ಭಾರತೀಯ ಸಾರಿಗೆ ಕ್ಷೇತ್ರದ ದಿಗ್ಗಜ ಟಾಟಾ ಮೋಟರ್ಸ್ ನೂತನ ಎಲೆಕ್ಟ್ರಿಕ್ ವೆಹಿಕಲ್ (ev) ಲೋಕರ್ಪಣೆಗೊಳಿಸಲಿದೆ. ಅವಿನ್ಯ ಎಂಬ ಹೆಸರಿನ ಈ ಎಲೆಕ್ಟ್ರಿಕ್ ಕಾರನ್ನು 2025ರ ಹೊತ್ತಿಗೆ ಮಾರುಕಟ್ಟೆಗೆ ಬಿಡುವ ಯೋಜನೆಯಿದೆ. ಇತ್ತೀಚೆಗೆ ಎಲೆಕ್ಟ್ರಾನಿಕ್ ವಾಹನಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟಾಟಾ ಸಂಸ್ಥೆ ಹೊಸಪ್ರಯೋಗಕ್ಕೆ ಮುಂದಾಗಿದೆ.
ಆದರೆ ಈ ಹೊಸಪ್ರಯೋಗ ಯಾವ ಪ್ರಮಾಣಕ್ಕೆ ಯಶಸ್ವಿಯಾಗಲಿದೆ ಎಂಬುದು ಕುತೂಹಲಕಾರಿಯಾಗಿದೆ. ಇತ್ತೀಚೆಗೆ ಒಲಾ ಎಲೆಕ್ಟ್ರಿಕ್ ಸಂಸ್ಥೆಯಲ್ಲಿ ಅನೇಕ ವಾಹನಗಳು ಬ್ಯಾಟರಿ ಸಮಸ್ಯೆಯಿಂದ ಬೆಂಕಿಗೆ ಆಹುತಿಯಾಗಿದ್ದು ಕಂಡುಬಂದಿದೆ. ಇನ್ನೂ ಅನೇಕ ಕಂಪೆನಿಗಳ ವಾಹನಗಳಲ್ಲೂ ಸಮಸ್ಯೆ ಕಂಡಿದೆ. ಆದರೆ ಅವೆಲ್ಲವೂ ವಿದೇಶಿ ಸಂಸ್ಥೆಗಳಾಗಿದೆ. ಈ ನಡುವೆ ಭಾರತದ ಟಾಟಾ ಸಂಸ್ಥೆ ಒಂದು ಹೊಸ ಪ್ರಯತ್ನಕ್ಕೆ ಕಾಲಿಟ್ಟಿದ್ದು ಒಂದು ಬೃಹತ್ ಹೆಜ್ಜೆಯಾಗಿದೆ.
ಟಾಟಾ ಸಂಸ್ಥೆ ಮಾರುಕಟ್ಟಗೆ ಬಿಡುತ್ತಿರುವ ನೂತನ ಕಾರ್ ನಲ್ಲಿ ಅನೇಕ ವೈಶಿಷ್ಟ್ಯಗಳಿವೆ.
ಜನರೇಶನ್-3 ವಿನ್ಯಾಸದಂತೆ ನಿರ್ಮಿಸಲ್ಪಡುವ ಈ ಕಾರು ಟಾಟಾ ಕಂಪನಿಯ ಶುದ್ಧ ಎಲೆಕ್ಟ್ರಿಕ್ ಕಾರಿನ ಕನಸನ್ನು ನನಸು ಮಾಡಲಿದೆ.
ಏನು ವಿಶಿಷ್ಟತೆಗಳು?
- ಕಾರಿನಲ್ಲಿ ಒಂದು ರಾಯಲ್ ಅನುಭವ ಬರವಂತಹ ವಿನ್ಯಾಸ ಹೊಂದಿರಲಿದೆ. ಸಾಂಪ್ರದಾಯಿಕ ವಿನ್ಯಾಸದಂತೆ ಇರದೆ, ಈ ಕಾರಿನಲ್ಲಿ ವಿಶಾಲವಾದಂತಹ ಮತ್ತು ಹಿತವಾಗುವಂತಹ ಜಾಗ ಇರುತ್ತದೆ.
