ನವದೆಹಲಿ: ಜನಪ್ರಿಯ ವಿಡಿಯೋ ವೇದಿಕೆಯಾಗಿರುವ, ಗೂಗಲ್ (Google) ಒಡೆತನದ ಯುಟ್ಯೂಬ್ (YouTube) ಸಾಕಷ್ಟು ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಯುಟ್ಯೂಬ್ ಬಳಸುತ್ತಿರುವವರಿಗೆ ಯುಟ್ಯೂಬ್ ಮ್ಯೂಸಿಕ್ ಬಗ್ಗೆಯೂ ಗೊತ್ತಿರುತ್ತದೆ. ಈಗ ಈ ಯುಟ್ಯೂಬ್ ಮ್ಯೂಸಿಕ್(YouTube Music), ರೆಡಿಯೋ ಬಿಲ್ಡರ್ (Radio Builder) ಎಂಬ ಹೊಸ ಫೀಚರ್ ಜಾರಿ ಮಾಡುತ್ತಿದೆ. ಈ ವೈಶಿಷ್ಟ್ಯವನ್ನು ಬಳಸಿಕೊಂಡು ಬಳಕೆದಾರರು ತಮಗೆ ಬೇಕಾದ ರೀತಿಯಲ್ಲಿ, ತಮಗಿಷ್ಟವಾದ ಕಲಾವಿದರನ್ನು ಒಳಗೊಂಡ ತಮ್ಮದೇ ಸ್ವಂತ ಸ್ಟೇಷನ್ ರಚಿಸಿಕೊಳ್ಳಬಹುದು!
ಮಂಗಳವಾರದಿಂದಲೇ ಈ ಫೀಚರ್ ಲಭ್ಯವಾಗುತ್ತಿದ್ದು, ಯುಟ್ಯೂಬ್ ಮ್ಯೂಸಿಕ್ ಟೆನೋರ್ ಸೆಕ್ಷನ್‌ನಲ್ಲಿ ಇದನ್ನು ಕಾಣಬಹುದು. ಈ ಫೀಚರ್ ಐಒಎಸ್ ಮತ್ತು ಆಂಡ್ರಾಯ್ಡ್ ಸಾಧನಗಳಿಗೂ ಸಪೋರ್ಟ್ ಮಾಡುತ್ತದೆ.
ರೆಡಿಯೋ ಬಿಲ್ಡರ್ ಬಗ್ಗೆ ತಿಳಿದುಕೊಳ್ಳೋಣ ಬನ್ನಿ
ಈ ಫೀಚರ್ ಬಳಸಿಕೊಂಡ ಬಳಕೆದಾರರು, ತಮ್ಮ ಸ್ಟೇಷನ್‌ನಲ್ಲಿ ಇರಲಿ ಎನ್ನಬಹುದಾದ 30 ಮಂದಿ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಬಹುದು. ಹಾಗೆಯೇ, ಸ್ಟೇಷನ್‌ನಲ್ಲಿ ಎಷ್ಟು ಬಾರಿ ಈ ಕಲಾವಿದರು ಕಾಣಿಸಿಕೊಳ್ಳಬಹುದು ಎಂಬುದನ್ನು ನಿರ್ಧರಿಸಬಹುದಾಗಿದೆ.
ಸೆಲೆಕ್ಟೆಡ್ ಆರ್ಟಿಸ್ಟ್‌ಗಳ ಸಂಗೀತ ಅಥವಾ ಬೇರೆಯ ಗಾಯಕರ ಅದೇ ರೀತಿಯ ಹಾಡುಗಳನ್ನು ಪ್ಲೇ ಮಾಡುವುದನ್ನು ಬಳಕೆದಾರರು ನಿರ್ಧರಿಸಬಹುದು. ಈ ರೇಡಿಯೋ ಬಿಲ್ಡರ್ ಆಯ್ದ ಪ್ಲೇಪಟ್ಟಿಗೆ ಫಿಲ್ಟರ್‌ಗಳ ಸೆಟ್‌ನೊಂದಿಗೆ ಬರುತ್ತದೆ. ಇವುಗಳಲ್ಲಿ ‘ಚಿಲ್,’ ‘ಡೌನ್‌ಬೀಟ್,’ ‘ಪಂಪ್-ಅಪ್’ ಮತ್ತಿತರ ಜಾನರ್‌ಗಳು ಸೇರಿವೆ.
ಇದನ್ನೂ ಓದಿ: Fact Check | 6 ಯುಟ್ಯೂಬ್ ಚಾನೆಲ್‌ಗಳ ʼನಕಲಿʼ ಮುಖ ಫ್ಯಾಕ್ಟ್‌ಚೆಕ್‌ನಲ್ಲಿ ಅನಾವರಣ, ಇವುಗಳನ್ನು ನೀವೂ ನೋಡದಿರಿ
ಸ್ಟೇಷನ್ ಕ್ರಿಯೇಟ್ ಮಾಡುವುದು ಹೇಗೆ?
ಒಮ್ಮೆ ನಿಮ್ಮ ಸಾಧನದಲ್ಲಿ ಈ ಫೀಚರ್ ಸಕ್ರಿಯಗೊಂಡ ಬಳಿಕ ಮೇನ್ ಇಂಟರ್ಫೇಸ್‌ನಲ್ಲಿ Create a radio ಮೇಲೆ ಕ್ಲಿಕ್ ಮಾಡಿ. ಗೂಗಲ್‌ನ ಇತರ ಫೀಚರ್‌ಗಳಂತೆ ಈ ಫೀಚರ್ ಸಹ ನಿಮ್ಮ ಸಾಧನಕ್ಕೆ ಸಕ್ರಿಯಗೊಳಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಗೂಗಲ್ ಪ್ರಕಾರ, ಪಾವತಿಸುವ ಚಂದಾದಾರರು ಮತ್ತು ಉಚಿತ ಬಳಕೆದಾರರಿಗಾಗಿ ನೀವು ಯುಟ್ಯೂಬ್ ಮ್ಯೂಸಿಕ್ ಅಕ್ಸೆಸ್ ಮಾಡಲು ಸಾಧ್ಯವಾಗಬಹುದಾದ ಎಲ್ಲಿಂದಲಾದರೂ ಈ ರೇಡಿಯೋ ಬಿಲ್ಡರ್ ಲಭ್ಯವಿರುತ್ತದೆ.