Site icon Vistara News

Samsung Galaxy: ಗ್ಯಾಲಕ್ಸಿ ಎಸ್24 ಸರಣಿ ಫೋನ್‌ ಲಾಂಚ್; ಮೊಬೈಲ್ ಎಐಯ ಹೊಸ ಯುಗಕ್ಕೆ ಪ್ರವೇಶ

Made in India Samsung Galaxy S24 series goes on sale in India

ಬೆಂಗಳೂರು: ಸ್ಯಾಮ್‌ಸಂಗ್‌ (Samsung Galaxy) ಎಲೆಕ್ಟ್ರಾನಿಕ್ಸ್ ಕಂಪನಿಯ ಗುರುವಾರ ಗ್ಯಾಲಕ್ಸಿಎಸ್24 ಅಲ್ಟ್ರಾ(Galaxy S24 Ultra), ಗ್ಯಾಲಕ್ಸಿ ಎಸ್24+ (Galaxy S24+) ಮತ್ತು ಗ್ಯಾಲಕ್ಸಿ S24 (Samsung Galaxy S24) ಅನ್ನು ಅನಾವರಣಗೊಳಿಸಿದೆ(launched in India). ಇದು ಗ್ಯಾಲಕ್ಸಿ ಎಐ1 ಮೂಲಕ ರೂಪುಗೊಂಡಿದ್ದು ಹೊಸ ಮೊಬೈಲ್ ಅನುಭವಗಳನ್ನು ಒದಗಿಸಲಿದೆ. ಗ್ಯಾಲಕ್ಸಿ ಎಸ್ ಸರಣಿಯು ಮೊಬೈಲ್ ಬಳಕೆಯ ಹೊಸ ಯುಗಕ್ಕೆ ದಾರಿ ಮಾಡಿಕೊಡಲಿದ್ದು, ಅದು ಮೊಬೈಲ್ ಸಾಧನಗಳು ಬಳಕೆದಾರರನ್ನು ಸಶಕ್ತಗೊಳಿಸುವ ರೀತಿಯನ್ನು ಶಾಶ್ವತವಾಗಿ ಬದಲಾಯಿಸಲಿದೆ. ಗ್ಯಾಲಕ್ಸಿ ಎಸ್24 ಸರಣಿಯಲ್ಲಿನ ಪ್ರತಿಯೊಂದು ಅನುಭವವನ್ನು ಎಐ ಅಪೂರ್ವಗೊಳಿಸಲಿದ್ದು, ಟೆಕ್ಷ್ಟ್ ಮತ್ತು ಕಾಲ್ ಟ್ರಾನ್ಸ್ ಲೇಷನ್ ಗಳೊಂದಿಗೆ ತಡೆ ರಹಿತ ಸಂಪರ್ಕ ಒದಗಿಸುವುದರಿಂದ ಹಿಡಿದು, ಗ್ಯಾಲಕ್ಸಿ ಪ್ರೋ ವಿಶ್ಯುವಲ್ ಎಂಜಿನ್‌ನೊಂದಿಗೆ ಸೃಜನಶೀಲ ಸ್ವಾತಂತ್ರ್ಯವನ್ನು ಹೆಚ್ಚುಗೊಳಿಸಲಿದೆ. ಈ ಮೂಲಕ ಗ್ಯಾಲಕ್ಸಿ ಬಳಕೆದಾರರು ತಮ್ಮ ಸುತ್ತಲಿನ ಪ್ರಪಂಚವನ್ನು ಕಂಡುಕೊಳ್ಳುವ ಬಗೆಯಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಲಿದೆ.

