿ 13ಸಿ 5ಜಿ ಸ್ಮಾರ್ಟ್‌ಫೋನ್ ಫೀಚರ್‌ಗಳೇ ಈ ಪೋಕೋ ಎಂ6 5ಜಿ ಸ್ಮಾರ್ಟ್‌ಫೋನ್‌ನಲ್ಲೂ ಇರಲಿವೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ರೆಡ್‌ಮಿ 13 5ಜಿ ಫೋನ್, ರಿಫ್ರೆಶ್ ದರದೊಂದಿಗೆ 6.74-ಇಂಚಿನ LCD ಡಿಸ್ಪ್ಲೇ ಹೊಂದಿದೆ. ಇದು ಮೀಡಿಯಾ ಟೆಕ್‌ನ ಡೈಮೆನ್ಸಿಟಿ 6100+ SoCಯಿಂದ 8 ಜಿಬಿ RAM ಮತ್ತು 256 ಜಿಬಿವರೆಗಿನ ಸಂಗ್ರಹಣೆಯೊಂದಿಗೆ ಜೋಡಿಸಲ್ಪಟ್ಟಿದೆ. ಇದು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು ಅದು 50-ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾವನ್ನು ಒಳಗೊಂಡಿದೆ, ಜೊತೆಗೆ ಡೆಪ್ತ್ ಸೆನ್ಸರ್ ಕೂಡ ಇದೆ. ಇದು 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಫೋನ್ 18W ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಒಳಗೊಂಡಿದೆ.
ಈ ಸುದ್ದಿಯನ್ನೂ ಓದಿ: Smartwatch Side Effects: ಸ್ಮಾರ್ಟ್‌ವಾಚ್ ಎಂಬ ಮತ್ತೊಂದು ಗ್ಯಾಜೆಟ್ ಭೂತ!: ಇದರ ಸೈಡ್ ಎಫೆಕ್ಟ್ ಏನು?