Site icon Vistara News

Sanchar Saathi: ಅಕಸ್ಮಾತ್‌ ನಿಮ್ಮ ಸ್ಮಾರ್ಟ್ ಫೋನ್ ಕಳೆದು ಹೋದರೆ ತಕ್ಷಣ ಹೀಗೆ ಮಾಡಿ…

Sanchar Saathi

ಕೈಯಲ್ಲಿರುವ ಸ್ಮಾರ್ಟ್ ಫೋನ್ (smart phone) ಕಳೆದು ಹೋಯಿತೆಂದರೆ ಒಂದು ಕ್ಷಣ ನಮ್ಮ ಪ್ರಪಂಚವೇ ನಿಂತು ಹೋದ ಅನುಭವವಾಗುತ್ತದೆ. ಇದರೊಂದಿಗೆ ಅದರಲ್ಲಿರುವ ಪ್ರಮುಖ ಡೇಟಾ (deta), ಸಂಪರ್ಕಗಳು (contacts) ಮತ್ತು ಇತರ ವೈಯಕ್ತಿಕ (personal information) ಮಾಹಿತಿಗಳು ಎಲ್ಲಿ ದುರ್ಬಳಕೆಯಾಗುತ್ತದೆ ಎನ್ನುವ ಭಯ ಕಾಡಲಾರಂಭಿಸುತ್ತದೆ. ಸ್ಮಾರ್ಟ್ ಫೋನ್ ಕಳೆದು ಹೋದರೆ ಇನ್ನು ಟೆನ್ಷನ್ ಮಾಡಬೇಕಿಲ್ಲ. ಯಾಕೆಂದರೆ ಇಲ್ಲೊಂದು ಗುಡ್ ನ್ಯೂಸ್ ಇದೆ. ಇನ್ನು ಮುಂದೆ ಕಳೆದುಹೋದ ಸ್ಮಾರ್ಟ್‌ಫೋನ್ ಅನ್ನು ಟ್ರ್ಯಾಕ್ (track) ಮಾಡುವುದು ಮತ್ತು ನಿರ್ಬಂಧಿಸುವುದು (block) ಬಹು ಸುಲಭ. ಸಂಚಾರ್ ಸಾಥಿ (Sanchar Saathi) ಪೋರ್ಟಲ್ ಮೂಲಕ ಇನ್ನು ನಿಮ್ಮ ಸ್ಮಾರ್ಟ್ ಫೋನ್ ಮತ್ತು ಅದರಲ್ಲಿ ಇರುವ ಮಾಹಿತಿಯನ್ನು ಸುರಕ್ಷಿತವಾಗಿರಿಸಬಹುದು,

ಹೇಗೆ ?

ದೂರಸಂಪರ್ಕ ಇಲಾಖೆಯು ಸಂಚಾರ ಸಾಥಿ ಪೋರ್ಟಲ್ ಅನ್ನು ಸ್ಥಾಪಿಸಿದ್ದು, ಇದು ಬಳಕೆದಾರರಿಗೆ ತಮ್ಮ ಕಳೆದುಹೋದ ಸ್ಮಾರ್ಟ್‌ಫೋನ್‌ಗಳನ್ನು ಟ್ರ್ಯಾಕ್ ಮಾಡಲು ಮತ್ತು ಅದರಲ್ಲಿರುವ ಮಾಹಿತಿಗಳನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ಕೇಂದ್ರ ಸಲಕರಣೆ ಗುರುತಿನ ನೋಂದಣಿ (CEIR) ಬಳಸಿಕೊಳ್ಳಬಹುದು. ಸಂಚಾರ ಸಾಥಿ ಸೇವೆಯು ದೇಶಾದ್ಯಂತ ಲಭ್ಯವಿದ್ದು, ಬಳಕೆದಾರರು ಪೋರ್ಟಲ್ ಅನ್ನು ಬಳಸುವ ಮೊದಲು ಪೊಲೀಸ್ ದೂರು ನೀಡಬೇಕು.

ಇದನ್ನೂ ಓದಿ: Cancer: ಬ್ಯಾಂಡೇಜ್ ಬಳಸುವವರಿಗೆ ಇಲ್ಲಿದೆ ನೋಡಿ ಶಾಕಿಂಗ್ ನ್ಯೂಸ್!

ಸಂಚಾರ ಸಾಥಿ ಪೋರ್ಟಲ್ ಎಂದರೇನು ?

ಸಂಚಾರ ಸಾಥಿ ಪೋರ್ಟಲ್ ಅನ್ನು ಭಾರತದಲ್ಲಿ ದೂರಸಂಪರ್ಕ ಇಲಾಖೆ (DoT) ಆರಂಭಿಸಿದೆ. ಜನರು ತಮ್ಮ ಕಳೆದುಹೋದ ಅಥವಾ ಕದ್ದ ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಲು ಮತ್ತು ನಿರ್ಬಂಧಿಸಲು ಸಹಾಯ ಮಾಡುತ್ತದೆ.