“ಗ್ಯಾಲಕ್ಸಿ ಎಸ್24 ಸರಣಿಯು ಪ್ರಪಂಚದೊಂದಿಗಿನ ನಮ್ಮ ಸಂಪರ್ಕವನ್ನು ಬದಲಿಸುತ್ತದೆ ಮತ್ತು ಮುಂದಿನ ದಶಕದ ಮೊಬೈಲ್ ನಾವೀನ್ಯತೆಯನ್ನು ಬೆಳಗಿಸುತ್ತದೆ” ಎಂದು ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್‌ನ ಅಧ್ಯಕ್ಷ ಮತ್ತು ಮೊಬೈಲ್ ಎಕ್ಸ್‌ಪೀರಿಯೆನ್ಸ್ ಬಿಸಿನೆಸ್ ಮುಖ್ಯಸ್ಥ ಟಿಎಂ ರೋಹ್ ಹೇಳಿದರು. ಮಾತು ಮುಂದುವರಿಸುತ್ತಾ ಅವರು, “ಗ್ಯಾಲಕ್ಸಿ ಎಐ ಅನ್ನು ನಮ್ಮ ನಾವೀನ್ಯತೆಯ ಪರಂಪರೆ ಮತ್ತು ಜನರು ತಮ್ಮ ಫೋನ್‌ಗಳನ್ನು ಹೇಗೆ ಬಳಸುತ್ತಾರೆ ಎಂಬುದರ ಆಳವಾದ ತಿಳುವಳಿಕೆಯ ಮೇಲೆ ನಿರ್ಮಿಸಲಾಗಿದೆ. ಪ್ರಪಂಚದಾದ್ಯಂತದ ನಮ್ಮ ಬಳಕೆದಾರರು ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳುವುದನ್ನು, ಗ್ಯಾಲಕ್ಸಿ ಎಐಯೊಂದಿಗೆ ತಮ್ಮ ದೈನಂದಿನ ಜೀವನವನ್ನು ಹೇಗೆ ಸುಧಾರಿಸುತ್ತಾರೆ ಎಂಬುದನ್ನು ನೋಡಲು ನಾವು ಉತ್ಸುಕರಾಗಿದ್ದೇವೆ” ಎಂದು ಹೇಳಿದ್ದಾರೆ.

ದೈನಂದಿನ ಅನುಭವಗಳನ್ನು ಅಪೂರ್ವಗೊಳಿಸಿ ಗ್ಯಾಲಕ್ಸಿ

ಎಐ ಜೀವನದ ಪ್ರತಿಯೊಂದು ಕ್ಷಣವನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಅರ್ಥಪೂರ್ಣ ಬುದ್ಧಿವಂತಿಕೆಯನ್ನು ಪರಿಚಯಿಸುತ್ತದೆ, ವಿಶೇಷವಾಗಿ ಫೋನ್‌ನ ಅತ್ಯಂತ ಮೂಲಭೂತ ಕೆಲಸವಾದ: ಸಂವಹನವನ್ನು ಸುಧಾರಿಸಲಿದೆ. ಲೈವ್ ಟ್ರಾನ್ಸ್‌ಲೇಟ್, ಇಂಟರ್‌ಪ್ರಿಟರ್, ಚಾಟ್ ಅಸಿಸ್ಟ್, ನೋಟ್ ಅಸಿಸ್ಟ್ ಮತ್ತು ಟ್ರಾನ್ಸ್‌ಕ್ರಿಪ್ಟ್ ಅಸಿಸ್ಟ್‌ನಂತಹ ಎಐ ವೈಶಿಷ್ಟ್ಯಗಳೊಂದಿಗೆ ಗ್ರಾಹಕರು ನಿರರ್ಗಳ ಸಂವಹನಗಳನ್ನು ಆನಂದಿಸಬಹುದಾಗಿದೆ. ಹುಡುಕಾಟದ ಇತಿಹಾಸದಲ್ಲಿ ಗ್ಯಾಲಕ್ಸಿ ಎಸ್24 ಒಂದು ಮೈಲಿಗಲ್ಲನ್ನು ಸಾಧಿಸಿದೆ. ಇದು ಗೂಗಲ್ ನೊಂದಿಗೆ ಅರ್ಥಗರ್ಭಿತ, ಗೆಸ್ಚರ್-ಚಾಲಿತ ಸರ್ಕಲ್ ಟು ಸರ್ಚ್ ಅನ್ನು ಹೊಂದಿದ ಮೊದಲ ಫೋನ್ ಆಗಿದೆ.

