ಬೆಂಗಳೂರು: ದೇಶದ ಪ್ರಮುಖ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ ಕಂಪನಿಯು, ಗ್ಯಾಲಾಕ್ಸಿ (Samsung Galaxy) ಎ23 5ಜಿ ಹಾಗೂ ಎ14 5ಜಿ ಸ್ಮಾರ್ಟ್‌ಫೋನ್ ಅನ್ನು ಭಾರತದ ಮಾರುಕಟ್ಟೆಗೆ ಸೋಮವಾರ ಬಿಡುಗಡೆ ಮಾಡಿದೆ. ಈ ಫೋನುಗಳು ಇದೇ ತಿಂಗಳ 18ನೇ ತಾರೀಖಿನಿಂದ ಕಂಪನಿಯ ಅಧಿಕೃತ ಜಾಲತಾಣ Samsung.com ಹಾಗೂ 20ನೇ ತಾರೀಖಿನಿಂದ ಎಲ್ಲ ಆನ್‌ಲೈನ್ ಸ್ಟೋರ್‌ಗಳು ಹಾಗೂ ಆಫ್‌ಲೈನ್ ಸ್ಟೋರ್‌ಗಳಲ್ಲಿ ಮಾರಾಟಕ್ಕೆ ದೊರೆಯಲಿದೆ.
ಇದನ್ನೂ ಓದಿ: iPhone 14 Pro | ಆ್ಯಪಲ್ ಐಫೋನ್ 14 ಪ್ರೋ ಡೈನಾಮಿಕ್ ಡಿಸ್‌ಪ್ಲೇ, ಹೊಸ ಕ್ಯಾಮೆರಾ ಕಮಾಲ್!
ಫೀಚರ್ಸ್ ಏನಿದೆ?
ಗ್ಯಾಲಕ್ಸಿ ಎ23 5ಜಿ ಫೋನಿನಲ್ಲಿ 5.8 ಇಂಚಿನ ಎಚ್‌ಡಿ ಡಿಸ್ಪ್ಲೇ ಕೊಡಲಾಗಿದೆ. ಆಕ್ಟಾಕೋರ್ ಸ್ನ್ಯಾಪ್‌ಡ್ರಾಗನ್ 695 ಪ್ರೊಸೆಸರ್ ಇದರಲ್ಲಿದೆ. 8ಜಿಬಿ RAM ಇದ್ದು, 128 ಜಿಬಿ ಇಂಟರ್‌ನಲ್ ಸ್ಟೋರೇಜ್ ಇದೆ. RAM ಅನ್ನು 16 ಜಿಬಿವರೆಗೆ ವಿಸ್ತರಿಸಿಕೊಳ್ಳುವ ಅವಕಾಶವೂ ಇದೆ. ಇಂಟರ್ನಲ್ ಸ್ಟೋರೇಜ್ ಅನ್ನು ಮೆಮೋರಿ ಕಾರ್ಡ್ ಬಳಸಿ 1 ಟಿಬಿವರೆಗೂ ಹೆಚ್ಚಿಸಿಕೊಳ್ಳಬಹುದು. ತ್ರಿಬಲ್ ಕ್ಯಾಮರಾವಿರುವ ಫೋನಿನಲ್ಲಿ 50 ಮೆಗಾ ಪಿಕ್ಸೆಲ್ ಪ್ರೈಮರಿ ಕ್ಯಾಮರಾವಿದ್ದರೆ, 8 ಎಂಪಿ ಸೆಲ್ಫೀ ಕ್ಯಾಮರಾವಿದೆ. 5000mAh ಬ್ಯಾಟರಿ ಸಾಮರ್ಥ್ಯವಿದ್ದು, 25 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ. ಈ ಫೋನು ನೀಲಿ, ಕೇಸರಿ ಮತ್ತು ಕಂದು ಬಣ್ಣದಲ್ಲಿ ಲಭ್ಯ.
ಗ್ಯಾಲಕ್ಸಿ ಎ14 ಫೋನಿನಲ್ಲಿ 6.6 ಇಂಚಿನ ಎಚ್‌ಡಿ ಡಿಸ್‌ಪ್ಲೇ ಇದೆ. 8 ಜಿಬಿ RAM ಹಾಗೂ 64 ಜಿಬಿ ಇಂಟರ್‌ನಲ್ ಸ್ಟೋರೇಜ್ ಇದೆ. ಇಂಟರ್ನಲ್ ಸ್ಟೋರೇಜ್ ಅನ್ನು ಮೆಮೋರಿ ಕಾರ್ಡ್ ಬಳಸಿ 1ಟಿಬಿವರೆಗೆ ವಿಸ್ತರಿಸಿಕೊಳ್ಳಬಹುದು. ತ್ರಿಬಲ್ ಕ್ಯಾಮರಾವಿರುವ ಫೋನಿನಲ್ಲಿ 50ಎಂಪಿ ಪ್ರೈಮರಿ ಕ್ಯಾಮರಾ ಹಾಗೂ 13ಎಂಪಿ ಸೆಲ್ಫೀ ಕ್ಯಾಮರಾವಿದೆ. 5000mAh ಬ್ಯಾಟರಿ ಇದೆ.
ಬೆಲೆ ಎಷ್ಟು?
6ಜಿಬಿ RAM ಜತೆ 128ಜಿಬಿ ಇಂಟರ್‌ನಲ್ ಸ್ಟೋರೇಜ್ ಇರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ23 5ಜಿ ಫೋನಿನ ಬೆಲೆ 22,999 ರೂ. ಹಾಗೆಯೇ ಅದರಲ್ಲೇ 8ಜಿಬಿ RAM ಜತೆ 128ಜಿಬಿ ಇಂಟರ್‌ನಲ್ ಸ್ಟೋರೇಜ್ ಇರುವ ಫೋನಿನ ಬೆಲೆ 24,999 ರೂ.
4ಜಿಬಿ RAM ಜತೆ 64ಜಿಬಿ ಇಂಟರ್‌ನಲ್ ಸ್ಟೋರೇಜ್ ಇರುವ ಗ್ಯಾಲಕ್ಸಿ ಎ14 ಫೋನಿನ ಬೆಲೆ 16,499 ರೂ. ಹಾಗೆಯೇ 6 ಜಿಬಿ RAM ಜತೆ 128 ಜಿಬಿ ಇಂಟರ್‌ನಲ್ ಸ್ಟೋರೇಜ್ ಇರುವ ಫೋನಿನ ಬೆಲೆ 18,999 ರೂ., 8 ಜಿಬಿ RAM ಜತೆ 128 ಜಿಬಿ ಇಂಟರ್‌ನಲ್ ಸ್ಟೋರೇಜ್ ಇರುವ ಫೋನಿನ ಬೆಲೆ 20,999 ರೂ. ಆಗಿದೆ.
ಇದನ್ನೂ ಓದಿ: Motorola and Jio | ಮೊಟೊರೊಲಾ ಸ್ಮಾರ್ಟ್‌ಫೋನ್‌ಗಳಿಗೂ ಜಿಯೋ ಟ್ರೂ 5ಜಿ ಸೇವೆ ಬೆಂಬಲ!