Site icon Vistara News

Realme Smartphone | ರಿಯಲ್‌ಮಿ 10 ಪ್ರೋ, ರಿಯಲ್‌ಮಿ 10 ಪ್ರೋ ಪ್ಲಸ್ ಫೋನ್ ಲಾಂಚ್, ಬೆಲೆ ಎಷ್ಟು?

Realme 10 pro 5G phone launched in India

ನವದೆಹಲಿ: ಭಾರತದ ಅತ್ಯಂತ ಹೆಚ್ಚು ವಿಶ್ವಸನೀಯ ಟೆಕ್ ಬ್ರ್ಯಾಂಡ್ ಆಗಿರುವ ಮತ್ತು 5ಜಿ ಬೆಂಬಲವಿರುವ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿರುವ ಭಾರತದ ಮೊದಲ ಬ್ರ್ಯಾಂಡ್ ಆಗಿರುವ ರಿಯಲ್‌ಮಿ(Realme Smartphone), ಮತ್ತೆ ಎರಡು ಸ್ಮಾರ್ಟ್‌ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ರಿಯಲ್‌ಮಿ 10 ಪ್ರೊ ಪ್ಲಸ್ 5ಜಿ (Realme 10 Pro+ 5G) ಮತ್ತು ರಿಯಲ್‌ಮಿ 10 ಪ್ರೊ 5ಜಿ (Realme 10 Pro 5G) ಫೋನ್‌ಗಳು ಆಕರ್ಷಕ ವಿನ್ಯಾಸ, ಅದ್ಭುತ ಡಿಸ್‌ಪ್ಲೇ, ಫ್ಲ್ಯಾಗ್‌ಶಿಪ್ ಕ್ಯಾಮೆರಾ, ಶಕ್ತಿಶಾಲಿ 5ಜಿ ಪ್ರೊಸೆಸರ್‌ಗಳನ್ನು ಒಳಗೊಂಡಿದ್ದು, ಆಂಡ್ರಾಯ್ಡ್ 13 ಆಧಾರಿತ ರಿಯಲ್‌ಮಿ ಯುಐ 4.0 ಕಾರ್ಯಾಚರಣಾ ವ್ಯವಸ್ಥೆಯೊಂದಿಗೆ ಬಂದಿವೆ.

ರಿಯಲ್‌ಮಿ 10 ಪ್ರೋ ಪ್ಲಸ್
ರಿಯಲ್‌ಮಿ 10 ಪ್ರೊ ಪ್ಲಸ್ 5ಜಿ ಫೋನ್, ಫ್ಲ್ಯಾಗ್‌ಶಿಪ್ ಮಟ್ಟದ 120Hz ಬಾಗಿದ ಅಂಚಿನ ಡಿಸ್‌ಪ್ಲೇ (ಸ್ಕ್ರೀನ್) ಇರುವ, ಭಾರತದಲ್ಲೇ ಮೊದಲ ಬಾರಿಗೆ 2160Hz ಡಿಮ್ಮಿಂಗ್ ವೈಶಿಷ್ಟ್ಯವುಳ್ಳ ಫೋನ್ ಆಗಿದೆ. ಡೈಮೆನ್ಸಿಟಿ 1080 5ಜಿ ಚಿಪ್‌ಸೆಟ್, ತೀರಾ ಹಗುರವಾದ ಫೋನ್ (173 ಗ್ರಾಂ), ಭರ್ಜರಿ 5000mAh ಬ್ಯಾಟರಿ, ಫ್ಲ್ಯಾಗ್‌ಶಿಪ್ ಮಟ್ಟದ 108MP ಪ್ರೋ-ಲೈಟ್ ಕ್ಯಾಮೆರಾ ಇರುವ ರಿಯಲ್‌ಮಿ 10 ಪ್ರೊ ಪ್ಲಸ್ 5ಜಿ ಫೋನ್, ಮೂರು ಬಣ್ಣಗಳಲ್ಲಿ (ಹೈಪರ್‌ಸ್ಪೇಸ್ ಗೋಲ್ಡ್, ಡಾರ್ಕ್ ಮ್ಯಾಟರ್ ಹಾಗೂ ನೆಬ್ಯುಲಾ ಬ್ಲೂ), ಎರಡು ಸ್ಟೋರೇಜ್ ಮಾದರಿಗಳಲ್ಲಿ ಮಾರಾಟಕ್ಕೆ ಸಿಗಲಿದೆ. 6GB+128GB ಮಾದರಿಗೆ 24,999 ರೂ. ಹಾಗೂ 8GB+128GB ಮಾದರಿಯ ಬೆಲೆ 25,999 ರೂ. ಇದೆ.

