Site icon Vistara News

WhatsApp New Feature: ವಾಟ್ಸಾಪ್‌ನಿಂದ ‘ಸೈಲೆನ್ಸ್‌ ಅನ್‌ನೋನ್ ಕಾಲರ್ಸ್’ ಫೀಚರ್ ಲಾಂಚ್!

WhatsApp New Feature

ನವದೆಹಲಿ: ಜಗತ್ತಿನ ಅತ್ಯಂತ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ಹೊಸ ಫೀಚರ್ ಲಾಂಚ್ ಮಾಡಿದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ವಾಟ್ಸಾಪ್ ಆಗಾಗ ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ವಾಟ್ಸಾಪ್ ಈಗ ಸೈಲೆನ್ಸ್ ಅನ್‌ನೋನ್ ಕಾಲರ್ಸ್ (silence unknown callers) ಎಂಬ ಹೊಸ ಫೀಚರ್ ಜಾರಿಗೆ ತಂದಿದೆ (WhatsApp New Feature). ಈ ಹೊಸ ಫೀಚರ್ ಬಳಕೆದಾರರಿಗೆ, ಇನ್‌ಕಮಿಂಗ್ ಕಾಲ್‍ಗಳ ಹೆಚ್ಚು ನಿಯಂತ್ರಣ ಸಾಧಿಸಲು ನೆರವು ಒದಗಿಸುತ್ತದೆ. ಅಂದ ಹಾಗೆ, ಮೆಟಾ ಸಿಇಒ (Meta CEO) ಮಾರ್ಕ್ ಜುಕರ್‌ಬರ್ಗ್ (Mark Zuckerberg) ಅವರು ಈ ಹೊಸ ಫೀಚರ್ ಘೋಷಣೆ ಮಾಡಿದ್ದಾರೆ.

ಮೆಟಾ ಒಡೆತನದ ವಾಟ್ಸಾಪ್ ಜಾರಗೆ ತಂದಿರುವ ಈ ಸೈಲೆನ್ಸ್ ಅನ್‌ನೋನ್ ಕಾಲರ್ಸ್ ಫೀಚರ್ಸ್ ಬಳಕೆದಾರರಿಗೆ ಹೆಚ್ಚಿನ ಸುರಕ್ಷತೆಯನ್ನು ಒದಗಿಸುತ್ತದೆ. ಅಪರಿಚಿತ ಜನರಿಂದ ಬರುವ ಸ್ಪ್ಯಾಮ್, ಸ್ಕ್ಯಾಮ್‌ಗಳು ಕರೆಗಳನ್ನು ಸ್ವಯಂಚಾಲಿತವಾಗಿ ಸ್ಕ್ರೀನ್ ಔಟ್ ಮಾಡಲು ಸಾಧಅಯವಾ ಮಾಡಲು ಇದು ಸಹಾಯ ಮಾಡುತ್ತದೆ. ಇನ್ನೂ ಹೆಚ್ಚಿನ ಗೌಪ್ಯತೆ ಮತ್ತು ನಿಯಂತ್ರಣಕ್ಕಾಗಿ ನೀವು ಈಗ ವಾಟ್ಸಾಪ್‌ನಲ್ಲಿ ಅಪರಿಚಿತ ಸಂಪರ್ಕಗಳಿಂದ ಒಳಬರುವ ಕರೆಗಳನ್ನು ಸ್ವಯಂಚಾಲಿತವಾಗಿ ನಿಶ್ಯಬ್ದಗೊಳಿಸಬಹುದು ಎಂದು ಮಾರ್ಕ್ ಜುಕರ್‌ಬರ್ಗ್ ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ವಾಟ್ಸಾಪ್‌ನ ಸೈಲೆನ್ಸ್ ಅನ್‌ನೋನ್ ಕಾಲರ್ಸ್ ಫೀಚರ್ ಬಳಕೆದಾರರಿಗೆ ಹೆಚ್ಚಿನ ಗೌಪ್ಯತೆ ಮತ್ತು ಅವರ ಒಳಬರುವ ಕರೆಗಳ ನಿಯಂತ್ರಣವನ್ನು ನೀಡುತ್ತದೆ. ಅಂಥ ಕರೆಗಳು ಅವರ ಫೋನ್‌ಗಳಲ್ಲಿ ರಿಂಗ್ ಆಗುವುದಿಲ್ಲ, ಆದರೆ ಯಾರಾದರೂ ಪ್ರಮುಖರ ಕರೆಯಾಗಿದ್ದರೆ ಅದು ಕಾಲ್ ಪಟ್ಟಿಯಲ್ಲಿ ಕಾಣುತ್ತದೆ ಎಂದು ವಾಟ್ಸಾಪ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನೂ ಓದಿ: WhatsApp New Feature: ‘ಕಾಲ್ ಲಿಂಕ್ಸ್’ ಎಂಬ ಹೊಸ ವಾಟ್ಸಾಪ್ ಫೀಚರ್, ಇದರಿಂದ ಏನು ಲಾಭ?

ಸೈಲೆನ್ಸ್ ಅನ್‌ನೋನ್ ಕಾಲರ್ಸ್ ಫೀಚರ್ ಮಾತ್ರವಲ್ಲದೇ ವಾಟ್ಸಾಪ್, ಪ್ರೈವೇಸಿ ಚೆಕ್‌ಅಪ್‌ ಎಂಬ ಮತ್ತೊಂದು ಫೀಚರ್ ಕೂಡ ಪರಿಚಯಿಸಿದೆ. ಈ ಫೀಚರ್ ಸರಿಯಾದ ಹಂತದ ರಕ್ಷಣೆಯನ್ನು ಆಯ್ಕೆ ಮಾಡಲು ನಿರ್ಣಾಯಕ ಗೌಪ್ಯತಾ ಸೆಟ್ಟಿಂಗ್‌ಗಳ ಮೂಲಕ ಬಳಕೆದಾರರಿಗೆ ಮಾರ್ಗದರ್ಶನ ನೀಡುತ್ತದೆ. ಪ್ರೈವೇಸಿ ಸೆಟ್ಟಿಂಗ್ಸ್‌ನಲ್ಲಿ ‘ಸ್ಟಾರ್ಟ್ ಚೆಕಪ್’ ಮೇಲೆ ಟ್ಯಾಪ್ ಮಾಡಿದಾಗ, ಬಳಕೆದಾರರು ಸಂದೇಶಗಳು, ಕರೆಗಳು ಮತ್ತು ವೈಯಕ್ತಿಕ ಮಾಹಿತಿಯ ಸುರಕ್ಷತೆಯನ್ನು ಬಲಪಡಿಸುವ ಬಹು ಗೌಪ್ಯತಾ ಲೇಯರ್‌ಗಳ ಮೂಲಕ ನ್ಯಾವಿಗೇಟ್ ಮಾಡಬಹುದು.

ತಂತ್ರಜ್ಞಾನದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version