Site icon Vistara News

SOVA Virus | ಮೊಬೈಲ್‌ ಬ್ಯಾಂಕಿಂಗ್‌ ಬಳಸುವಿರಾ? ಸೋವಾ ವೈರಸ್ ಬಗ್ಗೆ ಇರಲಿ ಎಚ್ಚರ

SOVA Virus

ಮಣಿಕಂಠ ತ್ರಿಶಂಕರ, ಮಹಾಜನ ಕಾಲೇಜು, ಮೈಸೂರು
ಸ್ಮಾರ್ಟ್ ಫೋನ್ ಲೋಕದಲ್ಲಿ ಹೊಸ ಹೊಸತಂತ್ರಜ್ಞಾನ ಆವಿಷ್ಕಾರಗೊಂಡಂತೆಲ್ಲ ಸೈಬರ್ ಸುರಕ್ಷತೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಲೇ ಇವೆ. ಅದರಲ್ಲೂ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸ್ಮಾರ್ಟ್‌ಫೋನ್‌ಗಳು ಜನರ ಕೈಬೆರಳ ತುದಿಗೆ ತಂದಿಟ್ಟ ಬಳಿಕ ಈ ಸಮಸ್ಯೆಗಳು ಹೆಚ್ಚುತ್ತಲೇ ಇವೆ. ಇವುಗಳ ಸಾಲಿಗೆ ಹೊಸ ಸೇರ್ಪಡೆ “ಸೋವಾʼʼ ವೈರಸ್‌ (SOVA Virus).

ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಲೆಂದೇ ‘ಸೋವಾ’ ಎನ್ನುವ ಮೊಬೈಲ್ ಬ್ಯಾಂಕಿಂಗ್ ‘ಟ್ರೋಜನ್’ ವೈರಸ್ ಅಭಿವೃದ್ಧಿಪಡಿಸಲಾಗಿದೆ. ಆ್ಯಂಡ್ರಾಯ್ಡ್, ಸ್ಮಾರ್ಟ್‌ಫೋನ್‌ಗಳಲ್ಲಿನ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಷನ್‌ಗಳನ್ನು ಗುರಿಯಾಗಿಸಿಕೊಂಡು ಈ ವೈರಸ್ ದಾಳಿ ಮಾಡುತ್ತಿದೆ. ಈ ಬಗ್ಗೆ ಎಚ್ಚರದಿಂದಿರಲು ಕೇಂದ್ರ ಸರ್ಕಾರದ ಸೈಬರ್ ಸೆಕ್ಯುರಿಟಿ ಏಜೆನ್ಸಿ ಸಾರ್ವಜನಿಕರಿಗೆ ಸಲಹೆ ನೀಡಿದೆ.

ಏನಿದು ಸೋವಾ ವೈರಸ್?
ಎಸ್‌ಬಿಐ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ಪ್ರಕಾರ ‘ಸೋವಾ’ ಎನ್ನುವುದು ಆಂಡ್ರಾಯ್ಡ್ಆಧಾರಿತ ಟ್ರೋಜನ್‌ ಮಾಲ್‌ವೇರ್ ಆಗಿದೆ. ನಕಲಿ ನೆಟ್‌ ಬ್ಯಾಂಕಿಂಗ್‌ ಆ್ಯಪ್‌ಗಳನ್ನು ಬಳಸಿಕೊಂಡು ಗ್ರಾಹಕರ ಬ್ಯಾಂಕಿಂಗ್ ಕುರಿತಾದ ವೈಯಕ್ತಿಕ ಮಾಹಿತಿ ಕದಿಯುವ ಚಾಳಿ ಇದರದ್ದು, ಗ್ರಾಹಕರು ಡಿಜಿಟಲ್‌ ಬ್ಯಾಂಕಿಂಗ್‌ ವ್ಯವಸ್ಥೆಯ ಮೇಲಿಟ್ಟಿರುವ ವಿಶ್ವಾಸವನ್ನು ಹುಸಿಗೊಳಿಸುವ ಕಾರ್ಯದಲ್ಲಿ ಈ ಟ್ರೋಜನ್‌ ಮಾಲ್‌ವೇರ್‌ ‌ತೊಡಗಿಕೊಂಡಿದೆ.

ಸಾರ್ವಜನಿಕರು ನಕಲಿ ಬ್ಯಾಂಕಿಂಗ್ ಆ್ಯಪ್‌ಗಳನ್ನು ಅಚಾನಕ್ಕಾಗಿ ಕ್ಲಿಕ್ಕಿಸಿ ಲಾಗಿನ್ ಆಗುವಾಗ ಒದಗಿಸುವ ವೈಯಕ್ತಿಕ ಮಾಹಿತಿಯನ್ನು ಈ ಮಾಲ್‌ವೇರ್ ಸಂಗ್ರಹಿಸುತ್ತದೆ. ಅದನ್ನು ಬಳಸಿಕೊಂಡು ಹ್ಯಾಕರ್‌ಗಳು ಸಾರ್ವಜನಿಕರ ಬ್ಯಾಂಕ್‌ಖಾತೆಯಲ್ಲಿನ ಹಣವನ್ನು ಕ್ಷಣಾರ್ಧದಲ್ಲಿ ಗುಳುಂ ಮಾಡುತ್ತಾರೆ.

