Site icon Vistara News

Reliance Jio | ರಿಲಯನ್ಸ್ ಜಿಯೋಗೆ ಇಎಸ್‌ಜಿ ಪರ್ಫಾರ್ಮೆನ್ಸ್ ಇನ್ ಟೆಲಿಕಾಂ ಸೆಕ್ಟರ್ ಅವಾರ್ಡ್

Reliance Jio @ award

ಬೆಂಗಳೂರು: ರಿಲಯನ್ಸ್ ಜಿಯೋ (Reliance Jio) ಟೆಲಿಕಾಂ ವಲಯದಲ್ಲಿ ಪರಿಸರ ಸಾಮಾಜಿಕ ಮತ್ತು ಆಡಳಿತ (ಇಎಸ್‌ಜಿ) ಕಾರ್ಯಕ್ಷಮತೆಗಾಗಿ ಪ್ರಶಸ್ತಿ ಪಡೆದಿದೆ. ಇತ್ತೀಚೆಗೆ ಮುಂಬೈನಲ್ಲಿ ಟ್ರಾನ್ಸ್‌ಫಾರ್ಮನ್ಸ್ ಫೋರಮ್ಸ್ ಆಯೋಜಿಸಿದ್ದ ಎರಡನೇ ಇಎಸ್‌ಜಿ ಶೃಂಗಸಭೆ ಮತ್ತು ಪ್ರಶಸ್ತಿ ಸಮಾರಂಭದಲ್ಲಿ ಈ ಪ್ರಶಸ್ತಿ ಪಡೆದಿದೆ. ಫಾಸಿಲ್ ಇಂಧನಗಳನ್ನು ಬದಲಿಸಲು ನವೀಕರಿಸಬಹುದಾದ ಎನರ್ಜಿ ಅಳವಡಿಕೆ, ಅದರ 5G ತಂತ್ರಜ್ಞಾನದ ಸ್ಟಾಕ್‌ನ ಸ್ಥಳೀಯ ಅಭಿವೃದ್ಧಿ ಮತ್ತು ಕೃಷಿ, ಆರೋಗ್ಯ ಮತ್ತು ಶಿಕ್ಷಣದಂಥ ಕ್ಷೇತ್ರಗಳಲ್ಲಿ ಬಳಕೆ ಪ್ರಕರಣಗಳನ್ನು ಪ್ರದರ್ಶಿಸುವ ಮೂಲಕ ಹವಾಮಾನ ಬದಲಾವಣೆಯನ್ನು ಎದುರಿಸಲು ಜಿಯೋ ತನ್ನ ಪ್ರಯತ್ನಗಳಿಗಾಗಿ ಗುರುತಿಸಿಕೊಂಡಿದೆ.

ಜಿಯೋ ಕೈಗೆಟುಕುವ ಸಾಧನಗಳ ಅಭಿವೃದ್ಧಿ ಮೂಲಕ ಡಿಜಿಟಲ್ ಸೇರ್ಪಡೆಗೆ ಚಾಲನೆ ನೀಡುತ್ತಿದ್ದು, 100 ಮಿಲಿಯನ್‌ಗಿಂತಲೂ ಹೆಚ್ಚು ಸೌಲಭ್ಯ ಇಲ್ಲದ ಬಳಕೆದಾರರಿಗೆ ಡಿಜಿಟಲ್ ಸೇವೆಗಳನ್ನು ಬಳಸಲು ಅನುವು ಮಾಡಿಕೊಡುತ್ತದೆ.

ಪ್ಯಾರಿಸ್ ಒಪ್ಪಂದದಂತೆ ಅದರ ಹವಾಮಾನ ಬದಲಾವಣೆಯ ಪ್ರಯತ್ನಗಳ ಭಾಗವಾಗಿ, ಜಿಯೋ ಈಗಾಗಲೇ ಭಾರತದಾದ್ಯಂತ ತನ್ನ 16,000 ಸೈಟ್‌ಗಳಲ್ಲಿ 144 ಮೆಗಾವಾಟ್ ಸೌರಶಕ್ತಿ ಸ್ಥಾಪಿಸಿದೆ. ಈ ನವೀಕರಿಸಬಹುದಾದ ಎನರ್ಜಿ ಪ್ರಯತ್ನಗಳು ಜಿಯೋ ಮತ್ತು ರಿಲಯನ್ಸ್ ಸಮೂಹದ ಬದ್ಧತೆಯನ್ನು 2035ರ ವೇಳೆಗೆ ನಿವ್ವಳ ಶೂನ್ಯವಾಗಿಸುತ್ತದೆ. ಇದರ ಹೊರಸೂಸುವಿಕೆ ಕಡಿತ ಗುರಿಗಳನ್ನು ಸೈನ್ಸ್ ಬೇಸ್ಡ್ ಟಾರ್ಗೆಟ್ ಇನಿಷಿಯೇಟಿವ್ (SBTi) ಮೂಲಕ 1.5oC ಮಹತ್ವಾಕಾಂಕ್ಷೆಯೊಂದಿಗೆ ಜೋಡಿಸಲಾಗಿದೆ ಎಂದು ವ್ಯಾಲಿಡೇಟ್ ಮಾಡಲಾಗಿದೆ.

ಈ ವರ್ಷದ ಆರಂಭದಲ್ಲಿ ಕಾರ್ಬನ್ ಡಿಸ್‌ಕ್ಲೋಸರ್ ಪ್ರಾಜೆಕ್ಟ್‌ನಿಂದ (ಸಿಡಿಪಿ) ತನ್ನ ಹವಾಮಾನ ಪ್ರಯತ್ನಗಳಿಗಾಗಿ ಜಿಯೋ ಈಗಾಗಲೇ ಲೀಡರ್‌ಶಿಪ್ ರೇಟಿಂಗ್ (ಎ-) ಪಡೆದಿದೆ. ಇದು ಭಾರತದ ಯಾವುದೇ ಟೆಲಿಕಾಂ ವಲಯದ ಕಂಪನಿಗೆ ನೀಡಲಾದ ಅತ್ಯುನ್ನತ ರೇಟಿಂಗ್ ಆಗಿದೆ.

ಇದನ್ನೂ ಓದಿ | Reliance Jio | 4ಜಿ ಡೌನ್‌ಲೋಡ್, ಅಪ್‌ಲೋಡ್ ವೇಗ: ನಂಬರ್ 1 ಸ್ಥಾನಕ್ಕೇರಿದ ರಿಲಯನ್ಸ್ ಜಿಯೋ

Exit mobile version