ಮೊದಲ ಮಾರಾಟವು ಡಿಸೆಂಬರ್ 14ರಂದು ಮಧ್ಯಾಹ್ನ 12ರಿಂದ ನಡೆಯಲಿದೆ. ರಿಯಲ್‌ಮಿ ಡಾಟ್ ಕಾಂ, ಫ್ಲಿಪ್‌ಕಾರ್ಟ್ ಹಾಗೂ ಸಮೀಪದ ಮಳಿಗೆಗಳಲ್ಲಿ ದೊರೆಯಲಿದೆ. ರಿಯಲ್‌ಮಿ 10 ಪ್ರೊ ಪ್ಲಸ್ 5ಜಿ (6ಜಿಬಿ+128ಜಿಬಿ) ಆವೃತ್ತಿಗೆ ಬ್ಯಾಂಕ್ ಕೊಡುಗೆಗಳಿಂದ 1000 ರೂ.ವರೆಗೆ ರಿಯಾಯಿತಿ ಹಾಗೂ 6 ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ ಇಎಂಐ ಕೂಡ ಲಭ್ಯವಿದೆ.

ರಿಯಲ್‌ಮಿ 10 Pro 5G
ರಿಯಲ್‌ಮಿ 10 ಪ್ರೊ 5ಜಿ ಸಾಧನದಲ್ಲಿ 120Hz ಅಂಚುಗಳಿಲ್ಲದ, ಎಂದರೆ 1 ಮಿಮೀ ಅಲ್ಟ್ರಾ-ಸ್ಲಿಮ್ ಸೈಡ್ ಬೆಝೆಲ್‌ಗಳಿದ್ದು, RAZR ತಂತ್ರಜ್ಞಾನದ ಬೆಂಬಲವಿದೆ. ಇದರಲ್ಲಿ ಶಕ್ತಿಶಾಲಿಯಾದ ಸ್ನ್ಯಾಪ್‌ಡ್ರ್ಯಾಗನ್ 695 5ಜಿ ಪ್ರೊಸೆಸರ್ ಇದ್ದು, 108MP ಪ್ರೊಲೈಟ್ ಕ್ಯಾಮೆರಾ, 16MP ಸೆಲ್ಫೀ ಕ್ಯಾಮೆರಾ ಇದೆ. ರಿಯಲ್‌ಮಿ 10 ಪ್ರೊ 5ಜಿ ಮೂರು ಬಣ್ಣಗಳಲ್ಲಿ (ಹೈಪರ್‌ಸ್ಪೇಸ್ ಗೋಲ್ಡ್, ಡಾರ್ಕ್ ಮ್ಯಾಟರ್, ನೆಬ್ಯುಲಾ ಬ್ಲೂ) ಮತ್ತು ಎರಡು ಸ್ಟೋರೇಜ್ ಮಾದರಿಗಳಲ್ಲಿ ಲಭ್ಯವಿದೆ. 6GB+128GB ಮಾದರಿ ಬೆಲೆ 18,999 ರೂ. ಹಾಗೂ 8GB+128GB ಮಾದರಿಯ ಬೆಲೆ 19,999 ರೂ. ಇದೆ. ಇದರ ಮೊದಲ ಮಾರಾಟ ಪ್ರಾರಂಭವಾಗುವುದು ಡಿಸೆಂಬರ್ 16ರಂದು ಮಧ್ಯಾಹ್ನ 12ರಿಂದ. ರಿಯಲ್‌ಮಿ ಡಾಟ್ ಕಾಂ, ಫ್ಲಿಪ್‌ಕಾರ್ಟ್ ಮತ್ತು ನಿಮ್ಮ ಸಮೀಪದ ಮಳಿಗೆಗಳಲ್ಲಿ ಈ ಫೋನ್ ದೊರೆಯುತ್ತದೆ.