- ಎಸ್.ಯು.ವಿ(suv) ಗಾಡಿಗಳಂತೆ ವೈಭವ ಹಾಗೂ ಎಮ್.ಪಿ.ವಿ ಗಾಡಿಗಳಂತೆ ಇಂಟೀರಿಯರ್ ಹಾಗೂ ಕಾರ್ಯನಿರ್ವಹಣೆ ಇರುತ್ತದೆ.
- ಗಾಡಿಯ ಮುಂಭಾಗ ಹಾಗೂ ಹಿಂಭಾಗದ ಆಕರ್ಷಕ ವಿನ್ಯಾಸವಿದೆ ಮತ್ತು ಇ.ವಿ. ಕ್ಷೇತ್ರದಲ್ಲಿ ಇದೊಂದು ಹೊಸ ಪ್ರಯೋಗ.
- ಹೆಚ್ಚು ಪ್ರಾಕೃತಿಕ ಬೆಳಕ ಬರುವಂತಹ ಮೇಲ್ಚಾವಣಿ, ಧ್ವನಿ ಆಧಾರಿತ ಕಾರ್ಯನಿರ್ವಹಣೆ, ಸುಸ್ಥಿರ ವಸ್ತುಗಳ ಬಳಕೆ ಹೀಗೆ ಅನೇಕ ಅಂಶಗಳು ಗ್ರಾಹಕರ, ಪ್ರಯಾಣಿಕರ ಮನಸೂರೆಗೊಳಿಸುತ್ತವೆ.
- ಕಾರಿನಲ್ಲಿ ಕಣ್ಣಿಗೆ ಅಡ್ಡವಾಗುವಂತಹ ಮಾನಿಟರ್ ಸ್ಕ್ರೀನ್ ಇಲ್ಲ. ಆದ್ದರಿಂದ ವಾಹನ ಚಾಲನೆಯ ಸಂದರ್ಭದಲ್ಲಿ ಮನಸ್ಸಿಗೆ ಯಾವುದೇ ಚಾಂಚಲ್ಯ ಹಾಗೂ ಒತ್ತಡ ಆಗದಂತೆ ಸಹಕಾರಿ ಎಂದು ತಿಳಿಸಿದ್ದಾರೆ.
- ಅತ್ಯಂತ ಸುಧಾರಿತ ಡ್ರೈವರ್ ಅಸಿಸ್ಟೆನ್ಸ್ ವ್ಯವಸ್ಥೆ, ನೆಕ್ಸ್ಟ್ ಜನರೇಶನ್ ಕನೆಕ್ಟಿವಿಟಿ, ಸುಧಾರಿತ ಕ್ರಿಯಾಸಾಮರ್ಥ್ಯ ಹೀಗೆ ಅನೇಕ ವೈಶಿಷ್ಟ್ಯಗಳಿಂದ ಕೂಡಿದ್ದು, ವಿಶ್ವ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ತನ್ನ ಹೆಜ್ಜೆ ಇಡಲಿದೆ.
- ಕಡಿಮೆ ತೂಕದ ವಿನ್ಯಾಸ ಈ ಗಾಡಿಯ ಶ್ರೀಮಂತಿಕೆ ಹಾಗೂ ಇದು ಇ.ವಿ. ಗಾಡಿಗಳಿಗೆ ಹೊಂದುವ ವಿನ್ಯಾಸ
- 3೦ ನಿಮಿಷ ಚಾರ್ಜ್ ಮಾಡಿದರೆ 5೦೦ ಕಿ.ಮೀ ದೂರ ಹೋಗುವಷ್ಟು ಸಾಮರ್ಥ್ಯ ಹೊಂದಿದ ಬ್ಯಾಟರಿ. ಇದು ಗ್ರಾಹಕರನ್ನು ಆಕರ್ಷಿಸುವ ಸಂಗತಿ ಹಾಗು ನಿರಾತಂಕದಿಂದ ಲಾಂಗ್ ಡ್ರೈವ್ ಹೋಗಬಹುದು.
ಇದನ್ನೂ ಓದಿ: Explainer: EVಗಳೇಕೆ ಹೊತ್ತಿ ಉರಿಯುತ್ತಿವೆ?