ಈ ಮಾಲ್‌ವೇರ್ ಒಮ್ಮೆ ನಿಮ್ಮ ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್‌ ಫೋನ್‌ಗಳ ಒಳಹೊಕ್ಕರೆ (ಇನ್‌ಸ್ಟಾಲ್ ಆದರೆ) ಮುಗಿತು ಯಾವುದೇ ಕಾರಣಕ್ಕೂ ಅದನ್ನು ತೆಗೆಯಲು ಸಾಧ್ಯವಿಲ್ಲ. ಕಾರಣ ಇದು ಆ್ಯಂಡ್ರಾಯ್ಡ್ಆ್ಯಪ್‌ಗಳ ಜೊತೆಯೇ ಸ್ಮಾರ್ಟ್‌ಫೋನ್‌ನಲ್ಲಿ ಅಡಗಿಕೊಳ್ಳುತ್ತದೆ. ಈ ಸೋವಾ ವೈರಸ್ ಅಮೆರಿಕ, ರಷ್ಯಾ, ಸ್ಪೇನ್ ಮತ್ತು ಭಾರತೀಯ ಬ್ಯಾಂಕಿಂಗ್ಬಳಕೆದಾರರನ್ನು ಗುರಿಯಾಗಿಸಿಕೊಂಡಿರುವುದು ಕಳವಳಕಾರಿ ವಿಚಾರ. ಭಾರತದಲ್ಲಿ ಈ ವೈರಸ್ ಇದೇ ವರ್ಷದ ಜುಲೈ ಆಸುಪಾಸಿನಲ್ಲಿಕಂಡು ಬಂತಾದರೂ ಅದರ ತೀವ್ರತೆ ಈಗ ಹೆಚ್ಚಾಗಿದೆ.

ಮುನ್ನೆಚ್ಚರಿಕಾ ಕ್ರಮಗಳೇನು?

ನಾಮವೊಂದೇ ರೂಪ ಹಲವು!
ಸೋವಾ ನಿರಂತರವಾಗಿ ಅಪ್‌ಡೇಟ್ ಆಗುತ್ತಿರುವ ವೈರಸ್ ಆಗಿದ್ದು, ಇದು ಹಲವು ರೂಪಗಳಲ್ಲಿ ಗ್ರಾಹಕರನ್ನು ಆಕರ್ಷಿಸುತ್ತಿದೆ. ಪೇಮೆಂಟ್ ಆ್ಯಪ್‌, ಬ್ಯಾಕಿಂಗ್ ಮತ್ತು ಇ̲-ಕಾಮರ್ಸ್‌ ಆ್ಯಪ್‌ಗಳ ರೂಪದಲ್ಲಿ ಇದು ಕಾಣಿಸಿಕೊಳ್ಳುತ್ತಿದೆ. ಕೆಲವೊಮ್ಮೆ ಮೆಸೇಜಿಂಗ್ ಆ್ಯಪ್‌ಗಳಲ್ಲಿ ಲಿಂಕ್‌ಗಳ ಮೂಲಕವೂಕಾ ಣಿಸಿಕೊಳ್ಳುತ್ತಿದೆ. ಗೂಗಲ್‌ ಕ್ರೋಮ್‌, ಅಮೆಜಾನ್ ಮತ್ತು ಎನ್‌ಎಫ್‌ಟಿ ರೂಪದಲ್ಲಿ ಸ್ಮಾರ್ಟ್‌ಫೋನ್ ಒಳಗೆ ಕಳ್ಳನಂತೆ ಬಂದು ಕೂರುವ ಸಾಧ್ಯತೆ ಇದೆ. ಇದನ್ನು ಒಮ್ಮೆ ಬಳಸಿದಾಗ ವೈಯಕ್ತಿಕ ವಿವರ, ಬ್ಯಾಂಕಿಂಗ್ ಮತ್ತು ಹಣಕಾಸು ಮಾಹಿತಿಯು ಕಳವಾಗುತ್ತವೆ ಎಂದಿದೆ ರಾಷ್ಟ್ರೀಯ ಕಂಪ್ಯೂಟರ್ ಭದ್ರತಾ ಮತ್ತು ತುರ್ತು ಪ್ರತಿಕ್ರಿಯೆ ಪಡೆ.

ಸೋವಾ ಸೇರಿದಂತೆ ಬೇರಾವ ವೈರಸ್ ಬಗ್ಗೆಯಾಗಲಿ, ಗ್ರಾಹಕರ ಎಚ್ಚರಿಕೆ ಮಹತ್ವದ್ದು. ವಿದೇಶಗಳಲ್ಲಿ ಈಗಾಗಲೇ ಸಾಕಷ್ಟು ಆರ್ಥಿಕ ಹಾನಿ ಮಾಡಿರುವ ಸೋವಾ ಭಾರತದಲ್ಲಿ ಕಾಣಿಸಿಕೊಂಡಿರುವುದು 5ನೇ ಆವೃತ್ತಿಯ ಮೂಲಕ. ಡಿವೈಸ್‌ಗಳಲ್ಲಿ ಅಡಗಿ ಗ್ರಾಹಕರ ಬ್ಯಾಂಕ್ ಖಾತೆಗೆ ಬೀಗ ಜಡಿಯುವ ಈ ಸೋವಾ ವೈರಸ್ ನಿರ್ವಾಹಕರು ಅಂದರೆ ಸೈಬರ್‌ ಖದೀಮರು ಹೇಳುವಂತೆಯೇ ಕೇಳುತ್ತವೆ. ಮುಂದೆ ಖಾತೆ ಅನ್‌ಬ್ಲಾಕ್ ಮಾಡಲು ಈ ಖದೀಮರು ಹಣದ ಬೇಡಿಕೆ ಕೂಡ ಮುಂದಿಡಬಹುದು.

ಇದನ್ನೂ ಓದಿ | Aadhaar-Mobile Link | ಆಧಾರ್ ಜತೆ ನಿಮ್ಮ ಮೊಬೈಲ್ ನಂಬರ್ ಸುಲಭವಾಗಿ ಲಿಂಕ್ ಮಾಡಿ!

Exit mobile version