Site icon Vistara News

Samsung Galaxy S24 series: ಜನವರಿ 18ಕ್ಕೆ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್24 ಸರಣಿ ಫೋನ್‌ಗಳು ಬಿಡುಗಡೆ

Samsung galaxy s24 series phone will launched on jan 28

ನವದೆಹಲಿ: ದಕ್ಷಿಣ ಕೊರಿಯಾದ (South Korea) ಮೊಬೈಲ್ ತಯಾರಿಕಾ ಕಂಪನಿ ಸ್ಯಾಮ್ಸಂಗ್‌ (Samsung) ತನ್ನ ಹೊಸ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್‌24 ಸರಣಿ ಸ್ಮಾರ್ಟ್‌ಫೋನ್ (Samsung Galaxy S24 series)ಗಳನ್ನು ಮುಂದಿನ ತಿಂಗಳು ಲಾಂಚ್ ಮಾಡುವ ಸಾಧ್ಯತೆಯಿದೆ. ಈ ಸರಣಿಯಲ್ಲಿ ಒಟ್ಟು ಮೂರು ಸ್ಮಾರ್ಟ್‌ಫೋನ್‌ಗಳನ್ನು ಕಂಪನಿಯು ಬಿಡುಗಡೆ ಮಾಡಲಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್24(Galaxy s24), ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್24 ಪ್ಲಸ್ (Galaxy S24 Plus) ಮತ್ತು ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್24 ಅಲ್ಟ್ರಾ (Galaxy S24 Ultra) ಸ್ಮಾರ್ಟ್‌ಫೋನ್ ಲಾಂಚ್ ಮಾಡಲಿದೆ. ಮೂರು ಮಾಡೆಲ್‌ ಫೋನ್‌ಗಳ ಕುರಿತಾದ ಸುದ್ದಿಯೂ ಈ ಹಿಂದೆಯೂ ಸಾಕಷ್ಟು ಬಾರಿ ಸೋರಿಕೆಯಾಗಿತ್ತು.

ಈಗ ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ, ಜನವರಿ 18 ರಂದು ಸ್ಥಳೀಯ ಸಮಯ 3 ಗಂಟೆಗೆ ಸ್ಯಾಮ್ಸಂಗ್ ತನ್ನ ಇತ್ತೀಚಿನ ಪ್ರಮುಖ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣಗೊಳಿಸಲಿದೆ. ಇದು ಭಾರತೀಯ ಕಾಲಮಾನ ಪ್ರಕಾರ, ಜನವರಿ 17ರಂದು ರಾತ್ರಿ 11.30ಕ್ಕೆ ನಡೆಯಲಿದೆ. ಕಂಪನಿಯು ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್24, ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್24 ಪ್ಲಸ್ ಮತ್ತು ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್24 ಅಲ್ಟ್ರಾ ಸ್ಮಾರ್ಟ್‌ಫೋನ್ ಲಾಂಚ್ ಮಾಡಲಿದೆ.

ಸ್ಯಾಮ್ಸಂಗ್ ಎಸ್24 ಸ್ಟ್ಯಾಂಡರ್ಡ್ ವೇರಿಯಂಟ್ ಆಗಿದ್ದು, 6.2 ಇಂಚ್ ಸ್ಕ್ರೀನ್ ಇದ್ದರೆ, ಎಸ್24 ಪ್ಲಸ್ ಮ್ತತು ಎಸ್‌24 ಅಲ್ಟ್ರಾ ಸ್ಮಾರ್ಟ್‍‌ಫೋನ್‌ನಲ್ಲಿ 6.7 ಇಂಚ್ ಮತ್ತು 6.8 ಇಂಚ್ ಡಿಸ್‌ಪ್ಲೇ ಇರಲಿದೆ. ಮೂರು ಮಾದರಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಸ್ನ್ಯಾಪ್‌ಡ್ರಾಗನ್ 8 ಜನರೇಷನ್ 3 ಮತ್ತು ಕ್ವಾಲಕಾಮ್‌ ಹೊಸ ಪ್ರೊಸೆರರ್ ಇರಲಿದೆ.

ಎಸ್‌24 ಸ್ಮಾರ್ಟ್‌ಫೋನ್ 4000mAh ಯೂನಿಟ್‌ನಿಂದ ಚಾರ್ಜ್ ಆಗಿದ್ದರೆ, ಎಸ್‌24 ಪ್ಲಸ್ ಮತ್ತು ಎಸ್‌24 ಪ್ಲಸ್ ಅಲ್ಟ್ರಾ 4900maAh ಮತ್ತು 5000maAh ಯುನಿಟ್‌ಗಳಿಂದ ಚಾರ್ಜ್ ಆಗಲಿದೆ ಎಂದು ಹೇಳಲಾಗುತ್ತಿದೆ.

ಎಸ್‌24 ಅಲ್ಟ್ರಾ 200MP ಮುಖ್ಯ ಕ್ಯಾಮೆರಾವನ್ನು ಹೊಂದಿರುವ ಸಾಧ್ಯತೆ ಇದೆ. ಎಸ್‌24 ಮತ್ತು ಎಸ್‌24 ಪ್ಲಸ್‌ ಫೋನ್‌ನಲ್ಲಿ ನೀವು ಕೇವಲ 50MP ಕ್ಯಾಮೆರಾ ಪಡೆಯು ಸಾಧ್ಯತೆ ಇದೆ. ಈಗ ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ, ಕ್ಯಾಮೆರಾ ಸ್ಪೆಕ್ಸ್‌ಗಳಲ್ಲಿ 10MP ಟೆಲಿಫೋಟೋ ಸಂವೇದಕಗಳು (S24 ಮತ್ತು S24 ಪ್ಲಸ್) ಮತ್ತು S24 ಅಲ್ಟ್ರಾದಲ್ಲಿ ಒಂದು ಜೋಡಿ ಟೆಲಿಫೋಟೋ ಲೆನ್ಸ್‌ಗಳು ಸೇರಿವೆ. ಅಲ್ಲದೆ, ಮೂರು ಕ್ಯಾಮೆರಾಗಳಲ್ಲಿ 12 ಎಂಪಿ ಅಲ್ಟ್ರಾವೈಡ್ಸ್ ಮತ್ತು 12MP ಸೆಲ್ಫಿ ಕ್ಯಾಮೆರಾಗಳಿವೆ ಎಂದು ಹೇಳಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ: Samsung Galaxy: ಸ್ಯಾಮ್ಸಂಗ್‌ ಬಳಕೆದಾರರೇ ಎಚ್ಚರ! ಸೈಬರ್‌ ದಾಳಿ ಸಾಧ್ಯತೆ

Exit mobile version