Site icon Vistara News

ಈಗ ದೇಶದ 304 ನಗರಗಳಲ್ಲಿ ರಿಲಯನ್ಸ್ ಜಿಯೋ ಟ್ರೂ 5ಜಿ ಸೇವೆ ಲಭ್ಯ, ಕೋಲಾರದಲ್ಲೂ ಲಾಂಚ್

Reliance Jio True 5G service now available in 304 cities of the country

ಮುಂಬೈ, ಮಹಾರಾಷ್ಟ್ರ: ಕರ್ನಾಟಕದ ಕೋಲಾರ ಸೇರಿದಂತೆ ದೇಶದ ಇತರ 24 ನಗರಗಳಲ್ಲಿ ಜಿಯೋ ಟ್ರೂ 5ಜಿ ಸೇವೆಗೆ ಚಾಲನೆ ನೀಡಿದೆ(Reliance Jio True 5G). ಕರ್ನಾಟಕದ ಕೋಲಾರ, ಆಂಧ್ರಪ್ರದೇಶ (ಅನಕಪಲ್ಲಿ, ಮಚಲಿಪಟ್ಟಣಂ), ಬಿಹಾರ (ಅರಾಹ್, ಬೇಗುಸರೈ, ಬಿಹಾರ ಷರೀಫ್, ದರ್ಭಾಂಗ, ಪುರ್ನಿಯಾ), ಛತ್ತೀಸ್‌ಗಢ (ಜಗ್ದಲ್ಪುರ್), ಗುಜರಾತ್ (ವಾಪಿ), ಹಿಮಾಚಲ ಪ್ರದೇಶ (ಬಡ್ಡಿ-ಬರೋಟಿವಾಲಾ-ನಲಗಢ), ಜಾರ್ಖಂಡ್ (ಕತ್ರಾಸ್), ಮಹಾರಾಷ್ಟ್ರ (ಬೀಡ್, ಚಕನ್, ಧುಲೆ, ಜಲ್ನಾ, ಮಾಲೆಗಾಂವ್), ತಮಿಳುನಾಡು (ತಿರುನೆಲ್ವೇಲಿ), ಉತ್ತರ ಪ್ರದೇಶ (ಬಾರಾಬಂಕಿ), ಉತ್ತರಾಖಂಡ (ಮಸ್ಸೂರಿ), ಪಶ್ಚಿಮ ಬಂಗಾಳ (ಬರ್ಧಮಾನ್, ಬರ್ಹಾಂಪೋರ್, ಇಂಗ್ಲಿಷ್ ಬಜಾರ್, ಹಬ್ರಾ, ಖರಗ್‌ಪುರ)ದಲ್ಲಿ- ಹೀಗೆ ಒಟ್ಟು 24 ನಗರಗಳಲ್ಲಿ ತನ್ನ ಟ್ರೂ 5ಜಿ ಸೇವೆಗಳನ್ನು ಪ್ರಾರಂಭಿಸಿರುವುದಾಗಿ ಘೋಷಿಸಿದೆ. ಇದರೊಂದಿಗೆ ಜಿಯೋ ಟ್ರೂ 5ಜಿ ಸೇವೆ ಪಡೆಯುತ್ತಿರುವ ನಗರಗಳ ಒಟ್ಟು ಸಂಖ್ಯೆ 304ಕ್ಕೆ ಏರಿಕೆ ಆಗಿದೆ.