ಈ ಪೋರ್ಟಲ್ ಡಿಜಿಟಲ್ ಸಾಕ್ಷರತೆಯನ್ನು ಉತ್ತೇಜಿಸಲು ಮತ್ತು ಡಿಜಿಟಲ್ ವಹಿವಾಟುಗಳನ್ನು ಸುರಕ್ಷಿತಗೊಳಿಸಲು ಸಹಕಾರಿಯಾಗಿದೆ. ಪೋರ್ಟಲ್ ನಿಂದ ಮಾನ್ಯವಾದ ಮೊಬೈಲ್ ಸಂಖ್ಯೆಯನ್ನು ಹೊಂದಿರುವ ಯಾರಿಗಾದರೂ ಇದರೊಳಗೆ ಪ್ರವೇಶಿಸಬಹುದು ಮತ್ತು ಇದನ್ನು ಉಚಿತವಾಗಿ ಬಳಸಬಹುದು.

ಬಳಕೆ ಹೇಗೆ ?

ಕಳೆದುಹೋದ ಸ್ಮಾರ್ಟ್‌ಫೋನ್ ಅನ್ನು ಟ್ರ್ಯಾಕ್ ಮಾಡಲು ಮತ್ತು ಅದರಲ್ಲಿರುವ ದಾಖಲೆಗಳನ್ನು ಸಂರಕ್ಷಿಸಲು https://sarcharsaathi.gov.in ಪೋರ್ಟಲ್ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಬಳಿಕ “ಇಲ್ಲಿ ನೋಂದಾಯಿಸಿ” ಬಟನ್ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Byju Raveendran: ಕಳೆದ ವರ್ಷ ಬಿಲಿಯನೇರ್ ಆಗಿದ್ದ ಬೈಜುಸ್‌ ಮಾಲೀಕ ಈಗ ಯಾವ ಸ್ಥಿತಿಯಲ್ಲಿದ್ದಾರೆ ನೋಡಿ!

ಇಲ್ಲಿ ಕದ್ದ/ ಕಳೆದುಹೋದ ಸಾಧನವನ್ನು ಹುಡುಕಿ ಎಂಬುದಕ್ಕೆ ಕ್ಲಿಕ್ ಮಾಡಿ ಎನ್ನುವುದನ್ನು ಆಯ್ಕೆ ಮಾಡಿ.

ಇದರಲ್ಲಿ ಕೇಳಿರುವ ವಿವರಗಳನ್ನು ನಮೂದಿಸಿ. ಇಲ್ಲಿ ಹೆಸರು, ಮೊಬೈಲ್ ಸಂಖ್ಯೆ, IMEI ವಿವರಗಳು, ಸಾಧನದ ಬ್ರ್ಯಾಂಡ್, ಮಾದರಿ ಮತ್ತು ಸರಕುಪಟ್ಟಿ ಮೊದಲಾದವುಗಳನ್ನು ಕೇಳಲಾಗುತ್ತದೆ. ಇದನ್ನು ನಮೂದಿಸಿ. ಫೋನ್‌ನ ಖರೀದಿ ಇನ್‌ವಾಯ್ಸ್ ಅನ್ನು ಸಹ ಅಪ್‌ಲೋಡ್ ಮಾಡಬೇಕಾಗುತ್ತದೆ.

ಫೋನ್ ಕಳೆದುಹೋದ ವಿವರಗಳಲ್ಲಿ ಸ್ಮಾರ್ಟ್‌ಫೋನ್ ಅನ್ನು ಎಲ್ಲಿ ಕಳೆದುಕೊಂಡಿದ್ದೀರಿ ಎಂಬುದನ್ನು ನಮೂದಿಸಬೇಕಾಗುತ್ತದೆ. ಇದು ನಗರ, ಜಿಲ್ಲೆ, ರಾಜ್ಯ ಮತ್ತು ದಿನಾಂಕವನ್ನು ಒಳಗೊಂಡಿರುತ್ತದೆ.

ಬಳಿಕ ದೂರು ದಾಖಲಿಸಿದ ಪೊಲೀಸ್ ಠಾಣೆಯ ವಿವರಗಳನ್ನು ನಮೂದಿಸಬೇಕು. ಇದರಲ್ಲಿ ದೂರು ಸಂಖ್ಯೆ ಮತ್ತು ದೂರಿನ ಪ್ರತಿಯನ್ನು ಅಪ್‌ಲೋಡ್ ಮಾಡಬೇಕು.

ಮೊಬೈಲ್ ಮಾಲೀಕರ ವೈಯಕ್ತಿಕ ಮಾಹಿತಿಯಲ್ಲಿ ಆಧಾರ್, ಪ್ಯಾನ್ ಅಥವಾ ಡ್ರೈವಿಂಗ್ ಲೈಸೆನ್ಸ್‌ನಂತಹ ಒಂದು ಐಡಿ ವಿವರಗಳೊಂದಿಗೆ ವೈಯಕ್ತಿಕ ಗುರುತಿನ ವಿವರಗಳನ್ನು ನಮೂದಿಸಬೇಕು.

ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿದ ಬಳಿಕ OTP (ಒನ್-ಟೈಮ್ ಪಾಸ್‌ವರ್ಡ್) ಅನ್ನು ಪಡೆದು ಅದನ್ನು ಅಲ್ಲಿ ನಮೂದಿಸಬೇಕಾಗುತ್ತದೆ.