ಹೊಸ ರೀತಿಯಲ್ಲಿ ಜಗತ್ತನ್ನು ಅನ್ವೇಷಿಸಲು ಸೃಜನಶೀಲತೆ ಸಾಧಿಸಿ

ಗ್ಯಾಲಕ್ಸಿ ಎಸ್24 ಸರಣಿಯ ಪ್ರೊವಿಶುವಲ್ ಎಂಜಿನ್ ಚಿತ್ರ ಸೆರೆಹಿಡಿಯುವ ಸಾಮರ್ಥ್ಯಗಳನ್ನು ತೀವ್ರಗೊಳಿಸುವ ಮತ್ತು ಸೃಜನಶೀಲ ಸ್ವಾತಂತ್ರ್ಯವನ್ನು ಹೆಚ್ಚಿಸುವ ಎಐ-ಚಾಲಿತ ಸಾಧನಗಳ ಸಮಗ್ರ ಗುಂಪು ಆಗಿದೆ. ಗ್ಯಾಲಕ್ಸಿ ಎಸ್24 ಅಲ್ಟ್ರಾ ದ ಕ್ವಾಡ್ ಟೆಲಿ ಸಿಸ್ಟಮ್, ಹೊಸ 5x ಆಪ್ಟಿಕಲ್ ಜೂಮ್ ಲೆನ್ಸ್‌ನೊಂದಿಗೆ ಮತ್ತು 50ಎಂಪಿ ಸೆನ್ಸರ್ ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು 2x, 3x, 5xನಿಂದ 10×10 ವರ್ಧನೆಯ ಸಾಮರ್ಥ್ಯವುಳ್ಳ ಜೂಮ್ ಲೆವೆಲ್ ಗಳಲ್ಲಿ ಆಪ್ಟಿಕಲ್-ಗುಣಮಟ್ಟದ ಕಾರ್ಯಕ್ಷಮತೆಯನ್ನು ಸಕ್ರಿಯಗೊಳಿಸುವ ಅಡಾಪ್ಟಿವ್ ಪಿಕ್ಸೆಲ್ ಸೆನ್ಸರ್ ಹೊಂದಿದೆ. ವರ್ಧಿತ ಡಿಜಿಟಲ್ ಜೂಮ್‌ನೊಂದಿಗೆ ಚಿತ್ರಗಳು 100xನಲ್ಲಿ ಸ್ಫಟಿಕ ಸ್ಪಷ್ಟ ಫಲಿತಾಂಶಗಳನ್ನು ತೋರಿಸುತ್ತವೆ.

ಉತ್ತಮ ಶಾಟ್‌ಗಳನ್ನು ಸೆರೆಹಿಡಿದ ನಂತರ, ನವೀನ ಗ್ಯಾಲಕ್ಸಿ ಎಐ ಎಡಿಟಿಂಗ್ ಟೂಲ್ಸ್ ಎರೇಸ್ ಮಾಡಲು, ಮರು-ಸಂಯೋಜಿಸಲು ಮತ್ತು ರಿಮಾಸ್ಟರ್ ಕ್ರಿಯೆಗಳನ್ನು ಸರಳಗೊಳಿಸುತ್ತವೆ. ಸುಲಭ ಮತ್ತು ಹೆಚ್ಚು ಪರಿಣಾಮಕಾರಿ ಆಪ್ಟಿಮೈಸೇಶನ್‌ಗಳಿಗಾಗಿ, ಪ್ರತಿ ಫೋಟೋಗೆ ಸೂಕ್ತವಾದ ಟ್ವೀಕ್‌ಗಳನ್ನು ಸೂಚಿಸಲು ಗ್ಯಾಲಕ್ಸಿ ಎಐ ಪೂರಿತ ಎಡಿಟ್ ಸಜೆಷನ್ ಬಳಸಬಹುದು. ಬಳಕೆದಾರರಿಗೆ ಇನ್ನಷ್ಟು ಸೃಜನಾತ್ಮಕ ನಿಯಂತ್ರಣ ಮತ್ತು ಸ್ವಾತಂತ್ರ್ಯವನ್ನು ನೀಡುವ, ಜನರೇಟಿವ್ ಎಡಿಟ್ ಫೀಚರ್ ಮೂಲಕ ಫೋಟೋಗಳ ಹಿನ್ನೆಲೆಯ ಭಾಗಗಳನ್ನು ಜನರೇಟಿವ್ ಎಐ ನೊಂದಿಗೆ ತುಂಬಬಹುದು. ಹೆಚ್ಚು ವಿವರವಾದ ನೋಟಕ್ಕಾಗಿ ಆಕ್ಷನ್-ಪ್ಯಾಕ್ಡ್ ಕ್ಷಣಗಳನ್ನು ನಿಧಾನಗೊಳಿಸಲು ಹೊಸ ಇನ್‌ಸ್ಟಂಟ್ ಸ್ಲೋ-ಮೋಕನ್ ಫೀಚರ್ ಚಲನೆಗಳ ಆಧಾರದ ಮೇಲೆ ಹೆಚ್ಚುವರಿ ಫ್ರೇಮ್‌ಗಳನ್ನು ರಚಿಸುತ್ತದೆ.

