ನವದೆಹಲಿ: ದೇಶದ ಬಹುದೊಡ್ಡ ಟೆಲಿಕಾಂ ಕಪನಿಯಾಗಿರುವ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಶುಭ ಸುದ್ದಿ ನೀಡಿದೆ. ರಿಲಯನ್ಸ್ ಜಿಯೋ, ಹ್ಯಾಪಿ ನ್ಯೂ ಇಯರ್ 2024 ಹೊಸ ಪ್ರಿಪೇಯ್ಡ್ (Prepaid) ಪ್ಲ್ಯಾನ್ ಘೋಷಣೆ ಮಾಡಿದೆ(Reliance Jio Happy New Year Plan 2024). ಪ್ರತಿಸ್ಪರ್ಧಿ ಕಂಪನಿಗಳಾದ ಏರ್‌ಟೆಲ್ (AirTel) ಮತ್ತು ವೋಡಾಫೋನ್-ಐಡಿಯಾ (Vodafone-Idea) ಹೊರ ತಂದಿರುವ ಪ್ಲ್ಯಾನ್‌ಗಳಿಗೆ ಜಿಯೋದ ಹೊಸ ಪ್ಲ್ಯಾನ್ ಪೈಪೋಟಿ ನೀಡಲಿದೆ. ಈ ಹೊಸ ಪ್ಲ್ಯಾನ್ 365 ದಿನಗಳ ವ್ಯಾಲಿಡಿಟಿ (Validity) ನೀಡುವ ಬದಲು 389 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತಿದೆ. ಆ ಮೂಲಕ ಇತರ ಕಂಪನಿಗಳನ್ನು ಅದು ಮೀರಿಸಿದೆ.
2,999 ರೂ. ಜಿಯೋ ಹ್ಯಾಪಿ ನ್ಯೂ ಇಯರ್ ಪ್ಲ್ಯಾನ್
ಹೊಸದಾಗಿ ಆರಂಭಿಸಲಾಗಿರುವ 2,999 ರೂ. ಪ್ಲ್ಯಾನ್‌ನಲ್ಲಿ ಬಳಕೆದಾರರು ಪ್ರತಿ ದಿನ 2.5 ಜಿಬಿ ಡೇಟಾ ದೊರೆಯಲಿದೆ. ಒಂದೊಮ್ಮೆ ಡೇಟಾ ಮಿತಿ ಮುಗಿದರೆ, ಬಳಕೆದಾರರು 64 ಕೆಬಿಪಿಎಸ್ ವೇಗದಲ್ಲಿ ಇಂಟರ್ನೆಟ್ ಪಡೆಯಲಿದ್ದಾರೆ. ಹಾಗೆಯೇ, ಅವರು ಅನಿಯಂತ್ರಿತ 5ಜಿ ಡೇಟಾ ಪಡೆಯಲಿದ್ದಾರೆ. ಆದಾಗ್ಯೂ, ಈ 5ಜಿ ಭಾರತದಲ್ಲಿ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರವೇ ಲಭ್ಯವಿದೆ. ಇದಕ್ಕೆ ಹೆಚ್ಚುವರಿಯಾಗಿ, ಬಳಕೆದಾರರಿಗೆ ಅನ್‌ಲಿಮಿಟಿಡ್ ವಾಯ್ಸ್ ಕಾಲ್ಸ್ ಮತ್ತು ನಿತ್ಯ 100 ಎಸ್ಸೆಮ್ಮೆಸ್ ಉಚಿತವಾಗಿ ದೊರೆಯಲಿದೆ. ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್ ಒಳಗೊಂಡಿರುವ ಜಿಯೋ ಆ್ಯಪ್‌ಗೆ ಅಕ್ಸೆಸ್ ಕೂಡ ಸಿಗಲಿದೆ. ವ್ಯಾಲಿಡಿಟಿಗೆ ಸಂಬಂಧಿಸಿದಂತೆ, ಈ ಯೋಜನೆಯು 365 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ, ಆದರೆ ಚಂದಾದಾರರು 24-ದಿನಗಳ ಮಾನ್ಯತೆಯ ವೋಚರ್ ಅನ್ನು ಪಡೆಯುತ್ತಾರೆ, ಅದು ಮಾನ್ಯತೆಯನ್ನು 389 ದಿನಗಳವರೆಗೆ ವಿಸ್ತರಿಸುತ್ತದೆ.
