ನವ ದೆಹಲಿ: ಬಹು ನಿರೀಕ್ಷೆಯ ರಿಯಲ್ 10 ಪ್ರೋ 5ಜಿ ಸರಣಿ (Realme 10 Pro) ಸ್ಮಾರ್ಟ್‌ಫೋನ್ ಭಾರತದಲ್ಲಿ ಡಿಸೆಂಬರ್ 8ರಂದು ಬಿಡುಗಡೆಯಾಗಲಿವೆ ಎಂದು ರಿಯಲ್‌ಮಿ ಕಂಪನಿ ಖಚಿತಪಡಿಸಿದೆ. ಇತ್ತೀಚಗೆಷ್ಟೇ ಕಂಪನಿಯು ರಿಯಲ್‌ಮಿ 10 ಪ್ರೋ ಸರಣಿ ಸ್ಮಾರ್ಟ್‌ಫೋನ್‌ಗಳನ್ನು ಚೀನಾ ಮಾರುಕಟ್ಟೆಗೆ ಲಾಂಚ್ ಮಾಡಿತ್ತು. ಈಗ ಭಾರತೀಯ ಮಾರುಕಟ್ಟೆಗೆ ರಿಯಲ್‌ಮಿ 10 ಪ್ರೋ ಮತ್ತು ರಿಯಲ್‌ಮಿ 10 ಪ್ರೋ ಪ್ಲಸ್ ಸ್ಮಾರ್ಟ್‌ಫೋನ್‌ಗಳ್ನು ಬಿಡುಗಡೆ ಮಾಡಲು ಮುಂದಾಗಿದೆ. ಈ ಫೋನುಗಳ ಬೆಲೆ 25 ಸಾವಿರ ರೂ.ನಿಂದ ಆರಂಭವಾಗಲಿವೆ.
ಭಾರತದಲ್ಲಿ ಬಿಡುಗಡೆಯಾಗಲಿರುವ ರಿಯಲ್‌ಮಿ 10 ಪ್ರೋ ಸ್ಮಾರ್ಟ್‌ಫೋನ್‌ನಲ್ಲಿ ಮೀಡಿಯಾಟೆಕ್ ಡಿಮೆನ್ಸಿಟಿ 1080 ಚಿಪ್‌ಸೆಟ್ ಇದ್ದರೆ, ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯವಿರುವ ಫೋನುಗಳಲ್ಲಿ ಮೀಡಿಯಾಟೆಕ್ ಡಿಮೆನ್ಸಿಟಿ 920 ಚಿಪ್‌ಸೆಟ್ ಇರಲಿದೆ ಎಂದು ತಿಳಿದು ಬಂದಿದೆ. ಮೀಡಿಯಾಟೆಕ್ ಡಿಮೆನ್ಸಿಟಿ 920 ಚಿಪ್‌ಸೆಟ್ ಅನ್ನು ಕಂಪನಿಯು ಕಳೆದ ವರ್ಷವಷ್ಟೇ ಲಾಂಚ್ ಮಾಡಿತ್ತು.
ರಿಯಲ್‌ಮಿ 10 ಪ್ರೋ ಪ್ಲಸ್ ಸ್ಮಾರ್ಟ್‌ಫೋನ್ ಸಾಕಷ್ಟು ವಿಶಿಷ್ಟ ಫೀಚರ್ಸ್‌ಗಳನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ 6.7 ಇಂಚ್ ಫುಲ್ ಎಚ್‌ಡಿ ಪ್ಲಸ್ ಡಿಸ್‌ಪ್ಲೇ ಇರಲಿದೆ. ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್ ಆಧರಿತ ರಿಯಲ್‌ಮಿ ಯುಐ ಇರಲಿದೆ. ಈ ಫೋನ್ 5ಜಿ ಸೇವೆಗೆ ಸಪೋರ್ಟ್ ಮಾಡುತ್ತದೆ. 12 ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್ ಸಾಮರ್ಥ್ಯವಿರಲಿದೆ. ಮತ್ತೊಂದು ವೆರಿಯೆಂಟ್ 256 ಜಿಬಿ ಸ್ಟೋರೇಜ್ ಹೊಂದಿರಲಿದೆ.
ಫೋನ್ ಹಿಂಬದಿಯಲ್ಲಿ ಟ್ರಿಪಲ್ ಕ್ಯಾಮೆರಾಗಳು ಇರಲಿವೆ. 108 ಮೆಗಾ ಪಿಕ್ಸೆಲ್ ಮುಖ್ಯ ಕ್ಯಾಮೆರಾ ಆಗಿರಲಿದೆ.ಅದೇ ರೀತಿ, ಫೋನ್ ಮುಂಭಾಗದಲ್ಲಿ 16 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಕಂಪನಿ ನೀಡಿದೆ. 500mAh ಬ್ಯಾಟರಿ ಇದ್ದು, ಇದು 67 ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ.
ಇದನ್ನು ಓದಿ | Realme Offers | ರಿಯಲ್‌ಮಿ ಫೋನ್, ಲ್ಯಾಪ್‌ಟ್ಯಾಪ್ ಖರೀದಿಗೆ 16 ಸಾವಿರ ರೂ.ವರೆಗೆ ಆಫರ್ಸ್!