ಬೆಂಗಳೂರು: ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ರೆಡ್‌ಮಿ ಮತ್ತೊಂದು ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಹೊಸ ಫೋನ್ ಅನ್ನು ಬಜೆಟ್ ಫೋನ್ ಕೆಟಗರಿಗೆ ಸೇರಿಸಬಹುದು. 13,499 ರೂ.ನಿಂದ ಆರಂಭವಾಗುವ ರೆಡ್‌ಮಿ ನೋಟ್ 11ಎಸ್‌ಇ (Redmi Note 11SE) ಸಾಕಷ್ಟು ಹೊಸ ಫೀಚರ್ಸ್‌ಗಳಿಂದ ಗಮನ ಸೆಳೆಯುತ್ತಿದೆ. ಕಡಿಮೆ ಬೆಲೆಗೆ ಬೆಸ್ಟ್ ಫೋನ್ ಅನುಭವವನ್ನು ನಿರೀಕ್ಷೆ ಮಾಡುವರು ಈ ಫೋನ್ ಖರೀದಿಸಬಹುದು.
ರೆಡ್‌ಮಿ ನೋಟ್ 11ಎಸ್ಇ (Redmi Note 11SE) ಡುಯಲ್ ಸಿಮ್ ಸ್ಲಾಟ್ ಹೊಂದಿರುವ ಫೋನ್ ಆಗಿದ್ದು, 1,080 x 2,400 ಪಿಕ್ಸೆಲ್‌ಗಳ ರೆಸಲ್ಯೂಶನ್, DCI-P3 ಬಣ್ಣದ ಹರವು, ರೀಡಿಂಗ್ ಮೋಡ್ 3.0, ಸನ್‌ಲೈಟ್ ಮೋಡ್ 2.0, ಮತ್ತು 409ppi ಪಿಕ್ಸೆಲ್ ಸಾಂದ್ರತೆ ಇರುವ 6.43 ಇಂಚ್ AMOLED ಡಿಸ್‌ಪ್ಲೇ ಹೊಂದಿದೆ. ಕಂಪನಿಯ ಪ್ರಕಾರ, ಡಿಸ್‌ಪ್ಲೇ ಅನ್ನು 1,100 ನಿಟ್‌ಗಳ ಗರಿಷ್ಠ ಹೊಳಪಿದೆ.
ಮೀಡಿಯಾಟೆಕ್ ಹೆಲಿವೊ ಜಿ95 ಎಸ್‌ಒಸಿ ಪ್ರೊಸೆಸರ್ ಹಾಗೂ Mali-G76 MC4 GPUನೊಂದಿಗೆ ಸಂಯೋಜಿತವಾಗಿದೆ. 6 ಜಿಬಿ LPDDR4X RAM ಹಾಗೂ UFS 2.2 ಇನ್‌ಬಿಲ್ಟ್ ಸ್ಟೋರೇಜ್ ಇದೆ. ಬಳಕೆದಾರರಿಗೆ ಹೆಚ್ಚಿನ ಮೆಮೋರಿ ಸ್ಟೋರೇಜ್ ಬೇಕಿದ್ದರೆ, ಫೋನ್‌ನಲ್ಲಿಕೊಡಲಾಗಿರುವ ಮೈಕ್ರೊಎಸ್‌ಡಿ ಕಾರ್ಡ್ ಮೂಲಕ 512 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದಾಗಿದೆ.
Redmi Note 11SE ಕ್ಯಾಮೆರಾ?
ರೆಡ್‌ಮಿ ನೋಟ್ 11ಎಸ್ಇ ಫೋನಿನ ಹಿಂಭಾಗದಲ್ಲಿ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಇದೆ. ಇದರಲ್ಲಿ 64 ಮೆಗಾ ಪಿಕ್ಸೆಲ್ ಪ್ರೈಮರಿ ಸೆನ್ಸರ್, 8 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಆ್ಯಂಗಲ್ ಲೆನ್ಸ್ ಕ್ಯಾಮೆರಾ, 2 ಮೆಗಾ ಪಿಕ್ಸೆಲ್ ಮ್ಯಾಕ್ರೊ ಲೆನ್ಸ್ ಮತ್ತು 2 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸರ್ ಕ್ಯಾಮೆರಾವನ್ನು ನೀಡಲಾಗಿದೆ. ಕ್ಯಾಮೆರಾ ದೃಷ್ಟಿಯಿಂದ ರೆಡ್‌ಮಿ ನೋಟ್ 11 ಎಸ್ಇ ಫೋನ್ ಚೆನ್ನಾಗಿದೆ ಎಂದು ಹೇಳಬಹುದು. ಅದೇ ರೀತಿ, ಫೋನ್ ಮುಂಭಾಗದಲ್ಲಿ13 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ವಿಡಿಯೊ ಕಾಲ್ ಮತ್ತು ಸೆಲ್ಫಿಗಳಿಗೆ ಬಳಸಿಕೊಳ್ಳಬಹುದು. 64 ಮೆಗಾ ಪಿಕ್ಸೆಲ್ ಕ್ಯಾಮೆರಾ ಮೂಲಕ ಬಳಕೆದಾರರು 4ಕೆ ರೆಸೂಲೇಷನ್ ವಿಡಿಯೋಗಳನ್ನು ಶೂಟ್ ಮಾಡಬಹುದು. ಸೆಲ್ಫಿ ಕ್ಯಾಮೆರಾ ಮೂಲಕವು ಬಳೆಕಾದರರು 1080ಪಿ ಶೂಟ್ ಮಾಡಬಹುದು.
