ಬೆಂಗಳೂರು: ಶವೊಮಿ ಭಾರತೀಯ ಸ್ಮಾರ್ಟ್‌ಫೋನ್ ಬಳಕೆದಾರರ ಮೆಚ್ಚಿನ ಕಂಪನಿ. ಈ ಬ್ರ್ಯಾಂಡ್‌ನ ಸಬ್ ಬ್ರ್ಯಾಂಡ್ ಆಗಿರುವ ರೆಡ್‌ಮಿ ಮತ್ತೊಂದು ಫೋನ್ ಅನ್ನು ಬಿಡುಗಡೆ ಮಾಡಲಿದೆ. ಟ್ವಿಟರ್ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿರುವ ರೆಡ್‌ಮಿ, ಸೆ.6ರಂದು ರೆಡ್‌ಮಿ ಎ1 (Redmi A1) ಸ್ಮಾರ್ಟ್‌ಫೋನ್ ಲಾಂಚ್ ಮಾಡಲಿದೆ. ಈ ಸ್ಮಾರ್ಟ್‌ಫೋನಿನ ಫೀಚರ್ಸ್ ಬಗ್ಗೆ ಅಷ್ಟೇನೂ ಮಾಹಿತಿಗಳು ತಿಳಿದಿಲ್ಲವಾದರೂ 5,000mAh ಬ್ಯಾಟರಿ ಇರುವುದು ಖಚಿತವಾಗಿದೆ.
ಕಂಪನಿಯ ವೆಬ್‌ಸೈಟ್‌ನಲ್ಲಿ ರೆಡ್‌ಮಿ ಎ1 ಸ್ಮಾರ್ಟ್‌ಫೋನ್ ಲಾಂಚ್‌ಗೆ ಸಂಬಂಧಿಸಿದಂತೆ ಪ್ರತ್ಯೇಕ ಪುಟವನ್ನು ಡೆಡಿಕೇಟ್ ಮಾಡಲಾಗಿದೆ. ಈ ಪುಟದಲ್ಲಿ ಸ್ಮಾರ್ಟ್‌ಫೋನ್‌ನ ಕೆಲವು ಫೀಚರ್ಸ್ ಬಗ್ಗೆ ತಿಳಿಸಲಾಗಿದೆ. ಸಂಪೂರ್ಣವಾದ ಮಾಹಿತಿಯನ್ನು ನೀಡಿಲ್ಲ. ಆದರೆ, ಬಳಕೆದಾರರಿಗೆ ರೆಡ್‌ಮಿ ಎ1 ಸಂಪೂರ್ಣ ಆಂಡ್ರಾಯ್ಡ್ ಬಳಕೆಯ ಅನುಭವವನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ.
ಈಗ ತಿಳಿದು ಬಂದಿರುವ ಮಾಹಿತಿಯ ಪ್ರಕಾರ, ರೆಡ್‌ಮಿ ಎ1 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಕಂಪನಿಯು ಎಲ್‌ಇಡಿ ಫ್ಲ್ಯಾಶ್‌ನೊಂದಿಗೆ ಡುಯಲ್ ಕ್ಯಾಮೆರಾ ಒದಗಿಸಲಿದೆ. ರಿಯರ್ ಪ್ಯಾನೆಲ್ ಲೆದರ್ ಟೆಕ್ಸ್‌ಚರ್ ಡಿಸೈನ್ ಹೊಂದಿದೆ. ನೋಡಲು ಆಕರ್ಷಕವಾಗಿದೆ. ಎಐ ಆಧರಿತ ಕ್ಯಾಮೆರಾ ಇರುವುದು ಪಕ್ಕಾ ಆಗಿದೆ.
ಈ ಹಿಂದೆ ಸೋರಿಕೆಯಾಗಿರುವ ಮಾಹಿತಿಗಳ ಪ್ರಕಾರ, ರೆಡ್‌ಮಿ ಎ1 ಫೋನ್ ಮೀಡಿಯಾಟೆಕ್ ಹೆಲಿಯೊ ಎ22 ಪ್ರೊಸೆಸರ್ ಆಧರಿತವಾಗಿರಲಿದೆ. 3 ಜಿಬಿ RAM ಇರಲಿದೆ. ಆಂಡ್ರಾಯ್ಡ್ 12 ಮೂಲಕ ರನ್ ಆಗಲಿದೆ. ಈ ಫೋನ್, 164.67 ಎಂಎಂ ಉದ್ದ ಮತ್ತು 76.56 ಎಂಎಂ ಅಗಲವಿದೆ. ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ರೆಡ್‌ಮಿ ಎ1 ಫೋನ್ ಬೆಲೆ ಎಷ್ಟಿರಲಿದೆ ಎಂಬ ಮಾಹಿತಿಯನ್ನು ಕಂಪನಿ ನೀಡಿಲ್ಲ. ಈಗ ಸೋರಿಕೆಯಾಗಿರುವ ಫೀಚರ್ ಮಾಹಿತಿಗಳನ್ನು ವಿಶ್ಲೇಷಿಸಿದರೆ, ಇದು ಮಿಡ್ ರೇಂಜ್ ಫೋನ್ ಆಗಿರಬಹುದು. ಕಂಪನಿ ಹೇಳಿಕೊಂಡಿರುವ ಪ್ರಕಾರ, ದೀಪಾವಳಿ ವಿಥ್ ಮಿ ಎಂಬ ಅಭಿಯಾನದ ಭಾಗವಾಗಿ ರೆಡ್‌ಮಿ ಎ1 ಲಾಂಚ್ ಆಗುತ್ತಿದೆ.
ಇದನ್ನೂ ಓದಿ | Redmi Note 11SE | ಆಕರ್ಷಕ ಬೆಲೆಯಲ್ಲಿ ಫೋನ್ ಲಾಂಚ್, ಫೀಚರ್ಸ್‌ಗಳೇನು?