Site icon Vistara News

AIIMS Delhi | ದಿಲ್ಲಿ ಏಮ್ಸ್ ಆಸ್ಪತ್ರೆಯ ಸರ್ವರ್ ಹ್ಯಾಕ್ ಮಾಡಿದ್ದು ಚೀನಿಯರು!

AIIMS Delhi

AIIMS Delhi Reverses Closure Decision, OPD to Operate Normally Amid Ram Mandir Event

ನವದೆಹಲಿ: ದಿಲ್ಲಿಯ ಅಖಲಿ ಭಾರತ ವೈದ್ಯ ವಿಜ್ಞಾನ ಸಂಸ್ಥೆ(ಎಐಐಎಂಎಸ್)ಯ ಸರ್ವರ್‌ಗಳನ್ನು (AIIMS Delhi) ಹ್ಯಾಕ್ ಮಾಡಿದ್ದು ಚೀನಾದಿಂದ ಎಂಬ ಸಂಗತಿ ಬಹಿರಂಗವಾಗಿದೆ. ಚೀನಿ ಹ್ಯಾಕರ್ಸ್ ಸರ್ವರ್‌ಗಳನ್ನು ಹ್ಯಾಕ್ ಮಾಡಿದ್ದರು. ಆದರೆ, ಐದೂ ಸರ್ವರ್‌ಗಳ ಡೇಟಾವನ್ನು ಈಗ ಯಶಸ್ವಿಯಾಗಿ ಮರಳಿ ಪಡೆಯಲಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ದಿಲ್ಲಿ ಎಐಐಎಂಎಸ್ ಆಸ್ಪತ್ರೆಯ ಸರ್ವರ್‌ಗಳನ್ನು ಚೀನಿಯರು ಹ್ಯಾಕ್ ಮಾಡಿದ್ದರು. ಚೀನಾದಿಂದಲೇ ಈ ಕೃತ್ಯವನ್ನು ಎಸಗಲಾಗಿದೆ. 60 ಭೌತಿಕ ಮತ್ತು 40 ವರ್ಚವಲ್ ಸೇರಿ ಒಟ್ಟು 100 ಸರ್ವರ್‌ಗಳ ಪೈಕಿ ಐದು ಭೌತಿಕ ಸರ್ವರ್‌ಗಳನ್ನು ಹ್ಯಾಕರ್ಸ್ ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಆದರೆ, ಹೆಚ್ಚಿನ ಅಪಾಯವನ್ನು ತಪ್ಪಿಸಲಾಗಿದ್ದು, ಯಶಸ್ವಿಯಾಗಿ ಡೇಟಾವನ್ನು ಮರಳಿ ಪಡೆಯಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮೂಲಗಳು ತಿಳಿಸಿವೆ.

ನವೆಂಬರ್ 23ರಂದು ತನ್ನ ಸರ್ವರ್ ಹಾಳಾಗಿರುವ ಬಗ್ಗೆ ಏಮ್ಸ್ ಮೊದಲ ಬಾರಿಗೆ ಬಹಿರಂಗಪಡಿಸಿತ್ತು. ಬಳಿಕ ಸೈಬರ್ ಭದ್ರತೆಯ ಹೊಣೆ ಹೊತ್ತ ಇಬ್ಬರು ಸರ್ವರ್ ಭದ್ರತೆಗಳ ವಿಶ್ಲೇಷಕರನ್ನು ಈ ಕಾರಣಕ್ಕಾಗಿಯೇ ಅಮಾನತುಗೊಳಿಸಲಾಗಿದೆ. ಹತ್ತು ಹನ್ನೆರಡು ದಿನಗಳ ಕಾಲ ಸರ್ವರ್‌ಗಳನ್ನು ಚೀನಿಯರು ಹ್ಯಾಕ್ ಮಾಡಿದ್ದರು. ಇದರ ಜತೆಗೆ, ಭಾರತೀಯ ವೈದ್ಯಕೀಯ ಸಂಸ್ಥೆಯ ವೆಬ್‌ಸೈಟ್ ಕೂಡ ಹ್ಯಾಕ್ ಮಾಡಲು ಪ್ರಯತ್ನಿಸಿದ್ದರು ಎಂಬ ಮಾಹಿತಿ ಹೊರ ಬಂದಿತ್ತು.

ಇದನ್ನೂ ಓದಿ | Server Issue at AIIMS | ದೆಹಲಿ ಏಮ್ಸ್‌ನಲ್ಲಿ ಸರ್ವರ್‌ ಡೌನ್‌, ರೋಗಿಗಳ ಪರದಾಟ, ಹ್ಯಾಕರ್‌ಗಳಿಂದ ವೈರಸ್‌ ದಾಳಿ ಶಂಕೆ

Exit mobile version