ಫೋನ್‌ಗಳಿಗೆ ಜಾಗತಿಕ ಮೆಚ್ಚುಗೆ
ಎರಡು ಫೋನ್‌ಗಳ ಬಿಡುಗಡೆ ಸಂದರ್ಭ ಮಾತನಾಡಿದ ರಿಯಲ್‌ಮಿ ಇಂಡಿಯಾದ ಸಿಇಒ, ರಿಯಲ್‌ಮಿ ವಿಪಿ ಹಾಗೂ ರಿಯಲ್‌ಮಿ ಇಂಟರ್ನ್ಯಾಷನಲ್ ಬಿಸಿನೆಸ್ ಗ್ರೂಪ್‌ನ ಅಧ್ಯಕ್ಷರೂ ಆಗಿರುವ ಮಾಧವ ಸೇಠ್, “ಈಗ ಬಿಡುಗಡೆಯಾಗಿರುವ ಎರಡೂ ಫೋನ್‌ಗಳಲ್ಲಿ ಫ್ಲ್ಯಾಗ್‌ಶಿಪ್ ಮಟ್ಟದ ಡಿಸ್‌ಪ್ಲೇ ತಂತ್ರಜ್ಞಾನಗಳು ಮತ್ತು ಶಕ್ತಿಶಾಲಿ 5ಜಿ ಪ್ರೊಸೆಸರ್‌ಗಳಿದ್ದು, ಭಾರತದಲ್ಲಿ 5ಜಿಯನ್ನು ಜನರಿಗೆ ತಲುಪಿಸುವ ನಮ್ಮ ಬದ್ಧತೆಯನ್ನು ದೃಢಪಡಿಸುತ್ತದೆ. ಜಾಗತಿಕವಾಗಿ ನಾವು ಸಂಖ್ಯಾ ಸರಣಿಯ 5 ಕೋಟಿ ಬಳಕೆದಾರರ ಸಂಖ್ಯೆಯನ್ನು ತಲುಪಿದ್ದು, ಅದರಲ್ಲಿ 3 ಕೋಟಿ ಬಳಕೆದಾರರು ಭಾರತೀಯರು ಮತ್ತು ನಮ್ಮ ಬಳಕೆದಾರರು ರಿಯಲ್‌ಮಿ 10 ಪ್ರೊ ಸರಣಿಯ 5ಜಿ ಫೋನ್‌ಗಳನ್ನು ಕೂಡ ಅದ್ಭುತವಾಗಿ ಬರಮಾಡಿಕೊಳ್ಳುವರೆಂಬ ವಿಶ್ವಾಸ ನಮಗಿದೆ” ಎಂದರು.