ಗ್ಯಾಲಕ್ಸಿ ಒದಗಿಸಲಿದೆ ಅತ್ಯಂತ ಜಾಣ ಅನುಭವ

ಪ್ರತಿ ಗ್ಯಾಲಕ್ಸಿ ಎಸ್24 ಅಲ್ಟ್ರಾವು ಗ್ಯಾಲಕ್ಸಿಗೆ ಆಪ್ಟಿಮೈಸ್ ಮಾಡಲಾದ ವಿಶೇಷವಾಗಿ ಗ್ಯಾಲಕ್ಸಿ ಬಳಕೆದಾರರಿಗೆ ಸ್ನ್ಯಾಪ್ ಡ್ರ್ಯಾಗನ್® 8 ಜೆನ್ 3 ಮೊಬೈಲ್ ಪ್ಲಾಟ್‌ಫಾರ್ಮ್ ಅನ್ನು ಹೊಂದಿದೆ. ಈ ಚಿಪ್‌ಸೆಟ್ ಅಸಾಧ್ಯವಾದ ಪರಿಣಾಮಕಾರಿ ಎಐ ಪ್ರೊಸೆಸಿಂಗ್ ಗಾಗಿ ಗಮನಾರ್ಹವಾದ ಎನ್ ಪಿ ಯು ಸುಧಾರಣೆಯನ್ನು ಒದಗಿಸುತ್ತದೆ. ಎಲ್ಲಾ ಮೂರು ಗ್ಯಾಲಕ್ಸಿ ಎಸ್24 ಮಾದರಿಗಳಲ್ಲಿ, 1-120 ಹರ್ಟ್ಜ್ ಅಡಾಪ್ಟಿವ್ ರಿಫ್ರೆಶ್ ದರಗಳು ಕಾರ್ಯಕ್ಷಮತೆಯ ದಕ್ಷತೆಯನ್ನು ತೀವ್ರಗೊಳಿಸುತ್ತದೆ.

ಇದು ವೈಬ್ರೆಂಟ್ ಮತ್ತು ಆಕರ್ಷಕವಾದ ದೃಶ್ಯಗಳನ್ನು ನೀಡುವ ಬ್ರೈಟೆಸ್ಟ್ ಗ್ಯಾಲಕ್ಸಿ ಡಿಸ್ ಪ್ಲೇಯನ್ನು ಹೊಂದಿದೆ. ಗ್ಯಾಲಕ್ಸಿ ಎಸ್24, 2,600ಎನ್ಐಟಿ ತಲುಪಿ ಗರಿಷ್ಠ ಬ್ರೈಟ್ ನೆಸ್ ಅನ್ನು ನೀಡುತ್ತದೆ ಮತ್ತು ವಿಷನ್ ಬೂಸ್ಟರ್‌ನೊಂದಿಗೆ ಸುಧಾರಿತ ಔಟ್ ಡೋರ್ ವಿಸಿಬಿಲಿಟಿಯನ್ನು ನೀಡುತ್ತದೆ.

ಗ್ಯಾಲಕ್ಸಿಯ ಡಿಫೆನ್ಸ್-ಗ್ರೇಡ್, ಮಲ್ಟಿ-ಲೇಯರ್ ಸೆಕ್ಯುರಿಟಿ ಪ್ಲಾಟ್‌ಫಾರ್ಮ್ ಆದ ಸ್ಯಾಮ್‌ಸಂಗ್ ನಾಕ್ಸ್‌ನಿಂದ ಸುರಕ್ಷತೆಯನ್ನು ಹೊಂದಿರುವ ಉತ್ಪನ್ನದ ಸುಧಾರಿತ ಭದ್ರತೆ ಮತ್ತು ಪ್ರೈವೆಸಿಯು ಬಳಕೆದಾರರ ಆಯ್ಕೆ ಮತ್ತು ನಂಬಿಕೆಯನ್ನು ಗಟ್ಟಿಗೊಳಿಸುತ್ತದೆ. ಗ್ಯಾಲಕ್ಸಿ ಎಸ್ 24 ಮುಖ್ಯ ಮಾಹಿತಿಗಳನ್ನು ರಕ್ಷಿಸುತ್ತದೆ ಮತ್ತು ಎಂಡ್-ಟು-ಎಂಡ್ ಸುರಕ್ಷಿತ ಹಾರ್ಡ್‌ವೇರ್, ರಿಯಲ್-ಟೈಮ್ ಥ್ರೆಟ್ ಡಿಟೆಕ್ಷನ್ ಮತ್ತು ಸಹಯೋಗದ ರಕ್ಷಣೆಯೊಂದಿಗೆ ಗ್ರಾಹಕರ ರಕ್ಷಣೆ ಮಾಡುತ್ತದೆ.

ಈ ಸುದ್ದಿಯನ್ನೂ ಓದಿ: New Year 2024: ಹೊಸ ವರ್ಷದಲ್ಲಿ ನೀವು ಖರೀದಿಸಲೇಬೇಕಾದ ಸ್ಮಾರ್ಟ್‌ಫೋನ್ಸ್!

Exit mobile version