Site icon Vistara News

Smartphone Charging Tips: ನಿಮ್ಮ ಸ್ಮಾರ್ಟ್ ಪೋನ್ ಬ್ಯಾಟರಿ ಹೆಚ್ಚು ಬಾಳಿಕೆ ಬರಲು ಹೀಗೆ ಮಾಡಿ

Smartphone Charging Tips

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಎಲ್ಲರ ಕೈಯಲ್ಲೂ ಸ್ಮಾರ್ಟ್ ಪೋನ್ ! ತಂತ್ರಜ್ಞಾನವಿಲ್ಲದೇ ಬದುಕು ನಡೆಸುವುದು ಕೂಡ ಕಷ್ಟವಾಗಿದೆ. ದುಬಾರಿ ಬೆಲೆ ತೆತ್ತು ಖರೀದಿಸಿದ ಈ ಸ್ಮಾರ್ಟ್ ಫೋನ್ ಗಳ ಬ್ಯಾಟರಿ ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ. ಇದು ಎಲ್ಲಾ ಜನರ ಸಮಸ್ಯೆಯಾಗಿದೆ. ಸ್ಮಾರ್ಟ್ ಫೋನ್ ಬಳಸಲು ಖುಷಿಯಾಗುತ್ತದೆ. ಆದರೆ ಸಮಸ್ಯೆ ಎದುರಾಗುವುದು ಅದರ ಬ್ಯಾಟರಿಯದ್ದು. ಮನೆಯಿಂದ ಹೊರಗೆ ಹೋಗುವಾಗ ಸಂಪೂರ್ಣವಾಗಿ ಚಾರ್ಜ್‌ ಮಾಡಿಕೊಂಡು ಹೋಗಿದ್ದರೂ, ಪದೇ ಪದೇ ಜಾರ್ಜ್‌ ಇದೆಯಾ…? ಎಂದು ಕಣ್ಣು ಮೊಬೈಲ್‌ ಪರದೆಯ ಮೇಲೆ ಓಡಾಡುತ್ತಾ ಇರುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಸ್ಯಾಮ್ ಸಂಗ್, ರಿಯಲ್ ಮಿ ಮತ್ತು ಇತರ ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನ್ (Smartphone Charging Tips) ತಯಾರಕರು ಕೆಲವು ಸಲಹೆಗಳನ್ನು ಹಂಚಿಕೊಂಡಿದ್ದಾರೆ. ಹಾಗಾಗಿ ನೀವು ಚಾರ್ಜ್ ಮಾಡುವಾಗ ಈ ನಿಯಮವನ್ನು ಪಾಲಿಸಿ.

ಫೋನ್‌ ಬಿಸಿಯಾದರೆ ಜಾರ್ಜ್‌ ಆಫ್‌ ಮಾಡಿ!

ಸ್ಮಾರ್ಟ್ ಫೋನ್ ಗಳಿಗೆ ನಿಯಮಿತವಾಗಿ ಚಾರ್ಜ್ ಮಾಡಿ. ಸ್ಯಾಮ್ಸಂಗ್ ಲಿಥಿಯಂ-ಐಯಾನ್ ಬ್ಯಾಟರಿಗಳು 50 ಪ್ರತಿಶತದಷ್ಟು ಚಾರ್ಜ್ ಆಗಿದ್ದರೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತವೆ. ಆದ್ದರಿಂದ ನಿಮ್ಮ ಮೊಬೈಲ್ ಗೆ ಫುಲ್ ಚಾರ್ಜ್ ಮಾಡಬೇಡಿ. ಹಾಗೇ ನೀವು ಮೊಬೈಲ್ ಹೆಚ್ಚು ಬಳಸದೇ ಇದ್ದರೆ 20ರಿಂದ 80 ಪ್ರತಿಶತದಷ್ಟು ಚಾರ್ಜ್ ಮಾಡಿದರೆ ಸಾಕು. ಅಲ್ಲದೇ ನೀವು ಬ್ಯಾಟರಿ ಚಾರ್ಜ್ ಹಾಕಿದಾಗ ಅದು ತುಂಬಾ ಬಿಸಿಯಾದರೆ ತಕ್ಷಣ ಚಾರ್ಜಿಂಗ್ ಅನ್ನು ಆಫ್ ಮಾಡಿ. ಇದರಿಂದ ಬ್ಯಾಟರಿ ಹೆಚ್ಚು ಕಾಲ ಬಾಳಿಕೆ ಬರುತ್ತದೆ.