ಜಿಯೋ ಜತೆ ಕೈಜೋಡಿಸಿದ ರಿಯಲ್‌ಮಿ
ಈಗಾಗಲೇ ರಿಯಲ್‌ಮಿ ಕಂಪನಿಯು ಜಿಯೋ ಜೊತೆಗೆ ಕೈಜೋಡಿಸಿ 5ಜಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಸಾಕಷ್ಟು ಆವಿಷ್ಕಾರಗಳಲ್ಲಿ ಭಾಗಿಯಾಗಿದೆ. ಜಿಯೋ ಜೊತೆ ಪಾಲುದಾರಿಕೆಯೊಂದಿಗೆ ಟ್ರೂ 5ಜಿ ಅನುಭವಕ್ಕಾಗಿ ಉತ್ತಮ ಕೊಡುಗೆಗಳನ್ನು ನೀಡಲು ನಾವು ಪ್ರಯತ್ನಿಸುತ್ತಿದ್ದೇವೆ. ಅಲ್ಲದೆ ಕೆಲವು ಆಯ್ದ ರಿಯಲ್‌ಮಿ ಶೋರೂಂಗಳಲ್ಲಿ ಟ್ರೂ 5ಜಿ ಅನುಭವ ಕೇಂದ್ರಗಳನ್ನು ಸ್ಥಾಪಿಸಲು ಜಿಯೋ ಜೊತೆ ಸಹಯೋಗ ನೀಡಿದ್ದೇವೆ. ಇದರಿಂದ ಪ್ರತಿಯೊಬ್ಬರೂ ರಿಯಲ್‌ಮಿ 10 ಪ್ರೊ ಸರಣಿಯು ಒದಗಿಸುವ ಸಂಪರ್ಕತೆಯ ಹೊಸ ಶಕೆಯನ್ನು ಅನುಭವಿಸುವಂತಾಗಲಿದೆ ಎಂದು ಅವರು ಹೇಳಿದರು.

ಜಿಯೋ ಪ್ಲ್ಯಾಟ್‌ಫಾರಂಸ್ ಲಿ. ಸಿಇಒ ಕಿರಣ್ ಥಾಮಸ್ ಮಾತನಾಡಿ, “ನಮ್ಮ ಪ್ರಮುಖ ಪಾಲುದಾರ ರಿಯಲ್‌ಮಿ ಜೊತೆಗೆ ಮತ್ತೊಂದು ಮೈಲಿಗಲ್ಲಾಗಬಲ್ಲ ಪಾಲುದಾರಿಕೆಗೆ ನಮಗೆ ನಿಜಕ್ಕೂ ಹರ್ಷವಾಗುತ್ತಿದೆ. ರಿಯಲ್‌ಮಿ 10 ಪ್ರೊ ಪ್ಲಸ್‌ನಂತಹಾ ಶಕ್ತಿಶಾಲಿ 5ಜಿ ಸ್ಮಾರ್ಟ್‌ಫೋನ್‌ನ ನಿಜವಾದ ಸಾಮರ್ಥ್ಯವೇನೆಂಬುದನ್ನು ಜಿಯೋದಂತಹ ಟ್ರೂ 5ಜಿ ನೆಟ್‌ವರ್ಕ್‌ನಿಂದ ಮಾತ್ರ ತಿಳಿಯಬಹುದು. ಈ ಪಾಲುದಾರಿಕೆಯ ಉದ್ದೇಶವೇ ಇದು. ಜಿಯೋ ಟ್ರೂ 5ಜಿ ಎಂಬುದು ಭಾರತದಲ್ಲಿ ಮಾತ್ರವೇ ಅಲ್ಲ, ಜಗತ್ತಿನಲ್ಲೇ ಅತ್ಯಾಧುನಿಕವಾದ ನೆಟ್‌ವರ್ಕ್ ಆಗಿದೆ” ಎಂದು ಹೇಳಿದರು.

ಇದನ್ನೂ ಓದಿ | sunday thieves! | ಪ್ರತಿ ಸಂಡೇ ಗ್ರಾಹಕರ ಸೋಗಲ್ಲಿಅಂಗಡಿಗೆ ಹೋಗಿ ಮೊಬೈಲ್‌ ಕಳವು ಮಾಡ್ತಿದ್ದ ಬಾಲಾರೋಪಿಗಳ ಸೆರೆ

Exit mobile version