ಬ್ಯಾಟರಿ
ಡುಯಲ್ ಸ್ಪೀಕರ್, 3.5ಎಂಎಂ ಹೆಡ್‌ಫೋನ್ ಜಾಕ್, ಯುಎಸ್‌ಬಿ ಟೈಪ್ ಸಿ ಪೋರ್ಟ್, ಸೈಡ್ ಮೌಂಟರ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಎಐ ಫೇಸ್ ಅನ್‌ಲಾಕ್ ಸೌಲಭ್ಯಗಳಿವೆ. ಕಂಪನಿಯು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒದಗಿಸಿದೆ. ಈ ಬ್ಯಾಟರಿ 33 ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ.
ಬೆಲೆ ಎಷ್ಟು?
ರೆಡ್‌ಮಿ ನೋಟ್ 11ಎಸ್ಇ (Redmi Note 11SE) ಒಂದೇ ವೆರಿಯೆಂಟ್‌ನಲ್ಲಿ ಮಾರಾಟಕ್ಕೆ ಲಭ್ಯವಿದೆ. 6 ಜಿಬಿ RAM ಮತ್ತು 64 ಜಿಬಿ ಸ್ಟೋರೇಜ್ ವೆರಿಯೆಂಟ್ ಬೆಲೆ 13,499 ರೂಪಾಯಿ ಇರಲಿದೆ. ಆಗಸ್ಟ್ 31ರಿಂದ ದೇಶದಲ್ಲಿ ಮಾರಾಟಕ್ಕೆ ಈ ಫೋನ್ ದೊರೆಯಲಿದೆ. ಬಿಫ್ರಾಸ್ಟ್ ಬ್ಲೂ, ಕಾಸ್ಮಿಕ್ ವೈಟ್, ಸ್ಪೇಸ್ ಬ್ಲ್ಯಾಕ್ ಮತ್ತು ಥಂಡರ್ ಪರ್ಪಲ್ ಬಣ್ಣಗಳ ಆಯ್ಕೆಯಲ್ಲಿ ಫೋನ್ ಗ್ರಾಹಕರಿಗೆ ಸಿಗಲಿದೆ.
ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ರೆಡ್‌ಮಿ ಫೋನುಗಳಿಗೆ ಪ್ರತ್ಯೇಕವಾದ ಬೇಡಿಕೆ ಇದೆ. ಬಜೆಟ್ ಹಾಗೂ ಪ್ರಿಮೀಯಂ ಫೋನುಗಳ ಮೂಲಕ ರೆಡ್‌ಮಿ ಬ್ರ್ಯಾಂಡ್ ತನ್ನದೇ ಆದ ಗ್ರಾಹಕರ ವಲಯ ಹಾಗೂ ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದೆ. ಬಜೆಟ್ ಫೋನಿನ ಸೆಗ್ಮೆಂಟ್‌ನಲ್ಲಿ ಈಗ ಬಿಡುಗಡೆಯಾಗಿರುವ ರೆಡ್‌ಮಿ ನೋಟ್ 11ಎಸ್ಇ ಫೋನ್ ಇತರ ಬ್ರ್ಯಾಂಡ್‌ಗಳ ಜತೆ ಸಖತ್ ಪೈಪೋಟಿ ನೀಡಬಹುದು. ರೆಡ್‌ಮಿ ಬ್ರ್ಯಾಂಡ್, ಜಗತ್ತಿನ ಪ್ರಮುಖ ಸ್ಮಾರ್ಟ್‌ಫೋನ್ ಕಂಪನಿಯಾಗಿರುವ ಚೀನಾ ಮೂಲದ ಶವೊಮಿ ಕಂಪನಿಯ ಸಬ್ ಬ್ರ್ಯಾಂಡ್ ಆಗಿದೆ. 2019ರಲ್ಲಿ ಮಾರುಕಟ್ಟೆಗೆ ಪ್ರತ್ಯೇಕ ಬ್ರ್ಯಾಂಡ್ ಆಗಿ ರೆಡ್‌ಮಿ ಎಂಟ್ರಿ ಕೊಟ್ಟಿತು.
ಇದನ್ನು ಓದಿ | Moto G42 ಸ್ಮಾರ್ಟ್‌ಫೋನ್ ಬಿಡುಗಡೆ, ಬೆಲೆ ಎಷ್ಟು?