ರಿಲಯನ್ಸ್ ಜಿಯೋ ಕೋಲಾರದಲ್ಲಿ (ಕರ್ನಾಟಕ) 5ಜಿ ಸೇವೆಗಳನ್ನು ಪ್ರಾರಂಭಿಸಿದ ಮೊದಲ ಮತ್ತು ಏಕೈಕ ಆಪರೇಟರ್ ಆಗಿದೆ. ಫೆ.28 ಪ್ರಾರಂಭ ಆಗುವ ಈ ಸೇವೆಯನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ, 1 ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾವನ್ನು ಅನುಭವಿಸಲು ಜಿಯೋ ಬಳಕೆದಾರರನ್ನು ವೆಲ್ಕಮ್ ಆಫರ್ ಮೂಲಕ ಆಹ್ವಾನಿಸಲಾಗುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಜಿಯೋ ವಕ್ತಾರರು, “ಕೋಲಾರ ಮತ್ತು 12 ರಾಜ್ಯಗಳಾದ್ಯಂತ 24 ನಗರಗಳಲ್ಲಿ ಜಿಯೋ ಟ್ರೂ 5ಜಿ ಸೇವೆಗಳನ್ನು ಬಿಡುಗಡೆ ಮಾಡಲು ನಾವು ಹೆಮ್ಮೆಪಡುತ್ತೇವೆ. ಈ ಆರಂಭದೊಂದಿಗೆ, 304 ನಗರಗಳಲ್ಲಿ ಜಿಯೋ ಬಳಕೆದಾರರು ಹೊಸ ವರ್ಷ 2023ರಲ್ಲಿ ಜಿಯೋ ಟ್ರೂ 5ಜಿ ರೂಪಾಂತರ ಪ್ರಯೋಜನಗಳನ್ನು ಆನಂದಿಸಬಹುದು.

“ಹೊಸದಾಗಿ ಈ ಟ್ರೂ 5ಜಿ ಪ್ರಾರಂಭಿಸಲಾದ ನಗರಗಳು ಪ್ರಮುಖ ಪ್ರವಾಸೋದ್ಯಮ ಮತ್ತು ವಾಣಿಜ್ಯ ತಾಣಗಳು ಮತ್ತು ನಮ್ಮ ದೇಶದ ಪ್ರಮುಖ ಶಿಕ್ಷಣ ಕೇಂದ್ರಗಳಾಗಿವೆ. ಜಿಯೋದ ಟ್ರೂ 5ಜಿ ಸೇವೆಗಳ ಪ್ರಾರಂಭದೊಂದಿಗೆ, ಈ ಪ್ರದೇಶದ ಗ್ರಾಹಕರು ಕೇವಲ ಉತ್ತಮ ದೂರಸಂಪರ್ಕ ಜಾಲವನ್ನು ಪಡೆಯುತ್ತಾರೆ ಮಾತ್ರವಲ್ಲ, ಜತೆಗೆ ಇ-ಆಡಳಿತ, ಶಿಕ್ಷಣ, ಆಟೋಮೇಷನ್, ಕೃತಕ ಬುದ್ಧಿಮತ್ತೆ, ಗೇಮಿಂಗ್, ಆರೋಗ್ಯ, ಕೃಷಿ, ಐಟಿ ಕ್ಷೇತ್ರಗಳಲ್ಲಿ ಮತ್ತು ಎಸ್ ಎಂಇಗಳು ಅನಂತ ಬೆಳವಣಿಗೆಯ ಅವಕಾಶಗಳನ್ನು ಪಡೆಯುತ್ತವೆ.

ಇದನ್ನೂ ಓದಿ: Jio True 5G: ಕರ್ನಾಟಕದ ರಾಯಚೂರು ಸೇರಿ ದೇಶದ ಮತ್ತೆ 20 ನಗರಗಳಲ್ಲಿ ರಿಲಯನ್ಸ್ ಜಿಯೋ ಟ್ರೂ 5ಜಿ ಸೇವೆ ಶುರು

“ಕರ್ನಾಟಕದ, ಆಂಧ್ರಪ್ರದೇಶ, ಬಿಹಾರ, ಛತ್ತೀಸ್‌ಗಢ, ಗುಜರಾತ್, ಹಿಮಾಚಲ ಪ್ರದೇಶ, ಜಾರ್ಖಂಡ್, ಮಹಾರಾಷ್ಟ್ರ, ತಮಿಳುನಾಡು, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳದ ರಾಜ್ಯ ಸರ್ಕಾರಗಳು ಮತ್ತು ಆಡಳಿತಾಧಿಕಾರಿಗಳು ಈ ಪ್ರದೇಶಗಳನ್ನು ಡಿಜಿಟಲೈಸ್ ಮಾಡುವ ನಮ್ಮ ಪ್ರಯತ್ನದಲ್ಲಿ ನಿರಂತರ ಬೆಂಬಲಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ,” ಎಂದಿದ್ದಾರೆ.

Exit mobile version