ನವದೆಹಲಿ: ಜನಪ್ರಿಯ ಕಿಂಡಲ್ ಆ್ಯಪ್‌ನಲ್ಲಿ (kindle app) ಪೋರ್ನ್ ಫೋಟೋಗಳು ಮಕ್ಕಳಿಗೆ ಸುಲಭವಾಗಿ ಅಕ್ಸೆಸ್ ಆಗುತ್ತಿರುವ ಬಗ್ಗೆ ಆ್ಯಪಲ್ ಹಾಗೂ ಅಲ್ಫಾಬೆಟ್ ಕಂಪನಿಗಳು ಆತಂಕ ವ್ಯಕ್ತಪಡಿಸಿವೆ. ಅಲ್ಲದೇ, ಕಂಟೆಂಟ್ ನಿಯಂತ್ರಣವನ್ನು ಮತ್ತಷ್ಟು ಬಲಪಡಿಸಬೇಕೆಂದು ಕಿಂಡಲ್ ಆ್ಯಪ್ ಒಡೆತನದ ಅಮೆಜಾನ್ ಕಂಪನಿಗೆ ಒತ್ತಾಯಿಸಿವೆ.
ಕಿಂಡಲ್ ಅಪ್ಲಿಕೇಶನ್ ಮೂಲಕ ಬಳಕೆದಾರರ ಸಾಮರ್ಥ್ಯದ ಬಗ್ಗೆ ಮೂರು ಕಂಪನಿಗಳ ವಕ್ತಾರರಿಗೆ ರಾಯಿಟರ್ಸ್ ಕೇಳಿದ ಪ್ರಶ್ನೆಗಳಿಂದಾಗಿ ಈ ಎಚ್ಚರಿಕೆಗಳು ಹೊರ ಬಿದ್ದಿವೆ. ಯುವತಿಯ 75 ಹಾಟ್ ಸಂಪೂರ್ಣ ನಗ್ನ ಫೋಟೋಗಳು, ರಿಯಲ್ ಎರೋಟಿಕಾ: ಹವ್ಯಾಸಿ ನೇಕೆಡ್ ಗರ್ಲ್ಸ್ ಇತ್ಯಾದಿ ಶೀರ್ಷೆಕೆಗಳ ಮೂಲಕ ಕಾಣಿಸಿಕೊಂಡ ಫೋಟೋಗಳಲ್ಲಿ ಮಹಿಳೆಯರು ಮತ್ತು ಪುರುಷರು ಲೈಂಗಿಕ ಕ್ರಿಯೆಗಳಲ್ಲಿ ತೊಡಗಿರುವುದನ್ನು ನೋಡಬಹುದಾಗಿದೆ.
ಇದನ್ನೂ ಓದಿ: Amazon layoffs : ಅಮೆಜಾನ್‌ನಲ್ಲಿ ಉದ್ಯೋಗ ಕಡಿತ ಆರಂಭ, ಜಾಹೀರಾತು ವಿಭಾಗಕ್ಕೆ ಎಫೆಕ್ಟ್
ಅಮೆಜಾನ್‌ನ ಕಿಂಡಲ್ ಇ-ಬುಕ್ ಚಂದಾದಾರಿಕೆ ಸೇವೆಯ ಮೂಲಕ ತಮ್ಮ ಹದಿಹರೆಯದ ಮಕ್ಕಳು ಮಟೀರಿಯಲ್ಸ್ ಡೌನ್‌ಲೋಡ್ ಮಾಡಿದ್ದಾರೆ. ಕಿಂಡಲ್ ಐಫೋನ್ ಅಪ್ಲಿಕೇಶನ್‌ನಲ್ಲಿ ಪೂರ್ಣ-ಬಣ್ಣದ ಫೋಟೋಗಳನ್ನು ವೀಕ್ಷಿಸಿದ್ದಾರೆ ಎಂದು ಎರಡು ಕುಟುಂಬಗಳು ರಾಯಿಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದರು. ಆಗ ಸಂಸ್ಥೆಯು ಕಿಂಡೆಲ್ ಆ್ಯಪ್ ಸಮಸ್ಯೆಯ ಬಗ್ಗೆ ತಿಳಿದುಕೊಂಡಿತು. ಅಶ್ಲೀಲ ಸಾಹಿತ್ಯವು ಅಮೆಜಾನ್ ಕಿಂಡಲ್ ಆನ್‌ಲೈನ್ ಸ್ಟೋರ್ ಮೂಲಕವೂ ಲಭ್ಯವಿದೆ ಮತ್ತು ಕಿಂಡಲ್ ಅಪ್ಲಿಕೇಶನ್‌ನ ಆವೃತ್ತಿಗಳಲ್ಲಿ ವೀಕ್ಷಿಸಬಹುದಾಗಿದೆ ಎಂದು ಗೊತ್ತಾಗಿದೆ.