ತಾಪಮಾನ ಗಮನಿಸಿ:

ಫೋನ್ ಕಾರ್ಯ ನಿರ್ವಹಿಸಲು 15 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನವಿರಬೇಕು ಎಂದು ರಿಯಲ್ ಮಿ ಶಿಫಾರಸು ಮಾಡುತ್ತದೆ. ಹಾಗಾಗಿ ಇಂತಹ ತಾಪಮಾನವಿದ್ದ ಕಡೆ ಮೊಬೈಲ್ ಚಾರ್ಜ್ ಹಾಕುವುದು ಉತ್ತಮ. ಇದರಿಂದ ಬ್ಯಾಟರಿ ಹೆಚ್ಚು ಬಾಳಿಕೆ ಬರುತ್ತದೆಯಂತೆ.

ಫೋನ್ ಜತೆ ನೀಡಲಾದ ಅಡಾಪ್ಟರ್ ಮೂಲಕವೇ ಚಾರ್ಜ್ ಮಾಡಿ:

ನಿಮ್ಮ ಮೊಬೈಲ್ ಚಾರ್ಜಿಂಗ್ ವೇಗವಾಗಿ ಆಗಲು ಮತ್ತು ಯಾವುದೇ ಅಪಘಾತಗಳನ್ನು ತಪ್ಪಿಸಲು ನಿಮ್ಮ ಫೋನ್ ಗೆ ನೀಡಲಾದ ಅಡಾಪ್ಟರ್ ಅಥವಾ ಕೇಬಲ್ ಮೂಲಕ ಮಾತ್ರ ನೀವು ಚಾರ್ಜ್ ಮಾಡಬೇಕು. ಇಲ್ಲವಾದರೆ ಸ್ಮಾರ್ಟ್ ಫೋನ್ ತಯಾರಕರಿಂದ ನಿಮ್ಮ ಫೋನ್ ಗೆ ಹೊಂದುವಂತಹ ಚಾರ್ಜರ್ ಅಥವಾ ಕೇಬಲ್ ಅನ್ನು ಖರೀದಿಸುವುದು ಉತ್ತಮ.

ಇದನ್ನೂ ಓದಿ: Viral Video: ಬಿಜೆಪಿ ಶಾಲು ಧರಿಸಿ ಅಯೋಧ್ಯೆ ಹೆಸರಿನ ಪ್ರತಿಕೃತಿಗೆ ಬೆಂಕಿ! ಸೋಲೇ ಕಾರಣ!

ಹಿಂಬದಿಯ ಕವರ್ ತೆಗೆದರೆ ಉತ್ತಮ:

ಸ್ಮಾರ್ಟ್ ಫೋನ್ ಚಾರ್ಜ್ ಮಾಡುವಾಗ ಅದರ ಹಿಂಬದಿಯ ಪ್ಯಾನೆಲ್ ನ ತಾಪಮಾನ ಹೆಚ್ಚಾಗುತ್ತದೆ. ಹಾಗಾಗಿ ನೀವು ನಿಮ್ಮ ಮೊಬೈಲ್ ಗೆ ಹಾಕಿದ ಹಿಂಬದಿಯ ಕವರ್ ಗಳನ್ನು ತೆಗೆದು ಹಾಕಿ ಚಾರ್ಜ್ ಮಾಡಿದರೆ ಒಳ್ಳೆಯದು.
ನಿಮ್ಮ ಮೊಬೈಲ್ ಬ್ಯಾಟರಿ ಹೆಚ್ಚು ಬಾಳಿಕೆ ಬರಲು ಮತ್ತು ಚಾರ್ಜ್ ಕಡಿಮೆಯಾಗದಿರಲು ಅದರ ಬ್ರೈಟ್ ನೆಸ್ ಮೋಡ್ ಅನ್ನು ಕಡಿಮೆ ಮಾಡಬಹುದು. ಅಥವಾ ಪವರ್ ಸೇವಿಂಗ್ ಮೋಡ್ ಗೆ ಹಾಕಬಹುದು. ಹಾಗೇ ಮೊಬೈಲ್ ಡೇಟಾದ ಬದಲು ವೈಫೈ ಅನ್ನು ಬಳಸಬಹುದು. ಹಾಗೇ ಆಟೋ ಸಿಂಕ್ ಅನ್ನು ಆಫ್ ಮಾಡಿ. ಅಲ್ಲದೇ ಜಿಪಿಎಸ್, ಇತರ ಆ್ಯಪ್ ಗಳು ಮತ್ತು ಗೇಮ್ ಗಳನ್ನು ಕಡಿಮೆ ಡೌನ್ ಲೋಡ್ ಮಾಡಿ.

Exit mobile version