ನೀಡಿರುವ ಮೊಬೈಲ್ ಸಂಖ್ಯೆಗೆ ಬಂದ ಒಟಿಪಿ ಅನ್ನು ನಮೂದಿಸಿ ಮತ್ತು ಒಟಿಪಿ ಪರಿಶೀಲಿಸಿ ಬಟನ್ ಅನ್ನು ಕ್ಲಿಕ್ ಮಾಡಿ. ಒಮ್ಮೆ ನಿಮ್ಮ ಒಟಿಪಿ ಪರಿಶೀಲಿಸಿದ ಅನಂತರ ನಿಮ್ಮ ಖಾತೆಯನ್ನು ನೀವು ರಚಿಸಬಹುದಾದ ಹೊಸ ಪುಟ ತೆರೆದುಕೊಳ್ಳುತ್ತದೆ.

ಇಲ್ಲಿ ಖಾತೆಯನ್ನು ರಚಿಸಲು ಹೆಸರು, ಇಮೇಲ್ ವಿಳಾಸ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಬೇಕು. ಅಗತ್ಯವಿರುವ ವಿವರಗಳನ್ನು ಹಾಕಿ “ಖಾತೆ ರಚಿಸಿ” ಬಟನ್ ಕ್ಲಿಕ್ ಮಾಡಿ.

ಖಾತೆಯನ್ನು ರಚಿಸಿದ ಬಳಿಕ ಮೊಬೈಲ್ ಸಂಖ್ಯೆ ಮತ್ತು ಪಾಸ್‌ವರ್ಡ್ ಬಳಸಿ ಲಾಗ್ ಇನ್ ಮಾಡಿ.

ಅನಂತರ ಕಳೆದುಹೋದ ಸ್ಮಾರ್ಟ್‌ಫೋನ್ ಅನ್ನು ಪತ್ತೆ ಮಾಡಿ ಮತ್ತು ನಿರ್ಬಂಧಿಸಿ. ಕಳೆದುಹೋದ ಸ್ಮಾರ್ಟ್‌ಫೋನ್ ಅನ್ನು ಪತ್ತೆಹಚ್ಚಲು ಮತ್ತು ನಿರ್ಬಂಧಿಸಲು, “IMEI ಹುಡುಕಾಟ” ಬಟನ್ ಕ್ಲಿಕ್ ಮಾಡಿ. ನಿಮ್ಮ ಫೋನ್‌ನ IMEI (ಅಂತಾರಾಷ್ಟ್ರೀಯ ಮೊಬೈಲ್ ಸಲಕರಣೆ ಗುರುತು) ಸಂಖ್ಯೆಯನ್ನು ನಮೂದಿಸಿ ಮತ್ತು “ಹುಡುಕಾಟ” ಬಟನ್ ಕ್ಲಿಕ್ ಮಾಡಿ. ನಿಮ್ಮ ಸಾಧನವು ಸ್ವಿಚ್ ಆನ್ ಆಗಿದ್ದರೆ ಮತ್ತು ಇಂಟರ್ನೆಟ್‌ಗೆ ಸಂಪರ್ಕಗೊಂಡಿದ್ದರೆ ಅದರ ಪ್ರಸ್ತುತ ಸ್ಥಳವನ್ನು ಪೋರ್ಟಲ್ ಪ್ರದರ್ಶಿಸುತ್ತದೆ.

ಕಳೆದುಹೋದ ಸ್ಮಾರ್ಟ್‌ಫೋನ್ ಅನ್ನು ನಿರ್ಬಂಧಿಸಲು “ಬ್ಲಾಕ್ ಸ್ಟೋಲನ್/ಲಾಸ್ಟ್ ಮೊಬೈಲ್” ಬಟನ್ ಕ್ಲಿಕ್ ಮಾಡಿ. ನಿಮ್ಮ ಫೋನ್ ಸಂಖ್ಯೆಯನ್ನು ನಮೂದಿಸಿ ಮತ್ತು ಫೋನ್ ಅನ್ನು ನಿರ್ಬಂಧಿಸಲು ಕಾರಣವನ್ನು ಆಯ್ಕೆ ಮಾಡಿ. ಇದನ್ನು ಪೂರ್ಣಗೊಳಿಸಿದ ಬಳಿಕ “ಬ್ಲಾಕ್” ಬಟನ್ ಕ್ಲಿಕ್ ಮಾಡಿ. ಬಳಿಕ ಫೋನ್ ಅನ್ನು ನಿರ್ಬಂಧಿಸಲಾಗುತ್ತದೆ ಮತ್ತು ಅದು ಕರೆಗಳು ಅಥವಾ ಸಂದೇಶಗಳನ್ನು ಮಾಡಲು ಅಥವಾ ಸ್ವೀಕರಿಸಲು ಸಾಧ್ಯವಾಗುವುದಿಲ್ಲ.

ಅನ್‌ಬ್ಲಾಕ್ ಕೂಡ ಮಾಡಬಹುದು

Exit mobile version