ದೆಹಲಿ: ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ರೆಡ್‌ಮಿ ನೋಟ್ 12 5ಜಿ ಸೀರೀಸ್ ಸ್ಮಾರ್ಟ್‌ಫೋನ್‌ಗಳು (Redmi Note 12 5G) ಲಗ್ಗೆ ಇಡಲು ತಯಾರಾಗಿದೆ. ಆದರೆ, ಈ ಫೋನ್ ಭಾರತದಲ್ಲಿ (Indian Smartphone Market) ಯಾವಾಗ ಬಿಡುಗಡೆಯಾಗಲಿದೆ ಎಂದು ನಿಖರ ಮಾಹಿತಿಯನ್ನು ಕಂಪನಿ ನೀಡಿಲ್ಲ. ಶವೊಮಿ ಬ್ರ್ಯಾಂಡಿಂಗ್‌ನಡಿ ರೆಡ್‌ಮಿ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಮಾರಾಟವಾಗುತ್ತವೆ. ರೆಡ್‌ಮಿ ಮತ್ತು ಶವೊಮಿ ಫೋನುಗಳ ಭಾರತೀಯ ಮಾರುಕಟ್ಟೆಯಲ್ಲಿ ತಮ್ಮದೇ ಪಾಲು ಹೊಂದಿವೆ. ಬಜೆಟ್ ಮತ್ತು ಪ್ರೀಮಿಯಂ ಎರಡು ವಿಭಾಗಗಳಲ್ಲಿ ಈ ಬ್ರ್ಯಾಂಡ್ ಫೋನುಗಳನ್ನು ಕಾಣಬಹುದಾಗಿದೆ.
ಸಹಜವಾಗಿಯೇ ರೆಡ್‌ಮಿ ನೋಟ್ 12 5ಜಿ ಸ್ಮಾರ್ಟ್‌ಫೋನ್ ಪ್ರೀಮಿಯಂ ಫೋನ್ ಆಗಿದ್ದು, 200 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. 210 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ. ಈ ಫೋನ್ ರೆಡ್‌ಮಿ 12 ಪ್ರೋ ಪ್ಲಸ್ ಸ್ಮಾರ್ಟ್‌ಫೋನ್ ರೀತಿಯಲ್ಲೇ ಇದೆ. ಈ ಫೋನ್ 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಹಾಗೂ 67 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ. ಈಗ ಭಾರತದಲ್ಲಿ ಬಿಡುಗಡೆಯಾಗಲಿರುವ ರೆಡ್ ಮಿ ನೋಟ್ 12 ಫೋನ್ ಬಹುಶಃ ಅತ್ಯಂತ ಕೈ ಗೆಟುಕುವ ದರದ ಫೋನ್‌ಗಳಲ್ಲಿ ಒಂದಾಗಿದೆ.
ರೆಡ್‌ಮಿ ನೋಟ್ 12 5ಜಿ ವಿಶೇಷತೆಗಳೇನು?
1080p ರೆಸಲೂಷನ್ ಮತ್ತು 120Hz ರಿಫ್ರೆಶ್ ದರ ಹೊಂದಿರುವ 6.67 ಇಂಚ್ ಒಎಲ್ಇಡಿ ಡಿಸ್‌ಪ್ಲೇಯನ್ನು ಈ ಸ್ಮಾರ್ಟ್‌ಫೋನ್ ಹೊಂದಿದೆ. ರೆಡ್‌ಮಿ ನೋಟ್ 12 ಪ್ರೋ, ನೋಟ್ ಪ್ರೋ ಪ್ಲಸ್ ಮತ್ತು ನೋಟ್ 12 ಎಕ್ಸ್‌ಪ್ಲೋರರ್ ಎಡಿಷನ್ ಫೋನುಗಳು ಮೀಡಿಯಾಟೆಕ್ ಡಿಮೆನ್ಸಿಟಿ 1080 ಚಿಪ್ ಒಳಗೊಂಡಿದೆ. ರೆಡ್‌ಮಿ ನೋಟ್ ಫೋನ್ ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 4 ಜೆನ್ 1 ಒಳಗೊಂಡಿದೆ.
ಈ ಸುದ್ದಿಯನ್ನೂ ಓದಿ: Xiaomi Car | ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ ಇಳಿಸಲಿದೆ ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ರೆಡ್‌ಮಿ!
ರೆಡ್‌ಮಿ ನೋಟ್ 11 ಪ್ರೋ ಮತ್ತು ನೋಟ್ 11 ಪ್ರೋ ಪ್ಲಸ್ ಸ್ಮಾರ್ಟ್‌ಫೋನ್‌ಗಳೆರಡೂ ಶವೊಮಿ ಬ್ರ್ಯಾಂಡಿಂಗ್‌ನಡಿ ಭಾರತದಲ್ಲಿ ಶವೊಮಿ 11ಐ ಮತ್ತು ಶವೊಮಿ 11ಐ ಹೈಪರ್‌ಚಾರ್ಜ್ ಹೆಸರಿನಡಿ ಲಾಂಚ್ ಆಗಿದ್ದವು. ರೆಡ್‌ಮಿ ನೋಟ್ 12 ಪ್ರೋ ಮತ್ತು ನೋಟ್ 12 ಪ್ರೋ ಪ್ಲಸ್ ಸ್ಮಾರ್ಟ್‌ಫೋನ್‌ಗಳೂ ಭಾರತದಲ್ಲಿ ಬೇರೆಯ ಹೆಸರಿನಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳು ಇಲ್ಲದಿಲ್ಲ.
ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.