3,350 ರೂ. ಏರ್‌ಟೆಲ್ ವಾರ್ಷಿಕ ರಿಚಾರ್ಜ್ ಪ್ಲ್ಯಾನ್
3,350 ರೂ. ಮೌಲ್ಯದ ಏರ್‌ಟೆಲ್ ವಾರ್ಷಿಕ ಪ್ಲ್ಯಾನ್‌ನಲ್ಲಿ ಬಳಕೆದಾರರಿಗೆ ನಿತ್ಯ 2.5 ಜಿಬಿ ಡೇಟಾ ದೊರೆಯಲಿದೆ ಮತ್ತು 365 ದಿನಗಳ ವ್ಯಾಲಿಡಿಟಿ ಇರಲಿದೆ. ಇದು ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್ಸೆಮ್ಮೆಸ್ ಕೂಡ ಒದಗಿಸುತ್ತದೆ. ಚಂದಾದಾರರು ತಮ್ಮ ಪ್ರದೇಶದಲ್ಲಿ 5G ನೆಟ್‌ವರ್ಕ್ ಲಭ್ಯವಿದ್ದರೆ ಅನಿಯಮಿತ 5G ಡೇಟಾವನ್ನು ಸಹ ಪಡೆಯುತ್ತಾರೆ. ಇದರ ಜೊತೆಗೆ, ಖರೀದಿದಾರರು 500 ರೂ. ಮೌಲ್ಯದ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಪ್ಲಾನ್‌ಗೆ ಒಂದು ವರ್ಷದ ಚಂದಾದಾರಿಕೆಗೆ ಅರ್ಹರರಾಗಿರುತ್ತಾರೆ. 3 ತಿಂಗಳವರೆಗೆ 24/7 ಸರ್ಕಲ್, ಉಚಿತ ಹೆಲೋಟ್ಯೂನ್ಸ್ ಮತ್ತು ವಿಂಕ್ ಮ್ಯೂಸಿಕ್ ಚಂದಾದಾರಿಕೆ ಕೂಡ ದೊರೆಯುತ್ತದೆ.
3,099 ರೂ. ವಿಐ ವಾರ್ಷಿಕ ರಿಚಾರ್ಜ್ ಪ್ಲ್ಯಾನ್
ವೋಡಾಫೋನ್ ಐಡಿಯಾ(ವಿಐ) ವಾರ್ಷಿಕ ರೀಚಾರ್ಜ್ ಪ್ಲ್ಯಾನ್ 365 ದಿನಗಳ ಮಾನ್ಯತೆ ಮತ್ತು ದಿನಕ್ಕೆ 2 GB ಡೇಟಾವನ್ನು ನೀಡುತ್ತದೆ. ಇತರ ವಾರ್ಷಿಕ ಯೋಜನೆಗಳಂತೆ, ಈ ಪ್ರಿಪೇಯ್ಡ್ ಯೋಜನೆಯು ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ಅನ್ನು ಸಹ ನೀಡುತ್ತದೆ. ಇದರ ಜೊತೆಗೆ, ಚಂದಾದಾರರು Binge All Night (ಮಧ್ಯ ರಾತ್ರಿ 12ಗಂಟೆಯಿಂದ ಬೆಳಗಿನ 6 ಗಂಟೆಯವರೆಗೆ ಅನಿಯಮಿತ ಡೇಟಾ ದೊರೆಯಲಿದೆ), ವಾರಾಂತ್ಯದ ಡೇಟಾ ರೋಲ್‌ಓವರ್ ಇರಲಿದೆ. ವಿಐ ಚಲನಚಿತ್ರಗಳು ಮತ್ತು ಟಿವಿ, ತಿಂಗಳಿಗೆ 2GB ಡೇಟಾ ಬ್ಯಾಕಪ್‌ಗೆ ಪ್ರವೇಶವನ್ನು ಪಡೆಯುತ್ತಾರೆ.
ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೋಡಾಫೋನ್-ಐಡಿಯಾ ಕಂಪನಿಗಳ ವಾರ್ಷಿಕ ಪ್ಲ್ಯಾನ್‌ಗಳನ್ನು ಹೋಲಿಕೆ ಮಾಡಿದರೆ, ಜಿಯೋ ಪ್ಲ್ಯಾನ್ ಹೆಚ್ಚು ಅಗ್ಗವಾಗಿದೆ ಮತ್ತು ಹೆಚ್ಚು ಫೀಚರ್‌ಗಳು ಕೂಡ ದೊರೆಯುತ್ತವೆ. ಆದರೆ, ಬಳಕೆದಾರರಿಗೆ ಡಿಸ್ನಿ-ಹಾಟ್ ಸ್ಟಾರ್ ಮೊಬೈಲ್ ಪ್ಲ್ಯಾನ್ ಬೇಕಿದ್ದರೆ ಏರ್‌ಟೆಲ್ ಪ್ಲ್ಯಾನ್ ಹೆಚ್ಚು ಸೂಕ್ತವಾಗಬಹುದು. ಒಂದೊಮ್ಮೆ ಹೆಚ್ಚು ಡೇಟಾ ಬಳಸುವವರಿದ್ದರೆ ಅವರಿಗೆ ವಿಐ ಪ್ಲ್ಯಾನ್ ಕೂಡ ಸೂಕ್ತವಾಗುತ್ತದೆ ಎಂದು ಹೇಳಬಹುದು.
ಈ ಸುದ್ದಿಯನ್ನೂ ಓದಿ: Jio Airfiber: ಕರ್ನಾಟಕದ 54 ಪಟ್ಟಣಗಳಲ್ಲಿ ರಿಲಯನ್ಸ್ ಜಿಯೋ ಏರ್ ಫೈಬರ್ ಸೇವೆ